ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ನಾನ್ಯಾಕೆ ದೀಕ್ಷಾಸ್ನಾನ ತಗೋಬೇಕು?—ಭಾಗ 3: ನಾನ್ಯಾಕೆ ಹಿಂಜರಿತಾ ಇದ್ದೀನಿ?

ನಾನ್ಯಾಕೆ ದೀಕ್ಷಾಸ್ನಾನ ತಗೋಬೇಕು?—ಭಾಗ 3: ನಾನ್ಯಾಕೆ ಹಿಂಜರಿತಾ ಇದ್ದೀನಿ?

 ಯೆಹೋವನಿಗೆ ನಿಮ್ಮನ್ನ ಸಮರ್ಪಿಸ್ಕೊಂಡು ದೀಕ್ಷಾಸ್ನಾನ ತಗೊಳ್ಳೋಕೆ ಭಯ ಆಗ್ತಿದ್ಯಾ? ಹಾಗಾದ್ರೆ ಆ ಭಯದಿಂದ ಹೊರಗೆ ಬರೋಕೆ ಈ ಲೇಖನ ನಿಮಗೆ ಸಹಾಯ ಮಾಡುತ್ತೆ.

ಈ ಲೇಖನದಲ್ಲಿ

 ದೀಕ್ಷಾಸ್ನಾನ ಆದ್ಮೇಲೆ ನಾನೇನಾದ್ರೂ ದೊಡ್ಡ ತಪ್ಪು ಮಾಡಿಬಿಟ್ರೆ ಏನು ಮಾಡೋದು?

 ಯಾಕೆ ಹಾಗೆ ಅನಿಸುತ್ತೆ? ನಿಮಗೆ ಗೊತ್ತಿರೋರು ಒಬ್ರು ದೊಡ್ಡ ತಪ್ಪು ಮಾಡಿ ಸಭೆಯಿಂದ ಬಹಿಷ್ಕಾರ ಆಗಿರಬಹುದು. (1 ಕೊರಿಂಥ 5:11-13) ನಿಮಗೂ ಅದೇ ತರ ಆಗಿಬಿಡುತ್ತೇನೋ ಅನ್ನೋ ಭಯ ಇರಬಹುದು.

 “ನಾನು ದೀಕ್ಷಾಸ್ನಾನ ತಗೊಳ್ಳೋದ್ರ ಬಗ್ಗೆ ಯೋಚ್ನೆ ಮಾಡಿದಾಗ ನಾನೆಲ್ಲಿ ದೊಡ್ಡ ತಪ್ಪು ಮಾಡಿ ಅಪ್ಪಅಮ್ಮಗೆ ಬೇಜಾರ್‌ ಮಾಡಿಸಿಬಿಡ್ತೀನೋ ಅನ್ನೋ ಭಯ ಮೊದ್ಲು ನನ್ನ ಮನಸ್ಸಿಗೆ ಬಂತು.”—ರೆಬೆಕ.

 ಮುಖ್ಯ ವಚನ: “ಕೆಟ್ಟವನು ತನ್ನ ಮಾರ್ಗವನ್ನ . . . ಬಿಟ್ಟುಬಿಡಲಿ, ಅವನು ಯೆಹೋವನ ಹತ್ರ ವಾಪಸ್‌ ಬರಲಿ. ಯಾಕಂದ್ರೆ ಆತನು ಅವನಿಗೆ ಕರುಣೆ ತೋರಿಸ್ತಾನೆ, ಅವನು ನಮ್ಮ ದೇವರ ಹತ್ರ ತಿರುಗಿ ಬರಲಿ. ಯಾಕಂದ್ರೆ ಆತನು ಉದಾರವಾಗಿ ಕ್ಷಮಿಸ್ತಾನೆ.”—ಯೆಶಾಯ 55:7.

