ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ಬೈಬಲ್‌ ಓದೋದ್ರಿಂದ ಏನಾದ್ರೂ ಪ್ರಯೋಜ್ನ ಇದ್ಯಾ?—ಭಾಗ 2: ಬೈಬಲ್‌ ಓದೋದನ್ನ ಎಂಜಾಯ್‌ ಮಾಡಿ

ಬೈಬಲ್‌ ಓದೋದ್ರಿಂದ ಏನಾದ್ರೂ ಪ್ರಯೋಜ್ನ ಇದ್ಯಾ?—ಭಾಗ 2: ಬೈಬಲ್‌ ಓದೋದನ್ನ ಎಂಜಾಯ್‌ ಮಾಡಿ

 “ಬೈಬಲ್‌ ಓದೋ ಸರಿಯಾದ ವಿಧಾನ ನಿಮ್ಗೆ ಗೊತ್ತಿಲ್ಲ ಅಂದ್ರೆ ಆಗ ಅದು ಬೋರಿಂಗ್‌ ಅನಿಸುತ್ತೆ” ಅಂತ ವಿಲ್‌ ಅನ್ನೋ ಹುಡುಗಿ ಹೇಳ್ತಾಳೆ.

ನೀವು ಬೈಬಲ್‌ ಓದೋವಾಗ ಬೋರಿಂಗ್‌ ಆಗಬಾರದು, ಅದು ಇಂಟ್ರೆಸ್ಟಿಂಗ್‌ ಆಗಿ ಇರಬೇಕು ಅಂದ್ರೆ ಏನು ಮಾಡಬೇಕು ಅಂತ ತಿಳ್ಕೊಳ್ಳಿ. ಅದಕ್ಕೆ ಈ ಲೇಖನ ನಿಮ್ಗೆ ಸಹಾಯ ಮಾಡುತ್ತೆ.

 ಬೈಬಲ್‌ ಓದೋವಾಗ ಚಿತ್ರಿಸಿಕೊಳ್ಳಿ

 ಓದೋವಾಗ ನಿಮ್ಮ ಕಣ್ಮುಂದೆನೇ ಆ ಘಟನೆಗಳು ನಡೀತಾ ಇರೋ ತರ ಚಿತ್ರಿಸಿಕೊಳ್ಳಿ. ಅದಕ್ಕೆ ಹೀಗೆ ಮಾಡಿ ನೋಡಿ.

  1.   ನಿಮ್ಗೆ ಇಷ್ಟವಾದ ಒಂದು ಬೈಬಲ್‌ ವೃತ್ತಾಂತ ತಗೊಳ್ಳಿ. ಸುವಾರ್ತಾ ಪುಸ್ತಕದಲ್ಲಿರೋ ಒಂದು ಘಟನೆನೋ ಅಥ್ವಾ ಒಂದು ವೃತ್ತಾಂತನೋ ಆರಿಸಿಕೊಳ್ಳಿ. ಇಲ್ಲಾಂದ್ರೆ jw.orgನಲ್ಲಿರೋ ನಾಟಕರೂಪದ ಬೈಬಲ್‌ ವಾಚನಗಳಲ್ಲಿ ಯಾವುದು ಇಷ್ಟನೋ ಅದನ್ನ ಆರಿಸಿಕೊಳ್ಳಿ.

  2.   ಬೈಬಲ್‌ ವೃತ್ತಾಂತನ ಓದಿ. ನೀವು ಒಬ್ಬರೇ ಓದಬಹುದು ಅಥ್ವಾ ನಿಮ್ಮ ಫ್ರೆಂಡ್ಸ್‌ ಇಲ್ಲಾ ಕುಟುಂಬದವ್ರ ಜೊತೆ ಓದಬಹುದು. ಒಬ್ಬರು ನಿರೂಪಣೆ ಓದಿದ್ರೆ ಬೇರೆವ್ರು ಅದ್ರಲ್ಲಿ ಬರೋ ಪಾತ್ರಗಳನ್ನ ಓದಬಹುದು.

