ಮಾಹಿತಿ ಇರುವಲ್ಲಿ ಹೋಗಲು

ಯುವ ಜನರ ಪ್ರಶ್ನೆಗಳು

ನಾನು ಟೀಚರ್‌ ಜೊತೆ ಹೇಗೆ ಹೊಂದಿಕೊಂಡು ಹೋಗೋದು?

ನಾನು ಟೀಚರ್‌ ಜೊತೆ ಹೇಗೆ ಹೊಂದಿಕೊಂಡು ಹೋಗೋದು?

 ಟೀಚರ್‌ ಅಂದರೆ ಭಯ

 ಈಗಲ್ಲ ಮುಂದೆ ವಿದ್ಯಾರ್ಥಿಗಳಿಗೆ ತಮ್ಮ ಟೀಚರ್ಸ್‌ ಮೇಲೆ ಸಿಟ್ಟು ಬರುತ್ತೆ. ಅವರು ತುಂಬ ಡಿಮ್ಯಾಂಡ್‌ ಮಾಡ್ತಿದ್ದಾರೆ, ಕ್ರೂರವಾಗಿ ಮತ್ತು ಅನ್ಯಾಯವಾಗಿ ನಡ್ಕೊತಿದ್ದಾರೆ ಅಂತ ಅನಿಸುತ್ತೆ.

  •   21 ವಯಸ್ಸಿನ ಲೂಯೀಸ್‌ ಹೀಗೆ ನೆನಪಿಸಿಕೊಳ್ತಾನೆ: “ಮಕ್ಕಳನ್ನ ಬಾಯಿಗೆ ಬಂದಹಾಗೆ ಬೈಯುವ ಮತ್ತು ಮಕ್ಕಳಿಗೆ ಗೌರವ ಕೊಡದೆ ಇರೋ ಒಬ್ರು ಟೀಚರ್‌ ನಮಗಿದ್ರು. ಆಗ ಅವರ ರಿಟೈರ್‌ಮೆಂಟ್‌ ಹತ್ರ ಇತ್ತು. ಹಾಗಾಗಿ ಹಾಗೆ ನಡ್ಕೊಂಡ್ರೆ ತನ್ನ ಕೆಲಸವೇನು ಹೋಗಲ್ಲ ಅಂತ ಅವರು ಅಂದುಕೊಂಡಿದ್ರು.”

  •   ಬೇರೆಯವರಿಗಿಂತ ಹೆಚ್ಚು ತನ್ನೊಟ್ಟಿಗೆ ಕ್ರೂರವಾಗಿ ನಡ್ಕೊಂಡ ಟೀಚರ್‌ ಬಗ್ಗೆ 25 ವಯಸ್ಸಿನ ಮೆಲಾನಿ ಹೀಗೆ ನೆನಪಿಸಿಕೊಳ್ತಾಳೆ: “ನಾನು ಒಂದು ಮುಖ್ಯವಾದ ಧರ್ಮದ ಭಾಗವಾಗಿಲ್ಲ ಅಂತ ನನ್ನ ಟೀಚರ್‌ ನನ್ನೊಟ್ಟಿಗೆ ಕ್ರೂರವಾಗಿ ನಡ್ಕೊಳ್ತಿದ್ರು. ‘ದೊಡ್ಡವಳಾದ ಮೇಲೆ ನಿನಗಾಗೋ ಅನ್ಯಾಯವನ್ನ ಸಹಿಸಿಕೊಳ್ಳೋಕೆ ನಿನ್ನನ್ನ ಈಗಲೇ ರೆಡಿ ಮಾಡ್ತಿದ್ದೀನಿ’ ಅಂತ ಅವರು ಹೇಳ್ತಿದ್ರು.”

 ಈ ತರ ಟೀಚರ್‌ ನಿಮಗಿದ್ರೆ ಆ ವರ್ಷನೇ ಹಾಳಾಗಿ ಹೋಯ್ತು ಅಂತ ಅಂದ್ಕೋಳಬೇಡಿ. ಮುಂದಿನ ಸಲಹೆಯನ್ನ ಪಾಲಿಸಿ ನೋಡಿ.