 ಯೋಚ್ನೆ ಮಾಡಿ: ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡದೇ ಇರೋರಿಗೆ ಬಹಿಷ್ಕಾರ ಆಗುತ್ತೆ ನಿಜ. ಆದ್ರೆ ಅವರು ದೀನತೆಯಿಂದ ಪಶ್ಚಾತ್ತಾಪಪಟ್ಟು, ತಪ್ಪನ್ನ ತಿದ್ಕೊಂಡು ವಾಪಸ್‌ ಬಂದ್ರೆ ಯೆಹೋವ ಅವ್ರಿಗೆ ಕರುಣೆ ತೋರಿಸ್ತಾನೆ.—ಕೀರ್ತನೆ 103:13, 14; 2 ಕೊರಿಂಥ 7:11.

 ಅದ್ರಲ್ಲೂ ಇನ್ನೊಂದು ವಿಷ್ಯ ಏನಂದ್ರೆ, ನೀವು ಅಪರಿಪೂರ್ಣರು ನಿಜ, ಆದ್ರೆ ದೇವರ ಸಹಾಯ ಪಡ್ಕೊಂಡ್ರೆ ನೀವು ಕೆಟ್ಟ ಆಸೆಗಳಿಂದ ಹೊರಗೆ ಬರೋಕಾಗುತ್ತೆ. (1 ಕೊರಿಂಥ 10:13) ಅಷ್ಟೇ ಅಲ್ಲ, ಈ ಕೆಟ್ಟ ಆಸೆಗಳು ಬಂದ ತಕ್ಷಣ ನೀವು ಆ ಸಮಯದಲ್ಲಿ ಏನು ಮಾಡಬೇಕು ಅನ್ನೋದು ನಿಮ್ಮ ಕೈಲಿರುತ್ತೆ.

 “ದೀಕ್ಷಾಸ್ನಾನ ತಗೊಂಡ ಮೇಲೆ ನಾನೆಲ್ಲಿ ದೊಡ್ಡ ತಪ್ಪು ಮಾಡಿಬಿಡ್ತೀನೋ ಅನ್ನೋ ಭಯ ನನಗಿತ್ತು. ಆದ್ರೆ ಆಮೇಲೆ ದೀಕ್ಷಾಸ್ನಾನ ತಗೊಳ್ಳದೇ ಇರೋದೇ ಒಂದು ದೊಡ್ಡ ತಪ್ಪು ಅಂತ ನನಗೆ ಗೊತ್ತಾಯ್ತು. ಮುಂದೆ ಹಂಗಾಗಿಬಿಡುತ್ತೆ, ಹಿಂಗಾಗಿಬಿಡುತ್ತೆ ಅಂತ ಭಯಪಟ್ಕೊಂಡು ಈಗ ನಾನೇನು ಮಾಡಬೇಕೋ ಅದನ್ನ ಮಾಡದೇ ಇರಬಾರದು ಅಂತ ನನಗೆ ಗೊತ್ತಾಯ್ತು.”—ಕೇರೆನ್‌.

 ನಮಗಿರೋ ಪಾಠ: ಇವತ್ತು ಎಷ್ಟೋ ಯೆಹೋವನ ಸೇವಕರು ದೊಡ್ಡ ತಪ್ಪುಗಳನ್ನ ಮಾಡದೇ ಯೆಹೋವನಿಗೆ ಇಷ್ಟ ಆಗೋ ತರ ಇದ್ದಾರೆ. ನೀವೂ ಕೂಡ ಅವ್ರ ತರ ಇರಬಹುದು.—ಫಿಲಿಪ್ಪಿ 2:12.

 ಸಹಾಯಕ್ಕಾಗಿತಪ್ಪು ಮಾಡಬೇಕು ಅನ್ನೋ ಒತ್ತಡನ ಹೇಗೆ ಜಯಿಸೋದು?” ಅನ್ನೋ ಲೇಖನ ನೋಡಿ.

 ದೀಕ್ಷಾಸ್ನಾನ ಆದಮೇಲೆ ಜವಾಬ್ದಾರಿ ಜಾಸ್ತಿ ಆಗುತ್ತೆ ಅನ್ನೋ ಭಯ ನನಗಿದ್ಯಾ?

