ಮಾಹಿತಿ ಇರುವಲ್ಲಿ ಹೋಗಲು

ಪ್ರಾಣಿಗಳು ಸತ್ತ ಮೇಲೆ ಸ್ವರ್ಗಕ್ಕೆ ಹೋಗುತ್ತಾ?

ಪ್ರಾಣಿಗಳು ಸತ್ತ ಮೇಲೆ ಸ್ವರ್ಗಕ್ಕೆ ಹೋಗುತ್ತಾ?

ಬೈಬಲ್‌ ಕೊಡೋ ಉತ್ತರ

 ಭೂಮಿಯಲ್ಲಿರೋ ಎಲ್ಲ ಜೀವಿಗಳಲ್ಲಿ ಮನುಷ್ಯರು ಮಾತ್ರ, ಅದ್ರಲ್ಲೂ ಕೇವಲ ಸ್ವಲ್ಪ ಜನ ಮಾತ್ರ ಸ್ವರ್ಗಕ್ಕೆ ಹೋಗ್ತಾರೆ ಅಂತ ಬೈಬಲ್‌ ಕಲಿಸುತ್ತೆ. (ಪ್ರಕಟನೆ 14:1, 3) ಅಲ್ಲಿ ಅವ್ರು ಯೇಸುವಿನ ಜೊತೆ ರಾಜರಾಗಿ ಮತ್ತು ಯಾಜಕರಾಗಿ ಆಳ್ತಾರೆ. (ಲೂಕ 22:28-30; ಪ್ರಕಟನೆ 5:9, 10) ಈಗಾಗಲೇ ಸತ್ತಿರೋರಲ್ಲಿ ಬಹಳಷ್ಟು ಜನ್ರನ್ನ ಇದೇ ಭೂಮಿ ಮೇಲೆ ವಾಸಿಸೋಕೆ ಜೀವಂತ ಎಬಿಸಲಾಗುತ್ತೆ.—ಕೀರ್ತನೆ 37:11, 29.

 ಬೈಬಲ್‌ನಲ್ಲಿ ಎಲ್ಲಿಯೂ ಸಾಕುಪ್ರಾಣಿಗಳು ಅಥವಾ ನಾಯಿ ಸ್ವರ್ಗಕ್ಕೆ ಹೋಗುತ್ತೆ ಅಂತ ಹೇಳಲಿಲ್ಲ. ಅವು ‘ಸ್ವರ್ಗೀಯ ಕರೆಗೆ’ ಯೋಗ್ಯರಾಗೋಕೆ ಬೇಕಾದ ಹೆಜ್ಜೆಗಳನ್ನ ತಗೊಳ್ಳಲು ಆಗಲ್ಲ. (ಇಬ್ರಿಯ 3:1) ಈ ಹೆಜ್ಜೆಗಳಲ್ಲಿ ದೇವರ ಜ್ಞಾನವನ್ನ ಪಡ್ಕೊಳ್ಳೋದು, ಅದನ್ನ ನಂಬೋದು ಮತ್ತು ದೇವರ ಆಜ್ಞೆಗಳನ್ನ ಪಾಲಿಸೋದು ಒಳಗೂಡಿದೆ. (ಮತ್ತಾಯ 19:17; ಯೋಹಾನ 3:16; 17:3) ಕೇವಲ ಮನುಷ್ಯರನ್ನ ಮಾತ್ರ ಶಾಶ್ವತವಾಗಿ ಜೀವಿಸೋ ಉದ್ದೇಶದಿಂದ ಸೃಷ್ಟಿಸಲಾಗಿದೆ.—ಆದಿಕಾಂಡ 2:16, 17; 3:22, 23

 ಸತ್ತ ಪ್ರಾಣಿ ಸ್ವರ್ಗಕ್ಕೆ ಹೋಗಬೇಕಂದ್ರೆ ಪುನರುತ್ಥಾನ ಆಗಲೇಬೇಕು. (1 ಕೊರಿಂಥ 15:42) ಬೈಬಲ್‌ನಲ್ಲಿ ಎಷ್ಟೋ ಸತ್ತವರನ್ನ ಎಬಿಸಿದ್ದರ ಬಗ್ಗೆ ತಿಳಿಸಲಾಗಿದೆ. (1 ಅರಸು 17:17-24; 2 ಅರಸು 4:32-37; 13:20, 21; ಲೂಕ 7:11-15; 8:41, 42, 49-56; ಯೋಹಾನ 11:38-44; ಅಪೊಸ್ತಲರ ಕಾರ್ಯ 9:36-42; 20:7-12) ಆದ್ರೆ ಅದೆಲ್ಲ ಮನುಷ್ಯರು ಹೊರತು ಪ್ರಾಣಿಗಳಲ್ಲ.

 ಪ್ರಾಣಿಗಳು ಸತ್ತ ಮೇಲೆ ಅವುಗಳಿಗೆ ಏನಾಗುತ್ತೆ?

