ಯೋಹಾನನಿಗೆ ಕೊಟ್ಟ ಪ್ರಕಟನೆ 3:1-22

  • ಸಾರ್ದಿಸಿನ ಸಭೆಗೆ (1-6), ಫಿಲದೆಲ್ಫಿಯ ಸಭೆಗೆ (7-13), ಲವೊದಿಕೀಯ ಸಭೆಗೆ (14-22) ಕೊಟ್ಟ ಸಂದೇಶ

3  ಸಾರ್ದಿಸಲ್ಲಿರೋ ಸಭೆಯ ದೇವದೂತನಿಗೆ ಹೀಗೆ ಬರಿ: ದೇವರ ಏಳು ಶಕ್ತಿಗಳು,+ ಏಳು ನಕ್ಷತ್ರಗಳು+ ಇರುವವನು ಈ ಮಾತುಗಳನ್ನ ಹೇಳ್ತಿದ್ದಾನೆ. ‘ನಿನ್ನ ಕೆಲಸಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ನೀನು ಹೆಸ್ರಿಗೆ ಮಾತ್ರ ಬದುಕಿದ್ದೀಯ. ಆದ್ರೆ ನಿಜವಾಗ್ಲೂ ಸತ್ತು ಹೋಗಿದ್ದೀಯ.+  ಹಾಗಾಗಿ ನಿದ್ದೆಯಿಂದ ಎದ್ದೇಳು.+ ಇನ್ನೇನು ಸಾಯೋ ಪರಿಸ್ಥಿತಿಯಲ್ಲಿ ಇರುವವ್ರನ್ನ ಬಲಪಡಿಸು. ಯಾಕಂದ್ರೆ ನೀನು ಯಾವ ಕೆಲಸ ಮಾಡಬೇಕಂತ ನನ್ನ ದೇವರು ಇಷ್ಟ ಪಡ್ತಿದ್ದಾನೋ ಅದನ್ನ ನೀನು ಇನ್ನೂ ಪೂರ್ತಿ ಮಾಡಿಲ್ಲ.  ಹಾಗಾಗಿ ನಿನಗೆ ಏನೇನು ಸಿಕ್ಕಿದ್ಯೋ, ಏನೇನು ಕೇಳಿಸ್ಕೊಂಡಿದ್ದೀಯೋ ಅದನ್ನ ನೆನಪಿಗೆ ತಂದ್ಕೊ. ಅದನ್ನ ಪಾಲಿಸು, ತಿದ್ಕೊ.+ ಒಂದುವೇಳೆ ನೀನು ನಿದ್ದೆಯಿಂದ ಎದ್ದೇಳದಿದ್ರೆ ನಾನು ಕಳ್ಳನ ತರ ಬರ್ತಿನಿ.+ ನಾನು ಯಾವಾಗ ಬರ್ತಿನಿ ಅಂತ ನಿನಗೆ ಗೊತ್ತಾಗೋದೇ ಇಲ್ಲ.+  ಆದ್ರೆ ಸಾರ್ದಿಸಲ್ಲಿರೋ ಸ್ವಲ್ಪ ಜನ ತಮ್ಮ ಬಟ್ಟೆ ಗಲೀಜಾಗದೆ ಇರೋ ತರ ನೋಡ್ಕೊಂಡಿದ್ದಾರೆ.+ ಅವರು ಬಿಳಿ ಬಟ್ಟೆ ಹಾಕೊಂಡು ನನ್ನ ಜೊತೆ ನಡಿತಾರೆ.+ ಈ ಗೌರವಕ್ಕೆ ಅವರು ಯೋಗ್ಯರು.  ಗೆಲ್ಲುವವನು+ ಬಿಳಿ ಬಟ್ಟೆ ಹಾಕೊಳ್ತಾನೆ.