ಮಾಹಿತಿ ಇರುವಲ್ಲಿ ಹೋಗಲು

ಯುವ ಜನರ ಪ್ರಶ್ನೆಗಳು

ಕೆಟ್ಟ ಮಾತು ಆಡೋದು ನಿಜವಾಗಲೂ ತಪ್ಪಾ?

ಕೆಟ್ಟ ಮಾತು ಆಡೋದು ನಿಜವಾಗಲೂ ತಪ್ಪಾ?

“ಕೆಟ್ಟ ಮಾತು ಕೇಳಿಕೇಳಿ ಎಷ್ಟು ರೂಡಿ ಆಗಿಬಿಟ್ಟಿದೆ ಅಂದ್ರೆ ಅದನ್ನ ಕೇಳಿದಾಗ ಏನೂ ಅನಿಸಲ್ಲ.”—ಕ್ರಿಸ್ಟಫರ್‌, 17.

“ನಾನು ಚಿಕ್ಕವಳಿದ್ದಾಗ ತುಂಬ ಕೆಟ್ಟ ಮಾತು ಆಡ್ತಿದ್ದೆ. ಈ ಅಭ್ಯಾಸವನ್ನ ಬೆಳೆಸಿಕೊಳ್ಳೋದು ತುಂಬ ಸುಲಭ. ಆದರೆ ಅದನ್ನ ಬಿಡೋದು ಅಷ್ಟೇ ಕಷ್ಟ.”—ರೆಬೆಕ, 19.

 ನೀವು ಏನು ಹೇಳುತ್ತೀರಾ?

  •   ಬೇರೆಯವರು ಕೆಟ್ಟ ಮಾತು ಆಡಿದಾಗ ನಿಮಗೆ ಏನು ಅನಿಸುತ್ತೆ?

    •  ಏನೂ ಅನಿಸಲ್ಲ. ಇದೆಲ್ಲ ಮಾಮೂಲಿ.

    •  ಸ್ವಲ್ಪ ಬೇಜಾರಾಗುತ್ತೆ, ಆದ್ರೆ ಹಾಗೆ ಮಾತಾಡಬೇಡಿ ಅಂತ ಹೇಳಕ್ಕೂ ಹೋಗಲ್ಲ.

    •  ತುಂಬ ಬೇಜಾರಾಗುತ್ತೆ, ಅದನ್ನ ಸಹಿಸೋಕೆ ಆಗಲ್ಲ.

  •   ನೀವು ಎಷ್ಟು ಸಲ ಕೆಟ್ಟ ಮಾತಾಡುತ್ತೀರಾ?

    •  ಆಡೋದೇ ಇಲ್ಲ

    •  ಕೆಲವೊಮ್ಮೆ

    •  ಯಾವಾಗಲೂ

  •   ಕೆಟ್ಟ ಮಾತು ಆಡೋದರ ಬಗ್ಗೆ ನಿಮಗೆ ಏನು ಅನಿಸುತ್ತೆ?

    •  ಅದೇನು ದೊಡ್ಡ ವಿಷಯ ಅಲ್ಲ

    •  ಅದು ದೊಡ್ಡ ತಪ್ಪು

 ಯಾಕೆ ಕೆಟ್ಟ ಮಾತು ಆಡಬಾರದು?

 ಕೆಟ್ಟ ಮಾತು ಆಡೋದು ದೊಡ್ಡ ತಪ್ಪಾ? “ಅಲ್ಲ. ಈ ಲೋಕದಲ್ಲಿ ತಲೆಕೆಡಿಸಿಕೊಳ್ಳೋಕೆ ಎಷ್ಟೋ ವಿಷಯಗಳಿವೆ. ಇದೇನು ದೊಡ್ಡ ವಿಷಯನಾ? ಎಲ್ಲರೂ ಕೆಟ್ಟ ಮಾತು ಆಡುತ್ತಾರಲ್ವಾ” ಅಂತ ನಿಮಗೆ ಅನಿಸಬಹುದು. ಆದರೆ ಅದು ನಿಜಾನಾ?

