ಲೂಕ 22:1-71

  • ಯೇಸುವನ್ನ ಕೊಲ್ಲೋಕೆ ಪುರೋಹಿತರ ಸಂಚು (1-6)

  • ಕೊನೇ ಪಸ್ಕ ಹಬ್ಬಕ್ಕೆ ತಯಾರಿ (7-13)

  • ಒಡೆಯನ ರಾತ್ರಿ ಊಟದ ಏರ್ಪಾಡು (14-20)

  • ‘ಮೋಸಗಾರ ನನ್ನ ಜೊತೆ ಊಟ ಮಾಡ್ತಾ ಇದ್ದಾನೆ’ (21-23)

  • ಯಾರು ದೊಡ್ಡವರು ಅಂತ ದೊಡ್ಡ ಜಗಳ (24-27)

  • ಯೇಸು ಮಾಡಿದ ದೇವರ ಆಳ್ವಿಕೆಯ ಒಪ್ಪಂದ (28-30)

  • ಯೇಸು ಯಾರಂತ ಗೊತ್ತಿಲ್ಲ ಅಂತ ಪೇತ್ರ ಹೇಳ್ತಾನೆ ಅನ್ನೋ ಭವಿಷ್ಯವಾಣಿ (31-34)

  • ಯಾಕೆ ತಯಾರಾಗಿ ಇರಬೇಕು; ಎರಡು ಕತ್ತಿ (35-38)

  • ಆಲಿವ್‌ ಗುಡ್ಡದ ಮೇಲೆ ಯೇಸು ಪ್ರಾರ್ಥಿಸಿದನು (39-46)

  • ಯೇಸುವನ್ನ ಹಿಡ್ಕೊಂಡು ಹೋದ್ರು (47-53)

  • ಯೇಸುವನ್ನ ಪೇತ್ರ ಗೊತ್ತಿಲ್ಲ ಅಂತ ಹೇಳಿದ (54-62)

  • ಯೇಸುಗೆ ಗೇಲಿಮಾಡಿದ್ರು (63-65)

  • ಹಿರೀಸಭೆಯಲ್ಲಿ ವಿಚಾರಣೆ (66-71)

