ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ನಾನ್ಯಾಕೆ ದೀಕ್ಷಾಸ್ನಾನ ತಗೋಬೇಕು?—ಭಾಗ 2: ದೀಕ್ಷಾಸ್ನಾನಕ್ಕೆ ತಯಾರಾಗಿ

ನಾನ್ಯಾಕೆ ದೀಕ್ಷಾಸ್ನಾನ ತಗೋಬೇಕು?—ಭಾಗ 2: ದೀಕ್ಷಾಸ್ನಾನಕ್ಕೆ ತಯಾರಾಗಿ

 ನೀವು ಈಗಾಗ್ಲೇ ಬೈಬಲ್‌ ಹೇಳೋ ತರ ಜೀವಿಸ್ತಾ ಇದ್ರೆ, ಯೆಹೋವನ ಜೊತೆ ಒಳ್ಳೆ ಸ್ನೇಹ ಬೆಳೆಸ್ಕೊಂಡಿದ್ರೆ, ದೀಕ್ಷಾಸ್ನಾನ ತಗೋಬೇಕು ಅಂತ ನಿಮಗೆ ಅನಿಸ್ತಾ ಇರಬಹುದು. ಆದ್ರೆ ನೀವದಕ್ಕೆ ರೆಡಿ ಇದ್ದೀರಾ? a

ಈ ಲೇಖನದಲ್ಲಿ

 ನಾನೇನು ತಿಳ್ಕೊಂಡಿರಬೇಕು?

 ಒಬ್ಬ ವ್ಯಕ್ತಿ ಸ್ಕೂಲ್‌ನಲ್ಲಿ, ಎಕ್ಸಾಮ್‌ ಪಾಸ್‌ ಆಗಬೇಕಂದ್ರೆ ಓದಿದ್ದನ್ನೆಲ್ಲ ನೆನಪಿಟ್ಕೊಬೇಕು. ಆದ್ರೆ ದೀಕ್ಷಾಸ್ನಾನಕ್ಕೆ ತಯಾರಾಗೋದು ಅಂದ್ರೆ ಹಾಗಲ್ಲ. ಬದ್ಲಿಗೆ ಬೈಬಲಿನಲ್ಲಿ ಇರೋದು ಸತ್ಯ ಅಂತ ನಂಬೋಕೆ ನೀವು ನಿಮ್ಮ “ಯೋಚನಾ ಸಾಮರ್ಥ್ಯವನ್ನ” ಬಳಸಬೇಕು. (ರೋಮ. 12:1) ಅದಕ್ಕೆ ಸಹಾಯ ಮಾಡೋ ಕೆಲವು ವಿಷ್ಯಗಳನ್ನ ಈಗ ನೋಡೋಣ:

  •   ದೇವರು ನಿಜವಾಗ್ಲೂ ಇದ್ದಾನೆ, ಆತನು ನಿಮ್ಮ ಆರಾಧನೆ ಪಡ್ಕೊಳ್ಳೋಕೆ ಯೋಗ್ಯನಾಗಿದ್ದಾನೆ ಅಂತ ನೀವು ನಂಬ್ತೀರಾ?

     ಬೈಬಲ್‌ ಹೇಳೋದು: “ದೇವರಿಗೆ ಹತ್ರ ಆಗೋಕೆ ಇಷ್ಟಪಡುವವರು ಆತನು ಇದ್ದಾನೆ ಅಂತ, ಆತನನ್ನ ಶ್ರದ್ಧೆಯಿಂದ ಆರಾಧಿಸೋರನ್ನ ಆತನು ಆಶೀರ್ವದಿಸ್ತಾನೆ ಅಂತ ನಂಬಬೇಕು.”—ಇಬ್ರಿಯ 11:6.

     ನಿಮ್ಮನ್ನೇ ಕೇಳ್ಕೊಳ್ಳಿ: ‘ನಾನ್ಯಾಕೆ ದೇವರನ್ನ ನಂಬ್ತೀನಿ?’ (ಇಬ್ರಿಯ 3:4) ‘ನಾನ್ಯಾಕೆ ಆತನನ್ನ ಆರಾಧಿಸ್ತೀನಿ?’—ಪ್ರಕಟನೆ 4:11.

     ಸಹಾಯಕ್ಕಾಗಿನಾನು ವಿಕಾಸವಾದವನ್ನು ನಂಬಬೇಕಾ?” ಅನ್ನೋ ಲೇಖನ ನೋಡಿ.

