ಮಾಹಿತಿ ಇರುವಲ್ಲಿ ಹೋಗಲು

ಯುವ ಜನರ ಪ್ರಶ್ನೆಗಳು

ಸೋಶಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗೋದು ಮುಖ್ಯನಾ?

ಸೋಶಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗೋದು ಮುಖ್ಯನಾ?

 ನನ್ನ ಸ್ಕೂಲ್‌ ಫ್ರೆಂಡ್ಸ್‌ಗೆ ಆನ್‌ಲೈನ್‌ನಲ್ಲಿ ನೂರಾರು ಫಾಲೋವರ್ಸ್‌ ಇದ್ದಾರೆ ಅಂತ ಗೊತ್ತಾದಾಗ, ‘ವಾವ್‌ ಅವರು ಸಕ್ಕತ್‌ ಫೇಮಸ್‌ ಆಗಿದ್ದಾರೆ’ ಅನಿಸಿತು. ಒಳಗೊಳಗೆ ಸ್ವಲ್ಪ ಹೊಟ್ಟೆಕಿಚ್ಚೂ ಆಯ್ತು“ ಅಂತ ಎಲಾನಿ ಅನ್ನೋ ಹುಡುಗಿ ಹೇಳ್ತಾಳೆ.

 ಹೀಗೆ ನಿಮಗೂ ಅನ್ಸಿದ್ಯಾ? ಸೋಶಿಯಲ್‌ ಮೀಡಿಯಾದಲ್ಲಿ ಅಂದ್ರೆ ವಾಟ್ಸ್‌ ಆಪ್‌ ಫೇಸ್‌ ಬುಕ್‌, ಇನ್‌ಸ್ಟಾಗ್ರಾಮ್‌, ಟ್ವಿಟರ್‌ನಲ್ಲಿ ಮಿಂಚಬೇಕು ಅನ್ನೋ ಒತ್ತಡ ಸಾಮಾನ್ಯ. ಆದ್ರೆ ಅದ್ರಿಂದ ಹೇಗೆ ದೂರ ಇರೋದು ಅಂತ ಈ ಲೇಖನ ಸಹಾಯ ಮಾಡುತ್ತೆ.

 ಸೋಶಿಯಲ್‌ ಮೀಡಿಯಾದಿಂದ ಯಾವ ತೊಂದರೆಗಳಿವೆ?

 ಹೆಚ್ಚು ಆಸ್ತಿಪಾಸ್ತಿಗಿಂತ ಒಳ್ಳೇ ಹೆಸ್ರು ಸಂಪಾದಿಸೋದು ಒಳ್ಳೇದು“ ಅಂತ ಜ್ಞಾನೋಕ್ತಿ 22:1 ಹೇಳುತ್ತೆ. ಬೇರೆಯವರು ನಿಮ್ಮನ್ನ ಇಷ್ಟಪಡಬೇಕು ಅಂದ್ರೆ ನಿಮಗೆ ಒಳ್ಳೇ ಹೆಸರಿರಬೇಕು.

 ಜನ ನಮ್ಮನ್ನ ಇಷ್ಟಪಡಬೇಕು ಅನ್ನೋ ಆಸೆ ನಮ್ಮಲ್ಲಿ ಬೆಳೆದ್ರೆ ನಾವು ಫೇಮಸ್‌ ಆಗೋವರೆಗೂ ತೃಪ್ತಿ ಇರಲ್ಲ. ಈ ರೀತಿ ಫೇಮಸ್‌ ಆಗೋದ್ರಿಂದ ನಮಗೆ ಏನಾದ್ರೂ ತೊಂದರೆ ಇದ್ಯಾ? ಹೌದು ಅಂತಾಳೆ 16 ವಯಸ್ಸಿನ ಆನ್ಯಾ. ಅವಳು ಹೇಳೋದು:

 “ಫೇಮಸ್‌ ಆಗಬೇಕು ಅಂತ ಜನ ಹುಚ್ಚು ಹುಚ್ಚಾಗಿ ಏನೇನೋ ಮಾಡೋದನ್ನ ನಾನು ನೋಡಿದ್ದೀನಿ. ಉದಾಹರಣೆಗೆ, ನಮ್ಮ ಸ್ಕೂಲಲ್ಲಿ ಫೇಮಸ್‌ ಆಗಬೇಕು ಅಂತ ಒಬ್ರು ಎರಡು ಫ್ಲೋರ್‌ ಬಿಲ್ಡಿಂಗ್‌ನಿಂದ ಜಂಪ್‌ ಮಾಡಿದ್ರು.”