 ಕೆಲವು ಕಿವಿಮಾತು

  •   ಹೊಂದಿಸಿಕೊಂಡು ಹೋಗಿ. ಬೇರೆಬೇರೆ ಟೀಚರ್‌ ವಿದ್ಯಾರ್ಥಿಗಳಿಂದ ಬೇರೆಬೇರೆ ರೀತಿಯಲ್ಲಿ ನಿರೀಕ್ಷಿಸ್ತಾರೆ. ನಿಮ್ಮ ಟೀಚರ್‌ ನಿಮ್ಮಿಂದ ಏನ್‌ ಬಯಸ್ತಾರೆ ಅಂತ ಅರ್ಥಮಾಡ್ಕೊಳ್ಳಿ ಮತ್ತು ಅದನ್ನ ಮಾಡೋಕೆ ನಿಮ್ಮಿಂದಾದ ಪ್ರಯತ್ನ ಮಾಡಿ.

     ಬೈಬಲ್‌ ತತ್ವ: “ಹೇಳೋ ಮಾತನ್ನ ಬುದ್ಧಿವಂತ ಕೇಳಿ ಕಲಿತಾನೆ.”—ಜ್ಞಾನೋಕ್ತಿ 1:5.

     “ಟೀಚರ್‌ ನನ್ನಿಂದ ಏನು ಬಯಸ್ತಾರೋ ಅದನ್ನ ನಾನು ಮಾಡಬೇಕು ಅಂತ ಅರ್ಥಮಾಡ್ಕೊಂಡೆ. ಅವರಿಗೆ ಇಷ್ಟ ಆಗೋ ತರ ಮಾಡ್ಲಿಕ್ಕೆ ನನ್ನಿಂದಾದ ಪ್ರಯತ್ನ ಮಾಡ್ದೆ. ಇದ್ರಿಂದ ಅವರ ಜೊತೆ ಹೊಂದ್ಕೊಂಡು ಹೋಗೋಕೆ ಆಯ್ತು.”— ಕ್ರಿಸ್ಟಫರ್‌.

  •   ಗೌರವಿಸಿ. ಟೀಚರ್‌ ಜೊತೆ ಗೌರವದಿಂದ ಮಾತಾಡಿ. ಅವರ ಜೊತೆ ಒರಟಾಗಿಯೇ ಮಾತಾಡಬೇಕು ಅಂತ ಅನಿಸಿದ್ರೂ ಹಾಗೆ ಮಾತಾಡಬೇಡಿ. ನೆನಪಿಡಿ, ಅವರು ನಿಮ್ಮನ್ನ ಒಬ್ಬ ವಿದ್ಯಾರ್ಥಿ ತರ ನೋಡ್ತಾರೆ ಹೊರತು ಒಬ್ಬ ಫ್ರೆಂಡ್‌ ತರ ಅಲ್ಲ.

     ಬೈಬಲ್‌ ತತ್ವ: “ನಿಮ್ಮ ಮಾತು ಯಾವಾಗ್ಲೂ ಮೃದುವಾಗಿ, ಮಧುರವಾಗಿ ಇರಲಿ. ಆಗ ಯಾರಿಗೆ ಹೇಗೆ ಉತ್ತರ ಕೊಡಬೇಕು ಅಂತ ನಿಮಗೆ ಗೊತ್ತಾಗುತ್ತೆ.”—ಕೊಲೊಸ್ಸೆ 4:6.

     “ವಿದ್ಯಾರ್ಥಿಗಳಿಂದ ಸಿಗಬೇಕಾದ ಗೌರವ ಟೀಚರ್‌ಗಳಿಗೆ ಯಾವಾಗಲು ಸಿಗಲ್ಲ. ನೀವು ಅವರಿಗೆ ಗೌರವ ಕೊಡ್ಲಿಕ್ಕೆ ಪ್ರಯತ್ನ ಮಾಡಿದ್ರೆ ಅವರು ನಿಮ್ಮ ಜೊತೆ ನಡ್ಕೊಳ್ಳೋ ರೀತಿಯಲ್ಲಿ ದೊಡ್ಡ ವ್ಯತ್ಯಾಸವನೇ ಕಾಣಬಹುದು.”—ಸೀರಾ.

  •   ಅರ್ಥಮಾಡ್ಕೊಳ್ಳಿ. ಟೀಚರ್‌ ಸಹ ಮನುಷ್ಯರೇ. ಅವ್ರಿಗೂ ಎಲ್ಲರ ತರ ಕಷ್ಟ, ಒತ್ತಡ ಇರುತ್ತೆ. ಹಾಗಾಗಿ “ನನ್ನ ಟೀಚರ್‌ ತುಂಬ ಕ್ರೂರಿ” ಅಥವಾ “ಅವ್ರಿಗೆ ನನ್ನ ಕಂಡ್ರೆ ಆಗಲ್ಲ” ಅಂತ ನೆನಸಬೇಡಿ.

