ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ಸಲಿಂಗಕಾಮ ತಪ್ಪಾ?

ಸಲಿಂಗಕಾಮ ತಪ್ಪಾ?

 “ಬೆಳೆದ ಹಾಗೆ ನನ್ನ ಜೊತೆ ಒಂದು ದೊಡ್ಡ ಸಮಸ್ಯೆನೂ ಬೆಳೆಯಿತು. ಅದೇನಂದ್ರೆ ಬೇರೆ ಹುಡುಗರ ಕಡೆಗೆ ಆಕರ್ಷಣೆ ಆಗ್ತಿತ್ತು. ನಾನು ಸ್ವಲ್ಪ ದೊಡ್ಡವನಾದ ಮೇಲೆ ಇದೆಲ್ಲ ಸರಿ ಹೋಗುತ್ತೆ ಅಂದ್ಕೊಂಡೆ, ಆದರೆ ಏನೂ ಬದಲಾಗಿಲ್ಲ.”—ಡೇವಿಡ್‌, 23.

 ದೇವರು ಇಷ್ಟಪಡೋ ವಿಷಯವನ್ನು ಮಾಡೋಕೆ ಡೇವಿಡ್‌ ಆಸೆಪಡ್ತಾನೆ. ಬೇರೆ ಹುಡುಗರ ಮೇಲೆ ಈ ಆಸೆಯನ್ನ ಇಟ್ಟುಕೊಂಡು ದೇವರಿಗೆ ಇಷ್ಟ ಆಗಿರೋದನ್ನ ಮಾಡೋಕೆ ಅವನಿಗೆ ಆಗುತ್ತಾ? ಸಲಿಂಗಕಾಮದ ಬಗ್ಗೆ ದೇವರಿಗೆ ಹೇಗನಿಸುತ್ತೆ?

 ಬೈಬಲ್‌ ಏನು ಹೇಳುತ್ತೆ?

 ಬೇರೆಬೇರೆ ಕಾಲದಲ್ಲಿ ಜೀವಿಸಿದವರಿಗೆ ಅಥವಾ ಬೇರೆಬೇರೆ ಜಾಗದಲ್ಲಿರೋ ಜನರಿಗೆ ಸಲಿಂಗಕಾಮದ ಬಗ್ಗೆ ಅವರದ್ದೇ ಆಗಿರೋ ಅಭಿಪ್ರಾಯಗಳಿವೆ. ಆದರೆ ಕ್ರೈಸ್ತರಿಗೆ ಈ ವಿಷಯದ ಬಗ್ಗೆ ಇರೋ ಅಭಿಪ್ರಾಯನೇ ಬೇರೆ. ಅವರು ಸುಳ್ಳು ಬೋಧನೆಗಳನ್ನ ಕೇಳಿ ‘ಗಾಳಿಗೆ ಸಿಕ್ಕಿ ಆಕಡೆಯಿಂದ ಈಕಡೆ ತೇಲಾಡ್ತಾ’ ಇರುವವರ ತರ ಅಲ್ಲ. (ಎಫೆಸ 4:14) ಬದಲಿಗೆ ಸಲಿಂಗಕಾಮದ ಬಗ್ಗೆ (ಅಥವಾ ಬೇರೆ ಯಾವುದಾದ್ರೂ ನಡತೆ ಬಗ್ಗೆ) ಬೈಬಲ್‌ ಏನು ಹೇಳುತ್ತೆ ಅನ್ನೋದಕ್ಕೆ ಮಾತ್ರ ಗಮನ ಕೊಡ್ತಾರೆ.

