ಯೋಹಾನನಿಗೆ ಕೊಟ್ಟ ಪ್ರಕಟನೆ 4:1-11

  • ಸ್ವರ್ಗದಲ್ಲಿರೋ ಯೆಹೋವನ ಸನ್ನಿಧಿಯ ದರ್ಶನ (1-11)

    • ಯೆಹೋವ ಸಿಂಹಾಸನದ ಮೇಲೆ ಕೂತಿದ್ದಾನೆ (2)

    • 24 ಹಿರಿಯರು ಮತ್ತು ಸಿಂಹಾಸನಗಳು (4)

    • ನಾಲ್ಕು ಜೀವಿಗಳು (6)

4  ಆಮೇಲೆ ನಾನು ನೋಡಿದಾಗ ಸ್ವರ್ಗದಲ್ಲಿ ತೆರೆದಿರೋ ಒಂದು ಬಾಗಿಲು ಕಾಣಿಸ್ತು. ನಾನು ಮೊದ್ಲು ಕೇಳಿಸ್ಕೊಂಡ ಆ ಸ್ವರ ತುತ್ತೂರಿ ಶಬ್ದದ ತರ ಇತ್ತು. ಅದು ನನಗೆ “ಇಲ್ಲಿಗೆ ಹತ್ತಿ ಬಾ, ಮುಂದೆ ನಡಿಬೇಕಾಗಿರೋ ವಿಷ್ಯಗಳನ್ನ ನಾನು ನಿನಗೆ ತೋರಿಸ್ತೀನಿ” ಅಂತ ಹೇಳ್ತು.  ತಕ್ಷಣ ದೇವರ ಪವಿತ್ರಶಕ್ತಿ ನನ್ನ ಮೇಲೆ ಬಂತು. ಆಗ ಸ್ವರ್ಗದಲ್ಲಿ ಒಂದು ಸಿಂಹಾಸನ ಕಾಣಿಸ್ತು. ಅದ್ರ ಮೇಲೆ ಯಾರೋ ಕೂತ್ಕೊಂಡಿದ್ರು.+  ಆ ಸಿಂಹಾಸನದ ಮೇಲೆ ಕೂತಿರುವವನ ರೂಪ ಸೂರ್ಯಕಾಂತ ರತ್ನದ ತರ,+ ಕೆಂಪು ಮಾಣಿಕ್ಯದ ತರ ಹೊಳೀತಾ ಇತ್ತು. ಸಿಂಹಾಸನದ ಸುತ್ತ ಹಸಿರು ಬಣ್ಣದ ರತ್ನದ ತರ ಕಾಣ್ತಿದ್ದ ಮುಗಿಲುಬಿಲ್ಲಿತ್ತು.+  ಆ ಸಿಂಹಾಸನದ ಸುತ್ತ 24 ಸಿಂಹಾಸನ ಇದ್ವು. ಅದ್ರ ಮೇಲೆ 24 ಹಿರಿಯರು+ ಕೂತಿರೋದನ್ನ ನಾನು ನೋಡ್ದೆ. ಅವರು ಬಿಳಿ ಬಟ್ಟೆ ಹಾಕೊಂಡಿದ್ರು. ಅವ್ರ ತಲೆ ಮೇಲೆ ಚಿನ್ನದ ಕಿರೀಟ ಇತ್ತು.  ಆ ಸಿಂಹಾಸನದಿಂದ ಗುಡುಗು,+ ಮಿಂಚು,+ ಶಬ್ದಗಳು ಬರ್ತಿತ್ತು. ಸಿಂಹಾಸನದ ಮುಂದೆ ಉರಿತಿದ್ದ ಏಳು ದೊಡ್ಡ ದೀಪಗಳಿದ್ವು. ಅವು ದೇವರ ಏಳು ಪವಿತ್ರ ಶಕ್ತಿಗಳನ್ನ ಸೂಚಿಸ್ತಿದ್ವು.