 ಯಾಕೆ ಹಾಗೆ ಅನಿಸುತ್ತೆ? ದೀಕ್ಷಾಸ್ನಾನ ಪಡ್ಕೊಂಡಿರೋ ಎಷ್ಟೋ ಯುವಜನರು ಅಪ್ಪ-ಅಮ್ಮನ ಮತ್ತು ಅವ್ರ ಫ್ರೆಂಡ್ಸ್‌ನ ಬಿಟ್ಟು ಸೇವೆ ಜಾಸ್ತಿ ಮಾಡೋಕೆ ಬೇರೆ ಕಡೆ ಹೋಗಿರೋದನ್ನ ನೀವು ನೋಡಿರಬಹುದು. ನೀವೂ ಅವ್ರ ತರಾನೇ ಮಾಡಬೇಕು ಅಂತ ಬೇರೆಯವರು ಬಯಸ್ತಾರೆ ಅನ್ನೋ ಭಯ ನಿಮಗಿರಬಹುದು.

 “ದೀಕ್ಷಾಸ್ನಾನ ತಗೊಂಡ್ರೆ ಯೆಹೋವನ ಸೇವೆ ಮಾಡೋಕೆ ತುಂಬ ಅವಕಾಶಗಳು ಸಿಗುತ್ತೆ. ಆದ್ರೆ ಒಬ್ಬೊಬ್ರ ಸನ್ನಿವೇಶ ಒಂದೊಂದ್‌ ಥರ ಇರೋದ್ರಿಂದ ಎಲ್ರಿಗೂ ಯೆಹೋವನ ಸೇವೆನ ಜಾಸ್ತಿ ಮಾಡೋಕಾಗದೇ ಇರಬಹುದು.”—ಮೆರೀ.

 ಮುಖ್ಯ ವಚನ: “ಆದ್ರೆ ಪ್ರತಿಯೊಬ್ಬನು ಅವನು ಮಾಡಿದ ಕೆಲಸವನ್ನ ಚೆನ್ನಾಗಿ ಪರೀಕ್ಷಿಸ್ಕೊಳ್ಳಲಿ. ಆಗ ಅವನು ಬೇರೆಯವ್ರ ಜೊತೆ ತನ್ನನ್ನ ಹೋಲಿಸ್ಕೊಳ್ಳೋ ಬದ್ಲು ತನ್ನ ಕೆಲಸದ ಬಗ್ಗೆ ಮಾತ್ರ ಖುಷಿಪಡ್ತಾನೆ.”—ಗಲಾತ್ಯ 6:4.

 ಯೋಚ್ನೆ ಮಾಡಿ: ಮಾರ್ಕ 12:30ರಲ್ಲಿ “ನಿನ್ನ ದೇವರಾದ ಯೆಹೋವನನ್ನ ನಿನ್ನ ಪೂರ್ಣ ಹೃದಯದಿಂದ . . . ಪ್ರೀತಿಸಬೇಕು” ಅಂತ ಹೇಳುತ್ತೆ. ಹಾಗಾಗಿ ನೀವು ನಿಮ್ಮನ್ನ ಬೇರೆಯವ್ರ ಜೊತೆ ಹೋಲಿಸ್ಕೊಬೇಡಿ.

 ಈ ವಚನದಲ್ಲಿ ಬೇರೆಯವ್ರ ಪೂರ್ಣ ಹೃದಯದಿಂದ ಅಂತ ಹೇಳ್ತಿಲ್ಲ, ನಿನ್ನ ಪೂರ್ಣ ಹೃದಯದಿಂದ ಯೆಹೋವನನ್ನ ಪ್ರೀತಿಸು ಅಂತ ಹೇಳ್ತಿದೆ. ಹಾಗಾಗಿ ನಿಮಗೆ ಯೆಹೋವನ ಮೇಲೆ ನಿಜವಾಗ್ಲೂ ಪ್ರೀತಿ ಇದ್ರೆ ಆತನ ಸೇವೆ ಮಾಡೋಕೆ ನಿಮ್ಮಿಂದಾದ ಎಲ್ಲ ಪ್ರಯತ್ನ ಮಾಡ್ತೀರ.

