ಮಾಹಿತಿ ಇರುವಲ್ಲಿ ಹೋಗಲು

ರಾಜ್ಯ ಸಭಾಗೃಹದಲ್ಲಿ ನಡಿಯೋ ಮೀಟಿಂಗ್‌ಗೆ ಯಾಕೆ ಹೋಗಬೇಕು?

ರಾಜ್ಯ ಸಭಾಗೃಹದಲ್ಲಿ ನಡಿಯೋ ಮೀಟಿಂಗ್‌ಗೆ ಯಾಕೆ ಹೋಗಬೇಕು?

ಯುವ ಜನರ ಪ್ರಶ್ನೆಗಳು

 ಯೆಹೋವನ ಸಾಕ್ಷಿಗಳು ವಾರದಲ್ಲಿ ಎರಡು ದಿವಸ ತಮ್ಮ ಆರಾಧನಾ ಸ್ಥಳದಲ್ಲಿ ಮೀಟಿಂಗ್‌ ಮಾಡ್ತಾರೆ. ಆ ಸ್ಥಳವನ್ನು ರಾಜ್ಯ ಸಭಾಗೃಹ ಅಂತ ಕರೀತಾರೆ. ಅಲ್ಲಿ ಏನು ನಡಿಯುತ್ತೆ? ಅದ್ರಿಂದ ನಿಮಗೇನು ಪ್ರಯೋಜನ?

 ರಾಜ್ಯ ಸಭಾಗೃಹದಲ್ಲಿ ಏನು ನಡಿಯುತ್ತೆ?

 ಬೈಬಲ್‌ ವಿಷ್ಯಗಳನ್ನ ನಮ್ಮ ಜೀವನದಲ್ಲಿ ಹೇಗೆ ಅನ್ವಯಿಸೋದು ಅಂತ ಅಲ್ಲಿ ಕಲಿಸಲಾಗುತ್ತೆ. ಅಲ್ಲಿ ನಡೆಯೋ ಮೀಟಿಂಗ್‌ನಿಂದ ನೀವು:

  •   ದೇವರ ಬಗ್ಗೆ ಸತ್ಯ ಏನಂತ ಕಲಿಬಹುದು.

  •   ಈಗ ನಡೆಯುತ್ತೀರೋ ಘಟನೆಗಳ ಹಿಂದಿರುವ ಕಾರಣಗಳನ್ನ ಅರ್ಥ ಮಾಡಿಕೊಳ್ಳಬಹುದು.

  •   ಒಳ್ಳೇ ವ್ಯಕ್ತಿ ಆಗೋದು ಹೇಗಂತ ಕಲಿಬಹುದು.

  •   ಒಳ್ಳೇ ಫ್ರೆಂಡ್ಸ್‌ನ್ನ ಪಡಿಬಹುದು.

 ಯೆಹೋವನ ಸಾಕ್ಷಿಗಳ ಮೀಟಿಂಗ್‌ ನಡೆಯೋ ಸ್ಥಳವನ್ನ ರಾಜ್ಯ ಸಭಾಗೃಹ ಅಂತ ಯಾಕೆ ಕರೆಯುತ್ತಾರೆ ಎಂದು ನಿಮಗೆ ಗೊತ್ತಾ? ಯಾಕಂದ್ರೆ ಅಲ್ಲಿ ಯಾವಾಗ್ಲೂ ದೇವರ ರಾಜ್ಯದ ಬಗ್ಗೆ ಚರ್ಚಿಸುತ್ತಾರೆ.—ಮತ್ತಾಯ 6:9, 10; 24:14; ಲೂಕ 4:43.

 ನೀವು ಯಾಕೆ ಮೀಟಿಂಗ್‌ಗೆ ಹೋಗಬೇಕು?

