ಕೀರ್ತನೆ 72:1-20

  • ದೇವರು ಆರಿಸಿದ ರಾಜನ ಶಾಂತಿಯ ಆಳ್ವಿಕೆ

    • “ನೀತಿವಂತರು ಅಭಿವೃದ್ಧಿಯಾಗ್ತಾರೆ” (7)

    • ಸಮುದ್ರದಿಂದ ಸಮುದ್ರದ ತನಕ ಇರೋ ಪ್ರಜೆಗಳು (8)

    • ಹಿಂಸೆಯಿಂದ ತಪ್ಪಿಸು (14)

    • ಭೂಮಿಯ ಮೇಲೆ ಬೆಳೆ ಸಮೃದ್ಧವಾಗಿರುತ್ತೆ (16)

    • ದೇವರ ಹೆಸ್ರಿಗೆ ಯಾವಾಗ್ಲೂ ಹೊಗಳಿಕೆ (19)

ಸೊಲೊಮೋನನ ಬಗ್ಗೆ. 72  ದೇವರೇ, ನಿನ್ನ ತೀರ್ಪುಗಳ ಬಗ್ಗೆ ರಾಜನಿಗೆ ಕಲಿಸು,ನಿನ್ನ ನೀತಿ ಬಗ್ಗೆ ರಾಜನ ಮಗನಿಗೆ ಬೋಧಿಸು.+   ಅವನು ನೀತಿಯಿಂದ ನಿನ್ನ ಪ್ರಜೆಗಳ ಪರವಾಗಿ,ನ್ಯಾಯದಿಂದ ನಿನ್ನ ದೀನ ಜನ್ರ ಪರವಾಗಿ ವಾದ ಮಾಡಲಿ.+   ಪರ್ವತಗಳು ಜನ್ರಿಗೆ ಶಾಂತಿ ತರಲಿ,ಬೆಟ್ಟಗಳು ನೀತಿ ತರಲಿ.   ಜನ್ರಲ್ಲಿ ದೀನರಾಗಿ ಇರೋರಿಗೆ ಅವನು ನ್ಯಾಯ ಕೊಡಿಸಲಿ,ಬಡವರ ಮಕ್ಕಳನ್ನ ಕಾಪಾಡಲಿ,ಮೋಸಗಾರರನ್ನ ಜಜ್ಜಿಹಾಕಲಿ.+   ಸೂರ್ಯ ಹೊಳೆಯೋ ತನಕ,ಚಂದ್ರ ಆಕಾಶದಲ್ಲಿ ಇರೋ ತನಕ,ಅವರು ನಿನಗೆ ಭಯಪಡ್ತಾರೆ,ತಲತಲಾಂತರಕ್ಕೂ ಭಯಪಡ್ತಾರೆ.+   ಕತ್ತರಿಸಿದ ಹುಲ್ಲಿನ ಮೇಲೆ ಬೀಳೋ ಮಳೆ ತರ ರಾಜ ಇರ್ತಾನೆ,ಭೂಮಿಯನ್ನ ತೋಯಿಸೋ ತುಂತುರು ಮಳೆ ತರ ಇರ್ತಾನೆ.+   ಅವನ ಕಾಲದಲ್ಲಿ ನೀತಿವಂತರು ಅಭಿವೃದ್ಧಿ ಆಗ್ತಾರೆ,*+ಚಂದ್ರ ಇರೋ ತನಕ ಎಲ್ಲ ಕಡೆ ಶಾಂತಿ ತುಂಬಿತುಳುಕುತ್ತೆ.+   ಅವನು ಸಮುದ್ರದಿಂದ ಸಮುದ್ರದ ತನಕಮಹಾ ನದಿಯಿಂದ* ಭೂಮಿಯ ಕಟ್ಟಕಡೆಯ ತನಕ ಆಳ್ವಿಕೆ ಮಾಡ್ತಾನೆ.*+   ಮರುಭೂಮಿಯ ನಿವಾಸಿಗಳು ಅವನಿಗೆ ಬಗ್ಗಿ ನಮಸ್ಕಾರ ಮಾಡ್ತಾರೆ,ಅವನ ಶತ್ರುಗಳು ಮಣ್ಣು ಮುಕ್ತಾರೆ.+ 10  ತಾರ್ಷೀಷಿನ ರಾಜರು, ದ್ವೀಪಗಳ ರಾಜರು ಅವನಿಗೆ ಕಪ್ಪ ಕೊಡ್ತಾರೆ.+ ಶೆಬದ ರಾಜರು, ಸೆಬಾದ ರಾಜರು ಅವನಿಗೆ ಉಡುಗೊರೆಗಳನ್ನ ಕೊಡ್ತಾರೆ.