 ಸಲಿಂಗಕಾಮದ ಬಗ್ಗೆ ಬೈಬಲಿನಲ್ಲಿ ಕೆಲವು ನೀತಿ ನಿಯಮಗಳಿವೆ. ಅದರ ಬಗ್ಗೆ ನಾವೀಗ ನೊಡೋಣ:

  •  “ನಿಮ್ಮಲ್ಲಿ ಒಬ್ಬ ಗಂಡಸು ಸ್ತ್ರೀ ಜೊತೆ ಲೈಂಗಿಕ ಸಂಬಂಧ ಇಟ್ಕೊಳ್ಳೋ ತರ ಇನ್ನೊಬ್ಬ ಗಂಡಸಿನ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು.”—ಯಾಜಕಕಾಂಡ 18:22.

  •  “ಅವರು ತಮ್ಮ ಹೃದಯದ ಆಸೆಗಳ ಪ್ರಕಾರ ಜೀವಿಸೋಕೆ ಇಷ್ಟಪಟ್ಟಿದ್ರಿಂದ ದೇವರು ಅವ್ರಿಗೆ . . . ನಾಚಿಕೆಗೆಟ್ಟ ಕಾಮದಾಸೆಯನ್ನ ತೀರಿಸ್ಕೊಳ್ಳೋಕೆ ಬಿಟ್ಟುಬಿಟ್ಟನು. ಅವ್ರಲ್ಲಿರೋ ಹೆಂಗಸ್ರು ಸ್ವಾಭಾವಿಕ ಲೈಂಗಿಕ ಸಂಪರ್ಕವನ್ನ ಬಿಟ್ಟು ಅಸ್ವಾಭಾವಿಕ ಲೈಂಗಿಕ ಸಂಪರ್ಕ ಇಟ್ಕೊಂಡ್ರು.”—ರೋಮನ್ನರಿಗೆ 1:24, 26.

  •  “ಕೆಟ್ಟವರು ದೇವರ ಆಳ್ವಿಕೆಯಲ್ಲಿ ಇರಲ್ಲ ಅಂತ ನಿಮಗೆ ಗೊತ್ತಿಲ್ವಾ? ಮೋಸ ಹೋಗಬೇಡಿ. ಲೈಂಗಿಕ ಅನೈತಿಕತೆ ಮಾಡುವವರು, ಮೂರ್ತಿಗಳನ್ನ ಆರಾಧಿಸುವವರು, ವ್ಯಭಿಚಾರಿಗಳು, ಸಲಿಂಗಕಾಮಿಗಳು, ಕಳ್ಳರು, ಅತಿಯಾಸೆ ಇರುವವರು, ಕುಡುಕರು, ಕೆಟ್ಟಕೆಟ್ಟದಾಗಿ ಬಯ್ಯುವವರು, ಸುಲಿಗೆ ಮಾಡುವವರು ದೇವರ ಆಳ್ವಿಕೆಯಲ್ಲಿ ಇರಲ್ಲ.”—1 ಕೊರಿಂಥ 6:9, 10.

 ಒಬ್ಬ ವ್ಯಕ್ತಿ ಸಲಿಂಗಕಾಮಿ ಆಗಿರಲಿ ಅಥವಾ ಭಿನ್ನಲಿಂಗಕಾಮಿ ಆಗಿರಲಿ, ಎಲ್ಲರಿಗೂ ದೇವರ ನಿಯಮ ಒಂದೇ ತರ ಅನ್ವಯಿಸುತ್ತೆ. ನಾವೆಲ್ಲರೂ ಅಪರಿಪೂರ್ಣರಾಗಿರೋದ್ರಿಂದ ಆಗಾಗ ತಪ್ಪುಗಳನ್ನು ಮಾಡೋ ಆಸೆ ಬರುತ್ತೆ. ಆದ್ರೆ ದೇವರು ಇಷ್ಟಪಡೋ ರೀತಿಯಲ್ಲಿ ಜೀವನ ಮಾಡೋಕೆ ಪ್ರಯತ್ನಿಸುವಾಗ ನಾವೆಲ್ಲರೂ ಸ್ವಲ್ಪ ಕಷ್ಟಪಡಬೇಕಾಗುತ್ತೆ. ಆ ಕೆಟ್ಟ ಆಸೆಗಳಿಂದ ದೂರ ಇರಬೇಕಾಗುತ್ತೆ.—ಕೊಲೊಸ್ಸೆ 3:5.