 ಬೈಬಲ್‌ ಪ್ರಕಾರ ಮನುಷ್ಯ ಮತ್ತು ಪ್ರಾಣಿಗಳ ಜೀವ ದೇವರ ದೃಷ್ಟಿಯಲ್ಲಿ ಒಂದೇ ತರ ಇದೆ. (ಅರಣ್ಯಕಾಂಡ 31:28) ಮನುಷ್ಯ ಮತ್ತು ಪ್ರಾಣಿಯನ್ನ ನೆಲದ ಮಣ್ಣಿಂದ ಮಾಡಿ, ಜೀವಶ್ವಾಸವನ್ನ ಕೊಡಲಾಗಿದೆ. (ಆದಿಕಾಂಡ 2:7) ಮನುಷ್ಯ ಅಥವಾ ಪ್ರಾಣಿ ಸತ್ತ ನಂತ್ರ ಸೇರೋದು ಮಣ್ಣಿಗೆ. (ಪ್ರಸಂಗಿ 3:19, 20) ಇನ್ನೊಂದು ರೀತಿ ಹೇಳೋದಾದರೆ ಅಸ್ತಿತ್ವದಲ್ಲಿ ಇರಲ್ಲ. a

 ಪ್ರಾಣಿಗಳು ಪಾಪ ಮಾಡ್ತವಾ?

 ಇಲ್ಲ. ಪಾಪ ಅನ್ನೋದ್ರ ಅರ್ಥ, ದೇವರ ಮಟ್ಟಕ್ಕೆ ವಿರುದ್ಧವಾಗಿ ಯೋಚಿಸೋದು, ಭಾವಿಸೋದು ಮತ್ತು ನಡ್ಕೊಳ್ಳೋದಾಗಿದೆ. ಒಂದು ಪ್ರಾಣಿಯಲ್ಲಿ ಒಳ್ಳೇದು ಕೆಟ್ಟದು ನಿರ್ಧರಿಸೋ ಸಾಮರ್ಥ್ಯ ಇದ್ರೆ ಮಾತ್ರ ಪಾಪ ಮಾಡೋ ಸಾಧ್ಯತೆ ಇದೆ. ಆದ್ರೆ ಪ್ರಾಣಿಗಳಲ್ಲಿ ಈ ಸಾಮರ್ಥ್ಯ ಇಲ್ಲ. ಅವುಗಳು ಬದುಕಿರೋ ತನಕ ತಮ್ಮ ಸಹಜ ಜ್ಞಾನ ಅಥವಾ ಸ್ವಭಾವಕನುಸಾರ ನಡ್ಕೊಳ್ತವೆ. (2 ಪೇತ್ರ 2:12) ಅವುಗಳು ಪಾಪ ಮಾಡದಿದ್ರೂ ಸಾಯುತ್ತವೆ.

 ಪ್ರಾಣಿಗಳ ಜೊತೆ ಕ್ರೂರವಾಗಿ ನಡ್ಕೊಳ್ಳೋದು ಸರಿನಾ?

 ಸರಿಯಲ್ಲ. ದೇವರು ಮನುಷ್ಯರಿಗೆ ಪ್ರಾಣಿಗಳ ಮೇಲೆ ಅಧಿಕಾರ ಕೊಟ್ಟಿದ್ದಾನೆ. ಆದ್ರೆ ಅದ್ರ ಅರ್ಥ ಪ್ರಾಣಿಗಳ ಜೊತೆ ಕ್ರೂರವಾಗಿ ನಡ್ಕೊಳ್ಳಬೇಕು ಅಂತಲ್ಲ. (ಆದಿಕಾಂಡ 1:28; ಕೀರ್ತನೆ 8:6-8) ದೇವರು ಪ್ರತಿಯೊಂದು ಪ್ರಾಣಿಗಳನ್ನ ನೋಡ್ಕೊಳ್ತಾನೆ. ಅದು ಚಿಕ್ಕ ಪಕ್ಷಿ ಆದ್ರೂ ಸಹ ಅದನ್ನ ನೋಡ್ಕೊಳ್ತಾನೆ. (ಯೋನ 4:11; ಮತ್ತಾಯ 10:29) ದೇವರು ತನ್ನ ಆರಾಧನೆ ಮಾಡೋರಿಗೆ ಪ್ರಾಣಿಗಳ ಜೊತೆ ಸರಿಯಾಗಿ ನಡ್ಕೊಳ್ಳಬೇಕು ಅಂತ ಆಜ್ಞೆ ಕೊಟ್ಟಿದ್ದಾನೆ.—ವಿಮೋಚನಕಾಂಡ 23:12; ಧರ್ಮೋಪದೇಶಕಾಂಡ 25:4; ಜ್ಞಾನೋಕ್ತಿ 12:10.

a ಹೆಚ್ಚಿನ ಮಾಹಿತಿಗಾಗಿ ಬೈಬಲ್‌ ನಮಗೆ ಏನು ಕಲಿಸುತ್ತದೆ? ಪುಸ್ತಕದ ಅಧ್ಯಾಯ 6 ರನ್ನ ನೋಡಿ.