ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ನಾನು ಯಾಕೆ ಪ್ರಾರ್ಥನೆ ಮಾಡಬೇಕು?

ನಾನು ಯಾಕೆ ಪ್ರಾರ್ಥನೆ ಮಾಡಬೇಕು?

 ಅಮೆರಿಕದಲ್ಲಿ ನಡೆಸಿದ ಒಂದು ಸರ್ವೇ ಪ್ರಕಾರ 80% ಯುವಜನರು ಪ್ರಾರ್ಥನೆ ಮಾಡ್ತಾರೆ. ಆದ್ರೆ ಅದರಲ್ಲಿ ಪ್ರತಿದಿನ ಪ್ರಾರ್ಥನೆ ಮಾಡೋರು ಅರ್ಧದಷ್ಟು ಜನ ಮಾತ್ರ. ಕೆಲವರು, ‘ಪ್ರಾರ್ಥನೆ ಮಾಡೋದು ನಮ್ಮ ಸಮಾಧಾನಕ್ಕೆ ಅಷ್ಟೇನಾ ಅಥವಾ ಏನಾದ್ರೂ ಪ್ರಯೋಜನ ಇದ್ಯಾ’ ಅಂತ ಯೋಚನೆ ಮಾಡ್ತಾರೆ.

 ಪ್ರಾರ್ಥನೆ ಅಂದರೇನು?

 ಎಲ್ಲವನ್ನ ಸೃಷ್ಟಿ ಮಾಡಿರೋ ದೇವರ ಜೊತೆ ಮಾತಾಡೋದೇ ಪ್ರಾರ್ಥನೆ. ಇದು ಎಷ್ಟು ದೊಡ್ಡ ಸುಯೋಗ ಗೊತ್ತಾ! ಯೆಹೋವ ದೇವರು ಮನುಷ್ಯರಿಗಿಂತ ತುಂಬ ಶ್ರೇಷ್ಠನಾಗಿದ್ರೂ ಆತನು “ನಮ್ಮಲ್ಲಿ ಒಬ್ರಿಗೂ ದೂರವಾಗಿಲ್ಲ.” (ಅಪೊಸ್ತಲರ ಕಾರ್ಯ 17:27) ಅಷ್ಟೇ ಅಲ್ಲ, ಬೈಬಲ್‌ ನಮಗೆ ಹೀಗೆ ಪ್ರೋತ್ಸಾಹ ಕೊಡುತ್ತೆ, “ದೇವರಿಗೆ ಹತ್ರ ಆಗಿ, ಆಗ ದೇವರು ನಿಮಗೆ ಹತ್ರ ಆಗ್ತಾನೆ.”—ಯಾಕೋಬ 4:8.

 ನೀವು ಹೇಗೆ ದೇವರಿಗೆ ಹತ್ರ ಆಗಬಹುದು?

  •   ಒಂದು ಪ್ರಾರ್ಥನೆ ಮಾಡೋ ಮೂಲಕ. ಪ್ರಾರ್ಥನೆ ಮಾಡುವಾಗ ನಾವು ದೇವರ ಹತ್ರ ಮಾತಾಡ್ತೀವಿ.

  •   ಎರಡನೇದು ಬೈಬಲ್‌ ಓದೋ ಮೂಲಕ. ಬೈಬಲ್‌ ಓದುವಾಗ ದೇವರು ನಮ್ಮ ಜೊತೆ “ಮಾತಾಡ್ತಾನೆ.”

 ಪ್ರಾರ್ಥನೆ ಮಾಡೋದ್ರಿಂದ, ಬೈಬಲ್‌ ಓದೋದ್ರಿಂದ ದೇವರ ಜೊತೆಗಿನ ನಮ್ಮ ಮಾತುಕತೆ ಚೆನ್ನಾಗಿರುತ್ತೆ ಮತ್ತು ಆತನ ಜೊತೆಗಿನ ಸ್ನೇಹನೂ ಬಲ ಆಗುತ್ತೆ.

 “ಅತಿ ಶ್ರೇಷ್ಠನಾದ ಯೆಹೋವನ ಜೊತೆ ಮಾತಾಡೋದು ಮನುಷ್ಯರಾದ ನಮಗೆ ಸಿಕ್ಕಿರೋ ದೊಡ್ಡ ಸುಯೋಗ.”ಜೆರೆಮಿ.

 “ಮನಸ್ಸಲ್ಲಿರೋದನ್ನೆಲ್ಲ ಪ್ರಾರ್ಥನೆಯಲ್ಲಿ ಹೇಳುವಾಗ ಯೆಹೋವನಿಗೆ ನಾನು ತುಂಬ ಹತ್ರ ಆಗಿದ್ದೀನಿ ಅಂತ ಅನಿಸುತ್ತೆ.”ಮಿರಾಂಡ.

