ಮಾಹಿತಿ ಇರುವಲ್ಲಿ ಹೋಗಲು

ಮನೆಯಲ್ಲೇ ಇದ್ದುಕೊಂಡು ಚೆನ್ನಾಗಿ ಓದೋದು ಹೇಗೆ?

ಮನೆಯಲ್ಲೇ ಇದ್ದುಕೊಂಡು ಚೆನ್ನಾಗಿ ಓದೋದು ಹೇಗೆ?

ಯುವ ಜನರ ಪ್ರಶ್ನೆಗಳು

 ಇವತ್ತು ತುಂಬಾ ಮಕ್ಕಳಿಗೆ ಮನೆನೇ ಕ್ಲಾಸ್‌ ರೂಮ್‌ ಆಗಿದೆ. ಮನೆಲಿ ಇದ್ದುಕೊಂಡೇ ಶಿಕ್ಷಣ ಪಡ್ಕೊತಿದ್ದಾರೆ. ನೀವು ಹೀಗೆ ಓದ್ತಿದ್ರೆ ಈ ಕೆಳಗೆ ಕೊಟ್ಟಿರೋ ಸಲಹೆಗಳನ್ನ ಪಾಲಿಸಿ, ಪ್ರಯೋಜ್ನ ಪಡ್ಕೊಳ್ಳಿ. a

 ನಿಮ್ಮ ಯಶಸ್ಸಿಗೆ 5 ಸೂತ್ರಗಳು

  •   ಒಳ್ಳೇ ಟೈಮ್‌ ಟೇಬಲ್‌ ಮಾಡ್ಕೊಳ್ಳಿ. ನೀವು ಸ್ಕೂಲ್‌ನಲ್ಲಿ ಇದ್ರೆ ಏನು ಮಾಡ್ತಿದ್ರೋ ಅದೇ ತರ ಮಾಡೋಕೆ ಒಂದು ಟೈಮ್‌ ಟೇಬಲ್‌ ಮಾಡ್ಕೊಳ್ಳಿ. ಸ್ಕೂಲ್‌ ಕೆಲ್ಸ, ಮನೆ ಕೆಲ್ಸ ಮತ್ತು ಬೇರೆ ಪ್ರಾಮುಖ್ಯ ಕೆಲಸಗಳಿಗೆ ಮೊದಲು ಟೈಮ್‌ ಕೊಡಿ. ನಿಮ್ಮ ಪರಿಸ್ಥಿತಿಗೆ ತಕ್ಕ ಹಾಗೆ ನಿಮ್ಮ ಟೈಮ್‌ ಟೇಬಲ್‌ನ ಬದಲಾಯಿಸಿಕೊಳ್ಳಿ.

     ಬೈಬಲ್‌ ತತ್ವ: “ಎಲ್ಲವುಗಳು ಸಭ್ಯವಾಗಿಯೂ ಕ್ರಮವಾಗಿಯೂ ನಡೆಯಲಿ.”—1 ಕೊರಿಂಥ 14:40.

     “ನೀವು ಸ್ಕೂಲಲ್ಲಿ ಇದ್ರೆ ಏನ್‌ ಮಾಡ್ತಿದ್ರೋ ಅದೇ ತರ ಮನೆಲೂ ಮಾಡಿ. ಯಾವ ಟೈಮಿಗೆ ಏನು ಮಾಡಬೇಕೋ ಅದನ್ನ ಮಾಡಿ.”—ಕೇಟೀ.

     ಸ್ವಲ್ಪ ಯೋಚಿಸಿ: ಟೈಮ್‌ ಟೇಬಲ್‌ ಬರೆದು ಕಣ್ಣಿಗೆ ಕಾಣೋ ಹಾಗೆ ಹಾಕೋದು ಯಾಕೆ ಒಳ್ಳೇದು?

  •   ಸ್ವಶಿಸ್ತು ತೋರಿಸಿ. ಯಾರು ಹೇಳಲಿ ಬಿಡಲಿ, ನೀವು ಮಾಡಬೇಕಾದ ಕೆಲ್ಸನ ಮಾಡಿ ಮುಗಿಸಿ. ಅದನ್ನ ಮುಂದಕ್ಕೆ ಹಾಕಬೇಡಿ. ಹೀಗೆ ಮಾಡಿದ್ರೆ ನೀವು ಬೆಳೆದು ದೊಡ್ಡವರಾಗ್ತಿದ್ದೀರ ಅಂತ ತೋರಿಸ್ಕೊಡ್ತೀರ.

     ಬೈಬಲ್‌ ತತ್ವ: “ನಿಮ್ಮ ಕೆಲಸದಲ್ಲಿ ಆಲಸಿಗಳಾಗಿರಬೇಡಿ. ದುಡಿದು ಸೇವೆಸಲ್ಲಿಸಿರಿ.”—ರೋಮನ್ನರಿಗೆ 12:11.