  3.   ಇನ್ನೂ ಬೇರೆ ವಿಧಾನಗಳನ್ನ ಟ್ರೈ ಮಾಡಬಹುದು, ಉದಾಹರಣೆಗೆ,

    • ಬೈಬಲ್‌ ಕತೆಗಳನ್ನ ಓದಿದ ನಂತ್ರ ಅದ್ರ ಚಿತ್ರ ಬರೀರಿ. ಪ್ರತಿಯೊಂದು ಘಟನೆ ಬಗ್ಗೆನೂ ಒಂದೊಂದು ಚಿತ್ರ ಬರೆದು ಅಲ್ಲಿ ಏನಾಗ್ತಿದೆ ಅಂತ ಕೆಳಗೆ ವಾಕ್ಯದಲ್ಲಿ ಬರೀರಿ. ಚಿತ್ರಗಳನ್ನ ತುಂಬಾ ಚೆನ್ನಾಗಿ ಬರೀಬೇಕು ಅಂತಿಲ್ಲ, ಸರಳವಾಗಿ ನಿಮ್ಗೆ ಹೇಗೆ ಬರುತ್ತೋ ಹಾಗೆ ಬರೀರಿ.

    •   ಬೈಬಲ್‌ನಲ್ಲಿರೋ ಒಬ್ಬ ನಂಬಿಗಸ್ತ ವ್ಯಕ್ತಿ ಬಗ್ಗೆ ಓದೋವಾಗ ಆ ವ್ಯಕ್ತಿಯಲ್ಲಿರೋ ಒಳ್ಳೇ ಗುಣಗಳನ್ನ ಪಟ್ಟಿ ಮಾಡಿ, ಮತ್ತೆ ಅವನಿಗೆ ಏನೆಲ್ಲಾ ಆಶೀರ್ವಾದ ಸಿಕ್ತು ಅಂತ ಬರೀರಿ.

    •   ಆ ಕತೆ ಬಗ್ಗೆ ಒಂದು ವರದಿ ಬರೀರಿ. ಆ ಕತೆನಾ ಬೇರೆ ಬೇರೆ ದೃಷ್ಟಿಕೋನದಲ್ಲಿ ನೋಡಿ. ಅಲ್ಲಿರೋ ಪಾತ್ರಗಳ ಮತ್ತು ಆ ಘಟನೆನ ಕಣ್ಣಾರೆ ನೋಡಿದವರ ಇಂಟರ್‌ವ್ಯೂ ಮಾಡೋ ತರ ವರದಿ ಬರೀರಿ.

    •   ನೀವು ಓದ್ತಿರೋ ಕತೆಲಿರೋ ವ್ಯಕ್ತಿ ತಪ್ಪಾದ ತೀರ್ಮಾನ ಮಾಡಿದ್ದಾನೆ ಅಂತ ಇಟ್ಕೊಳ್ಳಿ. ಒಂದುವೇಳೆ ಅವ್ನು ಸರಿಯಾದ ತೀರ್ಮಾನ ಮಾಡಿದ್ರೆ ಏನಾಗ್ತಿತ್ತು ಅಂತ ಊಹೆ ಮಾಡ್ಕೊಳ್ಳಿ. ಉದಾಹರಣೆಗೆ, ಪೇತ್ರ ಯೇಸುವನ್ನ ಮೂರು ಸಲ ತಿರಸ್ಕರಿಸಿದ. (ಮಾರ್ಕ 14:66-72) ಈ ಸಂದರ್ಭದಲ್ಲಿ ಪೇತ್ರ ಹೇಗೆ ನಡ್ಕೊಬಹುದಿತ್ತು?

