ಎಫೆಸದವರಿಗೆ ಬರೆದ ಪತ್ರ 5:1-33

  • ಶುದ್ಧ ಮಾತು ಮತ್ತು ನಡತೆ (1-5)

  • ಬೆಳಕಿನ ಮಕ್ಕಳಂತೆ ನಡ್ಕೊಳ್ಳಿ (6-14)

  • ಪವಿತ್ರಶಕ್ತಿಯಿಂದ ತುಂಬಿ (15-20)

    • ಮುಖ್ಯವಾದ ವಿಷ್ಯಕ್ಕೆ ಸಮಯ ಕೊಡಿ (16)

  • ಗಂಡ-ಹೆಂಡತಿಯರಿಗೆ ಬುದ್ಧಿಮಾತು (21-33)

5  ನೀವು ದೇವರ ಪ್ರೀತಿಯ ಮಕ್ಕಳಾಗಿ ಇರೋದ್ರಿಂದ ಆತನನ್ನ ಅನುಕರಿಸಿ.+  ಅಷ್ಟೇ ಅಲ್ಲ, ಕ್ರಿಸ್ತನ ಹಾಗೆ ಪ್ರೀತಿ ತೋರಿಸ್ತಾ ಇರಿ.+ ಆತನು ನಮ್ಮನ್ನ* ಪ್ರೀತಿಸಿ+ ನಮಗಾಗಿ* ತನ್ನನ್ನೇ ಸುವಾಸನೆ ಬೀರೋ ಕಾಣಿಕೆ ಮತ್ತು ಬಲಿಯಾಗಿ ದೇವರಿಗೆ ಅರ್ಪಿಸ್ಕೊಂಡನು.+  ಲೈಂಗಿಕ ಅನೈತಿಕತೆ,* ಎಲ್ಲ ತರದ ಅಶುದ್ಧತೆ, ದುರಾಸೆ ಇವುಗಳ ಬಗ್ಗೆ ನೀವು ಮಾತಾಡ್ಲೂಬಾರದು.+ ಇದು ಪವಿತ್ರ ಜನ್ರಿಗೆ ಯೋಗ್ಯವಲ್ಲ.+  ನಾಚಿಕೆಗೆಟ್ಟ ನಡತೆ, ಅರ್ಥವಿಲ್ಲದ ಮಾತು, ಅಶ್ಲೀಲ ತಮಾಷೆ+ ಇವೂ ಸರಿಯಲ್ಲ. ಇದೆಲ್ಲ ಬಿಟ್ಟು ದೇವರಿಗೆ ಧನ್ಯವಾದ ಹೇಳೋದು ಒಳ್ಳೇದು.+  ಯಾಕಂದ್ರೆ ಲೈಂಗಿಕ ಅನೈತಿಕತೆ+ ಅಥವಾ ಅಶುದ್ಧ ಕೆಲಸಗಳನ್ನ ಮಾಡೋ ವ್ಯಕ್ತಿ, ಕ್ರಿಸ್ತನು ರಾಜನಾಗೋ ದೇವರ ಆಳ್ವಿಕೆಗೆ ಸೇರಲ್ಲ.* ದುರಾಸೆ+ ಮೂರ್ತಿ ಪೂಜೆಗೆ ಸಮ. ಅದಕ್ಕೇ ದುರಾಸೆ ಪಡೋ ವ್ಯಕ್ತಿನೂ ಆ ಆಳ್ವಿಕೆಗೆ ಸೇರಲ್ಲ.+ ಇದು ನಿಮಗೆ ಗೊತ್ತಿದೆ, ಚೆನ್ನಾಗಿ ಅರ್ಥ ಆಗಿದೆ.  ಅರ್ಥವಿಲ್ಲದ ಮಾತುಗಳಿಂದ ಯಾರೂ ನಿಮ್ಮನ್ನ ಮೋಸ ಮಾಡದ ತರ ನೋಡ್ಕೊಳ್ಳಿ. ಮಾತನ್ನ ಕೇಳದೆ ಇಂಥದ್ದೆಲ್ಲ ಮಾಡೋ ಜನ್ರ ಮೇಲೆ ದೇವರ ಕೋಪ ಬರುತ್ತೆ.  