 ಪ್ರಾರ್ಥನೆಯನ್ನ ದೇವರು ಕೇಳ್ತಾನಾ?

 ನಿಮಗೆ ದೇವರ ಮೇಲೆ ನಂಬಿಕೆ ಇರಬಹುದು, ಪ್ರತಿ ದಿನ ಪ್ರಾರ್ಥನೆ ಮಾಡ್ತಿರಬಹುದು. ಆದ್ರೆ ದೇವರು ನಮ್ಮ ಪ್ರಾರ್ಥನೆ ನಿಜವಾಗ್ಲೂ ಕೇಳಿಸಿಕೊಳ್ತಾನಾ ಅಂತ ಕೆಲವು ಸಲ ನಂಬೋಕೆ ಕಷ್ಟ ಆಗುತ್ತೆ. ಆದ್ರೆ ಬೈಬಲ್‌ ಯೆಹೋವ ದೇವರನ್ನ “ಪ್ರಾರ್ಥನೆ ಕೇಳುವವನೇ” ಅಂತ ಕರೆಯುತ್ತೆ. (ಕೀರ್ತನೆ 65:2) ಅಷ್ಟೇ ಅಲ್ಲ, “ನಿಮಗಿರೋ ಚಿಂತೆಯನ್ನೆಲ್ಲಾ ದೇವರ ಮೇಲೆ ಹಾಕಿ. ಯಾಕಂದ್ರೆ ದೇವರಿಗೆ ನಿಮ್ಮ ಮೇಲೆ ತುಂಬ ಕಾಳಜಿ ಇದೆ” ಅಂತ ಹೇಳುತ್ತೆ.—1 ಪೇತ್ರ 5:7.

 ಸ್ವಲ್ಪ ಯೋಚನೆ ಮಾಡಿ: ನೀವು ದಿನಾಲೂ ನಿಮ್ಮ ಫ್ರೆಂಡ್‌ ಜೊತೆ ಮಾತಾಡ್ತಿರಾ? ದೇವರ ಜೊತೆನೂ ದಿನಾಲೂ ನೀವು ಮಾತಾಡಬಹುದು. ಪ್ರತಿ ದಿನ ಪ್ರಾರ್ಥನೆ ಮಾಡಿ. ಯೆಹೋವ ಅನ್ನೋ ಹೆಸರನ್ನ ಉಪಯೋಗಿಸಿ ಪ್ರಾರ್ಥನೆ ಮಾಡಿ. (ಕೀರ್ತನೆ 86:5-7; 88:9) ಅದಕ್ಕೆ “ಯಾವಾಗ್ಲೂ ಪ್ರಾರ್ಥನೆ ಮಾಡಿ” ಅಂತ ಬೈಬಲ್‌ ಪ್ರೋತ್ಸಾಹ ಕೊಡುತ್ತೆ.—1 ಥೆಸಲೊನೀಕ 5:17.

 “ನನ್ನ ಮತ್ತು ದೇವರ ಮಧ್ಯ ನಡಿಯೋ ಮಾತುಕತೆನೇ ಪ್ರಾರ್ಥನೆ. ಆ ಪ್ರಾರ್ಥನೆಯಲ್ಲಿ ನನ್ನ ಮನಸ್ಸಲ್ಲಿರೋ ಎಲ್ಲ ವಿಷ್ಯನ ದೇವರ ಹತ್ರ ಹೇಳ್ತೀನಿ.”—ಮೊಯಿಸೆಸ್‌.

 “ನನ್ನ ಅಪ್ಪ-ಅಮ್ಮ ಹತ್ರ, ಫ್ರೆಂಡ್ಸ್‌ ಹತ್ರ ಹೇಗೆ ಎಲ್ಲವನ್ನ ಹೇಳಿಕೊಳ್ತೀನೋ ಅದೇ ತರ ಯೆಹೋವನ ಹತ್ರನೂ ಎಲ್ಲ ಹೇಳ್ಕೊಳ್ತೀನಿ.”—ಕ್ಯಾರನ್‌.

 ನಾನು ಯಾವುದ್ರ ಬಗ್ಗೆ ಪ್ರಾರ್ಥನೆ ಮಾಡಬೇಕು?

 ಬೈಬಲ್‌ ಹೀಗೆ ಹೇಳುತ್ತೆ, “ಯಾವಾಗ್ಲೂ ದೇವರಿಗೆ ಪ್ರಾರ್ಥಿಸಿ. ಪ್ರತಿಯೊಂದು ವಿಷ್ಯದಲ್ಲೂ ಮಾರ್ಗದರ್ಶನೆಗಾಗಿ ಕೇಳ್ಕೊಳ್ಳಿ, ಅಂಗಲಾಚಿ ಬೇಡಿ, ಯಾವಾಗ್ಲೂ ಆತನಿಗೆ ಧನ್ಯವಾದ ಹೇಳಿ.”—ಫಿಲಿಪ್ಪಿ 4:6.