     ಬೈಬಲ್‌ ತತ್ವ: “ನಾವೆಲ್ಲ ತುಂಬ ಸಲ ತಪ್ಪು ಮಾಡ್ತೀವಿ.”—ಯಾಕೋಬ 3:2.

     “ಟೀಚರ್‌ ಕೆಲ್ಸ ತುಂಬ ಕಷ್ಟದ ಕೆಲ್ಸ. ಟೀಚರ್‌ ಎಲ್ಲ ಮಕ್ಕಳನ್ನ ಹದ್ದುಬಸ್ತಿನಲ್ಲಿ ಇಟ್ಕೊಂಡು ಅವ್ರಿಗೆ ಕಲಿಸೋದನ್ನ ನನಗೆ ಯೋಚನೆ ಮಾಡೋಕು ಸಾಧ್ಯವಿಲ್ಲ. ನಾನು ಟೀಚರ್‌ ಜೊತೆ ಚೆನ್ನಾಗಿ ನಡ್ಕೊಳ್ಳಬೇಕು ಮತ್ತು ಅವರಿಗೆ ಹೆಚ್ಚು ಕಾಟ ಕೊಡಬಾರದು ಅಂತ ಯಾವಾಗಲೂ ಅಂದುಕೊಳ್ತೀನಿ.”—ಆಲೆಕ್ಸೀಸ್‌.

  •   ಅಪ್ಪ-ಅಮ್ಮನ ಹತ್ರ ಮಾತಾಡಿ. ನಿಮ್ಮ ಅಪ್ಪ-ಅಮ್ಮ ನೀವು ಸ್ಕೂಲಲ್ಲಿ ಚೆನ್ನಾಗಿ ಇರಬೇಕು ಅಂತ ಬಯಸ್ತಾರೆ. ನಿಮ್ಮ ಜೊತೆ ಕ್ರೂರಿಯಾಗಿ ನಡ್ಕೊಳ್ಳೋ ಟೀಚರ್‌ ಜೊತೆ ಹೇಗಿರಬೇಕು ಅಂತ ಅವರು ಕಲಿಸ್ತಾರೆ.

     ಬೈಬಲ್‌ ತತ್ವ: “ಸಲಹೆ ಕೇಳದಿದ್ರೆ ಮಾಡಿದ ಯೋಜನೆಗಳೆಲ್ಲ ನೆಲಕಚ್ಚುತ್ತೆ.”—ಜ್ಞಾನೋಕ್ತಿ 15:22.

     “ನಿಮಗೆ ಇರೋದಕ್ಕಿಂತ ಹೆಚ್ಚಿನ ಸಮಸ್ಯೆಗಳನ್ನ ನಿಮ್ಮ ಹೆತ್ತವರು ಜೀವನದಲ್ಲಿ ಎದುರಿಸಿರುತ್ತಾರೆ. ಹಾಗಾಗಿ ಅವರ ಮಾತು ಕೇಳಿ. ಅದರ ಮೂಲಕ ಈ ಸಮಸ್ಯೆಯಿಂದ ಹೊರ ಬರೋಕೆ ಸಾಧ್ಯ ಆಗುತ್ತೆ.”—ಒಲಿವಿಯಾ.

 ಟೀಚರ್‌ ಜೊತೆ ನೀವು ಹೇಗೆ ಮಾತಾಡಬೇಕು?

 ಕೆಲವು ಸಲ ನಿಮಗೆ ಏನ್‌ ಕಷ್ಟ ಆಗ್ತಿದೆ ಅಂತ ನಿಮ್ಮ ಟೀಚರ್‌ ಹತ್ರ ಮಾತಾಡಬೇಕಾಗುತ್ತೆ. ಎಲ್ಲಿ ಜಗಳ ಆಗಿ ಬಿಡುತ್ತೋ ಅಂತ ಭಯಪಡಬೇಡಿ. ಯಾಕಂದ್ರೆ ಇದು ಜಗಳ ಅಲ್ಲ. ಇದು ಬರೀ ಮಾತುಕತೆ ಅಷ್ಟೆ. ಇದ್ರಿಂದ ಮುಂದೆ ನೀವು ನೆನಸಿದ್ದಕ್ಕಿಂತ ಎಷ್ಟೋ ಒಳ್ಳೆದಾಗುತ್ತೆ ಮತ್ತು ಇದು ಪರಿಣಾಮಕಾರಿ ಆಗಿರುತ್ತೆ.

