ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ದೀಕ್ಷಾಸ್ನಾನ ಆದ್ಮೇಲೆ ನಾನೇನು ಮಾಡಬೇಕು?—ಭಾಗ 1: ಯೆಹೋವನಿಗೆ ಇನ್ನೂ ಹತ್ರ ಆಗಿ

ದೀಕ್ಷಾಸ್ನಾನ ಆದ್ಮೇಲೆ ನಾನೇನು ಮಾಡಬೇಕು?—ಭಾಗ 1: ಯೆಹೋವನಿಗೆ ಇನ್ನೂ ಹತ್ರ ಆಗಿ

 ನಮ್ಮ ಮನೆ ಅಥವಾ ಕಾರನ್ನ ಚೆನ್ನಾಗಿ ನೋಡ್ಕೊಳ್ತೀವಿ ಅಲ್ವಾ? ಅದೇ ತರ ದೇವರ ಜೊತೆಗಿರೋ ನಮ್ಮ ಸ್ನೇಹನೂ ಚೆನ್ನಾಗಿರಬೇಕು. ಹಾಗಾಗಿ ದೀಕ್ಷಾಸ್ನಾನ ಆದ್ಮೇಲೂ ಆತನ ಜೊತೆಗಿರೋ ಸ್ನೇಹ ಗಟ್ಟಿ ಮಾಡ್ಕೊಳ್ಳೋಕೆ ಏನು ಮಾಡಬೇಕು?

ಈ ಲೇಖನದಲ್ಲಿ

 ಯಾವಾಗ್ಲೂ ದೇವರ ವಾಕ್ಯನ ಅಧ್ಯಯನ ಮಾಡಿ

 ಮುಖ್ಯ ವಚನ: “ಒಳ್ಳೇ ಕೆಲಸಗಳನ್ನ ಮಾಡ್ತಾ, ದೇವರ ಬಗ್ಗೆ ಸರಿಯಾದ ಜ್ಞಾನವನ್ನ ಇನ್ನೂ ಪಡೀತಾ ಇರಬೇಕು.”—ಕೊಲೊಸ್ಸೆ 1:10.

 ಇದ್ರ ಅರ್ಥ ಏನು? ದೀಕ್ಷಾಸ್ನಾನ ಆದ್ಮೇಲೂ ನೀವು ಯಾವಾಗ್ಲೂ ಬೈಬಲ್‌ ಓದಬೇಕು ಮತ್ತು ಅದ್ರಿಂದ ನೀವೇನು ಕಲಿತ್ರಿ ಅಂತ ಯೋಚ್ನೆ ಮಾಡಬೇಕು.—ಕೀರ್ತನೆ 25:4; 119:97.

 ಏನಾಗಬಹುದು? ಕೆಲವೊಂದು ಸಲ ಓದೋಕೆ ನಿಮಗೆ ಮೂಡ್‌ ಇಲ್ದೆ ಇರಬಹುದು. ಇದ್ರಿಂದ “ಓದೋದೆಲ್ಲ ನನ್ನ ಕೈಯಿಂದ ಆಗಲ್ಲಪ್ಪ” ಅಂತ ನಿಮಗೆ ಅನಿಸಬಹುದು.

 ನೀವೇನು ಮಾಡಬಹುದು? ನಿಮಗೆ ಇಷ್ಟ ಆಗೋ ಒಂದು ವಿಷ್ಯ ಆರಿಸ್ಕೊಳ್ಳಿ. ಆಮೇಲೆ ಅದ್ರ ಬಗ್ಗೆ ಬೈಬಲ್‌ ಮತ್ತು ಬೈಬಲ್‌ ಪ್ರಕಾಶನಗಳಿಂದ ಎಷ್ಟು ಓದಬೇಕು, ಯಾವಾಗ ಓದಬೇಕು ಅಂತ ಪ್ಲಾನ್‌ ಮಾಡಿ. ಹಾಗಂತ ನಿಮ್ಮಿಂದ ಆಗದೇ ಇರೋದನ್ನ ಮಾಡೋಕೆ ಹೋಗಬೇಡಿ. ಆಗ ನಿಮಗೆ ಓದೋಕೆ ಕಷ್ಟ ಆಗಲ್ಲ. ಈ ತರ ಓದುವಾಗ ನಿಮ್ಮ ಗುರಿ ಯೆಹೋವ ದೇವರ ಮೇಲೆ ಮತ್ತು ಆತನ ವಾಕ್ಯದ ಮೇಲೆ ಪ್ರೀತಿ, ಗೌರವ ಜಾಸ್ತಿ ಮಾಡ್ಕೊಳ್ಳೋದಾಗಿರಬೇಕು. ಆಗ ನಿಮಗೆ ಪ್ರಯೋಜನ ಆಗುತ್ತೆ ಮತ್ತು ನೀವು ಓದೋದನ್ನ ಎಂಜಾಯ್‌ ಮಾಡ್ತೀರ.—ಕೀರ್ತನೆ 16:11.

