ಕೀರ್ತನೆ 55:1-23

  • ಸ್ನೇಹಿತನಿಂದ ಮೋಸ ಆದವನ ಪ್ರಾರ್ಥನೆ

    • ಪ್ರಾಣ ಸ್ನೇಹಿತನಿಂದ ಅಪಹಾಸ್ಯ (12-14)

    • “ನಿನಗಿರೋ ಭಾರವನ್ನೆಲ್ಲ ಯೆಹೋವನ ಮೇಲೆ ಹಾಕು” (22)

ಗಾಯಕರ ನಿರ್ದೇಶಕನಿಗೆ ಸೂಚನೆ, ಇದನ್ನ ತಂತಿವಾದ್ಯಗಳ ಜೊತೆ ಹಾಡಬೇಕು. ಮಸ್ಕಿಲ್‌.* ದಾವೀದನ ಕೀರ್ತನೆ. 55  ದೇವರೇ, ನನ್ನ ಪ್ರಾರ್ಥನೆ ಕೇಳು,+ದಯೆಗಾಗಿ ನಾನು ಮಾಡೋ ಬಿನ್ನಹವನ್ನ ಪಕ್ಕಕ್ಕೆ ಇಡಬೇಡ.*+   ನನಗೆ ಗಮನಕೊಡು, ನನಗೆ ಉತ್ತರಕೊಡು.+ ನನ್ನ ಚಿಂತೆಗಳು ನಾನು ಚಡಪಡಿಸೋ ತರ ಮಾಡಿವೆ,+ನನಗೆ ತಳಮಳ ಆಗ್ತಿದೆ.   ಯಾಕಂದ್ರೆ ವೈರಿ ಜೋರು ಮಾಡ್ತಿದ್ದಾನೆ,ಕೆಟ್ಟವನು ಒತ್ತಡ ಹಾಕ್ತಿದ್ದಾನೆ. ಅವರು ನನ್ನ ಮೇಲೆ ಒಂದರ ಮೇಲೆ ಒಂದು ತೊಂದರೆನ ಗುಡ್ಡೆ ಹಾಕ್ತಿದ್ದಾರೆ,ಕೋಪದಿಂದ ಅವರು ನನ್ನ ವಿರುದ್ಧ ಹಗೆತನ ಬೆಳೆಸ್ಕೊಂಡಿದ್ದಾರೆ.+   ನನ್ನ ಹೃದಯ ನೋವಿಂದ ನಲುಗಿ ಹೋಗಿದೆ,+ಸಾವಿನ ಭಯ ನನ್ನನ್ನ ಮುಳುಗಿಸಿಬಿಟ್ಟಿದೆ.+   ನಾನು ಭಯದಿಂದ ನಡುಗ್ತಾ ಇದ್ದೀನಿ,ತತ್ತರಿಸಿ ಹೋಗಿದ್ದೀನಿ.   ನಾನು ಹೀಗೆ ಹೇಳ್ತಾ ಇದ್ದೆ “ನನಗೆ ಪಾರಿವಾಳದ ತರ ರೆಕ್ಕೆ ಇದ್ದಿದ್ರೆ,ಸುರಕ್ಷಿತವಾದ ಜಾಗಕ್ಕೆ ಹಾರಿಹೋಗಿ ಅಲ್ಲೇ ಇರ್ತಿದ್ದೆ.   ತುಂಬ ದೂರ ಹಾರಿಹೋಗ್ತಿದ್ದೆ.+ ಕಾಡಲ್ಲಿ ಗೂಡು ಮಾಡ್ಕೊತಿದ್ದೆ.+ (ಸೆಲಾ)   ಜೋರಾಗಿ ಬೀಸೋ ಗಾಳಿಯಿಂದ, ಭಯಂಕರ ಬಿರುಗಾಳಿಯಿಂದ ತಪ್ಪಿಸ್ಕೊಂಡು,ನಾನು ಒಂದು ಸುರಕ್ಷಿತ ತಾಣಕ್ಕೆ ಓಡಿಹೋಗ್ತಿದ್ದೆ.”   