ಜ್ಞಾನೋಕ್ತಿ 12:1-28

  • ತಿದ್ದುವವನನ್ನ ದ್ವೇಷಿಸುವವನು ಮೂರ್ಖ (1)

  • “ಯೋಚ್ನೆ ಮಾಡ್ದೆ ಹೇಳೋ ಮಾತುಗಳು ಕತ್ತಿ ತಿವಿದ ಹಾಗಿರುತ್ತೆ” (18)

  • ಶಾಂತಿ ಸಮಾಧಾನವನ್ನ ಹೆಚ್ಚಿಸುವವರು ಖುಷಿಖುಷಿಯಾಗಿ ಇರ್ತಾರೆ (20)

  • ಸುಳ್ಳು ಹೇಳೋ ನಾಲಿಗೆ ಯೆಹೋವನಿಗೆ ಅಸಹ್ಯ (22)

  • ಚಿಂತೆ ಇದ್ರೆ ಹೃದಯ ಬಾಡುತ್ತೆ (25)

12  ಶಿಸ್ತನ್ನ ಪ್ರೀತಿಸುವವನು ಜ್ಞಾನವನ್ನ ಪ್ರೀತಿಸ್ತಾನೆ,+ತಿದ್ದುವವನನ್ನ ದ್ವೇಷಿಸುವವನು ಮೂರ್ಖ.+   ಒಳ್ಳೇ ವ್ಯಕ್ತಿ ಯೆಹೋವನ ಮೆಚ್ಚುಗೆ ಪಡಿತಾನೆ,ಸಂಚು ಮಾಡುವವನನ್ನ ದೂರ ಮಾಡ್ತಾನೆ.+   ಕೆಟ್ಟ ಕೆಲಸ ಮಾಡೋ ಯಾವನೂ ಉಳಿಯಲ್ಲ,+ಆದ್ರೆ ನೀತಿವಂತರು ಬೇರು ಸಮೇತ ಕಿತ್ತುಹಾಕೋಕೆ ಆಗದ ಮರದ ಹಾಗೆ ಇರ್ತಾರೆ.   ಸಮರ್ಥ ಹೆಂಡತಿ ತನ್ನ ಗಂಡನಿಗೆ ಕಿರೀಟ ಇದ್ದ ಹಾಗೆ,+ಮಾನಕಳೆಯೋ ಹೆಂಡತಿ ಗಂಡನ ಮೂಳೆ ಮುರಿದ ಹಾಗೆ.+   ನೀತಿವಂತರ ಆಲೋಚನೆಗಳಲ್ಲಿ ನ್ಯಾಯ ಇರುತ್ತೆ,ಕೆಟ್ಟವರು ಕೊಡೋ ಮಾರ್ಗದರ್ಶನದಲ್ಲಿ ಮೋಸ ಇರುತ್ತೆ.   ಕೆಟ್ಟವ್ರ ಮಾತು ಜೀವ ತೆಗಿಯೋ* ಬಲೆ,+ನೀತಿವಂತರ ಬಾಯಿ ರಕ್ಷಣೆ.+   ಕೆಟ್ಟವರು ನಾಶ ಆದ್ಮೇಲೆ ಯಾವತ್ತೂ ಕಾಣಿಸಲ್ಲ,ಆದ್ರೆ ನೀತಿವಂತರ ಮನೆ ಯಾವಾಗ್ಲೂ ಇರುತ್ತೆ.+   ಒಬ್ಬನ ಮಾತುಗಳಲ್ಲಿ ವಿವೇಚನೆ ಇದ್ರೆ ಜನ ಹೊಗಳ್ತಾರೆ,+ಕೆಟ್ಟ ಹೃದಯ ಇರುವವನನ್ನ ಬೈತಾರೆ.