 ಅದರ ಅರ್ಥ ಏನು . . . ?

 ಇದರ ಅರ್ಥ ಸಲಿಂಗಕಾಮಿಗಳನ್ನು ದ್ವೇಷಿಸಬೇಕು ಅಂತ ಬೈಬಲ್‌ ಹೇಳುತ್ತಂತಾನಾ?

 ಇಲ್ಲ. ಸಲಿಂಗಕಾಮಿಗಳಾಗಿರಲಿ ಅಥವಾ ವಿರುದ್ಧ ಲಿಂಗದವರನ್ನ ಇಷ್ಟಪಡುವವರೇ ಆಗಿರಲಿ ಅಂಥವರನ್ನ ದ್ವೇಷಿಸಬೇಕು ಅಂತ ಬೈಬಲ್‌ ಎಲ್ಲೂ ಹೇಳಲ್ಲ. ಒಬ್ಬ ವ್ಯಕ್ತಿ ದೇವರಿಗೆ ಇಷ್ಟಪಡೋ ರೀತಿಯಲ್ಲಿ ಬದುಕಿದ್ರೂ ಬದುಕಿಲ್ಲಾಂದ್ರೂ “ಎಲ್ರ ಜೊತೆ ಶಾಂತಿಯಿಂದ” ಇರಬೇಕು ಅಂತ ಬೈಬಲ್‌ ಹೇಳುತ್ತೆ. (ಇಬ್ರಿಯ 12:14) ಒಬ್ಬ ವ್ಯಕ್ತಿ ಸಲಿಂಗಕಾಮಿ ಎಂದ ಮಾತ್ರಕ್ಕೆ ಆ ವ್ಯಕ್ತಿಯನ್ನ ಆಡ್ಕೊಳ್ಳೋದಾಗಲಿ, ಅವರಿಗೆ ತೊಂದರೆ ಕೊಡೋದಾಗಲಿ ಅಥವಾ ಅವರ ಬಗ್ಗೆ ತಪ್ಪು ತಪ್ಪಾಗಿ ಮಾತಾಡೋದಾಗಲಿ ಮಾಡಬಾರದು.

 ಹಾಗಂತ ಸಲಿಂಗಕಾಮವನ್ನು ಒಪ್ಪಿಕೊಳ್ಳೋ ನಿಯಮಗಳ ವಿರುದ್ಧ ಕ್ರೈಸ್ತರು ಪ್ರತಿಭಟಿಸಬೇಕು ಅಂತನಾ?

 ಮದುವೆ ಬಂಧ ಒಬ್ಬ ಗಂಡು ಮತ್ತು ಹೆಣ್ಣಿನ ಮಧ್ಯೆ ಇರಬೇಕು ಅಂತ ಬೈಬಲ್‌ ಹೇಳುತ್ತೆ. (ಮತ್ತಾಯ 19:4-6) ಸಲಿಂಗಕಾಮಕ್ಕೆ ಸಂಬಂಧಪಟ್ಟ ಕಾನೂನಿನ ಬಗ್ಗೆ ತುಂಬ ಚರ್ಚೆಗಳು ನಡೆದಿವೆ. ಇದರ ಬಗ್ಗೆ ಸ್ವಲ್ಪ ಯೋಚನೆ ಮಾಡೋದಾದ್ರೆ, ಇದು ನೈತಿಕ ವಿಷಯ ಅಲ್ಲ ಬದಲಿಗೆ ರಾಜಕೀಯ ವಿಷಯಕ್ಕೆ ಸಂಬಂಧಪಟ್ಟಿದೆ ಅಂತ ಗೊತ್ತಾಗುತ್ತೆ. ಕ್ರೈಸ್ತರು ರಾಜಕೀಯ ವಿಷಯದಲ್ಲಿ ತಾಟಸ್ಥ್ಯ ಕಾಪಾಡಿಕೊಳ್ಳಬೇಕು ಅಂತ ಬೈಬಲ್‌ ಹೇಳುತ್ತೆ. (ಯೋಹಾನ 18:36) ಅದಕ್ಕೆ ಸಲಿಂಗ ವಿವಾಹದ ಬಗ್ಗೆ, ಸಲಿಂಗಕಾಮದ ಬಗ್ಗೆ ಸರ್ಕಾರ ಕೊಡೋ ನಿಯಮಗಳನ್ನ ನಾವು ಬೆಂಬಲಿಸೋದೂ ಇಲ್ಲ, ವಿರೋಧಿಸೋದೂ ಇಲ್ಲ.