+ ಅವನ ಹೆಸ್ರನ್ನ ಜೀವದ ಪುಸ್ತಕದಿಂದ+ ನಾನು ಅಳಿಸಿ ಹಾಕಲ್ಲ. ಬದಲಿಗೆ ಅವನು ನನಗೆ ಗೊತ್ತು ಅಂತ ನನ್ನ ಅಪ್ಪನ ಮುಂದೆ, ಆತನ ದೇವದೂತರ ಮುಂದೆ ಒಪ್ಕೊತೀನಿ.+  ಪವಿತ್ರಶಕ್ತಿ ಸಭೆಗಳಿಗೆ ಹೇಳೋದನ್ನ ಕೇಳಿಸ್ಕೊಂಡು ಅರ್ಥ ಮಾಡ್ಕೊಳ್ಳಿ.’  ಫಿಲದೆಲ್ಫಿಯ ಸಭೆಯ ದೇವದೂತನಿಗೆ ಹೀಗೆ ಬರಿ: ಪವಿತ್ರನು,+ ಯಾವಾಗ್ಲೂ ಸತ್ಯಾನೇ ಮಾತಾಡುವವನು,+ ದಾವೀದನ ಬೀಗದ ಕೈ ಇರುವವನು,+ ಯಾರೂ ಮುಚ್ಚದ ಹಾಗೆ ತೆರಿಯುವವನು, ಯಾರೂ ತೆರಿಯದ ಹಾಗೆ ಮುಚ್ಚುವವನು, ಈ ಮಾತುಗಳನ್ನ ಹೇಳ್ತಿದ್ದಾನೆ.  ‘ನಿನ್ನ ಕೆಲಸಗಳ ಬಗ್ಗೆ ನಂಗೊತ್ತು—ನೋಡು, ನಿನ್ನ ಮುಂದೆ ಬಾಗಿಲು ತೆರಿದಿದೆ.+ ಅದನ್ನ ಯಾರೂ ಮುಚ್ಚೋಕೆ ಆಗಲ್ಲ. ನಿನಗೆ ಸ್ವಲ್ಪನೇ ಬಲ ಇದೆ, ನೀನು ನನ್ನ ಆಜ್ಞೆಗಳನ್ನ ಪಾಲಿಸ್ತೀಯ ಮತ್ತು ನೀನು ನನಗೆ ನಂಬಿಗಸ್ತನಾಗಿ ಇರ್ತಿಯ ಅಂತ ನಂಗೊತ್ತು.  ನೋಡು, ಯೆಹೂದ್ಯರು ಅಂತ ಹೇಳ್ಕೊಳ್ತಾ+ ಸುಳ್ಳು ಹೇಳೋ ಸೈತಾನನ ಗುಂಪಿಗೆ ಸೇರಿದವರು ಬಂದು ನಿನ್ನ ಕಾಲಿನ ಮುಂದೆ ಬಗ್ಗಿ ನಮಸ್ಕಾರ ಮಾಡೋ ತರ ಮಾಡ್ತೀನಿ. ನಾನು ನಿನ್ನನ್ನ ಪ್ರೀತಿಸ್ತೀನಿ ಅಂತ ಅವ್ರಿಗೆ ಗೊತ್ತಾಗೋ ತರ ಮಾಡ್ತೀನಿ. 10  ನೀನು ನನ್ನ ಸಹನೆ ಬಗ್ಗೆ ಕೇಳಿಸ್ಕೊಂಡು ಅದ್ರ ತರಾನೇ ನಡ್ಕೊಂಡಿದ್ದೀಯ.*+ ಹಾಗಾಗಿ ಭೂಮಿ ಮೇಲಿರೋ ಎಲ್ರನ್ನ ಪರೀಕ್ಷಿಸೋಕೆ ಲೋಕದ ಮೇಲೆ ಪರೀಕ್ಷೆ ಬರುವಾಗ ನಾನು ನಿನ್ನನ್ನ ಕಾಪಾಡ್ತೀನಿ.+ 11  ನಾನು ಬೇಗ ಬರ್ತಿದ್ದೀನಿ.+ ನಿನ್ನ ಹತ್ರ ಇರೋದನ್ನ ಗಟ್ಟಿಯಾಗಿ ಹಿಡ್ಕೊ. ಆಗ ನಿನ್ನ ಕಿರೀಟವನ್ನ ಯಾರೂ ಕಿತ್ಕೊಳಲ್ಲ.