+   ಹೊಟ್ಟೆಗೆ ಇಲ್ಲದಿದ್ರೂ* ಜಂಬ ಕೊಚ್ಕೊಳ್ಳೋ ವ್ಯಕ್ತಿಗಿಂತ,ಸೇವಕನಿರೋ ಸಾಧಾರಣ ವ್ಯಕ್ತಿ ಎಷ್ಟೋ ಮೇಲು.+ 10  ನೀತಿವಂತ ಸಾಕುಪ್ರಾಣಿಗಳನ್ನ ಚೆನ್ನಾಗಿ ನೋಡ್ಕೊಳ್ತಾನೆ,+ಕೆಟ್ಟವನು ಕರುಣೆ ತೋರಿಸಿದ್ರೂ ಕ್ರೂರವಾಗಿ ಇರುತ್ತೆ. 11  ನೆಲ ಉಳುಮೆ ಮಾಡುವವನಿಗೆ ಹೊಟ್ಟೆ ತುಂಬ ಊಟ ಇರುತ್ತೆ,+ಕೆಲಸಕ್ಕೆ ಬಾರದ ವಿಷ್ಯಗಳ ಹಿಂದೆ ಹೋಗುವವನಿಗೆ ಬುದ್ಧಿಯಿಲ್ಲ.* 12  ಕೆಟ್ಟವನು ಲೂಟಿ ಮಾಡಿದ್ದನ್ನ ನೋಡಿ ಕೆಟ್ಟವನಿಗೆ ಹೊಟ್ಟೆ ಉರಿಯುತ್ತೆ,ನೀತಿವಂತ ಚೆನ್ನಾಗಿ ಬೇರು ಬಿಟ್ಟಿರೋ ಮರದ ಹಾಗೆ, ಹಣ್ಣು ಕೊಡ್ತಾನೆ. 13  ಕೆಟ್ಟವನು ತನ್ನ ಪಾಪದ ಮಾತುಗಳಿಂದಾಗಿ ಸಿಕ್ಕಿಹಾಕೊಳ್ತಾನೆ,+ನೀತಿವಂತ ಕಷ್ಟಗಳಿಂದ ತಪ್ಪಿಸ್ಕೊಳ್ತಾನೆ. 14  ಒಬ್ಬ ವ್ಯಕ್ತಿಗೆ ತನ್ನ ಮಾತುಗಳಿಂದಾಗಿ* ಒಳ್ಳೆದಾಗುತ್ತೆ,+ತನ್ನ ಕೆಲಸಗಳಿಂದ ಆಶೀರ್ವಾದ ಸಿಗುತ್ತೆ. 15  ಮೂರ್ಖನಿಗೆ ತನ್ನ ದಾರಿ ಸರಿಯಾಗೇ ಇದೆ ಅಂತ ಅನಿಸುತ್ತೆ,+ವಿವೇಕಿ ಸಲಹೆಯನ್ನ* ಸ್ವೀಕರಿಸ್ತಾನೆ.+ 16  ಮೂರ್ಖ ಕಿರಿಕಿರಿ ಆದ್ರೆ ತಕ್ಷಣ* ತೋರಿಸಿಬಿಡ್ತಾನೆ,+ಜಾಣ ಅವಮಾನ ಆದ್ರೆ ತಲೆ ಕೆಡಿಸ್ಕೊಳ್ಳಲ್ಲ. 17  ನಂಬಿಗಸ್ತಸಾಕ್ಷಿ ಸತ್ಯಾನೇ ಹೇಳ್ತಾನೆ,ಸುಳ್ಳುಸಾಕ್ಷಿ ಸುಳ್ಳೇ ಹೇಳ್ತಾನೆ. 18  ಯೋಚ್ನೆ ಮಾಡ್ದೆ ಹೇಳೋ ಮಾತುಗಳು ಕತ್ತಿ ತಿವಿದ ಹಾಗಿರುತ್ತೆ,ಬುದ್ದಿವಂತನ ಮಾತು ಮದ್ದಿನಂತೆ ಇರುತ್ತೆ.