 ಬೈಬಲ್‌ ತತ್ವ: ‘ಶಾಂತಿಯಿಂದ ಇರೋಕೆ . . . ನಮ್ಮಿಂದ ಆಗೋದನ್ನೆಲ್ಲ ಮಾಡೋಣ.’—ರೋಮನ್ನರಿಗೆ 14:19.

 “ಒಂದುವೇಳೆ ನಿಮ್ಮ ಟೀಚರ್‌ ನಿಮ್ಮ ಜೊತೆ ಕ್ರೂರವಾಗಿ ನಡ್ಕೊಂಡ್ರೆ, ನಿಮ್ಮಿಂದ ಅವ್ರಿಗೆ ಏನಾದ್ರು ಬೇಜಾರಾಗಿದ್ಯಾ ಅಂತ ಕೇಳಿ. ಅವರು ಕೊಡೋ ಉತ್ರದಿಂದ ನೀವು ಎಲ್ಲಿ ಬದಲಾವಣೆ ಮಾಡ್ಕೋಬೇಕು ಅಂತ ಗೊತ್ತಾಗುತ್ತೆ.”—ಜೂಲಿಯಾನ.

 “ನಿಮಗೆ ಹೇಗೆ ಅನಿಸ್ತು ಅಂತ ಅವರಿಗೆ ಕ್ಲಾಸ್‌ ಆದ ಮೇಲೆ ಅಥವಾ ಅದಕ್ಕಿಂತ ಮುಂಚೆ ಒಬ್ಬರೇ ಇರುವಾಗ ಸಮಾಧಾನದಿಂದ ಹೇಳಿ. ಇದ್ರಿಂದ ಅವರು ಮುಂದೆ ಅಷ್ಟು ಕ್ರೂರವಾಗಿ ನಡ್ಕೊಳ್ಳದೇ ಇರಬಹುದು. ಅಲ್ಲದೇ ನೀವು ಮಾಡಿದ ಈ ವಿಧಾನದಿಂದ ಅವರು ನಿಮ್ಮನ್ನ ಗೌರವಿಸಬಹುದು.”—ಬೆಂಜಮಿನ್‌.

 ನಿಜ ಕಥೆ

 “ನನ್ನ ಮಾರ್ಕ್ಸ್‌ ತುಂಬ ಕಮ್ಮಿ ಇತ್ತು. ಟೀಚರ್‌ ನನಗೆ ಏನು ಸಹಾಯ ಮಾಡ್ತಿರಲಿಲ್ಲ. ಅವ್ರಿಂದ ನನ್ನ ಜೀವನಾನೇ ಹಾಳಾಗಿದ್ರಿಂದ ನಾನು ಸ್ಕೂಲ್‌ ಬಿಡಬೇಕು ಅಂತ ಅಂದ್ಕೊಂಡೆ.

 “ನಾನು ಬೇರೆ ಟೀಚರ್‌ ಹತ್ರ ಹೆಲ್ಪ್‌ ಕೇಳೋಕೆ ಹೋದೆ. ಆ ಸರ್‌ ನನಗೆ ಹೀಗಂದ್ರು: ‘ಅವ್ರಿಗೆ ನಿನ್ನ ಬಗ್ಗೆ ಚೆನ್ನಾಗಿ ಗೊತ್ತಿಲ್ಲ, ನಿನಗೂ ಅವರ ಬಗ್ಗೆ ಚೆನ್ನಾಗಿ ಗೊತ್ತಿಲ್ಲ. ನಿನಗೆ ಏನ್‌ ಕಷ್ಟ ಆಗ್ತಿದೆ ಅಂತ ಅವರ ಹತ್ರ ಹೇಳು. ನೀನು ಅವರ ಜೊತೆ ಮಾತಾಡೋದನ್ನ ನೋಡಿ ಅವರಿಗೆ ಹೆದರುವ ಬೇರೆ ಮಕ್ಕಳು ಸಹ ಅವರ ಹತ್ರ ಮಾತಾಡಬಹುದು.’