 “ದೀಕ್ಷಾಸ್ನಾನ ಅನ್ನೋದು ಜೀವನದಲ್ಲಿ ಮಾಡಬೇಕಾದ ಒಂದು ತೀರ್ಮಾನನೇ. ಆದ್ರೆ ಅದು ಒಂದು ಹೊರೆಯಲ್ಲ. ನಿಮಗೆ ಒಳ್ಳೇ ಸ್ನೇಹಿತರಿದ್ರೆ ಅವರು ನಿಮಗೆ ಸಹಾಯ ಮಾಡ್ತಾರೆ. ಅಷ್ಟೇ ಅಲ್ಲ, ನೀವು ಜವಾಬ್ದಾರಿಗಳನ್ನ ತಗೊಂಡಷ್ಟು ಖುಷಿಯಾಗಿ ಇರ್ತೀರ. ಅದನ್ನ ಬಿಟ್ಟು, ನೀವು ದೀಕ್ಷಾಸ್ನಾನನೇ ತಗೊಳ್ಳಿಲ್ಲ ಅಂದ್ರೆ ನಿಮಗೇ ನಷ್ಟ ಆಗೋದು.”—ಜೂಲಿಯ.

 ನಮಗಿರೋ ಪಾಠ: ಯೆಹೋವ ಇಲ್ಲಿ ತನಕ ನಿಮಗೋಸ್ಕರ ಏನೆಲ್ಲ ಮಾಡಿದ್ದಾನೆ ಅಂತ ನೆನಸ್ಕೊಳ್ಳಿ. ಆಗ ಆತನಿಗೋಸ್ಕರ ನೀವೇನಾದ್ರೂ ಮಾಡಬೇಕು ಅಂತ ನಿಮಗೇ ಅನಿಸುತ್ತೆ.—1 ಯೋಹಾನ 4:19.

 ಸಹಾಯಕ್ಕಾಗಿ “ಹೌ ರೆಸ್ಪಾನ್ಸಿಬಲ್‌ ಆ್ಯಮ್‌ ಐ” ಅನ್ನೋ ಇಂಗ್ಲಿಷ್‌ ಲೇಖನ ನೋಡಿ.

 ಯೆಹೋವನ ಸೇವೆ ಮಾಡೋ ಯೋಗ್ಯತೆ ನನಗಿಲ್ಲ ಅಂತ ಅನಿಸ್ತಿದ್ಯಾ?

 ಯಾಕೆ ಹಾಗೆ ಅನಿಸುತ್ತೆ? ಯೆಹೋವನಿಗೆ ಇಡೀ ವಿಶ್ವವನ್ನೇ ಆಳೋ ಹಕ್ಕಿದೆ. ಅಂಥದ್ರಲ್ಲಿ ನಾವು ಆತನ ಮುಂದೆ ಏನೇನೂ ಅಲ್ಲ. ಹಾಗಾಗಿ ‘ನಾನೊಬ್ಬ ಈ ಭೂಮಿ ಮೇಲೆ ಇದ್ದೀನಿ ಅನ್ನೋದನ್ನ ಯೆಹೋವ ನೋಡ್ತಾನಾ?’ ಅನ್ನೋ ಯೋಚ್ನೆ ನಿಮಗೆ ಬರಬಹುದು.

 “ನಮ್ಮ ಅಪ್ಪ ಅಮ್ಮ ಯೆಹೋವನ ಸಾಕ್ಷಿಗಳಾಗಿರೋದ್ರಿಂದ ನಾನು ಯೆಹೋವನಿಗೆ ಫ್ರೆಂಡ್‌ ಆಗಿದ್ದೀನಿ ಅಷ್ಟೇ, ಯೆಹೋವ ನನ್ನನ್ನ ಸೆಳೆದಿಲ್ಲ ಅಂತ ನನಗೆ ಅನಿಸ್ತಿತ್ತು.”—ನ್ಯಾಟಲೀ.

 ಮುಖ್ಯ ವಚನ: “ನನ್ನನ್ನ ಕಳಿಸಿದ ಅಪ್ಪ ಕರೆಯದೆ ಯಾರೂ ನನ್ನ ಹತ್ರ ಬರಲ್ಲ.”—ಯೋಹಾನ 6:44.

