ಕೀರ್ತನೆ 10:1-18

  • ಯೆಹೋವ, ನಿಸ್ಸಹಾಯಕರ ಸಹಾಯಕ

    • ದುಷ್ಟ ಗರ್ವದಿಂದ “ದೇವರಿಲ್ಲ” ಅಂತಾನೆ (4)

    • ನಿಸ್ಸಹಾಯಕ ಯೆಹೋವನ ಕಡೆ ತಿರುಗಿಕೊಳ್ತಾನೆ (14)

    • “ಯೆಹೋವ ಯಾವಾಗಲೂ ರಾಜ” (16)

ל [ಲಾಮೆದ್‌] 10  ಯೆಹೋವನೇ, ಯಾಕೆ ನೀನು ಅಷ್ಟು ದೂರ ಇದ್ದೀಯ? ಕಷ್ಟಕಾಲದಲ್ಲಿ ಯಾಕೆ ನನ್ನ ಜೊತೆ ಕಣ್ಣಾಮುಚ್ಚಾಲೆ ಆಡ್ತೀಯ?+   ದುಷ್ಟ ಅಹಂಕಾರದಿಂದ ನಿಸ್ಸಹಾಯಕನನ್ನ ಅಟ್ಟಿಸ್ಕೊಂಡು ಹೋಗ್ತಾನೆ,+ಆದ್ರೆ ಅವನ ಸಂಚಿಗೆ ಅವನೇ ಸಿಕ್ಕಿಹಾಕೊಳ್ತಾನೆ.+   ದುಷ್ಟನು ಅವನ ಕೆಟ್ಟ ಆಸೆಗಳ ಬಗ್ಗೆ ಕೊಚ್ಚಿಕೊಳ್ತಾನೆ,+ದುರಾಸೆಪಡೋ ಜನರಿಗೆ ಆಶೀರ್ವಾದ ಮಾಡ್ತಾನೆ.* נ [ನೂನ್‌] ಅವನು ಯೆಹೋವನಿಗೆ ಗೌರವ ಕೊಡಲ್ಲ.   ದುಷ್ಟನು ಗರ್ವದಿಂದಾಗಿ ದೇವರನ್ನ ಹುಡುಕಲ್ಲ,ಅವನ ಮನಸ್ಸಲ್ಲಿ ಯಾವಾಗ್ಲೂ “ದೇವರಿಲ್ಲ” ಅನ್ನೋ ಯೋಚನೆನೇ ಓಡ್ತಿರುತ್ತೆ.+   ಅವನು ಮಾಡೋ ಕೆಲಸ ಎಲ್ಲ ಚೆನ್ನಾಗಿ ಆಗುತ್ತೆ,+ಆದ್ರೆ ನಿನ್ನ ತೀರ್ಪುಗಳು ಅವನ ಯೋಚನೆಗಿಂತ ದೊಡ್ಡದು.+ ಅವನು ತನ್ನ ಶತ್ರುಗಳನ್ನೆಲ್ಲ ಅಣಕಿಸ್ತಾನೆ.   ಅವನು ಮನಸ್ಸಲ್ಲಿ, “ನನ್ನನ್ನ ಯಾರೂ ಅಲ್ಲಾಡಿಸಕ್ಕಾಗಲ್ಲ,ತೊಂದರೆ ನನ್ನ ಹತ್ರ ಯಾವತ್ತೂ ಸುಳಿಯಲ್ಲ” ಅಂದುಕೊಳ್ತಾನೆ.+ פ [ಪೇ]   ಅವನ ಬಾಯಲ್ಲಿ ಶಾಪ, ಸುಳ್ಳು ಮತ್ತು ಬೆದರಿಕೆನೇ ತುಂಬಿದೆ.+ ಅವನ ನಾಲಿಗೆಯ ಕೆಳಗೆ ತೊಂದ್ರೆ ಮತ್ತು ಹಾನಿ ಬಚ್ಚಿಟ್ಕೊಂಡಿದೆ.+   ಅವನು ಹಳ್ಳಿಗಳ ಹತ್ರ ಹೊಂಚುಹಾಕಿ ಕೂತಿರ್ತಾನೆ,ಅಮಾಯಕನನ್ನ ಕೊಲ್ಲೋಕೆ ಅಲ್ಲಿಂದ ಎದ್ದುಬರ್ತಾನೆ.+ ע [ಅಯಿನ್‌] ಅವನ ಕಣ್ಣು ಮುಗ್ಧನನ್ನ ಬಲಿ ತಗೊಳ್ಳೋಕೇ ನೋಡ್ತಾ ಇರುತ್ತೆ.+   ಅವನು ಗುಹೆಯಲ್ಲಿ* ಬಚ್ಚಿಟ್ಕೊಂಡಿರೋ ಸಿಂಹದ ತರ ಕಾಯ್ತಾ ಕೂತಿರ್ತಾನೆ.