+  ಸಿಂಹಾಸನದ ಮುಂದೆ ಗಾಜಿನ ತರ, ಸ್ಪಟಿಕದ ತರ ಸಮುದ್ರ ಇತ್ತು.+ ಸಿಂಹಾಸನದ ಮಧ್ಯ ಅದ್ರ ಸುತ್ತ ನಾಲ್ಕು ಜೀವಿಗಳು ಇದ್ವು.+ ಆ ಜೀವಿಗಳಿಗೆ ಹಿಂದೆ ಮುಂದೆ ಎಲ್ಲ ಕಡೆ ಕಣ್ಣುಗಳೇ ಇದ್ವು.  ಒಂದನೇ ಜೀವಿಯ ಮುಖ ಸಿಂಹದ+ ತರ, ಎರಡನೇದು ಹೋರಿ+ ತರ, ಮೂರನೇದು+ ಮನುಷ್ಯನ ತರ, ನಾಲ್ಕನೇದು+ ಹಾರಾಡೋ ಹದ್ದಿನ+ ತರ ಇತ್ತು.  ಆ ನಾಲ್ಕೂ ಜೀವಿಗಳಿಗೂ ಆರಾರು ರೆಕ್ಕೆಗಳಿದ್ವು. ಆ ರೆಕ್ಕೆಗಳ ತುಂಬ ಕಣ್ಣುಗಳಿದ್ವು.+ ಆ ಜೀವಿಗಳು ಹಗಲೂ ರಾತ್ರಿ ಹೀಗೆ ಹೇಳ್ತಾನೆ ಇದ್ವು: “ಸರ್ವಶಕ್ತ ಯೆಹೋವ*+ ದೇವರು ಪವಿತ್ರನು, ಪವಿತ್ರನು, ಪವಿತ್ರನು. ಆತನು ಈಗ್ಲೂ ಇದ್ದಾನೆ. ಮುಂಚೆನೂ ಇದ್ದನು. ಮುಂದೇನೂ ಬರ್ತಾನೆ.”+  ಸಿಂಹಾಸನದ ಮೇಲೆ ಕೂತಿದ್ದ ಶಾಶ್ವತವಾಗಿ ಜೀವಿಸೋ ದೇವರಿಗೆ+ ಆ ಜೀವಿಗಳು ಗೌರವ, ಘನತೆ ಕೊಟ್ಟು ಧನ್ಯವಾದ ಹೇಳಿದಾಗೆಲ್ಲ, 10  ಆ 24 ಹಿರಿಯರು+ ಸಿಂಹಾಸನದ ಮೇಲೆ ಕೂತಿರೋ ದೇವರ ಮುಂದೆ ಅಡ್ಡಬಿದ್ದು ಸದಾಕಾಲಕ್ಕೂ ಜೀವಿಸೋ ಆತನನ್ನ ಆರಾಧಿಸ್ತಾರೆ. ಅವರು ತಮ್ಮ ಕಿರೀಟಗಳನ್ನ ಸಿಂಹಾಸನದ ಮುಂದೆ ಇಟ್ಟು ಹೀಗೆ ಹೇಳ್ತಾರೆ 11  “ಯೆಹೋವನೇ,* ನಮ್ಮ ದೇವರೇ, ಗೌರವ,+ ಘನತೆ,+ ಶಕ್ತಿಯನ್ನ+ ಪಡ್ಕೊಳ್ಳೋಕೆ ನೀನೇ ಯೋಗ್ಯ. ಯಾಕಂದ್ರೆ ನೀನೇ ಎಲ್ಲವನ್ನೂ ಸೃಷ್ಟಿ ಮಾಡಿದ್ದೀಯ.+ ನಿನ್ನ ಇಷ್ಟದ ಹಾಗೇ ಅವೆಲ್ಲ ಸೃಷ್ಟಿ ಆದ್ವು ಮತ್ತು ಇವತ್ತು ಇಲ್ಲಿವೆ.”

ಪಾದಟಿಪ್ಪಣಿ