 ಯೋಚ್ನೆ ಮಾಡಿ: ನೀವು ಯೆಹೋವನಿಗೆ ಹತ್ರ ಆಗಬೇಕು ಅಂತನೇ ಆತನು ನಿಮಗೆ ದೀಕ್ಷಾಸ್ನಾನ ತಗೊಳ್ಳೋಕೆ ಹೇಳ್ತಿದ್ದಾನೆ. ಹಾಗಾಗಿ ದೀಕ್ಷಾಸ್ನಾನ ತಗೊಳಿ.

 ಯೆಹೋವ ದೇವರು ಯಾರನ್ನ ತನ್ನ ಹತ್ರ ಸೆಳೀಬೇಕು ಅನ್ನೋದನ್ನ ಆತನೇ ತೀರ್ಮಾನ ಮಾಡೋದು. ನಿಮ್ಮ ಹತ್ರನೋ ಅಥವಾ ಬೇರೆಯವ್ರ ಹತ್ರನೋ ಕೇಳಿ ತೀರ್ಮಾನ ಮಾಡಲ್ಲ. ಅದಕ್ಕೇ “ದೇವರಿಗೆ ಹತ್ರ ಆಗಿ, . . . ದೇವರು ನಿಮಗೆ ಹತ್ರ ಆಗ್ತಾನೆ” ಅಂತ ಬೈಬಲ್‌ ಹೇಳುತ್ತೆ.—ಯಾಕೋಬ 4:8.

 “ನೀವು ಯೆಹೋವನ ಬಗ್ಗೆ ಕಲ್ತಿದ್ದೀರ ಮತ್ತು ಆತನು ನಿಮ್ಮನ್ನ ಆತನ ಹತ್ರ ಸೆಳೆದಿದ್ದಾನೆ. ಇದೇ ಆತನು ನಿಮ್ಮನ್ನ ಎಷ್ಟು ಪ್ರೀತಿಸ್ತಾನೆ ಅಂತ ತೋರಿಸುತ್ತೆ. ಹಾಗಾಗಿ ನಿಮ್ಮ ಮನಸ್ಸು ‘ನನಗೆ ಯೆಹೋವ ದೇವರನ್ನ ಆರಾಧಿಸೋ ಯೋಗ್ಯತೆ ಇಲ್ಲ’ ಅಂತ ಹೇಳಿದಾಗ ಯೆಹೋವ ಹಾಗೆ ಅಂದ್ಕೊಳ್ಳಲ್ಲ ಅನ್ನೋದನ್ನ ನೆನಪಲ್ಲಿಡಿ. ಆತನು ಯಾವಾಗ್ಲೂ ಸರಿಯಾಗಿರೋದನ್ನೇ ಮಾಡ್ತಾನೆ ಅನ್ನೋದನ್ನ ಮರಿಬೇಡಿ.”—ಸೆಲಿನಾ.

 ನಮಗಿರೋ ಪಾಠ: ನೀವು ಬೈಬಲಲ್ಲಿ ಹೇಳಿರೋದನ್ನ ಪಾಲಿಸ್ತಾ ದೀಕ್ಷಾಸ್ನಾನಕ್ಕೆ ಈಗಾಗ್ಲೇ ರೆಡಿಯಾಗಿದ್ರೆ ನಿಮಗೆ ಯೆಹೋವನನ್ನ ಆರಾಧಿಸೋ ಅರ್ಹತೆ ಇದೆ ಅಂತ ಅರ್ಥ. ಅದಕ್ಕಿಂತ ಹೆಚ್ಚಾಗಿ, ನಿಮ್ಮ ಆರಾಧನೆ ಪಡ್ಕೊಳ್ಳೋ ಯೋಗ್ಯತೆ ದೇವರಿಗೆ ಇದೆ.—ಪ್ರಕಟನೆ 4:11.

 ಸಹಾಯಕ್ಕಾಗಿನಾನು ಯಾಕೆ ಪ್ರಾರ್ಥನೆ ಮಾಡಬೇಕು?” ಅನ್ನೋ ಲೇಖನ ನೋಡಿ.