ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲ್‌-ಓದಲು ಸಹಾಯ

ಬೈಬಲ್‌-ಓದಲು ಸಹಾಯ

ಜೀವನಕ್ಕೆ ಬೇಕಾದ ವಿವೇಕದ ಮಾತುಗಳು ಬೈಬಲಿನಲ್ಲಿವೆ. ಅದನ್ನು ನೀವು ಪ್ರತಿದಿನ ಓದಿ, ಧ್ಯಾನಿಸಿ, ಕಲಿತಂತೆ ನಡೆದ್ರೆ ‘ನಿಮ್ಮ ಮಾರ್ಗ ಸಫಲವಾಗುತ್ತೆ.’ (ಯೆಹೋಶುವ 1:8; ಕೀರ್ತನೆ 1:1-3) ಇದರಿಂದ ನಿಮಗೆ ದೇವರ ಬಗ್ಗೆ, ಆತನ ಮಗ ಯೇಸು ಬಗ್ಗೆ ತಿಳಿಯುತ್ತೆ. ಈ ಜ್ಞಾನದಿಂದ ನಿಮಗೆ ರಕ್ಷಣೆ ಸಿಗುತ್ತೆ.—ಯೋಹಾನ 17:3.

ಬೈಬಲ್‌ ಪುಸ್ತಕಗಳನ್ನು ಯಾವ ಕ್ರಮದಲ್ಲಿ ಓದಬೇಕು? ಅದು ನಿಮ್ಮ ಆಯ್ಕೆ. ಬೈಬಲ್‌ ಓದುವಿಕೆಯ ಈ ಶೆಡ್ಯೂಲ್‌, ಬೈಬಲ್‌ ಪುಸ್ತಕಗಳನ್ನ ಕ್ರಮದಲ್ಲಿ ಓದೋಕೆ ಅಥವಾ ಒಂದು ನಿರ್ದಿಷ್ಟ ವಿಷ್ಯ ಆರಿಸ್ಕೊಂಡು ಅದ್ರ ಪ್ರಕಾರ ಓದೋಕೆ ಸಹಾಯ ಮಾಡುತ್ತೆ. ಉದಾಹರಣೆಗೆ, ದೇವರು ಹಿಂದಿನ ಕಾಲದ ಇಸ್ರಾಯೇಲ್ಯರ ಜೊತೆ ಹೇಗೆ ನಡಕೊಂಡನು ಅಂತ ತಿಳ್ಕೊಳ್ಳಲು ನೀವು ಬೈಬಲಿನ ನಿರ್ದಿಷ್ಟ ಭಾಗಗಳನ್ನ ಓದಬಹುದು. ಒಂದನೇ ಶತಮಾನದ ಕ್ರೈಸ್ತ ಸಭೆ ಹೇಗೆ ಶುರು ಆಯಿತು, ಹೇಗೆ ಬೆಳಿತು ಅಂತ ತಿಳ್ಕೊಳ್ಳೋಕೆ ಬೇರೆ ಭಾಗಗಳನ್ನೂ ಓದಬಹುದು. ಶೆಡ್ಯೂಲಲ್ಲಿ ಕೊಟ್ಟಿರುವ ಅಧ್ಯಾಯನಗಳನ್ನ ನೀವು ಪ್ರತಿದಿನ ಓದಿದ್ರೆ ಇಡೀ ಬೈಬಲನ್ನ ಒಂದು ವರ್ಷದಲ್ಲೇ ಓದಿ ಮುಗಿಸಬಹುದು.

ನೀವು ಪ್ರತಿದಿನ ಬೈಬಲ್‌ ಓದೋಕೆ ಯೋಚನೆ ಮಾಡ್ತಿದ್ರೂ ಅಥವಾ ಒಂದು ವರ್ಷದೊಳಗೆ ಪೂರ್ತಿಯಾಗಿ ಬೈಬಲ್‌ ಓದಬೇಕಂತಿದ್ರೂ ಅಥವಾ ಈಗಷ್ಟೇ ಬೈಬಲ್‌ ಓದೋಕೆ ಶುರು ಮಾಡ್ತಿದ್ರೂ ಈ ಶೆಡ್ಯೂಲ್‌ ನಿಮಗೆ ಸಹಾಯ ಮಾಡುತ್ತೆ. ಈ ಮುದ್ರಿತ ಬೈಬಲ್‌ ಓದಲು ಶೆಡ್ಯೂಲ್‌ನ್ನ ಡೌನ್‌ಲೋಡ್‌ ಮಾಡಿಕೊಳ್ಳಿ. ಇವತ್ತೇ ಓದಲು ಶುರುಮಾಡಿ.