  •   ಬೈಬಲನ್ನ ದೇವರೇ ಕೊಟ್ಟಿದ್ದು ಅಂತ ನಂಬ್ತೀರಾ?

     ಬೈಬಲ್‌ ಹೇಳೋದು: “ಪವಿತ್ರ ಗ್ರಂಥದಲ್ಲಿರೋ ಎಲ್ಲ ಮಾತುಗಳನ್ನ ದೇವರೇ ಕೊಟ್ಟಿದ್ದು. ಜನ್ರಿಗೆ ಕಲಿಸೋಕೆ, ತಪ್ಪನ್ನ ತೋರಿಸೋಕೆ, ಎಲ್ಲ ವಿಷ್ಯವನ್ನ ಸರಿಮಾಡೋಕೆ, ದೇವರ ಆಲೋಚನೆ ಪ್ರಕಾರ ನಮ್ಮ ಆಲೋಚನೆಗಳನ್ನ ತಿದ್ದೋಕೆ ಅದು ಸಹಾಯ ಮಾಡುತ್ತೆ.”—2 ತಿಮೊತಿ 3:16.

     ನಿಮ್ಮನ್ನೇ ಕೇಳ್ಕೊಳ್ಳಿ: ‘ಮನುಷ್ಯರು ತಮಗೆ ಅನಿಸಿದ್ದನ್ನ ಬೈಬಲಲ್ಲಿ ಬರೆದಿಲ್ಲ ಅಂತ ನಾನ್ಯಾಕೆ ನಂಬ್ತೀನಿ?’—ಯೆಶಾಯ 46:10; 1 ಥೆಸಲೊನೀಕ 2:13.

     ಸಹಾಯಕ್ಕಾಗಿಬೈಬಲ್‌ ಓದೋದ್ರಿಂದ ಏನಾದ್ರೂ ಪ್ರಯೋಜ್ನ ಇದ್ಯಾ?—ಭಾಗ 1: ಬೈಬಲ್‌ ಬಗ್ಗೆ ತಿಳ್ಕೊಳ್ಳಿ” ಅನ್ನೋ ಲೇಖನ ನೋಡಿ.

  •   ಯೆಹೋವ ಕ್ರೈಸ್ತ ಸಭೆಗಳಿಂದ ತನ್ನ ಕೆಲಸಗಳನ್ನ ನಡಿಸ್ತಿದ್ದಾನೆ ಅಂತ ನೀವು ನಂಬ್ತೀರಾ?

     ಬೈಬಲ್‌ ಹೇಳೋದು: “ಸಭೆ ಮೂಲಕ, ಕ್ರಿಸ್ತ ಯೇಸು ಮೂಲಕ ಎಲ್ಲ ತಲೆಮಾರುಗಳ ತನಕ ಯಾವಾಗ್ಲೂ [ದೇವರಿಗೆ] ಗೌರವ ಸಿಗ್ಲಿ.”—ಎಫೆಸ 3:21.

     ನಿಮ್ಮನ್ನೇ ಕೇಳ್ಕೊಳ್ಳಿ: ‘ಕ್ರೈಸ್ತ ಕೂಟಗಳಲ್ಲಿ ನಾನು ಕಲಿತಾ ಇರೋ ವಿಷ್ಯ ಮನುಷ್ಯರಿಂದ ಬರ್ತಿದೆ ಅಂತ ನಂಬ್ತೀನಾ ಅಥವಾ ಯೆಹೋವ ದೇವರಿಂದ ಬರ್ತಿದೆ ಅಂತ ನಂಬ್ತೀನಾ?’ (ಮತ್ತಾಯ 24:45) ‘ನಮ್ಮ ಅಪ್ಪಅಮ್ಮ ಮೀಟಿಂಗ್‌ಗೆ ಹೋಗಲಿಲ್ಲ ಅಂದ್ರೂ ನಾನು ಹೋಗ್ತೀನಾ? (ನಿಮಗೆ ಹೋಗೋಕೆ ಬಿಟ್ರೆ)’—ಇಬ್ರಿಯ 10:24, 25.