 ಅಲ್ಲಿ ಕಲಿಸೋ ವಿಷ್ಯಗಳಿಂದ ನಿಮಗೆ ತುಂಬ ಪ್ರಯೋಜನ ಸಿಗುತ್ತೆ. ಯೆಹೋವನ ಸಾಕ್ಷಿಗಳ ಮೀಟಿಂಗ್‌ನಲ್ಲಿ ಚರ್ಚೆ ಮಾಡೋ ಬೈಬಲ್‌ ತತ್ವಗಳು ನಿಮಗೆ ‘ವಿವೇಕವನ್ನ ಸಂಪಾದಿಸೋಕೆ’ ಸಹಾಯ ಮಾಡುತ್ತೆ. (ಜ್ಞಾನೋಕ್ತಿ 4:5) ಇದ್ರ ಅರ್ಥ ನಿಮ್ಮ ಜೀವನದಲ್ಲಿ ಸರಿಯಾದ ನಿರ್ಣಯಗಳನ್ನು ಮಾಡೋಕೆ ನಿಮಗೆ ಬೈಬಲ್‌ ಸಹಾಯ ಮಾಡುತ್ತೆ. ಅಷ್ಟೇ ಅಲ್ಲ, ನಿಮ್ಮ ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಕೂಡ ನೀವು ಉತ್ತರ ತಿಳ್ಕೊಳ್ಳಬಹುದು:

 ವಾರಂತ್ಯದ ಮೀಟಿಂಗ್‌ನಲ್ಲಿ ಭಾಷಣಗಳು ಇರುತ್ತೆ. ಅವುಗಳಲ್ಲಿ ಕೆಲವು:

  •   ಬೈಬಲಿನಿಂದ ಏಕೆ ಮಾರ್ಗದರ್ಶಿಸಲ್ಪಡಬೇಕು?

  •   ಸಂಕಷ್ಟದ ಸಮಯದಲ್ಲಿ ನೀವು ಎಲ್ಲಿಂದ ಸಹಾಯ ಪಡೆದುಕೊಳ್ಳಬಲ್ಲಿರಿ?

  •   ದೇವರ ರಾಜ್ಯವು ನಮಗಾಗಿ ಇಂದು ಏನೆಲ್ಲ ಮಾಡುತ್ತಿದೆ?

 “ನನ್ನ ಕ್ಲಾಸ್‌ಮೇಟ್‌ ಒಂದು ಸಲ ಮೀಟಿಂಗ್‌ಗೆ ಬಂದಿದ್ದ. ಅವನು ನಮ್ಮ ಕುಟುಂಬದ ಜೊತೆ ಕೂತಿದ್ದ. ನಾವು ಅವನಿಗೆ ಪ್ರಕಾಶನಗಳನ್ನ ತೋರಿಸಿದ್ವಿ. ಮೀಟಿಂಗ್‌ನಲ್ಲಿ ಎಲ್ಲರು ಉತ್ತರ ಕೊಡೋ ಮೂಲಕ ಭಾಗವಹಿಸೋದನ್ನ ನೋಡಿ ಅವನಿಗೆ ತುಂಬ ಖುಷಿ ಆಯ್ತು. ನಮ್ಮ ಮೀಟಿಂಗ್‌ನಲ್ಲಿ ಚರ್ಚಿಸುವಂತ ಒಳ್ಳೇ ಪ್ರಕಾಶನಗಳು ಅವನ ಚರ್ಚ್‌ನಲ್ಲಿ ಇಲ್ಲ ಅಂತ ಅವನು ಹೇಳಿದ.”—ಬ್ರೆಂಡಾ.

 ನಿಮಗೆ ಗೊತ್ತಾ? ರಾಜ್ಯ ಸಭಾಗೃಹಕ್ಕೆ ಪ್ರವೇಶ ಉಚಿತ. ಅಲ್ಲಿ ಹಣ ವಸೂಲಿ ಮಾಡಲ್ಲ.