22  ಹುಳಿಯಿಲ್ಲದ ರೊಟ್ಟಿ ಹಬ್ಬ ಹತ್ರ ಬರ್ತಿತ್ತು.+ ಆ ಹಬ್ಬಕ್ಕೆ ಪಸ್ಕ ಹಬ್ಬ+ ಅಂತಾನೂ ಹೆಸ್ರಿತ್ತು.  ಮುಖ್ಯ ಪುರೋಹಿತರು, ಪಂಡಿತರು ಯೇಸುವನ್ನ ಮುಗಿಸಿಬಿಡಬೇಕು ಅಂತಿದ್ರು.+ ಆದ್ರೆ ಅವರು ಜನ್ರಿಗೆ ಹೆದರ್ತಾ ಇದ್ದಿದ್ರಿಂದ ಒಳ್ಳೇ ಅವಕಾಶಕ್ಕಾಗಿ ಹುಡುಕ್ತಾ ಇದ್ರು.+  ಆಗ 12 ಶಿಷ್ಯರಲ್ಲಿ ಒಬ್ಬನಾಗಿದ್ದ ಇಸ್ಕರಿಯೂತ ಯೂದನ+ ಮನಸ್ಸಲ್ಲಿ ಸೈತಾನ ಹೋದ.  ಮುಖ್ಯ ಪುರೋಹಿತರು, ದೇವಾಲಯದ ಮುಖ್ಯಸ್ಥರ ಹತ್ರ ಹೋಗಿ, ಯೇಸುಗೆ ದ್ರೋಹಮಾಡಿ ಹಿಡ್ಕೊಡೋದ್ರ ಬಗ್ಗೆ ಮಾತಾಡಿದ.+  ಆಗ ಅವ್ರಿಗೆ ತುಂಬ ಖುಷಿ ಆಯ್ತು. ಅವರು ಬೆಳ್ಳಿ ನಾಣ್ಯಗಳನ್ನ ಕೊಡೋಕೆ ಒಪ್ಕೊಂಡ್ರು.+  ಅವನೂ ಒಪ್ಕೊಂಡ. ಅವತ್ತಿಂದ ಜನ ಇಲ್ಲದಿದ್ದಾಗ ಯೇಸುನ ಹಿಡ್ಕೊಡೋಕೆ ಒಳ್ಳೇ ಅವಕಾಶಕ್ಕಾಗಿ ಕಾಯ್ತಿದ್ದ.  ಹುಳಿಯಿಲ್ಲದ ರೊಟ್ಟಿ ಹಬ್ಬದ ದಿನ ಬಂತು. ಅದೇ ದಿನ ಪಸ್ಕದ ಪ್ರಾಣಿಯನ್ನ ಬಲಿ ಅರ್ಪಿಸಬೇಕಿತ್ತು.+  ಹಾಗಾಗಿ ಪೇತ್ರ ಮತ್ತು ಯೋಹಾನನಿಗೆ “ನೀವು ಹೋಗಿ, ಪಸ್ಕ ಆಚರಿಸೋಕೆ ಎಲ್ಲ ಸಿದ್ಧಮಾಡಿ”+ ಅಂತ ಯೇಸು ಹೇಳಿದನು.  “ಎಲ್ಲಿ ಸಿದ್ಧಮಾಡಬೇಕು?” ಅಂತ ಕೇಳಿದ್ರು. 10  ಆತನು “ಪಟ್ಟಣದ ಒಳಗೆ ಹೋಗಿ. ಅಲ್ಲಿ ಒಬ್ಬ ವ್ಯಕ್ತಿ ಮಣ್ಣಿನ ಕೊಡದಲ್ಲಿ ನೀರು ಹೊತ್ಕೊಂಡು ಹೋಗ್ತಾ ಇರ್ತಾನೆ. ಅವನು ಹೋಗೋ ಮನೆಗೆ ಅವನ ಹಿಂದೆನೇ ಹೋಗಿ.+ 11  ಹೋದಮೇಲೆ ಆ ಮನೆ ಯಜಮಾನನಿಗೆ ಹೀಗೆ ಹೇಳಿ ‘ನಮ್ಮ ಗುರು ನಿನಗೆ “ನಿನ್ನ ಮನೆಯಲ್ಲಿ ನಾನು ಶಿಷ್ಯರ ಜೊತೆ ಪಸ್ಕ ಹಬ್ಬ ಮಾಡಬೇಕು, ಆ ಕೋಣೆ ಎಲ್ಲಿದೆ?” ಅಂತ ಕೇಳಿದ.’ 12  ಆಗ ಅವನು ಮಾಳಿಗೆ ಮೇಲೆ ಇರೋ ದೊಡ್ಡ ಕೋಣೆ ತೋರಿಸ್ತಾನೆ. ನಮಗೆ ಬೇಕಾಗಿರೋ ಎಲ್ಲ ವಸ್ತುಗಳೂ ಅಲ್ಲಿರುತ್ತೆ. ಅಲ್ಲಿ ಪಸ್ಕ ಹಬ್ಬಕ್ಕಾಗಿ ಎಲ್ಲ ತಯಾರಿ ಮಾಡಿ” ಅಂದನು. 