 ಟಿಪ್‌: ನೀವು ಬೈಬಲನ್ನ ಚೆನ್ನಾಗಿ ಓದಿ ಅಧ್ಯಯನ ಮಾಡೋಕೆ ಸದ್ದುಗದ್ದಲ ಇಲ್ಲದೆ ಇರೋ ಜಾಗಕ್ಕೆ ಹೋಗಿ ಓದಿ.

 ಸಹಾಯ ಬೇಕಾ?

 ಯಾವಾಗ್ಲೂ ಯೆಹೋವನಿಗೆ ಪ್ರಾರ್ಥಿಸಿ

 ಮುಖ್ಯ ವಚನ: “ಯಾವುದ್ರ ಬಗ್ಗೆನೂ ಚಿಂತೆ ಮಾಡಬೇಡಿ. ಅದ್ರ ಬದ್ಲು ಯಾವಾಗ್ಲೂ ದೇವರಿಗೆ ಪ್ರಾರ್ಥಿಸಿ. ಪ್ರತಿಯೊಂದು ವಿಷ್ಯದಲ್ಲೂ ಮಾರ್ಗದರ್ಶನೆಗಾಗಿ ಕೇಳ್ಕೊಳ್ಳಿ, ಅಂಗಲಾಚಿ ಬೇಡಿ, ಯಾವಾಗ್ಲೂ ಆತನಿಗೆ ಧನ್ಯವಾದ ಹೇಳಿ.”—ಫಿಲಿಪ್ಪಿ 4:6.

 ಇದ್ರ ಅರ್ಥ ಏನು? ದೇವರು ಮಾತಾಡೋದನ್ನ ನೀವು ಕೇಳಿಸ್ಕೊಬೇಕಂದ್ರೆ ಬೈಬಲ್‌ ಓದಬೇಕು. ನೀವು ಆತನ ಜೊತೆ ಮಾತಾಡಬೇಕಂದ್ರೆ ಪ್ರಾರ್ಥನೆ ಮಾಡಬೇಕು. ಆದ್ರೆ ನೀವು ಪ್ರಾರ್ಥನೆ ಮಾಡುವಾಗ ನಿಮಗೇನು ಬೇಕೋ ಅದನ್ನ ದೇವರ ಹತ್ರ ಕೇಳೋದ್ರ ಜೊತೆಗೆ ನಿಮಗೆ ಸಿಕ್ಕಿರೋ ಆಶೀರ್ವಾದಕ್ಕೂ ಥ್ಯಾಂಕ್ಸ್‌ ಹೇಳಿ.

 ಏನಾಗಬಹುದು? ಕೆಲವೊಮ್ಮೆ ನೀವು ಪ್ರಾರ್ಥನೆ ಮಾಡುವಾಗ ‘ನಾನು ಹೇಳಿದ್ದನ್ನೇ ಹೇಳ್ತಾ ಇದ್ದೀನಿ’ ಅಂತ ನಿಮಗೆ ಅನಿಸಿಬಿಡಬಹುದು. ‘ನನ್ನ ಪ್ರಾರ್ಥನೆನ ಯೆಹೋವ ನಿಜವಾಗ್ಲೂ ಕೇಳಿಸ್ಕೊಳ್ತಾನಾ, ನನ್ನ ಪ್ರಾರ್ಥನೆನ ಕೇಳೋ ಮನಸ್ಸು ದೇವರಿಗಿದ್ಯಾ’ ಅನ್ನೋ ಸಂಶಯ ಬಂದುಬಿಡಬಹುದು.—ಕೀರ್ತನೆ 10:1.