 ನಂಬುತ್ತೀರೋ ಬಿಡುತ್ತೀರೋ ಕೆಟ್ಟ ಮಾತು ಆಡದೇ ಇರೋ ತುಂಬ ಜನ ಇದ್ದಾರೆ. ಅವರು ಕೆಟ್ಟ ಮಾತು ಆಡದೇ ಇರೋಕೆ ಕಾರಣನೂ ಇದೆ. ಉದಾಹರಣೆಗೆ:

  •  ನೀವು ಎಂಥವರು ಅಂತ ನಿಮ್ಮ ಮಾತಿಂದ ಗೊತ್ತಾಗುತ್ತೆ. ಕೆಟ್ಟಕೆಟ್ಟ ಮಾತು ಆಡುವವರು ಬೇರೆಯವರ ಭಾವನೆಗಳಿಗೆ ಬೆಲೆ ಕೊಡಲ್ಲ. ಆದರೆ ನೀವು ಅಂಥ ವ್ಯಕ್ತಿನಾ?

     ಬೈಬಲ್‌ ಹೀಗೆ ಹೇಳುತ್ತೆ: “ಬಾಯಿಂದ ಹೊರಗೆ ಬರೋದೆಲ್ಲ ಹೃದಯದಿಂದ ಬರುತ್ತೆ.”—ಮತ್ತಾಯ 15:18.

    ಕೆಟ್ಟ ಮಾತನ್ನ ವಾಯು ಮಾಲಿನ್ಯಕ್ಕೆ ಹೋಲಿಸಬಹುದು. ಅದಕ್ಕೆ ನಿಮಗೂ ಬೇರೆಯವರಿಗೂ ಬೇಜಾರಾಗುವಂಥ ರೀತಿಯಲ್ಲಿ ಮಾತಾಡಬೇಡಿ

  •  ಕೆಟ್ಟ ಮಾತು ಕೆಟ್ಟ ಹೆಸರು ತಂದುಕೊಡುತ್ತೆ. ಕಸ್‌ ಕಂಟ್ರೋಲ್‌ ಅನ್ನೋ ಪುಸ್ತಕ ಹೀಗೆ ಹೇಳುತ್ತೆ: ‘ನಮ್ಮ ಕುಟುಂಬದವರು ಅಥವಾ ನಮ್ಮ ಜೊತೆ ಕೆಲಸ ಮಾಡುವವರು ನಮ್ಮನ್ನ ಇಷ್ಟಪಡುತ್ತಾರಾ, ಇಲ್ವಾ? ಕೆಲಸ ಸಿಗುತ್ತಾ, ಇಲ್ವಾ? ಅಥವಾ ಪ್ರೊಮೋಷನ್‌ ಸಿಗುತ್ತಾ, ಇಲ್ವಾ? ಜನರು ನಮ್ಮ ಜೊತೆ ಹೇಗೆ ನಡೆದುಕೊಳ್ಳುತ್ತಾರೆ ಅನ್ನೋದೆಲ್ಲ ನಾವು ಆಡೋ ಮಾತಿನ ಮೇಲೆ ಹೊಂದಿಕೊಂಡಿದೆ.’ ಆ ಪುಸ್ತಕದಲ್ಲಿ ಹೀಗೂ ಇತ್ತು: ‘ಒಳ್ಳೇ ಮಾತುಗಳನ್ನ ಆಡಿದ್ರೆ ಜನ ನನ್ನ ಜೊತೆ ಹೇಗೆ ನಡೆದುಕೊಳ್ಳುತ್ತಾರೆ? ಅಂತ ನಿಮ್ಮನ್ನೇ ಕೇಳಿಕೊಳ್ಳಿ.’

     ಬೈಬಲ್‌ ಹೀಗೆ ಹೇಳುತ್ತೆ: ‘ಬೈಗುಳ ನಿಮ್ಮಿಂದ ತೆಗೆದುಹಾಕಿ.’—ಎಫೆಸ 4:31.