13  ಶಿಷ್ಯರು ಹಾಗೇ ಮಾಡಿದ್ರು. ಪಸ್ಕ ಹಬ್ಬಕ್ಕೆ ಎಲ್ಲ ಸಿದ್ಧತೆ ಮಾಡಿದ್ರು. 14  ಪಸ್ಕದ ಊಟಮಾಡೋ ಸಮಯ ಬಂದಾಗ ಯೇಸು ಅಪೊಸ್ತಲರ ಜೊತೆ ಮೇಜಿನ ಹತ್ರ ಕೂತ್ಕೊಂಡ.+ 15  ಆಗ ಯೇಸು “ನಾನು ಕಷ್ಟ ಅನುಭವಿಸೋ ಮುಂಚೆ ನಿಮ್ಮ ಜೊತೆ ಈ ಪಸ್ಕದ ಊಟ ಮಾಡಬೇಕಂತ ತುಂಬ ದಿನದಿಂದ ಕಾಯ್ತಾ ಇದ್ದೆ. 16  ದೇವರ ಆಳ್ವಿಕೆ ಬರೋ ತನಕ ನಾನು ಮತ್ತೆ ಈ ಊಟ ತಿನ್ನೋದೇ ಇಲ್ಲ” ಅಂದನು. 17  ಆಮೇಲೆ ಯೇಸು ದ್ರಾಕ್ಷಾಮದ್ಯದ ಬಟ್ಟಲು ತಗೊಂಡು ಧನ್ಯವಾದ ಹೇಳಿ “ತಗೊಳಿ, ಇದನ್ನ ಕುಡಿದು ಇನ್ನೊಬ್ರಿಗೆ ದಾಟಿಸಿ. 18  ಇವತ್ತಿಂದ ದೇವರ ಆಳ್ವಿಕೆ ಬರೋ ತನಕ ನಾನು ದ್ರಾಕ್ಷಾಮದ್ಯ ಕುಡಿಯೋದೇ ಇಲ್ಲ” ಅಂದನು. 19  ಶಿಷ್ಯರು ಊಟ ಮಾಡ್ತಿರುವಾಗ ಯೇಸು ರೊಟ್ಟಿ+ ತಗೊಂಡು ದೇವ್ರಿಗೆ ಧನ್ಯವಾದ ಹೇಳಿ ಅದನ್ನ ಮುರಿದು ಶಿಷ್ಯರಿಗೆ ಕೊಡ್ತಾ “ತಗೊಳಿ, ತಿನ್ನಿ. ಇದು ನಾನು ನಿಮಗೋಸ್ಕರ+ ಅರ್ಪಿಸೋ ನನ್ನ ದೇಹವನ್ನ+ ಸೂಚಿಸುತ್ತೆ. ನನ್ನನ್ನ ನೆನಪಿಸ್ಕೊಳ್ಳೋಕೆ ಇದನ್ನ ಮಾಡ್ತಾ ಇರಿ”+ ಅಂದನು. 20  ಅವರು ಊಟ ಮಾಡಿದ ಮೇಲೆ ಆತನು ಅದೇ ರೀತಿ ಬಟ್ಟಲು ತಗೊಂಡು “ಈ ಬಟ್ಟಲು ಹೊಸ ಒಪ್ಪಂದವನ್ನ+ ಸೂಚಿಸುತ್ತೆ. ನಾನು ನಿಮಗೋಸ್ಕರ ಸುರಿಸೋ ರಕ್ತಾನೇ+ ಇದಕ್ಕೆ ಆಧಾರ.+ 21  ಆದ್ರೆ ನೋಡಿ! ನನಗೆ ಮೋಸ ಮಾಡೋನು ನನ್ನ ಜೊತೆ ಮೇಜಿನ ಮೇಲೆ ಕೈಯಿಟ್ಟು ಊಟಮಾಡ್ತಾ ಇದ್ದಾನೆ.