 ನೀವೇನು ಮಾಡಬಹುದು? ಒಂದು ದಿನದಲ್ಲಿ ನೀವು ಯಾವುದಕ್ಕೆಲ್ಲ ಪ್ರಾರ್ಥನೆ ಮಾಡಬಹುದು ಅಂತ ಯೋಚ್ನೆ ಮಾಡಿ. ಒಂದುವೇಳೆ ಎಲ್ಲಾ ವಿಷ್ಯದ ಬಗ್ಗೆ ತಕ್ಷಣ ಪ್ರಾರ್ಥನೆ ಮಾಡೋಕೆ ಆಗಿಲ್ಲಾಂದ್ರೆ ಯಾವ ವಿಷ್ಯದ ಬಗ್ಗೆ ಪ್ರಾರ್ಥನೆ ಮಾಡಬೇಕು ಅಂತ ಅಂದ್ಕೊಂಡಿದ್ದೀರೋ ಅದನ್ನ ನೆನಪಲ್ಲಿ ಇಟ್ಕೊಳಿ. ಆಮೇಲೆ ಸಮಯ ಮಾಡ್ಕೊಂಡು ಪ್ರಾರ್ಥನೆ ಮಾಡಿ. ಬರೀ ನಿಮಗೋಸ್ಕರ ಅಲ್ಲ, ಬೇರೆಯವ್ರಿಗೋಸ್ಕರನೂ ಪ್ರಾರ್ಥನೆ ಮಾಡಿ.—ಫಿಲಿಪ್ಪಿ 2:4.

 ಟಿಪ್‌: ನೀವು ಪ್ರಾರ್ಥನೆಯಲ್ಲಿ ಬರೀ ಹೇಳಿದ್ದನ್ನೇ ಹೇಳ್ತಾ ಇದ್ದೀರಾ ಅಂತ ನಿಮಗೆ ಅನಿಸಿದ್ರೆ, ಅದ್ರ ಬಗ್ಗೆನೂ ಯೆಹೋವನ ಹತ್ರ ಪ್ರಾರ್ಥಿಸಿ. ನಿಮ್ಮ ಮನಸ್ಸಲ್ಲಿ ಇರೋದನ್ನೆಲ್ಲಾ ಆತನು ಕೇಳಿಸ್ಕೊಳ್ಳೋಕೆ ಇಷ್ಟಪಡ್ತಾನೆ. ಅಂದ್ರೆ ನಿಮಗೆ ಪ್ರಾರ್ಥನೆ ಮಾಡೋಕೆ ಕಷ್ಟ ಆಗ್ತಿದೆ ಅಂತ ಹೇಳಿದಾಗ ಅದನ್ನೂ ಆತನು ಕೇಳಿಸ್ಕೊಳ್ತಾನೆ.—1 ಯೋಹಾನ 5:14.

 ಸಹಾಯ ಬೇಕಾ?

 ನಿಮ್ಮ ನಂಬಿಕೆ ಬಗ್ಗೆ ಬೇರೆಯವ್ರ ಹತ್ರ ಯಾವಾಗ್ಲೂ ಹೇಳಿ

 ಮುಖ್ಯ ವಚನ: “ನೀನು ಒಳ್ಳೇ ಮಾದರಿ ಆಗಿರೋಕೆ ಮತ್ತು ಒಳ್ಳೇ ಬೋಧಕನಾಗಿ ಇರೋಕೆ ನಿನ್ನಿಂದ ಆಗೋದನ್ನೆಲ್ಲ ಮಾಡು. . . . ಹಾಗೆ ಮಾಡಿದ್ರೆ ನಿನಗೂ ರಕ್ಷಣೆ ಸಿಗುತ್ತೆ, ನಿನ್ನ ಮಾತನ್ನ ಕೇಳುವವ್ರಿಗೂ ರಕ್ಷಣೆ ಸಿಗುತ್ತೆ.”—1 ತಿಮೊತಿ 4:16.