ಹಾಗಾಗಿ ಅವ್ರ ತರ ಇರಬೇಡಿ.  ಒಂದು ಕಾಲದಲ್ಲಿ ನೀವು ಕತ್ತಲಲ್ಲಿದ್ರಿ. ಆದ್ರೆ ಈಗ ನೀವು ಪ್ರಭು ಜೊತೆ ಒಂದಾಗಿದ್ರಿಂದ ಬೆಳಕಲ್ಲಿದ್ದೀರ.+ ಯಾವಾಗ್ಲೂ ಬೆಳಕಿನ ಮಕ್ಕಳ ತರ ನಡ್ಕೊಳ್ಳಿ.  ಯಾಕಂದ್ರೆ ಬೆಳಕಿಂದ ಎಲ್ಲ ತರದ ಒಳ್ಳೇತನ, ನೀತಿ, ಸತ್ಯ ಕಾಣುತ್ತೆ.+ 10  ದೇವರಿಗೆ ಏನು ಇಷ್ಟ+ ಅಂತ ಯಾವಾಗ್ಲೂ ಪರೀಕ್ಷೆ ಮಾಡಿ ತಿಳ್ಕೊಳ್ಳಿ. 11  ಕತ್ತಲೆಗೆ ಸೇರಿದ ಕೆಲಸಗಳಿಂದ ಯಾವ ಪ್ರಯೋಜನನೂ ಇಲ್ಲ, ಹಾಗಾಗಿ ಅವುಗಳನ್ನ ಬಿಟ್ಟುಬಿಡಿ.+ ಅದ್ರ ಬದ್ಲು ಅವನ್ನ ಬಯಲು ಮಾಡಿ. 12  ಯಾಕಂದ್ರೆ ಜನ ರಹಸ್ಯವಾಗಿ ಮಾಡೋ ಕೆಲಸಗಳನ್ನ ಹೇಳೋಕೆ ನಾಚಿಕೆ ಆಗುತ್ತೆ. 13  ತಪ್ಪಾದ ಎಲ್ಲ ವಿಷ್ಯಗಳನ್ನ ಬೆಳಕು ಬಟ್ಟಬಯಲು ಮಾಡುತ್ತೆ. ಹಾಗಾಗಿ ತಪ್ಪಾದ ವಿಷ್ಯಗಳೆಲ್ಲ ಬೆಳಕಿಂದ ಬಟ್ಟಬಯಲಾಗಿವೆ. 14  ಅದಕ್ಕೇ ವಚನ ಹೀಗೆ ಹೇಳುತ್ತೆ: “ಹೆಣದ ತರ ಮಲಗಿರೋ ನೀನು ಎದ್ದೇಳು.+ ಆಗ ಕ್ರಿಸ್ತ ನಿನ್ನ ಮೇಲೆ ಬೆಳಕು ಚೆಲ್ಲುತ್ತಾನೆ.”+ 15  ಹಾಗಾಗಿ ನೀವು ಹೇಗೆ ನಡ್ಕೊಳ್ತಿದ್ದೀರ ಅಂತ ಚೆನ್ನಾಗಿ ಗಮನಿಸಿ. ಬುದ್ಧಿ ಇಲ್ಲದವ್ರ ತರ ಅಲ್ಲ, ಬುದ್ಧಿ ಇರುವವ್ರ ತರ ನಡ್ಕೊಳ್ಳಿ. 16  ಕಾಲ ತುಂಬ ಕೆಟ್ಟು ಹೋಗಿದೆ, ಹಾಗಾಗಿ ಮುಖ್ಯವಾದ ವಿಷ್ಯಕ್ಕೆ ಸಮಯ ಕೊಡಿ.*+ 17  ಅದಕ್ಕೇ ಮೂರ್ಖರ ತರ ನಡೀದೆ ಯೆಹೋವನ* ಇಷ್ಟ ಏನಂತ ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನ ಮಾಡ್ತಾ ಇರಿ.