+ 22  ಪವಿತ್ರ ಗ್ರಂಥದಲ್ಲಿ ಬರೆದಿರೋ ತರಾನೇ ಮನುಷ್ಯಕುಮಾರ ಸತ್ತುಹೋಗ್ತಾನೆ.+ ಆದ್ರೆ ಅವನಿಗೆ ಮೋಸ ಮಾಡೋ ವ್ಯಕ್ತಿಗೆ ಆಗೋ ಗತಿ ಏನು ಹೇಳಲಿ!” ಅಂದನು.+ 23  ಆಗ ಶಿಷ್ಯರು ಯಾರು ಆ ತರ ಮಾಡ್ತಾರೆ ಅಂತ ಮಾತಾಡ್ಕೊಳ್ಳೋಕೆ ಶುರುಮಾಡಿದ್ರು.+ 24  ಅದೇ ಸಮಯದಲ್ಲಿ ಯಾರು ದೊಡ್ಡವರು ಅನ್ನೋ ವಿಷ್ಯದಲ್ಲಿ ಶಿಷ್ಯರ ಮಧ್ಯ ದೊಡ್ಡ ಜಗಳನೂ ಆಯ್ತು.+ 25  ಆಗ ಯೇಸು “ದೇಶಗಳನ್ನ ಆಳೋ ರಾಜರು ಅಧಿಕಾರ ಚಲಾಯಿಸ್ತಾರೆ, ಅಧಿಕಾರ ಇರೋರನ್ನ ಜನ ‘ಪ್ರಜಾಸೇವಕರು’*+ ಅಂತ ಕರಿತಾರೆ. 26  ಆದ್ರೆ ನೀವು ಅವ್ರ ತರ ಇರಬಾರದು.+ ನಿಮ್ಮಲ್ಲಿ ದೊಡ್ಡವರು ಎಲ್ರಿಗಿಂತ ಚಿಕ್ಕವರಾಗಿ+ ಇರಬೇಕು. ಮೇಲ್ವಿಚಾರಕರು ಬೇರೆಯವರ ಸೇವೆ ಮಾಡಬೇಕು. 27  ಯಾರು ದೊಡ್ಡವರು? ಊಟಕ್ಕೆ ಕೂತಿರೋನಾ? ಅವನಿಗೆ ಬಡಿಸೋ ಸೇವಕನಾ? ಊಟಕ್ಕೆ ಕೂತಿರೋನಲ್ವಾ. ಆದ್ರೆ ನಾನು ನಿಮ್ಮ ಹತ್ರ ಒಬ್ಬ ಸೇವಕನ ತರ ಇದ್ದೀನಿ.+ 28  ನೀವು ನನ್ನ ಕಷ್ಟಗಳಲ್ಲಿ+ ನನ್ನ ಜೊತೆ+ ಯಾವಾಗ್ಲೂ ಇದ್ರಿ. 29  ನನ್ನ ಅಪ್ಪ ನನ್ನ ಜೊತೆ ಆಳ್ವಿಕೆಯ ಒಪ್ಪಂದ ಮಾಡ್ಕೊಂಡಿರೋ ತರ ನಾನೂ ನಿಮ್ಮ ಜೊತೆ ಆಳ್ವಿಕೆಯ+ ಒಪ್ಪಂದ ಮಾಡ್ಕೊಳ್ತೀನಿ. 30  ಇದ್ರಿಂದಾಗಿ ನೀವು ನನ್ನ ಆಳ್ವಿಕೆಯಲ್ಲಿ+ ನನ್ನ ಜೊತೆ ಊಟಮಾಡ್ತೀರ, ಕುಡಿತೀರ. ಸಿಂಹಾಸನಗಳ+ ಮೇಲೆ ಕೂತು ಇಸ್ರಾಯೇಲಿನ 12 ಕುಲಗಳಿಗೆ+ ನ್ಯಾಯತೀರಿಸ್ತೀರ. 31  ಸೀಮೋನ, ಸೀಮೋನ, ನೋಡು! ಹೊಟ್ಟು ತೆಗಿಯೋಕೆ ಗೋದಿಯನ್ನ ತೂರೋ ಹಾಗೆ ನಿಮ್ಮನ್ನೂ ತೂರಬೇಕಂತ ಇದ್ದೀನಿ ಅಂತ ಸೈತಾನ ಹೇಳಿದ್ದಾನೆ.+ 32  ಆದ್ರೆ ನಿನ್ನ ನಂಬಿಕೆ ಕಡಿಮೆ ಆಗಬಾರದು ಅಂತ ದೇವರ ಹತ್ರ ನಿನಗೋಸ್ಕರ ಬೇಡ್ಕೊಂಡಿದ್ದೀನಿ.