 ಅಲ್ಲಿರೋ ಜನರಿಂದ ಪ್ರೋತ್ಸಾಹ ಸಿಗುತ್ತೆ. ‘ಒಬ್ರು ಇನ್ನೊಬ್ರನ್ನ ಪ್ರೋತ್ಸಾಹಿಸಲಿಕ್ಕಾಗಿ’ ಕ್ರೈಸ್ತರು ಮೀಟಿಂಗ್‌ಗೆ ಸೇರಿ ಬರಬೇಕು ಅಂತ ಬೈಬಲ್‌ ಹೇಳುತ್ತೆ. (ಇಬ್ರಿಯ 10:24, 25) ತಮ್ಮ ಬಗ್ಗೆನೇ ಯೋಚನೆ ಮಾಡೋ ಈ ಸ್ವಾರ್ಥ ಲೋಕದಲ್ಲಿ ದೇವರ ಬಗ್ಗೆ, ಬೇರೆಯವರ ಬಗ್ಗೆ ಯೋಚನೆ ಮಾಡೋ ಜನ್ರ ಜೊತೆ ಸೇರಿ ಬರುವಾಗ ಚೈತನ್ಯ ಸಿಗುತ್ತೆ.

 “ಇಡೀ ದಿನ ಸ್ಕೂಲಲ್ಲಿ ಕಳೆದ ನಂತ್ರ ತುಂಬ ಬೇಜಾರು, ಸುಸ್ತು ಆಗ್ತಿತ್ತು. ಆದ್ರೆ ನಾನು ಮೀಟಿಂಗ್‌ಗೆ ಹೋದಾಗ ಅಲ್ಲಿರೋ ಜನ್ರಿಂದ ನನ್ಗೆ ಚೈತನ್ಯ ಸಿಗುತ್ತಿತ್ತು. ಇದ್ರಿಂದ ಮೀಟಿಂಗ್‌ ಆದ ನಂತ್ರ ಮನೆಗೆ ಹೋಗುವಾಗ ಖುಷಿ ಖುಷಿಯಿಂದ ಹೋಗ್ತಿದ್ದೆ. ಮರುದಿನ ಬರೋ ಸಮಸ್ಯೆಯನ್ನ ಎದುರಿಸೋಕೆ ರೆಡಿ ಆಗ್ತಿದ್ದೆ.”—ಎಲಿಸಾ.

 ನಿಮಗೆ ಗೊತ್ತಾ? ಇಡೀ ಲೋಕದಲ್ಲಿ ಸುಮಾರು 1,20,000 ಯೆಹೋವನ ಸಾಕ್ಷಿಗಳ ಸಭೆಗಳು ಇವೆ. ಸುಮಾರು 60,000 ಸ್ಥಳಗಳಲ್ಲಿ ಮೀಟಿಂಗ್‌ ನಡಿಯುತ್ತೆ. ಹೆಚ್ಚೆಚ್ಚು ಜನ ಮೀಟಿಂಗ್‌ಗೆ ಬರುತ್ತಾ ಇರೋದ್ರಿಂದ ಪ್ರತಿ ವರ್ಷ ಸುಮಾರು 1,500 ರಾಜ್ಯ ಸಭಾಗೃಹಗಳನ್ನ ಕಟ್ಟಲಾಗುತ್ತೆ. a

a ನೀವು ಮೀಟಿಂಗ್‌ ನಡೆಯೋ ಸ್ಥಳವನ್ನ ತಿಳಿದುಕೊಳ್ಳಲು “ಯೆಹೋವನ ಸಾಕ್ಷಿಗಳ ಸಭಾ ಕೂಟಗಳು” ಅನ್ನೋ ಪೇಜ್‌ಗೆ ಹೋಗಿ ಅಲ್ಲಿ, “ನಿಮಗೆ ಹತ್ತಿರ ಇರೋ ಸ್ಥಳ ಹುಡುಕಿ” ಅನ್ನೋದ್ರ ಮೇಲೆ ಕ್ಲಿಕ್‌ ಮಾಡಿ.