 ಫ್ರೆಂಡ್ಸ್‌ ನಮ್ಮನ್ನ ಗಮನಿಸಬೇಕು ಅಂತ ಕೆಲವ್ರು ಮೂರ್ಖರ ಹಾಗೆ ಸ್ಟಂಟ್‌ಗಳನ್ನ ಮಾಡಿ ಆನ್‌ಲೈನಲ್ಲಿ ಪೋಸ್ಟ್‌ ಮಾಡ್ತಾರೆ. ಉದಾಹರಣೆಗೆ, ಕೆಲವು ಯುವಕರು ಬಟ್ಟೆ ಒಗೆಯೋ ಸೋಪು ತಿನ್ನೋ ವಿಡಿಯೋಗಳನ್ನ ಅಪ್‌ಲೋಡ್‌ ಮಾಡಿದ್ದಾರೆ. ಇದಕ್ಕೆ ಕಾರಣ ಇಷ್ಟೇ, ಯಾರೂ ಮಾಡದೆ ಇರೋದನ್ನ ನಾವು ಮಾಡೋದಾದ್ರೆ ಸೋಶಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗ್ತೀವಿ ಅನ್ನೊದೇ.

 ಬೈಬಲ್‌ ಹೇಳೋದು: ‘ನಾನೇ ಮೇಲು ಅಂತ ಹೆಮ್ಮೆಪಡೋದಕ್ಕಾಗಿ ಯಾವ ವಿಷಯಾನೂ ಮಾಡಬೇಡಿ.’—ಫಿಲಿಪ್ಪಿ 2:3.

 ಸ್ವಲ್ಪ ಯೋಚಿಸಿ:

  •   ಆನ್‌ಲೈನ್‌ನಲ್ಲಿ ಫೇಮಸ್‌ ಆಗೋದು ನಿಮಗೆ ಎಷ್ಟು ಮುಖ್ಯ?

  •   ನಿಮ್ಮ ಫ್ರೆಂಡ್ಸ್‌ ನಿಮ್ಮನ್ನ ಇಷ್ಟ ಪಡಬೇಕು ಅನ್ನೋದಕ್ಕಾಗಿ ನಿಮ್ಮ ಲೈಫನ್ನೇ ರಿಸ್ಕಲ್ಲಿ ಇಡ್ತಿರಾ?

 “ಫೇಮಸ್‌ ಆಗಬೇಕು ಅನ್ನೋದು ಭ್ರಮೆ ಅಷ್ಟೇ”

 ಲೈಫನ್ನ ಯಾವಾಗ್ಲೂ ರಿಸ್ಕಲ್ಲಿ ಇಟ್ಟೇ ಫೇಮಸ್‌ ಆಗ್ಬೇಕು ಅಂತೇನಿಲ್ಲ. 22 ವಯಸ್ಸಿನ ಎರಿಕಾ, ಕೆಲವ್ರು ಫೇಮಸ್‌ ಆಗೋಕೆ ಬೇರೆ ದಾರಿಗಳನ್ನ ಉಪಯೋಗಿಸ್ತಾರೆ ಅಂತಾಳೆ. ಅವಳು ಹೇಳೋದು:

 “ಕೆಲವ್ರು, ‘ನಾನು ಅವ್ರ ಜೊತೆ ಇದ್ದೆ, ಇವ್ರ ಜೊತೆ ಇದ್ದೆ’ ಅಂತ ಒಂದಾದ ಮೇಲೆ ಒಂದು ಫೋಟೋನ ಅಪ್‌ಲೋಡ್‌ ಮಾಡ್ತಾನೇ ಇರ್ತಾರೆ. ಇದನ್ನ ನೋಡಿ ಜನ ಇವ್ರು ಸಕ್ಕತ್‌ ಫೇಮಸ್‌ ಅಂತ ಅಂದ್ಕೊಳ್ತಾರೆ.”