+ 18  ಅಷ್ಟೇ ಅಲ್ಲ, ಅಮಲೇರೋ ತನಕ ಮದ್ಯ* ಕುಡಿಬೇಡಿ.+ ಅದು ಕೆಟ್ಟ ಜೀವನ ನಡಿಸೋ ತರ* ಮಾಡುತ್ತೆ. ಆದ್ರೆ ಪವಿತ್ರಶಕ್ತಿಯಿಂದ ತುಂಬ್ಕೊಳ್ಳಿ. 19  ಕೀರ್ತನೆಗಳನ್ನ ಹಾಡ್ತಾ, ದೇವರನ್ನ ಹೊಗಳ್ತಾ, ಆರಾಧನೆ ಗೀತೆಗಳನ್ನ ಹಾಡ್ತಾ ಒಬ್ರು ಇನ್ನೊಬ್ರನ್ನ* ಬಲಪಡಿಸಿ.+ ಸಂಗೀತ ರಚಿಸ್ತಾ+ ಯೆಹೋವನಿಗಾಗಿ* ಹೃದಯದಿಂದ* ಹಾಡುಗಳನ್ನ ಹಾಡಿ.+ 20  ಎಲ್ಲದಕ್ಕೂ ನಮ್ಮ ತಂದೆಯಾದ ದೇವರಿಗೆ ನಮ್ಮ ಪ್ರಭು ಯೇಸು ಕ್ರಿಸ್ತನ ಹೆಸ್ರಲ್ಲಿ+ ಯಾವಾಗ್ಲೂ ಧನ್ಯವಾದ ಹೇಳಿ.+ 21  ನೀವು ಕ್ರಿಸ್ತನಿಗೆ ಭಯಪಟ್ಟು ಒಬ್ರಿಗೊಬ್ರು ಅಧೀನತೆ ತೋರಿಸಿ.+ 22  ಹೆಂಡತಿಯರೇ, ನೀವು ಪ್ರಭುಗೆ ಅಧೀನತೆ ತೋರಿಸೋ ತರ ನಿಮ್ಮ ಗಂಡನಿಗೂ ಅಧೀನತೆ ತೋರಿಸಿ.+ 23  ಯಾಕಂದ್ರೆ ಕ್ರಿಸ್ತನು ಸಭೆ ಅನ್ನೋ ದೇಹಕ್ಕೆ ಯಜಮಾನ+ ಆಗಿರೋ ತರ ಗಂಡ ತನ್ನ ಹೆಂಡತಿಗೆ ಯಜಮಾನ ಆಗಿದ್ದಾನೆ.+ ಅಷ್ಟೇ ಅಲ್ಲ, ಕ್ರಿಸ್ತನು ಸಭೆಯ ರಕ್ಷಕನೂ ಆಗಿದ್ದಾನೆ. 24  ಕ್ರಿಸ್ತನಿಗೆ ಸಭೆ ಅಧೀನತೆ ತೋರಿಸೋ ತರಾನೇ ಹೆಂಡತಿಯರೂ ತಮ್ಮ ಗಂಡಂದಿರಿಗೆ ಎಲ್ಲ ವಿಷ್ಯದಲ್ಲೂ ಅಧೀನತೆ ತೋರಿಸಬೇಕು. 25  ಗಂಡಂದಿರೇ, ಕ್ರಿಸ್ತನು ಸಭೆಯನ್ನ ಪ್ರೀತಿಸಿ ಅದಕ್ಕಾಗಿ ತನ್ನ ಜೀವವನ್ನೇ ಕೊಟ್ಟ+ ಹಾಗೆ ನೀವು ನಿಮ್ಮ ಹೆಂಡತಿಯರನ್ನ ಪ್ರೀತಿಸ್ತಾ ಇರಿ.+ 26  ಆತನು ದೇವರ ಸಂದೇಶ ಅನ್ನೋ ನೀರಿಂದ ಸಭೆಯನ್ನ ತೊಳೆದು ಶುದ್ಧಮಾಡಿ ಪವಿತ್ರ ಮಾಡೋಕೆ ಹಾಗೆ ಮಾಡಿದನು.