+ 19  ಸತ್ಯವನ್ನ ಹೇಳೋ ತುಟಿಗಳು ಶಾಶ್ವತ,+ಸುಳ್ಳಿನ ನಾಲಿಗೆ ಕ್ಷಣಿಕ.+ 20  ಕೆಟ್ಟದಾಗಬೇಕಂತ ನೆನಸೋ ಮನಸ್ಸಲ್ಲಿ ಮೋಸ ತುಂಬಿರುತ್ತೆ,ಶಾಂತಿ ಸಮಾಧಾನವನ್ನ ಹೆಚ್ಚಿಸುವವರು ಖುಷಿಖುಷಿಯಾಗಿ ಇರ್ತಾರೆ.+ 21  ನೀತಿವಂತನಿಗೆ ಹಾನಿನೇ ಆಗಲ್ಲ,+ಕೆಟ್ಟವನ ಮೇಲೆ ಕೆಟ್ಟದು ಸುರಿಮಳೆ ತರ ಸುರಿಯುತ್ತೆ.+ 22  ಸುಳ್ಳು ಹೇಳೋ ನಾಲಿಗೆ ಯೆಹೋವನಿಗೆ ಅಸಹ್ಯ,+ನಂಬಿಗಸ್ತರನ್ನ ನೋಡಿದ್ರೆ ಆತನಿಗೆ ಖುಷಿ. 23  ಜಾಣ ತನಗೆ ಗೊತ್ತಿರೋದನ್ನೆಲ್ಲ ಹೇಳಿಬಿಡಲ್ಲ,ಮೂರ್ಖನ ಹೃದಯ ತನ್ನ ಮೂರ್ಖತನವನ್ನ ಕಕ್ಕುತ್ತೆ.+ 24  ಕಷ್ಟಪಟ್ಟು ಕೆಲಸ ಮಾಡುವವರು ಆಳ್ತಾರೆ,+ಸೋಮಾರಿಗಳು ಗುಲಾಮರಾಗ್ತಾರೆ.+ 25  ಚಿಂತೆ ಇದ್ರೆ ಹೃದಯ ಬಾಡುತ್ತೆ,*+ಒಳ್ಳೇ ಮಾತಿಗೆ ಮನಸ್ಸು ಅರಳುತ್ತೆ.+ 26  ನೀತಿವಂತ ತನ್ನ ಪ್ರಾಣಿಗಳಿಗಾಗಿ ಹುಲ್ಲುಗಾವಲುಗಳನ್ನ ಜಾಗ್ರತೆಯಿಂದ ಹುಡುಕ್ತಾನೆ,ಕೆಟ್ಟವನ ನಡತೆ ಅವನನ್ನ ದಾರಿತಪ್ಪಿಸುತ್ತೆ. 27  ಮೈಗಳ್ಳ ತನ್ನ ಬೇಟೆ ಹಿಂದೆ ಓಡಲ್ಲ,+ಮೈಬಗ್ಗಿಸಿ ದುಡಿಯುವವನಿಗೆ ಅದೇ ಅಮೂಲ್ಯ ಆಸ್ತಿ. 28  ನೀತಿಯ ದಾರಿ ಜೀವಕ್ಕೆ ನಡಿಸುತ್ತೆ,+ಆ ದಾರಿಯಲ್ಲಿ ಸಾವಿರಲ್ಲ.

ಪಾದಟಿಪ್ಪಣಿ

ಅಕ್ಷ. “ರಕ್ತ ಸುರಿಸೋಕೆ ಕಾಯೋ.”
ಅಕ್ಷ. “ರೊಟ್ಟಿ ಇಲ್ಲದಿದ್ರೂ.”
ಅಕ್ಷ. “ಹೃದಯ ಇಲ್ಲ.”
ಅಕ್ಷ. “ಬಾಯಿಂದಾಗಿ.”
ಅಥವಾ “ಬುದ್ಧಿವಾದವನ್ನ.”
ಅಥವಾ “ಅವತ್ತೇ.”
ಅಥವಾ “ಖಿನ್ನತೆಗೆ ನಡಿಸುತ್ತೆ.”