 ಈ ರೀತಿ ಫೋಟೋಗಳನ್ನ ಹಾಕುವಾಗ ಕೆಲವ್ರು ಮೋಸ ಮಾಡ್ತಾರೆ ಅಂತ 15 ವಯಸ್ಸಿನ ಕೇರಾ ಹೇಳ್ತಾಳೆ.

 “ಮನೆಲಿ ಫೋಟೋ ತಗೊಂಡು ಅದನ್ನ ಯಾವುದೋ ಪಾರ್ಟಿಯಲ್ಲಿ ತಗೊಂಡ ಹಾಗೆ ಬದಲಾಯಿಸಿ ಪೋಸ್ಟ್‌ ಮಾಡ್ತಾರೆ.”

 22 ವಯಸ್ಸಿನ ಮ್ಯಾಥ್ಯು ಕೂಡ ಇದೇ ತರ ಮಾಡಿದ್ದ. ಅವನು ಹೇಳೋದು:

 “ನಾನು ಒಂದು ಫೋಟೋ ಪೋಸ್ಟ್‌ ಮಾಡಿ ಇದು ಮೌಂಟ್‌ ಎವರೆಸ್ಟಲ್ಲಿ ತೆಗೆದಿದ್ದು ಅಂತ ಹಾಕ್ದೆ. ಆದ್ರೆ ನಾನು ಯಾವತ್ತೂ ಏಷ್ಯಾಗೆ ಹೋಗೇ ಇಲ್ಲ.”

 ಬೈಬಲ್‌ ಹೇಳೋದು: ”ಎಲ್ಲ ವಿಷ್ಯದಲ್ಲೂ ಪ್ರಾಮಾಣಿಕವಾಗಿ ಇರೋಕೆ ಬಯಸ್ತೀವಿ.“—ಇಬ್ರಿಯ 13:18.

 ಸ್ವಲ್ಪ ಯೋಚಿಸಿ:

  •   ಫೇಮಸ್‌ ಆಗಬೇಕು ಅಂತ ನೀವು ಸೋಶಿಯಲ್‌ ಮೀಡಿಯಾದಲ್ಲಿ ಸುಳ್ಳು ಸುಳ್ಳು ವಿಷ್ಯಗಳನ್ನ ಹಾಕಿದ್ದೀರಾ?

  •   ನೀವು ಹಾಕೋ ಫೋಟೋಗಳು, ಕಮೆಂಟ್‌ಗಳು ನೀವು ನಿಜವಾಗ್ಲೂ ಎಂಥವರು ಅಂತ ಹೇಳುತ್ತಾ?

 ಫಾಲೋವರ್ಸ್‌ ಮತ್ತು ಲೈಕ್ಸ್‌ ಎಷ್ಟು ಮುಖ್ಯ?

 ಜಾಸ್ತಿ ಫಾಲೋವರ್ಸ್‌ ಮತ್ತು ಲೈಕ್ಸ್‌ ಇದ್ರೆ ನಾವು ಆನ್‌ಲೈನ್‌ನಲ್ಲಿ ಫೇಮಸ್‌ ಆಗ್ತೀವಿ ಅಂತ ತುಂಬ ಜನ ಅಂದುಕೊಳ್ತಾರೆ. ಮ್ಯಾಥ್ಯುಗೂ ಹೀಗೇ ಅನಿಸ್ತು.

 “ನಾನು ನನ್ನ ಫ್ರೆಂಡ್ಸ್‌ ಹತ್ರ ನಿಮ್ಗೆ ಆನ್‌ಲೈನ್‌ನಲ್ಲಿ ಎಷ್ಟು ಫಾಲೋವರ್ಸ್‌ ಇದ್ದಾರೆ? ಎಷ್ಟು ಲೈಕ್ಸ್‌ ಸಿಕ್ಕಿದೆ ಅಂತ ಕೇಳ್ತೀನಿ. ನನ್ನ ಫಾಲೋವರ್ಸ್‌ ಜಾಸ್ತಿ ಆಗಬೇಕು ಅಂತ ನಂಗೆ ಪರಿಚಯ ಇಲ್ಲದೇ ಇರೋರನ್ನೆಲ್ಲಾ ಫಾಲೋ ಮಾಡ್ತೀನಿ. ಅವ್ರೂ ನನ್ನ ಫಾಲೋ ಮಾಡಬೇಕು ಅಂತ ಹೀಗೆ ಮಾಡ್ತೀನಿ. ಫೇಮಸ್‌ ಆಗಬೇಕು ಅನ್ನೋ ಆಸೆನಾ ಸೋಶಿಯಲ್‌ ಮೀಡಿಯಾ ನನ್ನಲ್ಲಿ ಜಾಸ್ತಿ ಮಾಡ್ತು.