+ ನೀನು ಪಶ್ಚಾತ್ತಾಪಪಟ್ಟು ವಾಪಸ್‌ ಬಂದ ಮೇಲೆ ನಿನ್ನ ಸಹೋದರರನ್ನ ಬಲಪಡಿಸು” ಅಂದನು.+ 33  ಅದಕ್ಕೆ ಪೇತ್ರ “ಸ್ವಾಮಿ, ನಾನು ನಿನ್ನ ಜೊತೆ ಜೈಲಿಗೆ ಹೋಗೋಕೂ ನಿನ್ನೊಟ್ಟಿಗೆ ಸಾಯೋಕೂ ಸಿದ್ಧ” ಅಂದ.+ 34  ಆಗ ಯೇಸು “ಪೇತ್ರ, ನಿಜ ಹೇಳ್ತೀನಿ, ಇವತ್ತು ಕೋಳಿ ಕೂಗೋದಕ್ಕಿಂತ ಮುಂಚೆ ನೀನು ಮೂರು ಸಲ ನಾನು ಯಾರಂತಾನೇ ಗೊತ್ತಿಲ್ಲ ಅಂತ ಹೇಳ್ತೀಯ” ಅಂದನು.+ 35  ಯೇಸು ಅವ್ರಿಗೆ “ಹಣದ ಚೀಲ, ಆಹಾರದ ಚೀಲ, ಚಪ್ಪಲಿ+ ಇಲ್ಲದೆ ಕಳಿಸಿದಾಗ ನಿಮಗೇನಾದರೂ ಕೊರತೆ ಆಯ್ತಾ?” ಅಂತ ಕೇಳಿದಾಗ “ಇಲ್ಲ” ಅಂದ್ರು. 36  ಆಮೇಲೆ ಆತನು “ಆದ್ರೆ ಇನ್ನು ಮುಂದೆ ಹಣದ ಚೀಲ, ಆಹಾರದ ಚೀಲ ಇದ್ರೆ ಅದನ್ನ ತಗೊಳಿ. ಕತ್ತಿ ಇಲ್ಲದಿದ್ರೆ ನಿಮ್ಮದೊಂದು ಬಟ್ಟೆ ಮಾರಿ ಕತ್ತಿ ತಗೊಳಿ. 37  ಯಾಕಂದ್ರೆ ಪವಿತ್ರ ಗ್ರಂಥದಲ್ಲಿ ನನ್ನ ಬಗ್ಗೆ ‘ಅವನನ್ನ ಅಪರಾಧಿ ತರ ನೋಡ್ತಾರೆ’+ ಅಂತ ಬರೆದಿದೆ. ಆ ಮಾತು ನಿಜ ಆಗಬೇಕು. ಈಗ ಆ ಮಾತು ನನ್ನ ವಿಷ್ಯದಲ್ಲಿ ನಿಜ ಆಗ್ತಿದೆ” ಅಂದನು.+ 38  ಆಗ ಅವರು “ಸ್ವಾಮಿ, ನೋಡಿಲ್ಲಿ! ಎರಡು ಕತ್ತಿ ಇದೆ” ಅಂದಾಗ “ಅದು ಸಾಕು” ಅಂದನು. 39  ಯೇಸು ಯಾವಾಗ್ಲೂ ಹೋಗೋ ತರ ಆಲೀವ್‌ ಗುಡ್ಡಕ್ಕೆ ಹೋದನು. ಶಿಷ್ಯರೂ ಹೋದ್ರು.+ 40  ಆ ಜಾಗಕ್ಕೆ ಬಂದಾಗ ಯೇಸು “ನೀವು ಪಾಪ ಮಾಡದೆ ಇರಬೇಕಂದ್ರೆ ಪ್ರಾರ್ಥನೆ ಮಾಡ್ತಾ ಇರಬೇಕು” ಅಂದನು.+ 41  ಆಮೇಲೆ ಅವ್ರಿಂದ ಸ್ವಲ್ಪ ದೂರ* ಹೋಗಿ ಮಂಡಿಯೂರಿ 42  “ಅಪ್ಪಾ, ನಿನಗೆ ಇಷ್ಟ ಇದ್ರೆ ನನ್ನ ಹತ್ರ ಇರೋ ಈ ಬಟ್ಟಲು ತೆಗೆದುಬಿಡು. ಆದ್ರೂ ನನ್ನ ಇಷ್ಟ ಅಲ್ಲ, ನಿನ್ನ ಇಷ್ಟಾನೇ ಆಗಲಿ” ಅಂತ ಪ್ರಾರ್ಥನೆ ಮಾಡಿದ.