  •  ಕೆಟ್ಟ ಮಾತು ಆಡಿದರೆ ಒಳ್ಳೇ ಹೆಸರು ಸಿಗುತ್ತೆ ಅನ್ನೋ ಭಾವನೆ ತಪ್ಪು. ಡಾಕ್ಟರ್‌ ಅಲೆಕ್ಸ್‌ ಪ್ಯಾಕೆರ್‌ ಅನ್ನುವವರು ಹೌ ರೂಡ್‌ ಅನ್ನೋ ಪುಸ್ತಕದಲ್ಲಿ ಹೀಗೆ ಹೇಳುತ್ತಾರೆ: “ಕೆಟ್ಟ ಮಾತು ಆಡುವವರು ಯಾವಾಗಲೂ ಬೇರೆಯವರಿಗೆ ಕಿರಿಕಿರಿ ಮಾಡುತ್ತಿರುತ್ತಾರೆ.” ಇಂಥ ಮಾತುಗಳನ್ನ ಆಡುವವರ ‘ಬಾಯಿಂದ ಯಾವತ್ತೂ ಒಳ್ಳೇ ಮಾತು ಬರಲ್ಲ. ಇಂಥವರು ಬೇರೆಯವರನ್ನ ಪ್ರೀತಿಸಲ್ಲ, ಬುದ್ಧಿಮಾತು ಹೇಳಲ್ಲ. ಯಾವಾಗಲೂ ಕೆಟ್ಟ ಮಾತು ಆಡುವವರು ಒಳ್ಳೇ ವ್ಯಕ್ತಿ ಆಗಿರಲ್ಲ, ದಡ್ಡನಾಗಿರುತ್ತಾನೆ.’

     ಬೈಬಲ್‌ ಹೀಗೆ ಹೇಳುತ್ತೆ: “ನಿಮ್ಮ ಬಾಯಲ್ಲಿ ಕೆಟ್ಟ ಮಾತು ಬರಬಾರದು.”—ಎಫೆಸ 4:29.

 ಕೆಟ್ಟ ಮಾತು ಆಡದೇ ಇರೋಕೆ ನೀವೇನು ಮಾಡಬೇಕು?

  •  ಒಂದು ಗುರಿ ಇಡಿ. ಕೆಟ್ಟ ಮಾತು ಆಡದೇ ಇರೋಕೆ ಪ್ರಯತ್ನ ಮಾಡಿ. ಮೊದಲು, ಒಂದು ತಿಂಗಳಲ್ಲೇ ಕೆಟ್ಟ ಮಾತು ಆಡೋದನ್ನ ಬಿಟ್ಟುಬಿಡೋಕೆ ಪ್ರಯತ್ನಿಸಿ. ನೀವು ಈ ವಿಷಯದಲ್ಲಿ ಪ್ರಗತಿ ಮಾಡ್ತಿದ್ದೀರೋ ಇಲ್ವೋ ಅಂತ ತಿಳಿದುಕೊಳ್ಳೋಕೆ ಕ್ಯಾಲೆಂಡರಿನಲ್ಲಿ ಗುರುತು ಹಾಕಿ. ಆದರೆ ಕೆಟ್ಟ ಮಾತನ್ನ ಸಂಪೂರ್ಣವಾಗಿ ಬಿಟ್ಟುಬಿಡಬೇಕಾದರೆ ಇನ್ನೂ ಕೆಲವು ವಿಷಯಗಳನ್ನ ಮಾಡಬೇಕಾಗುತ್ತೆ. ಉದಾಹರಣೆಗೆ:

  •  ಕೆಟ್ಟ ಮಾತುಗಳನ್ನ ನಿಮ್ಮ ಮನಸ್ಸಲ್ಲಿ ತುಂಬಿಸೋ ಮನರಂಜನೆಯಿಂದ ದೂರ ಇರಿ. ಬೈಬಲ್‌ ಹೀಗೆ ಹೇಳುತ್ತೆ: “ಕೆಟ್ಟ ಸಹವಾಸ ಒಳ್ಳೇ ನಡತೆಯನ್ನ ಹಾಳು ಮಾಡುತ್ತೆ.” (1 ಕೊರಿಂಥ 15:33) ಸಹವಾಸ ಅಂದ್ರೆ ಬರೀ ಜನರ ಜೊತೆ ಬೆರೆಯೋದು ಅಷ್ಟೇ ಅಲ್ಲ ನಾವು ನೋಡೋ ಸಿನಿಮಾ, ಆಡೋ ವಿಡಿಯೋ ಗೇಮ್ಸ್‌, ಕೇಳಿಸಿಕೊಳ್ಳೋ ಸಂಗೀತ ಕೂಡ ಅದರಲ್ಲಿ ಸೇರಿದೆ. 17 ವರ್ಷದ ಕೆನೆತ್‌ ಹೀಗೆ ಹೇಳುತ್ತಾನೆ: “ನಮಗೆ ಕೆಲವು ಹಾಡುಗಳು ಎಷ್ಟು ಇಷ್ಟ ಆಗುತ್ತಂದ್ರೆ ಅದರಲ್ಲಿ ಕೆಟ್ಟ ಪದಗಳು ಇರೋದೇ ನಮಗೆ ಗೊತ್ತಾಗಲ್ಲ. ಯಾಕಂದ್ರೆ ಆ ಹಾಡಿನ ಮ್ಯೂಸಿಕ್‌ ತುಂಬ ಚೆನ್ನಾಗಿರುತ್ತೆ.”

  •  ನೀವು ಪ್ರೌಢರು ಅಂತ ತೋರಿಸಿಕೊಳ್ಳಿ. ಕೆಟ್ಟಕೆಟ್ಟ ಮಾತು ಆಡಿದ್ರೆ ನಾವು ದೊಡ್ಡ ವ್ಯಕ್ತಿಗಳಾಗಿಬಿಡ್ತೀವಿ ಅಂತ ಕೆಲವರು ನೆನಸುತ್ತಾರೆ. ಆದರೆ ನಿಜ ಹೇಳಬೇಕಂದ್ರೆ ಅವರಿಗೆ ಬುದ್ಧಿ ಇಲ್ಲ ಅಂತ ಅವರು ಆಡೋ ಮಾತೇ ತೋರಿಸಿಕೊಡುತ್ತೆ. ಬೈಬಲ್‌ ಇದರ ಬಗ್ಗೆ ಹೀಗೆ ಹೇಳುತ್ತೆ: ಪ್ರೌಢರು “ಸರಿ ಯಾವುದು, ತಪ್ಪು ಯಾವುದು ಅನ್ನೋ ವ್ಯತ್ಯಾಸ ತಿಳ್ಕೊಳ್ಳೋಕೆ ಅವ್ರಿಗೆ ಅವ್ರೇ ತರಬೇತಿ ಕೊಡ್ತಾರೆ.” (ಇಬ್ರಿಯ 5:14) ಬೇರೆಯವರನ್ನ ಮೆಚ್ಚಿಸೋಕೆ ಅವರು ಕೆಟ್ಟ ಮಾತನ್ನ ಆಡಲ್ಲ.

 ಮಾಲಿನ್ಯ ಹೇಗೆ ಗಾಳಿಯನ್ನ ಹಾಳು ಮಾಡುತ್ತೋ ಅದೇ ತರ ಕೆಟ್ಟ ಮಾತು ಜನರ ಮನಸ್ಸನ್ನ ಕೆಡಿಸಿಬಿಡುತ್ತೆ. ಈ ಲೋಕದಲ್ಲಿ ಈಗಾಗಲೇ ಕೆಟ್ಟವರು ತುಂಬಿ ತುಳುಕುತ್ತಿದ್ದಾರೆ. “ನೀವು ಅದರಲ್ಲಿ ಸೇರಿಕೊಳ್ಳಬೇಡಿ. . . ಯಾವಾಗಲೂ ಚೆನ್ನಾಗಿ ಮಾತಾಡಿ. ಕೆಟ್ಟ ಮಾತನ್ನ ಉಪಯೋಗಿಸಬೇಡಿ. ಹೀಗೆ ಮಾಡೋದ್ರಿಂದ ನೀವು ಖುಷಿಯಾಗಿ ಇರ್ತೀರ, ಬೇರೆಯವರೂ ಖುಷಿಯಾಗಿ ಇರ್ತಾರೆ” ಅಂತ ಕಸ್‌ ಕಂಟ್ರೋಲ್‌ ಪುಸ್ತಕ ಹೇಳುತ್ತೆ.