 ಆದರೆ . . . ?

 ಒಂದುವೇಳೆ ಒಬ್ಬ ವ್ಯಕ್ತಿ ಸಲಿಂಗಕಾಮ ಮಾಡ್ತಿದ್ರೆ ಬದಲಾಗೋಕೆ ಆಗುತ್ತಾ?

 ಖಂಡಿತ. ಮೊದಲನೇ ಶತಮಾನದಲ್ಲಿದ್ದ ಕೆಲವರು ಬದಲಾದ್ರು. ಸಲಿಂಗಕಾಮಿಗಳು ದೇವರ ಆಳ್ವಿಕೆಯಲ್ಲಿ ಇರಲ್ಲ ಅಂತ ಹೇಳಿದ ಮೇಲೆ “ಈ ಮುಂಚೆ ನಿಮ್ಮಲ್ಲಿ ಸ್ವಲ್ಪ ಜನ ಅಂಥವ್ರೇ ಆಗಿದ್ರಿ” ಅಂತ ಬೈಬಲಿನಲ್ಲಿ ಇದೆ.—1 ಕೊರಿಂಥ 6:11.

 ಮುಂಚೆ ಸಲಿಂಗಕಾಮಿ ಆಗಿದ್ದ ವ್ಯಕ್ತಿಗೆ ಪುನಃ ಅದೇ ಲಿಂಗದವರ ಮೇಲೆ ಆಕರ್ಷಣೆ ಆಗೋದೇ ಇಲ್ಲ ಅಂತನಾ? ಖಂಡಿತ ಅಲ್ಲ. ಯಾಕಂದ್ರೆ ಬೈಬಲ್‌ ಹೀಗೆ ಹೇಳುತ್ತೆ: “ದೇವರು ಕೊಡೋ ಹೊಸ ವ್ಯಕ್ತಿತ್ವ ಹಾಕ್ಕೊಳ್ಳಿ. ಸರಿಯಾದ ಜ್ಞಾನಕ್ಕೆ ತಕ್ಕ ಹಾಗೆ ಅದನ್ನ ಹೊಸದು ಮಾಡ್ತಾ ಇರಿ.” (ಕೊಲೊಸ್ಸೆ 3:10) ನಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಮಾಡ್ತಾ ಇರಬೇಕು.

 ಆದರೆ ಒಬ್ಬ ವ್ಯಕ್ತಿಗೆ ದೇವರ ನೀತಿ ನಿಯಮಗಳನ್ನ ಪಾಲಿಸಬೇಕು ಅನ್ನೋ ಆಸೆ ಇದ್ದು ಸಲಿಂಗಕಾಮದ ಯೋಚನೆಗಳಿದ್ದರೆ ಏನು ಮಾಡಬೇಕು?