     “ಸ್ವಶಿಸ್ತು ತೋರಿಸೋದು ಅಷ್ಟು ಸುಲಭ ಅಲ್ಲ. ಏನಾದ್ರೂ ನೆಪ ಹೇಳಿ ಸ್ಕೂಲ್‌ ಕೆಲ್ಸನಾ ಆಮೇಲೆ ಮಾಡ್ತೀನಿ ಅಂತ ಹೇಳಿಬಿಡ್ತೀವಿ. ಆದ್ರೆ ಆಮೇಲೆ ಆ ಕೆಲ್ಸ ಮಾಡೋಕೆ ಆಗಲ್ಲ. ಹೀಗೆ ನಾವು ಹಿಂದೆ ಬಿದ್ದುಬಿಡ್ತೀವಿ.”—ಅಲೆಕ್ಸಾಂಡ್ರ.

     ಸ್ವಲ್ಪ ಯೋಚಿಸಿ: ಒಂದೇ ಜಾಗದಲ್ಲಿ ಕೂತು ಪ್ರತಿ ದಿನ ಓದೋದ್ರಿಂದ ಸ್ವಶಿಸ್ತು ಹೇಗೆ ಬೆಳೆಯುತ್ತೆ?

  •   ಓದೋಕೆ ಒಳ್ಳೇ ಜಾಗ ಇರಲಿ. ಓದೋಕೆ ಏನೆಲ್ಲಾ ಬೇಕೋ ಅದನ್ನ ಪಕ್ಕದಲ್ಲಿ ಇಟ್ಕೊಳ್ಳಿ. ಆ ಜಾಗ ಶುದ್ಧವಾಗಿ ನೀಟಾಗಿ ಇರಲಿ. ಗಜಿಬಿಜಿ ಮಾಡ್ಕೊಬೇಡಿ. ಓದೋ ಟೈಮಲ್ಲಿ ಓದಿ, ಆಮೇಲೆ ಮಾಡೋಣ ಅಂತ ಅಂದ್ಕೊಬೇಡಿ. ಒಂದುವೇಳೆ ಓದೋಕೆ ರೂಮ್‌ ಇಲ್ಲ ಅಂದ್ರೆ ಅಡಿಗೆ ಮನೆ ಅಥ್ವಾ ಬೆಡ್‌ ರೂಮ್‌ನ ಓದೋಕೆ ಉಪಯೋಗಿಸಿ.

     ಬೈಬಲ್‌ ತತ್ವ: “ಶ್ರಮಶೀಲರಿಗೆ ತಮ್ಮ ಯತ್ನಗಳಿಂದ ಸಮೃದ್ಧಿ.”—ಜ್ಞಾನೋಕ್ತಿ 21:5.

     “ಬಾಸ್ಕೆಟ್‌ ಬಾಲ್‌, ವಿಡಿಯೋ ಗೇಮ್‌, ಗಿಟಾರ್‌ನ ದೂರ ಇಡಿ. ಫೋನ್‌ನ ಸೈಲೆಂಟ್‌ ಮೋಡಲ್ಲಿ ಹಾಕಿ. ಓದೋವಾಗ ಯಾವುದೇ ಅಪಕರ್ಷಣೆ ಇಲ್ಲದೇ ಇರೋ ತರ ನೋಡ್ಕೊಳ್ಳಿ.”—ಎಲಿಜಬೇತ್‌.

     ಸ್ವಲ್ಪ ಯೋಚಿಸಿ: ಓದೋ ಜಾಗನಾ ಚೆನ್ನಾಗಿ ಇಟ್ಕೊಳ್ಳೋಕೆ ಏನು ಮಾಡಬಹುದು?

  •   ಗಮನ ಕೊಡಿ. ಒಂದು ಸಲಕ್ಕೆ ಒಂದೇ ಕೆಲ್ಸ ಮಾಡಿ. ಒಂದೇ ಸಮಯದಲ್ಲಿ ಎರಡು ಮೂರು ಕೆಲ್ಸ ಮಾಡೋಕೆ ಹೋಗಬೇಡಿ. ಹಾಗೇ ಮಾಡಿದ್ರೆ ತಪ್ಪು ಆಗೋದು ಜಾಸ್ತಿ, ಕೆಲ್ಸನೂ ಬೇಗ ಮುಗಿಯೋದಿಲ್ಲ.

     ಬೈಬಲ್‌ ತತ್ವ: “ನಿಮಗೋಸ್ಕರ ಸುಸಮಯವನ್ನು ಖರೀದಿಸಿಕೊಳ್ಳಿರಿ.”—ಎಫೆಸ 5:16.