ಯೆಹೋವನೇ, ಅವ್ರಿಗೆ ಗಲಿಬಿಲಿ ಮಾಡು, ಅವ್ರ ಯೋಜನೆಗಳನ್ನ ಹಾಳುಮಾಡು,*+ಯಾಕಂದ್ರೆ ಪಟ್ಟಣದಲ್ಲಿ ನಾನು ಹಿಂಸೆ, ಹೊಡೆದಾಟ ನೋಡಿದ್ದೀನಿ. 10  ಹಗಲೂರಾತ್ರಿ ಅವರು ಪಟ್ಟಣದ ಗೋಡೆಗಳ ಮೇಲೆ ನಡೆದಾಡ್ತಾರೆ,ಪಟ್ಟಣದಲ್ಲಿ ದ್ವೇಷ, ತೊಂದ್ರೆ ತುಂಬಿಕೊಂಡಿದೆ.+ 11  ದೊಡ್ಡ ವಿಪತ್ತು ಪಟ್ಟಣದ ಮಧ್ಯದಲ್ಲಿದೆ,ದಬ್ಬಾಳಿಕೆ ಮತ್ತು ವಂಚನೆ ಪಟ್ಟಣದ ಮುಖ್ಯಸ್ಥಳವನ್ನ* ಬಿಟ್ಟು ಹೋಗಿಲ್ಲ.+ 12  ನನ್ನನ್ನ ಕೆಣಕುತ್ತಿದ್ದವನು ಶತ್ರುವಲ್ಲ,+ಶತ್ರುವಾಗಿದ್ರೆ ನಾನು ಸಹಿಸಿಕೊಳ್ತಿದ್ದೆ. ನನ್ನ ವಿರುದ್ಧ ಎದ್ದಿರೋನು ವೈರಿಯಲ್ಲ,ವೈರಿಯಾಗಿದ್ರೆ ನಾನು ಅವನಿಗೆ ಸಿಗದೆ ಇರೋ ಹಾಗೆ ಬಚ್ಚಿಟ್ಕೊಳ್ತಿದ್ದೆ. 13  ಆದ್ರೆ ಇದನ್ನ ಮಾಡಿದ್ದು ನನ್ನಂಥ ಮನುಷ್ಯ,*+ನನಗೆ ಚೆನ್ನಾಗಿ ಗೊತ್ತಿರೋ ನನ್ನ ಸ್ನೇಹಿತ.+ 14  ಒಂದು ಕಾಲದಲ್ಲಿ ನಾವು ಆಪ್ತ ಸ್ನೇಹದ ಸಿಹಿ ಕ್ಷಣಗಳನ್ನ ಅನುಭವಿಸಿದ್ವಿ,ಜನ್ರ ಜೊತೆ ದೇವರ ಆಲಯಕ್ಕೆ ಹೋಗ್ತಾ ಇದ್ವಿ. 15  ನನ್ನ ಶತ್ರುಗಳ ಮೇಲೆ ನಾಶನ ಬರಲಿ!+ ಜೀವಂತವಾಗೇ ಅವ್ರು ಸಮಾಧಿ* ಸೇರಲಿ,ಯಾಕಂದ್ರೆ ಕೆಟ್ಟತನ ಅವ್ರ ಮಧ್ಯ, ಅವರೊಳಗೆ ಮನೆ ಮಾಡ್ಕೊಂಡಿದೆ. 16  ಆದ್ರೆ ನಾನು ಯೆಹೋವನನ್ನ ಕರೀತೀನಿ,ಆತನು ನನ್ನನ್ನ ಕಾಪಾಡ್ತಾನೆ.+ 17  ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ನಾನು ಮೂರೂ ಹೊತ್ತು ದುಃಖದಲ್ಲೇ ಮುಳುಗಿರ್ತಿನಿ, ಕೊರಗ್ತಾ ಇರ್ತಿನಿ,+ದೇವರು ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊಳ್ತಾನೆ.