ಮಾಹಿತಿ ಇರುವಲ್ಲಿ ಹೋಗಲು

ನಮ್ಮ ಕಷ್ಟಗಳಿಗೆ ದೇವರು ಕಾರಣನಾ?

ನಮ್ಮ ಕಷ್ಟಗಳಿಗೆ ದೇವರು ಕಾರಣನಾ?

ಬೈಬಲ್‌ ಕೊಡೋ ಉತ್ತರ

 ಅಲ್ಲ, ಅಂತ ಬೈಬಲ್‌ ದೃಢವಾಗಿ ಹೇಳುತ್ತೆ! ಮನುಷ್ಯರು ಕಷ್ಟ ಅನುಭವಿಸಬೇಕು ಅನ್ನೋದು ಯೆಹೋವ ದೇವರ ಉದ್ದೇಶ ಆಗಿರಲಿಲ್ಲ. ಆದ್ರೆ ಮೊದಲ ಮಾನವ ದಂಪತಿ ಯಾವುದು ಸರಿ, ಯಾವುದು ತಪ್ಪು ಅಂತ ಅವರೇ ಆರಿಸಿಕೊಳ್ಳೋ ಮೂಲಕ ದೇವರ ಆಳ್ವಿಕೆ ವಿರುದ್ಧ ತಿರುಗಿಬಿದ್ದರು. ಅವರು ದೇವರಿಂದ ದೂರ ಹೋಗಿ ಕಷ್ಟಗಳನ್ನ ಅನುಭವಿಸಿದರು.

 ಅವರ ತಪ್ಪಿನ ಪರಿಣಾಮದಿಂದ ನಾವು ಇವತ್ತಿಗೂ ಕಷ್ಟ ಅನುಭವಿಸ್ತಾ ಇದ್ದೇವೆ ಹೊರತು ನಮ್ಮ ಕಷ್ಟಗಳಿಗೆ ದೇವರು ಕಾರಣನಲ್ಲ.

 ಬೈಬಲ್‌ ಹೀಗೆ ಹೇಳುತ್ತೆ: “ಕಷ್ಟ ಬಂದಾಗ ‘ದೇವರು ನನ್ನನ್ನ ಪರೀಕ್ಷೆ ಮಾಡ್ತಾ ಇದ್ದಾನೆ’ ಅಂತ ಯಾರೂ ಹೇಳಬಾರದು. ಯಾಕಂದ್ರೆ ಕೆಟ್ಟ ವಿಷ್ಯಗಳಿಂದ ದೇವರನ್ನ ಯಾರೂ ಪರೀಕ್ಷಿಸಕ್ಕಾಗಲ್ಲ. ದೇವರೂ ಯಾರಿಗೂ ಕಷ್ಟ ಕೊಟ್ಟು ಪರೀಕ್ಷೆ ಮಾಡಲ್ಲ.” (ಯಾಕೋಬ 1:13) ಕಷ್ಟ ಎಲ್ಲರಿಗೂ ಬರುತ್ತೆ, ದೇವರಿಗೆ ಇಷ್ಟ ಆದವರಿಗೂ ಬರುತ್ತೆ.