+ 11  ಎಲ್ಲ ರಾಜರು ಅವನಿಗೆ ಬಗ್ಗಿ ನಮಸ್ಕಾರ ಮಾಡ್ತಾರೆ,ಎಲ್ಲ ಜನಾಂಗದ ಜನ್ರು ಅವನ ಸೇವೆಮಾಡ್ತಾರೆ. 12  ಯಾಕಂದ್ರೆ ಅವನು ಸಹಾಯಕ್ಕಾಗಿ ಮೊರೆ ಇಡೋ ಬಡವ್ರನ್ನ ಕಾಪಾಡ್ತಾನೆ,ದೀನರನ್ನ, ಸಹಾಯಕ್ಕಾಗಿ ಯಾರೂ ಇಲ್ಲದವ್ರನ್ನ ರಕ್ಷಿಸ್ತಾನೆ. 13  ದೀನರ ಮೇಲೆ, ಬಡಬಗ್ಗರ ಮೇಲೆ ಅವನಿಗೆ ಕನಿಕರ ಇರುತ್ತೆ,ಬಡವರ ಜೀವವನ್ನ ಕಾಪಾಡ್ತಾನೆ. 14  ಅವನು ಅವ್ರನ್ನ ದಬ್ಬಾಳಿಕೆಯಿಂದ, ಹಿಂಸೆಯಿಂದ ತಪ್ಪಿಸ್ತಾನೆ,ಅವನ ದೃಷ್ಟಿಯಲ್ಲಿ ಅವ್ರ ರಕ್ತ ತುಂಬ ಅಮೂಲ್ಯ. 15  ರಾಜ ಹೆಚ್ಚು ವರ್ಷ ಬದುಕಿ ಬಾಳಲಿ, ಶೆಬದ ಬಂಗಾರ ಅವನಿಗೆ ಸಿಗಲಿ.+ ಅವನಿಗಾಗಿ ಜನ್ರು ತಪ್ಪದೆ ಪ್ರಾರ್ಥನೆ ಮಾಡಲಿ,ದಿನವೆಲ್ಲ ಅವನನ್ನ ಆಶೀರ್ವಾದ ಮಾಡಲಿ. 16  ಭೂಮಿ ಮೇಲೆ ಬೆಳೆ ಸಮೃದ್ಧವಾಗಿ ಇರುತ್ತೆ,+ಪರ್ವತ ಶಿಖರಗಳ ಮೇಲೆ ಧಾನ್ಯ ತುಂಬಿತುಳುಕುತ್ತೆ. ಲೆಬನೋನಿನ ಮರಗಳ ಹಾಗೆ ಅವನ ಹೊಲದ ಫಸಲು ಚೆನ್ನಾಗಿರುತ್ತೆ,+ಭೂಮಿಯ ಹುಲ್ಲಿನ ತರ ಪಟ್ಟಣಗಳಲ್ಲಿ ಜನ್ರು ಜಾಸ್ತಿ ಆಗ್ತಾರೆ.+ 17  ಅವನ ಹೆಸ್ರು ಯಾವಾಗ್ಲೂ ಇರುತ್ತೆ,+ಸೂರ್ಯನಿರೋ ತನಕ ಅವನ ಹೆಸ್ರು ಪ್ರಸಿದ್ಧವಾಗಲಿ. ಅವನಿಂದಾಗಿ ಜನ್ರೆಲ್ಲ ಆಶೀರ್ವಾದಗಳನ್ನ ಪಡಿಲಿ,+ಎಲ್ಲ ಜನಾಂಗಗಳು ಅವನನ್ನ ಭಾಗ್ಯವಂತ ಅಂತ ಕರೀಲಿ. 18  ಇಸ್ರಾಯೇಲ್‌ ದೇವರಾದ ಯೆಹೋವನಿಗೆ ಹೊಗಳಿಕೆ ಸಿಗಲಿ,+ಆತನು ಮಾತ್ರ ಅದ್ಭುತಗಳನ್ನ ಮಾಡ್ತಾನೆ.+ 19  ಗೌರವ ಇರೋ ಆತನ ಹೆಸ್ರಿಗೆ ಸದಾಕಾಲಕ್ಕೂ ಹೊಗಳಿಕೆ ಸಿಗಲಿ,+ಆತನ ಮಹಿಮೆ ಇಡೀ ಭೂಮಿಯನ್ನ ತುಂಬಿಕೊಳ್ಳಲಿ.+ ಆಮೆನ್‌,* ಆಮೆನ್‌. 20  ಇಷಯನ ಮಗ ದಾವೀದನ+ ಪ್ರಾರ್ಥನೆ ಇಲ್ಲಿಗೆ ಮುಗಿಯುತ್ತೆ.

ಪಾದಟಿಪ್ಪಣಿ

ಅಕ್ಷ. “ಮೊಳಕೆ ಒಡಿತಾರೆ.”
ಅದು, ಯೂಫ್ರೆಟಿಸ್‌.
ಅಕ್ಷ. “ಅವನಿಗೆ ಪ್ರಜೆಗಳು ಇರ್ತಾರೆ.”
ಅಥವಾ “ಹಾಗೇ ಆಗಲಿ.”