 ಅಂದ್ರೆ ನಿಮ್ಮ ಸಮಸ್ಯೆಗಳ ಬಗ್ಗೆನೂ ಪ್ರಾರ್ಥನೆ ಮಾಡಬಹುದಾ? ಖಂಡಿತ ಮಾಡಬಹುದು. ಅದಕ್ಕೆ ಬೈಬಲ್‌ ಹೀಗೆ ಹೇಳುತ್ತೆ: “ನಿನಗಿರೋ ಭಾರನೆಲ್ಲ ಯೆಹೋವನ ಮೇಲೆ ಹಾಕು, ಆತನೇ ನಿನಗೆ ಆಧಾರವಾಗಿ ಇರ್ತಾನೆ.”—ಕೀರ್ತನೆ 55:22.

 ನೀವು ದೇವರಿಗೆ ಪ್ರಾರ್ಥನೆ ಮಾಡುವಾಗ ಕೇವಲ ನಿಮ್ಮ ಸಮಸ್ಯೆಗಳನ್ನ ಮಾತ್ರ ಹೇಳಬಾರದು. “ಯೆಹೋವ ದೇವರೇ ‘ಈ ತರ ಸಹಾಯ ಮಾಡಿ, ಆ ತರ ಸಹಾಯ ಮಾಡಿ’ ಅಂತ ಕೇಳ್ತಾ ಇದ್ರೆ ಅದು ಒಳ್ಳೇ ಫ್ರೆಂಡ್‌ಶಿಪ್‌ ಆಗೋಕೆ ಸಾಧ್ಯ ಇಲ್ಲ. ಮೊದಲು ಯೆಹೋವ ದೇವರು ಮಾಡಿದ ಒಳ್ಳೇ ವಿಷ್ಯಗಳಿಗೆ ಥ್ಯಾಂಕ್ಸ್‌ ಹೇಳಬೇಕು. ಒಂದೆರೆಡು ವಿಷ್ಯಕ್ಕೆ ಅಲ್ಲ, ದೇವರು ಮಾಡಿದ ಎಲ್ಲ ವಿಷ್ಯಗಳಿಗೂ ಥ್ಯಾಂಕ್ಸ್‌ ಹೇಳಬೇಕು” ಅಂತ ಚಾಂಟಲ್‌ ಅನ್ನೋ ಸ್ತ್ರೀ ಹೇಳ್ತಾಳೆ.

 ಸ್ವಲ್ಪ ಯೋಚನೆ ಮಾಡಿ: ನೀವು ಯಾವೆಲ್ಲ ವಿಷ್ಯಗಳಿಗೆ ದೇವರಿಗೆ ಥ್ಯಾಂಕ್ಸ್‌ ಹೇಳೋಕೆ ಇಷ್ಟಪಡ್ತೀರಾ? ಇವತ್ತು ನೀವು ಯೆಹೋವ ದೇವರಿಗೆ ಯಾವ ಮೂರು ವಿಷ್ಯಕ್ಕೆ ಥ್ಯಾಂಕ್ಸ್‌ ಹೇಳ್ತಿರಾ ಅಂತ ಯೋಚನೆ ಮಾಡಿ?

 “ಚಿಕ್ಕಪುಟ್ಟ ವಿಷ್ಯಗಳಿಗೆಲ್ಲ ನಾವು ದೇವರಿಗೆ ಥ್ಯಾಂಕ್ಸ್‌ ಹೇಳಬಹುದು. ಒಂದು ಸುಂದರ ಹೂವು ನೋಡಿದಾಗ ಪ್ರಾರ್ಥನೆ ಮಾಡಿ ಯೆಹೋವನಿಗೆ ಥ್ಯಾಂಕ್ಸ್‌ ಹೇಳಬಹುದು.”—ಅನಿತಾ.

 “ಸೃಷ್ಟಿ ಬಗ್ಗೆ ಧ್ಯಾನಿಸುವಾಗ ಅಥವಾ ಬೈಬಲ್‌ನಲ್ಲಿರೋ ಯಾವುದಾದ್ರೂ ವಚನ ನಿಮಗೆ ತುಂಬ ಇಷ್ಟ ಆದಾಗ ಯೆಹೋವನಿಗೆ ಥ್ಯಾಂಕ್ಸ್‌ ಹೇಳಬಹುದು.”—ಬ್ರೈಯನ್‌.