 ಇದ್ರ ಅರ್ಥ ಏನು? ನೀವೇನು ನಂಬ್ತೀರೋ ಅದ್ರ ಬಗ್ಗೆ ಬೇರೆಯವ್ರ ಹತ್ರ ಹೇಳಿದಾಗ ನಿಮ್ಮ ನಂಬಿಕೆ ಇನ್ನೂ ಗಟ್ಟಿಯಾಗುತ್ತೆ. ಇದ್ರಿಂದ ನೀವು ಬೇರೆಯವ್ರ ಜೀವನೂ ಕಾಪಾಡ್ತೀರ, ನಿಮ್ಮ ಜೀವನೂ ಉಳಿಸ್ಕೊಳ್ತೀರ.

 ಏನಾಗಬಹುದು? ಕೆಲವೊಮ್ಮೆ ನಿಮ್ಮ ನಂಬಿಕೆ ಬಗ್ಗೆ ಬೇರೆಯವ್ರ ಹತ್ರ ಹೇಳೋಕೆ ನಿಮಗೆ ಮನಸ್ಸಿಲ್ಲದೆ ಇರಬಹುದು ಅಥವಾ ಭಯ ಆಗಬಹುದು. ಅದ್ರಲ್ಲೂ ಸ್ಕೂಲಲ್ಲಿ ನಿಮಗೆ ಇನ್ನೂ ಭಯ ಆಗಬಹುದು.

 ನೀವೇನು ಮಾಡಬಹುದು? ಬೇರೆಯವ್ರಿಗೆ ಹೆದರಿಕೊಂಡು ನಿಮ್ಮ ನಂಬಿಕೆ ಬಗ್ಗೆ ಹೇಳೋಕೆ ಹಿಂಜರಿಬೇಡಿ. ಅಪೊಸ್ತಲ ಪೌಲನೂ ಹಿಂಜರಿಲಿಲ್ಲ. “ನಾನು . . . ಒಂದುವೇಳೆ ಇಷ್ಟ ಇಲ್ದೆ [ಸಿಹಿಸುದ್ದಿ ಸಾರಿದ್ರೂ] ದೇವರು ನನಗೆ ಕೊಟ್ಟಿರೋ ಜವಾಬ್ದಾರಿಯನ್ನೇ ಮಾಡ್ತಾ ಇದ್ದೀನಿ” ಅಂತ ಅವನು ಹೇಳಿದ.—1 ಕೊರಿಂಥ 9:16, 17.

 ಟಿಪ್‌: ನಿಮ್ಮ ಸಭೆಯಲ್ಲಿ ಚೆನ್ನಾಗಿ ಸಿಹಿಸುದ್ದಿ ಸಾರೋ ಒಬ್ಬ ಸಹೋದರ ಅಥವಾ ಸಹೋದರಿಯನ್ನ ಫ್ರೆಂಡ್‌ ಮಾಡ್ಕೊಳಿ. ಅವ್ರ ಹತ್ರ ಸಹಾಯ ಕೇಳಿ. ಆದ್ರೆ ಅದಕ್ಕೂ ಮುಂಚೆ ನಿಮ್ಮ ಅಪ್ಪ-ಅಮ್ಮ ಹತ್ರ ಪರ್ಮಿಶನ್‌ ಕೇಳಿ.—ಜ್ಞಾನೋಕ್ತಿ 27:17.

 ಸಹಾಯ ಬೇಕಾ?

 ಯಾವಾಗ್ಲೂ ಕೂಟಗಳಿಗೆ ಹೋಗ್ತಾ ಇರಿ

 ಮುಖ್ಯ ವಚನ: “ನಾವು ಒಬ್ರು ಇನ್ನೊಬ್ರ ಬಗ್ಗೆ ತುಂಬ ಆಸಕ್ತಿ ತೋರಿಸೋಣ. ಆಗ ಪ್ರೀತಿ ತೋರಿಸೋಕೆ, ಒಳ್ಳೇ ಕೆಲಸಗಳನ್ನ ಮಾಡೋಕೆ ಬೇರೆಯವ್ರಿಗೆ ಪ್ರೋತ್ಸಾಹ ಕೊಡಬಹುದು. ಒಟ್ಟಾಗಿ ಸಭೆ ಸೇರೋದನ್ನ ಬಿಡೋದು ಬೇಡ.”—ಇಬ್ರಿಯ 10:24, 25.

