ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

panitan/stock.adobe.com

ಸ್ಮರಣೆಯ ಅಭಿಯಾನ 

ಯೇಸು ಬಡತನವನ್ನ ತೆಗೆದುಹಾಕ್ತಾನೆ

ಯೇಸು ಬಡತನವನ್ನ ತೆಗೆದುಹಾಕ್ತಾನೆ

 ಭೂಮಿಯಲ್ಲಿದ್ದಾಗ ಯೇಸು ಜನರನ್ನ ಮನಸಾರೆ ಪ್ರೀತಿಸಿದನು. ಅದ್ರಲ್ಲೂ ಬಡವ್ರನ್ನ ಮತ್ತು ದಿಕ್ಕಿಲ್ಲದವ್ರನ್ನ ತುಂಬ ಪ್ರೀತಿಸಿದನು. (ಮತ್ತಾಯ 9:36) ಜನ್ರಿಗೆ ತನ್ನ ಪ್ರಾಣವನ್ನೇ ಕೊಡುವಷ್ಟರ ಮಟ್ಟಿಗೆ ಯೇಸು ಅವ್ರನ್ನ ಪ್ರೀತಿಸಿದನು. (ಮತ್ತಾಯ 20:28; ಯೋಹಾನ 15:13) ದೇವರ ಸರ್ಕಾರದ ರಾಜನಾಗಿರೋ ಯೇಸು ತನ್ನ ಅಧಿಕಾರವನ್ನ ಬಳಸಿ ಭೂಮಿಯ ಎಲ್ಲ ಕಡೆ ಬಡತನವನ್ನ ತೆಗೆದು ಹಾಕೋ ಮೂಲಕ ಜನರ ಮೇಲೆ ತನಗೆಷ್ಟು ಪ್ರೀತಿಯಿದೆ ಅಂತ ಮತ್ತೊಮ್ಮೆ ತೋರಿಸಿಕೊಡ್ತಾನೆ.

 ಯೇಸು ಏನು ಮಾಡ್ತಾನೆ ಅಂತ ಬೈಬಲ್‌ನಲ್ಲಿ ತಿಳಿಸಿರೋ ವಿಷಯವನ್ನ ಗಮನಿಸಿ:

  •   “ಜನ್ರಲ್ಲಿ ದೀನರಾಗಿ ಇರೋರಿಗೆ ಅವನು ನ್ಯಾಯ ಕೊಡಿಸಲಿ, ಬಡವರ ಮಕ್ಕಳನ್ನ ಕಾಪಾಡಲಿ.”—ಕೀರ್ತನೆ 72:4.

 ಯೇಸು ಈ ಹಿಂದೆ ಮಾಡಿರೋ ಮತ್ತು ಮುಂದೆ ಮಾಡಲಿರೋ ವಿಷಯಗಳಿಗೆ ನಾವು ಹೇಗೆ ಥ್ಯಾಂಕ್ಸ್‌ ಹೇಳಬಹುದು? ಲೂಕ 22:19ರಲ್ಲಿ ಯೇಸು ತನ್ನ ಹಿಂಬಾಲಕರಿಗೆ ತನ್ನ ಮರಣವನ್ನ ನೆನಪಿಸಿಕೊಳ್ಳೋಕೆ ಹೇಳಿದನು. ಅದಕ್ಕೇ ಪ್ರತಿ ವರ್ಷ ಯೆಹೋವನ ಸಾಕ್ಷಿಗಳು ಆತನ ಮರಣವನ್ನ ಸ್ಮರಿಸೋಕೆ ಒಟ್ಟಿಗೆ ಸೇರಿ ಬರ್ತಾರೆ. 2024, ಮಾರ್ಚ್‌ 24ರ ಭಾನುವಾರದಂದು ನಡೆಯೋ ಯೇಸುವಿನ ಮರಣದ ಸ್ಮರಣೆಗೆ ನಿಮ್ಮನ್ನ ಆಮಂತ್ರಿಸಲು ಖುಷಿಪಡ್ತೀವಿ.

ಸ್ಮರಣೆ ಎಲ್ಲಿ ನಡೆಯುತ್ತೆ?