+ 43  ಆಗ ಸ್ವರ್ಗದಿಂದ ಒಬ್ಬ ದೇವದೂತ ಬಂದು ಆತನನ್ನ ಬಲಪಡಿಸಿದ.+ 44  ಆದ್ರೂ ಯೇಸು ಮನಸ್ಸಲ್ಲಿ ದುಃಖ, ಚಿಂತೆ ತುಂಬಿಹೋಗಿತ್ತು. ಹಾಗಾಗಿ ಇನ್ನೂ ಹೆಚ್ಚು ಪ್ರಾರ್ಥನೆ ಮಾಡ್ತಾ ಇದ್ದನು.+ ಆತನ ಬೆವರು ರಕ್ತದ ಹನಿಗಳ ತರ ನೆಲಕ್ಕೆ ಬೀಳ್ತಿತ್ತು. 45  ಪ್ರಾರ್ಥನೆ ಮಾಡಿದ ಮೇಲೆ ಆತನು ಎದ್ದು ಶಿಷ್ಯರ ಹತ್ರ ಬಂದ. ಶಿಷ್ಯರು ನಿದ್ದೆ ಮಾಡ್ತಿದ್ರು. ಯಾಕಂದ್ರೆ ಅವ್ರಿಗೆ ದುಃಖಪಟ್ಟು ಸುಸ್ತಾಗಿತ್ತು.+ 46  ಆತನು “ನಿದ್ದೆ ಮಾಡ್ತಿದ್ದೀರಾ? ಏಳಿ, ಪಾಪ ಮಾಡದೆ ಇರಬೇಕಂದ್ರೆ ಪ್ರಾರ್ಥನೆ ಮಾಡ್ತಾ ಇರಿ” ಅಂದನು.+ 47  ಇದನ್ನ ಹೇಳ್ತಾ ಇದ್ದಾಗಲೇ ಜನ್ರ ಒಂದು ಗುಂಪು ಬಂತು. 12 ಶಿಷ್ಯರಲ್ಲಿ ಒಬ್ಬನಾಗಿದ್ದ ಯೂದನೇ ಅವ್ರನ್ನ ಕರ್ಕೊಂಡು ಬಂದಿದ್ದ. ಅವನು ಹತ್ರ ಬಂದು ಯೇಸುಗೆ ಮುತ್ತು ಕೊಟ್ಟ.+ 48  ಯೇಸು “ಯೂದ, ನೀನು ಮನುಷ್ಯಕುಮಾರನಿಗೆ ಮುತ್ತು ಕೊಟ್ಟು ಮೋಸ ಮಾಡ್ತಿದ್ದೀಯಾ?” ಅಂದನು. 49  ಆಗ ಯೇಸು ಜೊತೆ ಇದ್ದವರು ಏನಾಗುತ್ತೆ ಅಂತ ಅರ್ಥಮಾಡ್ಕೊಂಡು “ಸ್ವಾಮಿ, ನಾವು ಅವ್ರ ಮೇಲೆ ಕತ್ತಿ ಬೀಸೋಣ್ವಾ?” ಅಂತ ಕೇಳಿದ್ರು. 50  ಅಷ್ಟರಲ್ಲಿ ಅವ್ರಲ್ಲಿ ಒಬ್ಬ ಮಹಾ ಪುರೋಹಿತನ ಆಳಿನ ಕಡೆ ಕತ್ತಿ ಬೀಸಿ ಅವನ ಬಲಕಿವಿ ಕತ್ತರಿಸಿಬಿಟ್ಟ.+ 51  ಆಗ ಯೇಸು “ಹಾಗೆ ಮಾಡಬೇಡಿ” ಅಂದನು. ಆ ಆಳಿನ ಕಿವಿ ಮುಟ್ಟಿ ವಾಸಿಮಾಡಿದನು. 52  ಆಮೇಲೆ ಯೇಸು ಅಲ್ಲಿಗೆ ಬಂದಿದ್ದ ಮುಖ್ಯ ಪುರೋಹಿತರಿಗೆ, ದೇವಾಲಯದ ಮುಖ್ಯಸ್ಥರಿಗೆ ಮತ್ತು ಹಿರಿಯರಿಗೆ “ಒಬ್ಬ ಕಳ್ಳನನ್ನ ಹಿಡಿಯೋ ತರ ಕತ್ತಿ, ದೊಣ್ಣೆ ತಗೊಂಡು ನನ್ನನ್ನ ಹಿಡಿಯೋಕೆ ಬಂದಿದ್ದೀರಲ್ಲಾ?