+ 18  ಜನ್ರೆಲ್ಲ ನನ್ನ ವಿರುದ್ಧ ಬಂದಿದ್ದಾರೆ,ಹಾಗಾಗಿ ನನ್ನ ವಿರುದ್ಧ ಹೋರಾಡೋರ ಕೈಯಿಂದ ಆತನು ನನ್ನನ್ನ ತಪ್ಪಿಸಿ ಶಾಂತಿಯನ್ನ ಕೊಡ್ತಾನೆ.+ 19  ಪುರಾತನ ಕಾಲದಿಂದ ಸಿಂಹಾಸನದ ಮೇಲೆ ಕೂತಿರೋ+ದೇವರು ಕೇಳಿಸ್ಕೊಂಡು, ಅವ್ರಿಗೆ ಸ್ಪಂದಿಸ್ತಾನೆ.+ (ಸೆಲಾ) ದೇವರಿಗೆ ಭಯಪಡದವರು,+ಬದಲಾಗಲ್ಲ ಅಂತಾರೆ. 20  ಅವನು* ತನ್ನ ಸ್ನೇಹಿತರ ಮೇಲೆನೇ ಆಕ್ರಮಣ ಮಾಡಿದ,+ಅವನು ಕೊಟ್ಟ ಮಾತನ್ನ ಮುರಿದುಬಿಟ್ಟ.+ 21  ಅವನ ಮಾತು ಬೆಣ್ಣೆಗಿಂತ ಮೃದು,+ಆದ್ರೆ ಅವನ ಹೃದಯದ ತುಂಬ ದ್ವೇಷ. ಅವನ ನುಡಿ ಎಣ್ಣೆಗಿಂತ ನಯ,ಆದ್ರೆ ಅದು ಕತ್ತಿಗಿಂತ ಚೂಪು.+ 22  ನಿನಗಿರೋ ಭಾರನೆಲ್ಲ ಯೆಹೋವನ ಮೇಲೆ ಹಾಕು,+ಆತನೇ ನಿನಗೆ ಆಧಾರವಾಗಿ ಇರ್ತಾನೆ.+ ನೀತಿವಂತ ಬಿದ್ದುಹೋಗೋಕೆ* ಆತನು ಯಾವತ್ತೂ ಬಿಡಲ್ಲ.+ 23  ದೇವರೇ, ನೀನು ಅವ್ರನ್ನ ಆಳವಾದ ಗುಂಡಿಗೆ ಬೀಳಿಸ್ತೀಯ.+ ರಕ್ತಾಪರಾಧಿಗಳು, ವಂಚಕರು ತಮ್ಮ ಅರ್ಧ ಆಯಸ್ಸಲ್ಲೇ ಹೋಗಿಬಿಡ್ತಾರೆ.+ ಆದ್ರೆ ನಾನು ನಿನ್ನಲ್ಲೇ ಭರವಸೆ ಇಟ್ಟಿದ್ದೀನಿ.

ಪಾದಟಿಪ್ಪಣಿ

ಅಥವಾ “ಸಹಾಯಕ್ಕಾಗಿ ಪ್ರಾರ್ಥಿಸುವಾಗ ಮರೆಯಾಗಬೇಡ.”
ಅಕ್ಷ. “ಅವರ ನಾಲಿಗೆಯನ್ನ ಸೀಳಿಹಾಕು.”
ಅಥವಾ “ನನಗೆ ಸಮಾನನಾಗಿರೋ ಮನುಷ್ಯ.”
ಅದು, ವಚನ 13, 14ರಲ್ಲಿ ತಿಳಿಸಿರೋ ಸ್ನೇಹಿತ.
ಅಥವಾ “ತತ್ತರಿಸಿ ಹೋಗೋಕೆ.”