     ಸಹಾಯಕ್ಕಾಗಿರಾಜ್ಯ ಸಭಾಗೃಹದಲ್ಲಿ ನಡಿಯೋ ಮೀಟಿಂಗ್‌ಗೆ ಯಾಕೆ ಹೋಗಬೇಕು?” ಅನ್ನೋ ಲೇಖನ ನೋಡಿ.

 ನಾನು ಏನು ಮಾಡ್ತಾ ಇರಬೇಕು?

 ನೀವು ದೀಕ್ಷಾಸ್ನಾನ ತಗೊಬೇಕಂದ್ರೆ ಪರಿಪೂರ್ಣರಾಗಬೇಕು ಅಂತೇನಿಲ್ಲ. ಆದ್ರೆ ‘ಕೆಟ್ಟದ್ರಿಂದ ದೂರ ಇದ್ದು, ಒಳ್ಳೇದನ್ನ ಮಾಡೋ’ ಆಸೆ ನಿಮಗಿರಬೇಕು. (ಕೀರ್ತನೆ 34:14) ಅದಕ್ಕೆ ಏನು ಮಾಡಬೇಕು?

  •   ಯೆಹೋವ ಇಟ್ಟಿರೋ ನೀತಿ ನಿಯಮಗಳನ್ನ ನೀವು ಪಾಲಿಸ್ತಿದ್ದೀರಾ?

     ಬೈಬಲ್‌ ಹೇಳೋದು: “ನಿಮ್ಮ ಮನಸ್ಸಾಕ್ಷಿಯನ್ನ ಶುದ್ಧವಾಗಿ ಇಟ್ಕೊಳ್ಳಿ.”—1 ಪೇತ್ರ 3:16.

     ನಿಮ್ಮನ್ನೇ ಕೇಳ್ಕೊಳ್ಳಿ: ‘“ಸರಿ ಯಾವುದು, ತಪ್ಪು ಯಾವುದು ಅನ್ನೋ ವ್ಯತ್ಯಾಸ ತಿಳ್ಕೊಳ್ಳೋಕೆ” ನನ್ನನ್ನ ನಾನು “ತರಬೇತಿ” ಮಾಡ್ಕೊಂಡಿದ್ದೀನಾ?’ (ಇಬ್ರಿಯ 5:14) ‘ನನ್ನ ವಯಸ್ಸಿನವರು ತಪ್ಪು ಮಾಡೋಕೆ ಒತ್ತಾಯ ಮಾಡಿದಾಗ ಅದನ್ನ ಬೇಡ ಅಂತ ಯಾವತ್ತಾದ್ರೂ ಹೇಳಿದ್ದೀನಾ? ನನ್ನ ಸ್ನೇಹಿತರು ಸರಿಯಾಗಿರೋದನ್ನ ಮಾಡೋಕೆ ನನಗೆ ಸಾಥ್‌ ಕೊಡ್ತಾರಾ?’—ಜ್ಞಾನೋಕ್ತಿ 13:20.

     ಸಹಾಯಕ್ಕಾಗಿಮನಸ್ಸಾಕ್ಷಿಗೆ ಹೇಗೆ ತರಬೇತಿ ಕೊಡಲಿ?” ಅನ್ನೋ ಲೇಖನ ನೋಡಿ.

  •   ನೀವೇನೇ ಮಾಡಿದ್ರೂ ಅದಕ್ಕೆ ನೀವು ಯೆಹೋವನಿಗೆ ಲೆಕ್ಕ ಕೊಡಬೇಕು ಅಂತ ಅರ್ಥ ಮಾಡ್ಕೊಂಡಿದ್ದೀರಾ?

     ಬೈಬಲ್‌ ಹೇಳೋದು: “ನಾವು ಪ್ರತಿಯೊಬ್ರೂ ನಮ್ಮ ನಮ್ಮ ಬಗ್ಗೆ ದೇವರಿಗೆ ಲೆಕ್ಕ ಕೊಡಬೇಕು.”—ರೋಮನ್ನರಿಗೆ 14:12.

     ನಿಮ್ಮನ್ನೇ ಕೇಳ್ಕೊಳ್ಳಿ: ‘ನಾನು ಪ್ರಾಮಾಣಿಕವಾಗಿದ್ದೀನಾ? ಬೇರೆಯವ್ರ ಜೊತೆ ಪ್ರಾಮಾಣಿಕವಾಗಿ ನಡ್ಕೊಳ್ತೀನಾ?’ (ಇಬ್ರಿಯ 13:18) ‘ನಾನು ನನ್ನ ತಪ್ಪನ್ನ ಒಪ್ಕೊತೀನಾ, ಮುಚ್ಚಿಡ್ತೀನಾ, ಅಥವಾ ಬೇರೆಯವ್ರ ಮೇಲೆ ಹಾಕ್ತೀನಾ?’—ಜ್ಞಾನೋಕ್ತಿ 28:13.