+ ನಿಸ್ಸಹಾಯಕನನ್ನ ಹಿಡಿಯೋಕೆ ಅವನು ಹೊಂಚುಹಾಕ್ತಾನೆ. ಆ ನಿಸ್ಸಹಾಯಕ ಬಲೆಗೆ ಬಿದ್ದ ತಕ್ಷಣ ಅವನನ್ನ ಹಿಡೀತಾನೆ.+ 10  ಆ ಅಮಾಯಕನನ್ನ ಜಜ್ಜಿ ಕೆಳಗೆ ಬೀಳಿಸ್ತಾನೆ,ನಿಸ್ಸಹಾಯಕರು ಅವನ ಬಿಗಿ ಮುಷ್ಟಿಯಲ್ಲಿ* ಸಿಕ್ಕಿಹಾಕೊಳ್ತಾರೆ. 11  “ದೇವರು ಮರೆತುಹೋಗಿದ್ದಾನೆ.+ ಆತನು ತನ್ನ ಮುಖನ ತಿರುಗಿಸಿಕೊಂಡಿದ್ದಾನೆ. ಆತನು ಯಾವತ್ತೂ ನೋಡಲ್ಲ” ಅಂತ ದುಷ್ಟ ತನ್ನ ಮನಸ್ಸಲ್ಲಿ ಅಂದುಕೊಳ್ತಾನೆ.+ ק [ಕೊಫ್‌] 12  ಯೆಹೋವನೇ, ದಯವಿಟ್ಟು ನಿನ್ನ ಶಕ್ತಿಯನ್ನ ತೋರಿಸು.+ ನಿಸ್ಸಹಾಯಕರನ್ನ ಮರೀಬೇಡ.+ 13  ದುಷ್ಟನು ಯಾಕೆ ದೇವರಿಗೆ ಗೌರವ ಕೊಡಲ್ಲ? “ದೇವರು ನನ್ನಿಂದ ಲೆಕ್ಕಕೇಳಲ್ಲ” ಅಂತ ಅವನು ಮನಸ್ಸಲ್ಲಿ ಅಂದುಕೊಳ್ತಾನೆ. ר [ರೆಶ್‌] 14  ಆದ್ರೆ ನೀನು ಕಷ್ಟಗಳನ್ನ ಬಾಧೆಗಳನ್ನ ನಿಜವಾಗ್ಲೂ ನೋಡ್ತೀಯ. ನೀನು ಎಲ್ಲ ಗಮನಿಸ್ತೀಯ, ಆಮೇಲೆ ವಿಷ್ಯಗಳನ್ನ ನಿನ್ನ ಕೈಗೆ ತಗೊತೀಯ.+ ನಿಸ್ಸಹಾಯಕ ನಿನ್ನ ಕಡೆ ನೋಡ್ತಾನೆ,+ಅನಾಥನಿಗೆ* ನೀನೇ ಸಹಾಯಕ.+ ש [ಶಿನ್‌] 15  ದುಷ್ಟನ ಮತ್ತು ಕೆಡುಕನ ಕೈಯನ್ನ ಮುರಿ,+ಅವನ ದುಷ್ಟತನವನ್ನ ಬೇರುಸಮೇತ ಕಿತ್ತುಹಾಕು. 16  ಯೆಹೋವ ಯಾವಾಗಲೂ ರಾಜನಾಗಿ ಇರ್ತಾನೆ.+ ದುಷ್ಟ ಜನಾಂಗಗಳು ಭೂಮಿ ಮೇಲೆ ಇಲ್ಲದೆ ಹೋಗಿವೆ.+ ת [ಟಾವ್‌] 17  ಆದ್ರೆ ಯೆಹೋವನೇ, ನೀನು ದೀನರ ಕೋರಿಕೆಯನ್ನ ಕೇಳಿಸಿಕೊಳ್ತೀಯ.+ ಅವ್ರ ಹೃದಯಗಳನ್ನ ಬಲಪಡಿಸಿ+ ಅವ್ರ ಪ್ರಾರ್ಥನೆಗೆ ಗಮನ ಕೊಡ್ತೀಯ.+ 18  ಅನಾಥರಿಗೂ ಜಜ್ಜಿಹೋದವರಿಗೂ ನ್ಯಾಯ ಕೊಡ್ತೀಯ.+ ಆಗ ಮಣ್ಣಿಂದ ಆದ ಮಾಮೂಲಿ ಮನುಷ್ಯ ಅವ್ರನ್ನ ಹೆದರಿಸೋಕೆ ಆಗಲ್ಲ.+

ಪಾದಟಿಪ್ಪಣಿ

ಬಹುಶಃ, “ದುರಾಸೆ ಇರುವವನು ಅವನನ್ನೇ ಆಶೀರ್ವಾದ ಮಾಡ್ಕೊತಾನೆ.”
ಅಥವಾ “ಪೊದೆಯಲ್ಲಿ.”
ಅಥವಾ “ಬಲಿಷ್ಠ ಪಂಜಿನಲ್ಲಿ.”
ಅಕ್ಷ. “ತಂದೆ ಇಲ್ಲದವನಿಗೆ.”