+ 53  ನಾನು ಪ್ರತಿದಿನ ದೇವಾಲಯದಲ್ಲಿ ಕಲಿಸ್ತಾ+ ನಿಮ್ಮ ಜೊತೆ ಇದ್ದಾಗ ನನ್ನನ್ನ ಹಿಡಿಲಿಲ್ಲ.+ ಆದ್ರೆ ಈಗ ನಿಮ್ಮ ಸಮಯ ಬಂದಿದೆ. ಕತ್ತಲೆಯು ಆಳ್ವಿಕೆ ಮಾಡೋ ಸಮಯ ಬಂದಿದೆ” ಅಂದನು.+ 54  ಆಮೇಲೆ ಯೇಸುವನ್ನ ಬಂಧಿಸಿ+ ಮಹಾ ಪುರೋಹಿತನ ಮನೆಗೆ ಕರ್ಕೊಂಡು ಹೋದ್ರು. ಪೇತ್ರ ಸ್ವಲ್ಪ ದೂರದಲ್ಲಿ ಅವ್ರ ಹಿಂದೆ-ಹಿಂದೆನೇ ಹೋಗ್ತಿದ್ದ.+ 55  ಮನೆ ಅಂಗಳದ ಮಧ್ಯದಲ್ಲಿ ಜನ ಬೆಂಕಿ ಹೊತ್ತಿಸಿ ಚಳಿಕಾಯಿಸ್ತಾ ಇದ್ರು. ಪೇತ್ರ ಅವ್ರ ಜೊತೆ ಕೂತ.+ 56  ಆ ಬೆಂಕಿಯ ಬೆಳಕಲ್ಲಿ ಪೇತ್ರನ ಮುಖ ನೋಡಿ ಒಬ್ಬ ಸೇವಕಿ “ಇವನು ಕೂಡ ಅವನ ಜೊತೆ ಇದ್ದ” ಅಂದಳು. 57  ಆದ್ರೆ ಪೇತ್ರ ಅದನ್ನ ಒಪ್ಪದೆ “ಇಲ್ಲ, ಅವನು ಯಾರಂತ ನಂಗೊತ್ತಿಲ್ಲ” ಅಂದುಬಿಟ್ಟ. 58  ಸ್ವಲ್ಪ ಸಮಯ ಆದಮೇಲೆ ಇನ್ನೊಬ್ಬ ಪೇತ್ರನನ್ನ ನೋಡಿ “ನೀನೂ ಅವ್ರ ಜೊತೆ ಇದ್ದೆ” ಅಂತ ಹೇಳಿದಾಗ ಪೇತ್ರ “ಇಲ್ಲಪ್ಪ, ಅದು ನಾನಲ್ಲ” ಅಂದ.+ 59  ಇದಾಗಿ ಸುಮಾರು ಒಂದು ತಾಸು ಆಗಿತ್ತು, ಮತ್ತೊಬ್ಬ ಬಂದು “ನನಗೆ ಚೆನ್ನಾಗಿ ಗೊತ್ತು, ಇವನೂ ಆ ಯೇಸು ಜೊತೆ ಇದ್ದ. ಯಾಕಂದ್ರೆ ಇವನೂ ಗಲಿಲಾಯದವನು” ಅಂತ ಹೇಳ್ತಾನೇ ಇದ್ದ. 60  ಅದಕ್ಕೆ ಪೇತ್ರ “ನೀನೇನು ಹೇಳ್ತಿದ್ದೀಯಾ? ನನಗೇನೂ ಅರ್ಥ ಆಗ್ತಿಲ್ಲ” ಅಂದ. ಈ ಮಾತು ಹೇಳ್ತಾ ಇದ್ದಾಗಲೇ ಕೋಳಿ ಕೂಗಿತು. 61  ಆಗ ಒಡೆಯ ತಿರುಗಿ ಪೇತ್ರನನ್ನ ನೋಡಿದನು. “ಇವತ್ತು ಕೋಳಿ ಕೂಗೋ ಮುಂಚೆ ನೀನು ಮೂರು ಸಲ ನಾನು ಯಾರಂತಾನೇ ಗೊತ್ತಿಲ್ಲ ಅಂತ ಹೇಳ್ತೀಯ” ಅಂತ ಒಡೆಯ ಹೇಳಿದ್ದು ಪೇತ್ರನಿಗೆ ನೆನಪಾಯ್ತು.