     ಸಹಾಯಕ್ಕಾಗಿತಪ್ಪು ಮಾಡಿದಾಗ ನಾನೇನು ಮಾಡಲಿ?” ಅನ್ನೋ ಲೇಖನ ನೋಡಿ.

  •   ಯೆಹೋವನಿಗೆ ಇನ್ನೂ ಹತ್ರ ಆಗೋಕೆ ನೀವು ಪ್ರಯತ್ನ ಮಾಡ್ತಿದ್ದೀರಾ?

     ಬೈಬಲ್‌ ಹೇಳೋದು: “ದೇವರಿಗೆ ಹತ್ರ ಆಗಿ, ಆಗ ದೇವರು ನಿಮಗೆ ಹತ್ರ ಆಗ್ತಾನೆ.”—ಯಾಕೋಬ 4:8.

     ನಿಮ್ಮನ್ನೇ ಕೇಳ್ಕೊಳ್ಳಿ: ‘ಯೆಹೋವನಿಗೆ ಹತ್ರ ಆಗೋಕೆ ನಾನು ಏನೆಲ್ಲಾ ಮಾಡ್ತಿದ್ದೀನಿ?’ ‘ನಾನು ದಿನಾ ಬೈಬಲ್‌ ಓದ್ತೀನಾ?’ (ಕೀರ್ತನೆ 1:1, 2) ಯಾವಾಗಲೂ ಪ್ರಾರ್ಥನೆ ಮಾಡ್ತೀನಾ? (1 ಥೆಸಲೊನೀಕ 5:17) ‘ಯಾವುದಾದ್ರೂ ಒಂದು ವಿಷ್ಯಕ್ಕಾಗಿ ನಾನು ನಿರ್ದಿಷ್ಟವಾಗಿ ಪ್ರಾರ್ಥಿಸ್ತೀನಾ?’ ‘ನನ್‌ ಫ್ರೆಂಡ್ಸ್‌ ಯೆಹೋವನಿಗೂ ಫ್ರೆಂಡ್ಸಾ?’—ಕೀರ್ತನೆ 15:1, 4.

     ಸಹಾಯಕ್ಕಾಗಿಬೈಬಲ್‌ ಓದೋದ್ರಿಂದ ಏನಾದ್ರೂ ಪ್ರಯೋಜ್ನ ಇದ್ಯಾ?—ಭಾಗ 2: ಬೈಬಲ್‌ ಓದೋದನ್ನ ಎಂಜಾಯ್‌ ಮಾಡಿ” ಮತ್ತು “ನಾನು ಯಾಕೆ ಪ್ರಾರ್ಥನೆ ಮಾಡಬೇಕು?” ಅನ್ನೋ ಲೇಖನಗಳನ್ನ ನೋಡಿ.

 ಟಿಪ್‌: ದೀಕ್ಷಾಸ್ನಾನಕ್ಕಾಗಿ ತಯಾರಾಗೋಕೆ ಯುವಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಪುಸ್ತಕದ 2ನೇ ಸಂಪುಟದಲ್ಲಿ 37ನೇ ಅಧ್ಯಾಯ ನೋಡಿ. ಅದ್ರಲ್ಲಿ ಪುಟ 308-309ರಲ್ಲಿರೋ ವರ್ಕ್‌ಶೀಟನ್ನೂ ನೋಡಿ.

aನಾನ್ಯಾಕೆ ದೀಕ್ಷಾಸ್ನಾನ ತಗೋಬೇಕು?—ಭಾಗ 1” ಅನ್ನೋ ಲೇಖನ ಓದಿ. ಅದ್ರಲ್ಲಿ ದೀಕ್ಷಾಸ್ನಾನ, ಸಮರ್ಪಣೆ ಅಂದ್ರೆ ಏನು? ಅದನ್ನ ಯಾಕೆ ಪಡ್ಕೊಬೇಕು? ಅಂತ ವಿವರಿಸಿದೆ.