 ಒಬ್ಬ ವ್ಯಕ್ತಿಗೆ ಯಾವುದಾದ್ರೂ ಒಂದು ಕೆಟ್ಟ ಆಸೆ ಇದ್ದರೆ, ಒಂದಾ ಅವನು ಅದರ ಬಗ್ಗೆನೇ ಯೋಚನೆ ಮಾಡ್ತಾ ಕೂರಬಹುದು ಇಲ್ಲಾಂದ್ರೆ ಅದರ ಬಗ್ಗೆ ಯೋಚನೆ ಮಾಡ್ದೆ ಇರಬಹುದು. ಹೇಗೆ? ಬೈಬಲ್‌ ಹೀಗೆ ಹೇಳುತ್ತೆ: “ಪವಿತ್ರಶಕ್ತಿಯ ಮಾರ್ಗದರ್ಶನಕ್ಕೆ ತಕ್ಕ ಹಾಗೆ ನಡಿತಾ ಇರಿ. ಆಗ ನೀವು ದೇಹದ ಆಸೆಗಳ ಪ್ರಕಾರ ನಡ್ಕೊಳಲ್ಲ.”—ಗಲಾತ್ಯ 5:16.

 ಒಬ್ಬ ವ್ಯಕ್ತಿಗೆ ದೇಹದ ಆಸೆಗಳೇ ಇರೋದಿಲ್ಲ ಅಂತ ವಚನ ಹೇಳ್ತಿಲ್ಲ ಅನ್ನೋದನ್ನ ಗಮನಿಸಿದ್ರಾ. ಬೈಬಲನ್ನು ಅಧ್ಯಯನ ಮಾಡಿದ್ರೆ ಮತ್ತು ಪ್ರಾರ್ಥನೆ ಮಾಡಿದ್ರೆ ಆ ದೇಹದ ಆಸೆಗಳಿಂದ ದೂರ ಇರೋಕೆ ಅವನಿಗೆ ಶಕ್ತಿ ಸಿಗುತ್ತೆ.

 ಈ ಲೇಖನದ ಆರಂಭದಲ್ಲಿ ಹೇಳಿದ ಡೇವಿಡ್‌ಗೆ ಈ ಮಾತುಗಳು ನಿಜ ಅನಿಸ್ತು. ವಿಶೇಷವಾಗಿ ಹೆತ್ತವರ ಹತ್ತಿರ ಇದರ ಬಗ್ಗೆ ಮಾತಾಡಿದಾಗ ಸಹಾಯ ಸಿಕ್ತು. “ಹೆಗಲ ಮೇಲಿದ್ದ ದೊಡ್ಡ ಭಾರವನ್ನು ಇಳಿಸಿದ ಹಾಗೆ ಆಯ್ತು” ಅಂತ ಅವನು ಹೇಳಿಕೊಳ್ತಾನೆ. ಇನ್ನೂ ಒಂದುಚೂರು ಬೇಗ ಹೇಳ್ಕೊಂಡಿದ್ರೆ ನನ್ನ ಯೌವನವನ್ನ ಇನ್ನೂ ಚೆನ್ನಾಗಿ ಎಂಜಾಯ್‌ ಮಾಡಬಹುದಿತ್ತು ಅಂತ ಈಗ ಅನಿಸ್ತಿದೆ.

 ಯೆಹೋವ ದೇವರು ಇಟ್ಟಿರೋ ನಿಯಮವನ್ನ ಪಾಲಿಸುವಾಗ ಯಾವಾಗಲೂ ಖುಷಿಯಾಗಿ ಇರ್ತೀವಿ. ಆ ನಿಯಮಗಳು “ನ್ಯಾಯವಾಗಿವೆ, ಅವು ನಮ್ಮ ಹೃದಯಕ್ಕೆ ಖುಷಿ ಕೊಡುತ್ತೆ ಮತ್ತು ಅವನ್ನ ಪಾಲಿಸಿದ್ರೆ ದೊಡ್ಡ ಬಹುಮಾನ ಸಿಗುತ್ತೆ.”—ಕೀರ್ತನೆ 19:8, 11.