ಆನ್‌ಲೈನ್‌ನಲ್ಲಿ ಫೇಮಸ್‌ ಆಗಬೇಕು ಅನ್ನೋದು ಕುರುಕಲು ತಿಂಡಿ ತಿಂದ ಹಾಗೆ. ಸ್ವಲ್ಪ ಸಮಯಕ್ಕೆ ಚೆನ್ನಾಗಿರುತ್ತೆ, ಆದ್ರೆ ನಿಜವಾದ ತೃಪ್ತಿ ಸಿಗಲ್ಲ ಹೊಟ್ಟೆ ತುಂಬಲ್ಲ

 ಕೆಲವ್ರಿಗೆ ಆನ್‌ಲೈನ್‌ನಲ್ಲಿ ಕಮ್ಮಿ ಫಾಲೋವರ್ಸ್‌, ಕಮ್ಮಿ ಲೈಕ್ಸ್‌ ಬಂದ್ರೆ ನಾವು ಯಾವುದಕ್ಕೂ ಲಾಯಕ್ಕಿಲ್ಲ ಅಂದ್ಕೊಬಿಡ್ತಾರೆ ಅಂತ 25 ವಯಸ್ಸಿನ ಮರಿಯ ಹೇಳ್ತಾಳೆ.

 “ಒಂದು ಹುಡುಗಿಯ ಸೆಲ್ಫಿಗೆ ಜಾಸ್ತಿ ಲೈಕ್ಸ್‌ ಬಂದಿಲ್ಲ ಅಂದ್ರೆ ‘ನಾನು ನೋಡೋಕೆ ಚೆನ್ನಾಗಿಲ್ಲ’ ಅಂತ ಅವಳು ಅಂದ್ಕೊಬಿಡ್ತಾಳೆ. ಆದ್ರೆ ಅದು ತಪ್ಪು. ತುಂಬಾ ಜನ ಹೀಗೆ ಅಂದ್ಕೊತಾರೆ. ಹೀಗೆ ಅಂದ್ಕೊಳ್ಳೋ ಮೂಲಕ ಅವ್ರ ಅವ್ರನ್ನೇ ಕೀಳಾಗಿ ನೋಡ್ತಾರೆ.”

 ಬೈಬಲ್‌ ಹೇಳೋದು: ”ನಾವು ಅಹಂಕಾರಪಡದೆ, ಒಬ್ರ ಜೊತೆ ಒಬ್ರು ಪೈಪೋಟಿ ಮಾಡದೆ, ಅಸೂಯೆಪಡದೆ ಇರೋಣ.“—ಗಲಾತ್ಯ 5:26.

 ಸ್ವಲ್ಪ ಯೋಚಿಸಿ:

  •   ಸೋಶಿಯಲ್‌ ಮೀಡಿಯಾದಿಂದ ನೀವು ನಿಮ್ಮನ್ನ ಬೇರೆಯವರ ಜೊತೆ ಹೋಲಿಸಿಕೊಳ್ತಿದ್ದೀರಾ?

  •   ಒಳ್ಳೇ ಫ್ರೆಂಡ್ಸ್‌ ಮಾಡ್ಕೊಳ್ಳೋದಕ್ಕಿಂತ ಜಾಸ್ತಿ ಫಾಲೋವರ್ಸ್‌ ಇರಬೇಕು ಅನ್ನೋದ್ರ ಬಗ್ಗೆ ತುಂಬ ತಲೆ ಕೆಡಿಸಿಕೊಳ್ತೀರಾ?