+ 62  ಅವನು ಹೊರಗೆ ಹೋಗಿ ದುಃಖಪಡ್ತಾ ಬಿಕ್ಕಿಬಿಕ್ಕಿ ಅತ್ತ. 63  ಯೇಸುವನ್ನ ಕಾವಲು ಕಾಯ್ತಿದ್ದ ಸೈನಿಕರು ಆತನನ್ನ ತುಂಬ ಗೇಲಿ ಮಾಡ್ತಿದ್ರು,+ ಹೊಡಿತಿದ್ರು.+ 64  ಆತನ ಮುಖಕ್ಕೆ ಮುಸುಕುಹಾಕಿ ಗುದ್ದಿ “ನೀನು ಪ್ರವಾದಿ ಆಗಿದ್ರೆ ನಿಂಗೆ ಗುದ್ದಿದ್ದು ಯಾರಂತ ಹೇಳು ನೋಡೋಣ?” ಅಂತ ಹೇಳ್ತಿದ್ರು. 65  ಆತನ ಬಗ್ಗೆ ತಪ್ಪುತಪ್ಪಾಗಿ ಮಾತಾಡ್ತಿದ್ರು. 66  ಬೆಳಗಾದಾಗ ಹಿರಿಯರು, ಮಹಾ ಪುರೋಹಿತರು, ಪಂಡಿತರು ಸಭೆ ಸೇರಿದ್ರು.+ ಯೇಸುವನ್ನ ಹಿರೀಸಭೆಗೆ* ಕರ್ಕೊಂಡು ಹೋದ್ರು. 67  ಅಲ್ಲಿ ಆತನಿಗೆ “ನೀನು ಕ್ರಿಸ್ತನಾ? ಹೇಳು” ಅಂದ್ರು.+ ಅದಕ್ಕೆ ಯೇಸು “ನಾನು ಹೇಳಿದ್ರೂ ನೀವು ನಂಬಲ್ಲ. 68  ನಾನು ಪ್ರಶ್ನೆ ಕೇಳಿದ್ರೂ ನೀವು ಉತ್ತರ ಕೊಡಲ್ಲ. 69  ಆದ್ರೆ ಈಗಿಂದ ಮನುಷ್ಯಕುಮಾರ+ ಶಕ್ತಿಶಾಲಿಯಾದ ದೇವರ ಬಲಗಡೆಯಲ್ಲಿ ಕೂತಿರ್ತಾನೆ” ಅಂದನು.+ 70  ಆಗ ಅವರು “ಹಾಗಾದ್ರೆ ನೀನು ದೇವರ ಮಗನಾ?” ಅಂತ ಕೇಳಿದ್ರು. ಅದಕ್ಕೆ ಯೇಸು “ನಾನು ದೇವರ ಮಗ ಅಂತ ನೀವೇ ಹೇಳ್ತಾ ಇದ್ದೀರಲ್ಲಾ?” ಅಂದನು. 71  ಅದಕ್ಕೆ ಅವರು “ನಮಗೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾ? ಅವನ ಬಾಯಿಂದಾನೇ ಕೇಳಿಸ್ಕೊಂಡ್ವಿ ತಾನೇ?” ಅಂದ್ರು.+

ಪಾದಟಿಪ್ಪಣಿ

ಅಕ್ಷ. “ಉಪಕಾರಿಗಳು.” ಇದು ಗೌರವದಿಂದ ಕೊಡೋ ಬಿರುದು.
ಅಥವಾ “ಕಲ್ಲನ್ನ ಎಷ್ಟು ದೂರ ಎಸೆಯೋಕೆ ಆಗುತ್ತೋ ಸುಮಾರು ಅಷ್ಟು ದೂರ.”
ಅಕ್ಷ. “ಸನ್ಹೇದ್ರೀನ್‌.” ಅಥವಾ “ಸರ್ವೋಚ್ಛ ನ್ಯಾಯಾಲಯ.”