 “ನನಗೆ ಅವರ ಹತ್ರ ಹೋಗಿ ಮಾತಾಡೋಕೆ ಇಷ್ಟ ಇರಲಿಲ್ಲ. ಆದ್ರೆ ಆ ಸರ್‌ ಹೇಳಿದ್ದು ಸರಿ ಅನಿಸ್ತು. ವಿಷಯ ಬದಲಾಗಬೇಕು ಅಂದ್ರೆ ನಾನೇ ಮೊದಲು ಹೋಗಿ ಮಾತಾಡಬೇಕು.

 “ಮಾರನೇ ದಿನ ನಾನು ಆ ಟೀಚರ್‌ ಹತ್ರ ಹೋಗಿ ಗೌರವದಿಂದ ಮಾತಾಡಿದೆ. ನಾನು ಅವರಿಗೆ ‘ನಿಮ್ಮ ಕ್ಲಾಸು, ನೀವು ಕಲಿಸೋದು ಅಂದ್ರೆ ನನಗೆ ಇಷ್ಟ. ಆದ್ರೆ ನನಗೆ ಕಷ್ಟ ಆಗ್ತಿದೆ, ಏನ್‌ ಮಾಡೋದು ಅಂತಾನೇ ಗೊತ್ತಾಗ್ತಿಲ್ಲ’ ಅಂತ ಅಂದೆ. ಆಗ ಅವರು ಕೆಲವು ಸಲಹೆಗಳನ್ನ ಕೊಟ್ರು. ಅಲ್ಲದೆ ಕ್ಲಾಸ್‌ ಆದ ಮೇಲೆ ಅಥವಾ ಇಮೇಲ್‌ ಮೂಲಕ ಅವರು ನನಗೆ ಸಹಾಯ ಮಾಡ್ತೇನೆ ಅಂತ ಹೇಳಿದ್ರು.

 “ನನಗೆ ತುಂಬ ಆಶ್ಚರ್ಯ ಆಯ್ತು! ಈ ಮಾತುಕತೆಯಿಂದ ಒಬ್ಬರಿಗೊಬ್ಬರು ಅರ್ಥ ಮಾಡ್ಕೊಳ್ಳೋಕೆ ಸಾಧ್ಯ ಆಯ್ತು. ಅಲ್ಲದೇ ನನ್ನ ಸ್ಕೂಲ್‌ ಲೈಫ್‌ನ್ನ ಎಂಜಾಯ್‌ ಮಾಡೋಕಾಯ್ತು.”—ಮರಿಯ.

 ಕಿವಿಮಾತು: ಟೀಚರಿಂದ ನಿಮಗೆ ಕಷ್ಟ ಆಗ್ತಿದ್ರೆ ಅದನ್ನ ನೀವು ಅವಕಾಶವಾಗಿ ನೋಡಿ. ಅದ್ರಿಂದ ನೀವು ಕಲಿಯುವ ವಿಷ್ಯಗಳು ದೊಡ್ಡವರಾದಾಗ ಸಹಾಯ ಮಾಡುತ್ತೆ. 22 ವರ್ಷದ ಕೇಟಿ ಹೀಗೆ ಹೇಳ್ತಾಳೆ: “ನಿಮ್ಮ ಸ್ಕೂಲ್‌ ಮುಗಿದ ನಂತ್ರ ನಿಮ್ಮ ಮೇಲಿರೋ ಅಧಿಕಾರಿಗಳು ನಿಮ್ಮ ಜೊತೆ ಯಾವಾಗ್ಲೂ ದಯೆಯಿಂದ ನಡೆದುಕೊಳ್ಳದೇ ಇರಬಹುದು. ನೀವೀಗ ಕ್ರೂರವಾಗಿ ನಡ್ಕೊಳ್ಳೋ ಟೀಚರ್‌ ಜೊತೆ ಚೆನ್ನಾಗಿ ನಡ್ಕೊಂಡ್ರೆ, ಮುಂದೆ ನಿಮ್ಮ ಜೀವನದಲ್ಲಿ ಎದುರಾಗೋ ಕ್ರೂರಿ ಜನರ ಹತ್ರನೂ ಚೆನ್ನಾಗಿ ನಡ್ಕೊಳ್ಳೋಕೆ ಆಗುತ್ತೆ.”