    •   ಇನ್ನೂ ಇಂಟ್ರೆಸ್ಟಿಂಗ್‌ ಆಗಿ ಮಾಡೋಕೆ ಬೈಬಲ್‌ನಲ್ಲಿರೋ ಕತೆಗಳನ್ನ ನಾಟಕದ ರೂಪಕ್ಕೆ ಬದಲಾಯಿಸಿ. ನಾಟಕದಲ್ಲಿ ಆ ಕತೆಯಿಂದ ಏನೆಲ್ಲಾ ಕಲೀಬಹುದು ಅಂತನೂ ಪಟ್ಟಿಮಾಡಿ.—ರೋಮನ್ನರಿಗೆ 15:4.

      ಬೈಬಲ್‌ ಘಟನೆಗಳು ನಿಮ್ಮ ಕಣ್ಮುಂದೆನೇ ನಡಿತಿರೋ ತರ ಚಿತ್ರಿಸಿಕೊಳ್ಳಿ!

 ಸಂಶೋಧನೆ ಮಾಡಿ!

 ನೀವು ಎಷ್ಟು ಆಳವಾಗಿ ಸಂಶೋಧನೆ ಮಾಡ್ತಿರೋ ಅಷ್ಟೇ ಹೊಸ ವಿಷ್ಯಗಳನ್ನ ಕಲಿಬಹುದು. ಕೆಲವು ಸಲ ಒಂದು ಅಥ್ವಾ ಎರಡು ಪದದಿಂದ ಎಷ್ಟೋ ವಿಷ್ಯಗಳನ್ನ ಕಲಿಬಹುದು.

 ಉದಾಹರಣೆಗೆ ಮತ್ತಾಯ 28:7ನ್ನ ಮಾರ್ಕ 16:7 ರ ಜೊತೆ ಹೋಲಿಸಿ ನೋಡಿ.

  •    ಯೇಸು, ಶಿಷ್ಯರಿಗೆ “ಮತ್ತು ಪೇತ್ರನಿಗೆ” ಕಾಣಿಸಿಕೊಳ್ತಾನೆ ಅಂತ ಮಾರ್ಕನು ಮಾತ್ರ ಯಾಕೆ ಹೇಳಿದನು?

  •  ಕ್ಲೂ: ಈ ಘಟನೆಗಳನ್ನ ಮಾರ್ಕ ಕಣ್ಣಾರೆ ನೋಡಲಿಲ್ಲ. ಪೇತ್ರನಿಂದ ಈ ಮಾಹಿತಿ ಅವನಿಗೆ ಸಿಕ್ತು.

  •  ಅಡಗಿರೋ ಪಾಠಗಳು: ಯೇಸು ತನ್ನನ್ನ ಮತ್ತೆ ನೋಡಬೇಕು ಅಂತ ಅಂದಾಗ ಪೇತ್ರನಿಗೆ ಇದ್ರಿಂದ ಉತ್ತೇಜನ ಸಿಕ್ತು. ಯಾಕೆ? (ಮಾರ್ಕ 14:66-72) ಯೇಸು ಪೇತ್ರನ ನಿಜವಾದ ಸ್ನೇಹಿತ ಅಂತ ಹೇಗೆ ತೋರಿಸಿದನು? ಯೇಸುವನ್ನ ನೀವು ಹೇಗೆ ಅನುಕರಿಸಬಹುದು? ನೀವು ಯೇಸು ತರ ಬೇರೆವ್ರಿಗೆ ಹೇಗೆ ಒಳ್ಳೇ ಫ್ರೆಂಡ್ಸ್‌ ಆಗಬಹುದು?

 ಬೈಬಲ್‌ ಓದೋವಾಗ ಆ ಘಟನೆಗಳನ್ನ ಚಿತ್ರಿಸಿಕೊಳ್ತಾ, ಸಂಶೋಧನೆ ಮಾಡಿದ್ರೆ ಬೈಬಲ್‌ ಓದುವಿಕೆ ಇಂಟ್ರೆಸ್ಟಿಂಗ್‌ ಆಗಿ ಇರುತ್ತೆ. ಅದನ್ನ ಎಂಜಾಯ್‌ ಮಾಡಬಹುದು.