 ಇದ್ರ ಅರ್ಥ ಏನು? ನಾವು ಕೂಟಗಳಿಗೆ ಹೋಗೋದು ಮುಖ್ಯವಾಗಿ ಯೆಹೋವ ದೇವರನ್ನ ಆರಾಧಿಸೋಕೆ. ಆದ್ರೆ ಅಲ್ಲಿಗೆ ಹೋಗೋದ್ರಿಂದ ಇನ್ನೂ 2 ಪ್ರಯೋಜನಗಳಿವೆ. ಒಂದು, ಸಹೋದರ ಸಹೋದರಿಯರಿಂದ ನಿಮಗೆ ಪ್ರೋತ್ಸಾಹ ಸಿಗುತ್ತೆ. ಇನ್ನೊಂದು, ನೀವು ಕೂಟಗಳಿಗೆ ಹೋಗಿ ನೇಮಕಗಳನ್ನ ಮಾಡುವಾಗ, ಉತ್ರ ಹೇಳುವಾಗ ಬೇರೆಯವ್ರಿಗೆ ಪ್ರೋತ್ಸಾಹ ಸಿಗುತ್ತೆ.—ರೋಮನ್ನರಿಗೆ 1:11, 12.

 ಏನಾಗಬಹುದು? ಕೆಲವೊಮ್ಮೆ ಕೂಟದಲ್ಲಿ ಕೂತಿರುವಾಗ ನಿಮ್ಮ ಮನಸ್ಸು ಬೇರೆಲ್ಲೋ ಹೋಗಿಬಿಡಬಹುದು. ಆಗ ಕೂಟದಲ್ಲಿ ಸಿಗೋ ನಿರ್ದೇಶನಕ್ಕೆ ನೀವು ಗಮನ ಕೊಡದೇ ಹೋಗಬಹುದು. ಅಥವಾ ಹೋಮ್‌ವರ್ಕ್‌ ಇದೆ, ಬೇರೆ ಕೆಲಸ ಇದೆ ಅಂತ ಹೇಳಿ ನೀವು ಎಷ್ಟೋ ಸಲ ಕೂಟಕ್ಕೆ ಹೋಗದೇ ಇದ್ದುಬಿಡಬಹುದು.

 ನೀವೇನು ಮಾಡಬಹುದು? ನಿಮ್ಮ ಹೋಮ್‌ವರ್ಕನ್ನೂ ಮಾಡಿ. ಅದ್ರ ಜೊತೆಗೆ ಕೂಟಗಳಿಗೆ ತಪ್ಪದೇ ಹೋಗೋಕೆ ಮತ್ತು ಅಲ್ಲಿ ಹೇಳ್ಕೊಡೋ ವಿಷ್ಯಗಳನ್ನ ಕಲಿಯೋಕೆ ಗುರಿ ಇಡಿ. ಉತ್ರ ಕೊಡೋಕೆ ಪ್ರಯತ್ನ ಮಾಡಿ. ಕೂಟ ಮುಗಿದ ಮೇಲೆ ಒಬ್ರ ಹತ್ರ ಆದ್ರೂ ಹೋಗಿ ಅವರು ಮಾಡಿದ ನೇಮಕ ಅಥವಾ ಅವರು ಕೊಟ್ಟ ಉತ್ರ ಚೆನ್ನಾಗಿತ್ತು ಅಂತ ಹೊಗಳಿ.

 ಟಿಪ್‌: ಮುಂಚೆನೇ ತಯಾರಾಗಿ. JW ಲೈಬ್ರರಿ ಆ್ಯಪ್‌ ಡೌನ್‌ಲೋಡ್‌ ಮಾಡಿ. ಅದ್ರಲ್ಲಿ “ಕೂಟಗಳು” (ಮೀಟಿಂಗ್ಸ್‌) ಅನ್ನೋ ಟ್ಯಾಬ್‌ ಒತ್ತಿದ್ರೆ ಪ್ರತಿ ವಾರ ಕೂಟದಲ್ಲಿ ಯಾವುದ್ರ ಬಗ್ಗೆ ಚರ್ಚಿಸ್ತಾರೆ ಅಂತ ಗೊತ್ತಾಗುತ್ತೆ.

 ಸಹಾಯ ಬೇಕಾ?