+ 27  ಅಷ್ಟೇ ಅಲ್ಲ ತನ್ನ ಕಣ್ಮುಂದೆ ಸಭೆ ತುಂಬ ಸುಂದರವಾಗಿ, ಒಂದೇ ಒಂದು ಕಲೆನೂ ಇಲ್ಲದೆ, ಸುಕ್ಕುಗಟ್ಟಿರದೆ,+ ಹೀಗೆ ಯಾವ ದೋಷಾನೂ ಇಲ್ಲದೆ, ಪವಿತ್ರವಾಗಿ ಇರಬೇಕಂತ ಆತನು ಹಾಗೆ ಮಾಡಿದನು.+ 28  ಇದೇ ತರ ಗಂಡಂದಿರು ತಮ್ಮ ದೇಹವನ್ನ ಪ್ರೀತಿಸೋ ಹಾಗೆ ತಮ್ಮ ಹೆಂಡತಿಯರನ್ನ ಪ್ರೀತಿಸಬೇಕು. ಹೆಂಡತಿಯನ್ನ ಪ್ರೀತಿಸೋ ಗಂಡ ಅವನನ್ನೇ ಪ್ರೀತಿಸ್ತಾನೆ. 29  ಯಾವನೂ ತನ್ನ ದೇಹವನ್ನ ದ್ವೇಷಿಸಲ್ಲ, ಅದನ್ನ ಪೋಷಿಸಿ ಪ್ರೀತಿಸಿ ಅಮೂಲ್ಯವಾಗಿ ನೋಡ್ತಾನೆ. ಕ್ರಿಸ್ತನೂ ಸಭೆಯನ್ನ ಪೋಷಿಸಿ ಪ್ರೀತಿಸಿ ಅಮೂಲ್ಯವಾಗಿ ನೋಡ್ತಾನೆ. 30  ಯಾಕಂದ್ರೆ ನಾವು ಆತನ ದೇಹದ ಅಂಗಗಳಾಗಿದ್ದೀವಿ.+ 31  “ಅದಕ್ಕೇ ಒಬ್ಬ ಪುರುಷ ತನ್ನ ಅಪ್ಪಅಮ್ಮನನ್ನ ಬಿಟ್ಟು ತನ್ನ ಹೆಂಡತಿ ಜೊತೆ ಇರ್ತಾನೆ. ಅವರಿಬ್ರು ಒಂದೇ ದೇಹ ಆಗ್ತಾರೆ.”*+ 32  ಈ ಪವಿತ್ರ ರಹಸ್ಯ+ ತುಂಬ ಮುಖ್ಯ. ನಾನೀಗ ಕ್ರಿಸ್ತ ಮತ್ತು ಸಭೆ ಬಗ್ಗೆ ಮಾತಾಡ್ತಿದ್ದೀನಿ.+ 33  ಏನೇ ಆದ್ರೂ ನಿಮ್ಮಲ್ಲಿ ಪ್ರತಿಯೊಬ್ಬನು ತನ್ನನ್ನ ಪ್ರೀತಿಸೋ ತರಾನೇ ತನ್ನ ಹೆಂಡತಿಯನ್ನ ಪ್ರೀತಿಸಬೇಕು.+ ಹೆಂಡತಿ ತನ್ನ ಗಂಡನಿಗೆ ಆಳವಾದ ಗೌರವ ಕೊಡಬೇಕು.+

ಪಾದಟಿಪ್ಪಣಿ

ಬಹುಶಃ, “ನಿಮ್ಮನ್ನ.”
ಬಹುಶಃ, “ನಿಮಗಾಗಿ.”
ಅಕ್ಷ. “ಸೊತ್ತಾಗಿ ಪಡ್ಕೊಳಲ್ಲ.”
ಅಕ್ಷ. “ಸಮಯ ಖರೀದಿಸಿ.”
ಅಥವಾ “ನಿಯಂತ್ರಣ ಕಳ್ಕೊಳ್ಳೋ ತರ.”
ಅಕ್ಷ. “ದ್ರಾಕ್ಷಾಮದ್ಯ.”
ಬಹುಶಃ, “ನಿಮ್ಮನ್ನ ನೀವೇ.”
ಅಥವಾ “ಮನಸ್ಸಲ್ಲಿ.”
ಆದಿ 2:24ರ ಪಾದಟಿಪ್ಪಣಿ ನೋಡಿ.