     “ಫೋನ್‌ ನನ್ನ ಹತ್ರ ಇದ್ರೆ ನಂಗೆ ಗಮನ ಕೊಡೋಕೆ ಕಷ್ಟ. ಬೇಡದಿರೋ ಕೆಲ್ಸ ಮಾಡಿ ಟೈಮ್‌ ವೇಸ್ಟ್‌ ಮಾಡ್ತೀನಿ.”—ಒಲಿವಿಯಾ.

     ಸ್ವಲ್ಪ ಯೋಚಿಸಿ: ಗಮನ ಕೊಡೋ ಟೈಮನ್ನ ಹೇಗೆ ಸ್ವಲ್ಪ ಸ್ವಲ್ಪನೇ ಜಾಸ್ತಿ ಮಾಡ್ಕೊಬೋದು?

  •   ಬ್ರೇಕ್‌ ತಗೊಳ್ಳಿ. ವಾಕಿಂಗ್‌ ಹೋಗಿ, ಸೈಕಲ್‌ ಓಡಿಸಿ, ವ್ಯಾಯಾಮ ಮಾಡಿ. ಬೇರೆ ಏನಾದ್ರೂ ಅಭ್ಯಾಸ ಇದ್ರೆ ಅದನ್ನ ಮಾಡಿ, ಆಗ ಮನಸ್ಸಿಗೆ ಹಾಯ್‌ ಅನ್ಸುತ್ತೆ. “ಮಾಡಬೇಕಾದ ಕೆಲ್ಸನ ಮೊದಲು ಮಾಡಿ ಮುಗಿಸಿ. ಆಗ ಕೆಲ್ಸ ಇನ್ನೂ ಆಗಿಲ್ವಲ್ಲಾ ಅನ್ನೋ ಚಿಂತೆ ಇರಲ್ಲ. ಫ್ರೀ ಟೈಮಲ್ಲಿ ಯಾವುದೇ ಟೆನ್ಶನ್‌ ಇಲ್ಲದೆ ಆರಾಮಾಗಿ ಇರಬಹುದು” ಅಂತ ಸ್ಕೂಲ್‌ ಪವರ್‌ ಅನ್ನೋ ಪುಸ್ತಕ ಹೇಳುತ್ತೆ.

     ಬೈಬಲ್‌ ತತ್ವ: “ಗಾಳಿಯನ್ನು ಹಿಂದಟ್ಟುವ ವ್ಯರ್ಥ ಪ್ರಯಾಸದ ಬೊಗಸೆಗಿಂತಲೂ ನೆಮ್ಮದಿಯ ಸೇರೆಯೇ ಲೇಸು.”—ಪ್ರಸಂಗಿ 4:6.

     “ಸ್ಕೂಲಲ್ಲಿ ಇದ್ರೆ ಮ್ಯೂಸಿಕ್‌ ಬಾರಿಸಬಹುದು, ಡ್ರಾಯಿಂಗ್‌ ಮಾಡಬಹುದು. ಈಗ ಅದನ್ನ ಮಾಡೋಕೆ ಆಗ್ತಿಲ್ಲ ಅಂತ ನೆನಸಿಕೊಳ್ಳೋವಾಗ ತುಂಬಾ ಬೇಜಾರಾಗುತ್ತೆ. ಅದಿಕ್ಕೆ ಓದೋದ್ರ ಜೊತೆ ಬೇರೆ ಏನಾದ್ರೂ ಹವ್ಯಾಸಗಳನ್ನ ಮಾಡಿದ್ರೆ ಓದೋಕೂ ಇಂಟ್ರೆಸ್ಟ್‌ ಬರುತ್ತೆ.”—ಟೇಲರ್‌.

     ಸ್ವಲ್ಪ ಯೋಚಿಸಿ: ಎಷ್ಟು ಹೊತ್ತು ಬ್ರೇಕ್‌ ತಗೊಂಡ್ರೆ ಚೆನ್ನಾಗಿ ಓದೋಕೆ ಆಗುತ್ತೆ?

a ಮನೆಲಿ ಇದ್ದುಕೊಂಡೇ ಶಿಕ್ಷಣವನ್ನ ಬೇರೆ ಬೇರೆ ವಿಧಾನಗಳಲ್ಲಿ ಕಲೀಬಹುದು. ಈ ಲೇಖನದಲ್ಲಿ ಕೊಟ್ಟಿರೋ ಸಲಹೆಗಳಲ್ಲಿ ಯಾವ್ದು ನಿಮ್ಮ ಪರಿಸ್ಥಿತಿಗೆ ಸೂಕ್ತ ಅನ್ಸುತೋ ಅದರ ಪ್ರಕಾರ ಮಾಡಿ.