ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

Maremagnum/Corbis Documentary via Getty Images

ಸದಾ ಎಚ್ಚರವಾಗಿರಿ! 

ಹರ್ಮಗೆದೋನ್‌ ಯುದ್ಧ ಇಸ್ರೇಲ್‌ನಲ್ಲಿ ಶುರುವಾಗುತ್ತಾ?­—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಹರ್ಮಗೆದೋನ್‌ ಯುದ್ಧ ಇಸ್ರೇಲ್‌ನಲ್ಲಿ ಶುರುವಾಗುತ್ತಾ?­—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 ಹರ್ಮಗೆದೋನ್‌ ಯುದ್ಧ ಯಾವುದೋ ಒಂದು ಪ್ರದೇಶದಲ್ಲಿ ನಡೆಯೋ ಯುದ್ಧವಲ್ಲ. ಬದಲಿಗೆ ಅದು ಇಡೀ ಭೂಮಿಯಲ್ಲಿರೋ ಎಲ್ಲಾ ಮಾನವ ಸರ್ಕಾರಗಳ ಮತ್ತು ದೇವರ ಮಧ್ಯೆ ನಡೆಯೋ ಯುದ್ಧ ಅಂತ ಬೈಬಲ್‌ ಹೇಳುತ್ತೆ.

  •   “ಕೆಟ್ಟ ದೇವದೂತರು ಕಳಿಸಿದ ಸಂದೇಶಗಳಾಗಿದ್ವು. . . ಅವು ಸರ್ವಶಕ್ತ ದೇವರ ಮಹಾ ದಿನದಲ್ಲಿ ಆಗೋ ಯುದ್ಧಕ್ಕಾಗಿ ಭೂಮೀಲಿರೋ ಎಲ್ಲ ರಾಜರನ್ನ ಒಟ್ಟುಸೇರಿಸೋಕೆ ಅವ್ರ ಹತ್ರ ಹೋದ್ವು. . . ಒಂದು ಜಾಗದಲ್ಲಿ ಒಟ್ಟು ಸೇರಿಸಿದ್ರು. ಹೀಬ್ರು ಭಾಷೆಯಲ್ಲಿ ಆ ಜಾಗದ ಹೆಸ್ರು ಹರ್ಮಗೆದೋನ್‌.”—ಪ್ರಕಟನೆ 16:14, 16.

 “ಹರ್ಮಗೆದೋನ್‌” ಎಂಬ ಈ ಪದ “ಮೆಗಿದ್ದೋ ಬೆಟ್ಟ” ಅನ್ನೋ ಅರ್ಥವಿರೋ ಹೀಬ್ರು ಪದದಿಂದ ಬಂದಿದೆ. ಮೆಗಿದ್ದೋ ಅನ್ನೋದು ಪುರಾತನ ಇಸ್ರಾಯೇಲಿನ ಒಂದು ಪಟ್ಟಣವಾಗಿತ್ತು. ಅದಕ್ಕೆ ಹರ್ಮಗೆದೋನ್‌ ಯುದ್ಧ ಇಸ್ರಾಯೇಲಿನಲ್ಲಿ ನಡೆಯುತ್ತೆ ಅಂತ ಕೆಲವರು ನಂಬ್ತಾರೆ. ಮೆಗಿದ್ದೋ ಪ್ರದೇಶ ಅಥವಾ ಮಧ್ಯಪ್ರಾಚ್ಯದಲ್ಲಿರೋ (ಮಿಡಲ್‌ ಈಸ್ಟ್‌) ಯಾವುದೇ ಪ್ರದೇಶ “ಭೂಮೀಲಿರೋ ಎಲ್ಲ ರಾಜರನ್ನ” ಅವರ ಸೈನ್ಯಗಳನ್ನ ಮತ್ತು ಯುದ್ಧ ಸಾಮಗ್ರಿಗಳನ್ನ ಹಿಡಿಯುವಷ್ಟು ದೊಡ್ಡ ಜಾಗ ಅಲ್ಲ.

 ಪ್ರಕಟನೆ ಪುಸ್ತಕವನ್ನ ಒಂದು “ಕನಸಿನ ರೂಪದಲ್ಲಿ” ಅಥವಾ ಸಾಂಕೇತಿಕ ಭಾಷೆಯಲ್ಲಿ ಬರೆಯಲಾಗಿದೆ. (ಪ್ರಕಟನೆ 1:1) ಹರ್ಮಗೆದೋನ್‌ ಅನ್ನೋದು ನಿಜವಾದ ಸ್ಥಳವಲ್ಲ. ಆದ್ರೆ ಇದು ಇಡೀ ಲೋಕದಲ್ಲಿರೋ ಒಂದು ಸನ್ನಿವೇಶವನ್ನ ಸೂಚಿಸುತ್ತೆ. ಜನಾಂಗಗಳು ದೇವರ ಸರ್ಕಾರದ ವಿರುದ್ಧ ಹೋರಾಡೋಕೆ ಕೊನೆಯ ಪ್ರಯತ್ನ ಮಾಡಲು ಒಟ್ಟುಸೇರುತ್ತೆ.—ಪ್ರಕಟನೆ 19:11-16, 19-21.