+ 12  ಗೆಲ್ಲೋ ವ್ಯಕ್ತಿನ ನಾನು ನನ್ನ ದೇವರ ಆಲಯದಲ್ಲಿ ಕಂಬವಾಗಿ ಮಾಡ್ತೀನಿ. ಅವನು ಮುಂದೆ ಯಾವತ್ತೂ ಅಲ್ಲಿಂದ ಹೊರಗೆ ಹೋಗಲ್ಲ. ನಾನು ಅವನ ಮೇಲೆ ನನ್ನ ದೇವರ ಹೆಸ್ರನ್ನ,+ ನನ್ನ ದೇವರ ಪಟ್ಟಣ ಅಂದ್ರೆ ಹೊಸ ಯೆರೂಸಲೇಮಿನ+ ಹೆಸ್ರನ್ನ ಬರಿತೀನಿ. ಅದು ಸ್ವರ್ಗದಿಂದ ನನ್ನ ದೇವರ ಹತ್ರದಿಂದ ಇಳಿದು ಬರುತ್ತೆ. ಅಷ್ಟೇ ಅಲ್ಲ ನನ್ನ ಹೆಸ್ರನ್ನ ಅದ್ರ ಮೇಲೆ ಬರಿತೀನಿ.+ 13  ಪವಿತ್ರಶಕ್ತಿ ಸಭೆಗಳಿಗೆ ಹೇಳೋದನ್ನ ಚೆನ್ನಾಗಿ ಕೇಳಿಸ್ಕೊಂಡು ಅರ್ಥಮಾಡ್ಕೊಳ್ಳಿ.’ 14  ಲವೊದಿಕೀಯ+ ಸಭೆಯ ದೇವದೂತನಿಗೆ ಹೀಗೆ ಬರಿ: ಆಮೆನ್‌+ ಅನ್ನೋ ಹೆಸ್ರು ಇರುವವನು, ನಂಬಿಗಸ್ತ ಸತ್ಯ+ ಸಾಕ್ಷಿ+ ಆಗಿರುವವನು ಮತ್ತು ದೇವರು ಮೊದಲು ಸೃಷ್ಟಿ ಮಾಡಿದವನು ಹೀಗೆ ಹೇಳ್ತಿದ್ದಾನೆ,+ 15  ‘ನಿನ್ನ ಕೆಲಸಗಳ ಬಗ್ಗೆ ನನಗೆ ಗೊತ್ತು. ನೀನು ತಣ್ಣಗೂ ಇಲ್ಲ, ಬಿಸಿನೂ ಇಲ್ಲ. ನೀನು ತಣ್ಣಗೆ ಅಥವಾ ಬಿಸಿಯಾಗಿ ಇದ್ದಿದ್ರೆ ಚೆನ್ನಾಗಿ ಇರ್ತಿತ್ತು. 16  ಬಿಸಿನೂ+ ಇಲ್ಲದೆ ತಣ್ಣಗೂ+ ಇಲ್ಲದೆ ಉಗುರುಬೆಚ್ಚಗೆ ಇರೋದ್ರಿಂದ ನಾನು ನನ್ನ ಬಾಯಿಂದ ನಿನ್ನನ್ನ ಉಗಿದುಬಿಡ್ತೀನಿ. 17  “ನಾನು ಶ್ರೀಮಂತ.+ ಆಸ್ತಿಪಾಸ್ತಿ ಮಾಡಿದ್ದೀನಿ. ನನಗೇನೂ ಕಮ್ಮಿ ಇಲ್ಲ” ಅಂತ ನೀನು ಹೇಳ್ತಾ ಇದ್ದೀಯ. ಆದ್ರೆ ನಿನ್ನ ಪರಿಸ್ಥಿತಿ ಹಾಳಾಗಿ ಹೋಗಿದೆ, ನೀನು ಬಡವ, ಕುರುಡ, ಬೆತ್ತಲೆಯಾಗಿ ಇರುವವನು ಅಂತ ನಿನಗೆ ಗೊತ್ತಿಲ್ಲ. 18  ಹಾಗಾಗಿ ನಾನು ನಿನಗೆ ಕೊಡೋ ಸಲಹೆ ಏನಂದ್ರೆ, ಬೆಂಕಿಯಲ್ಲಿ ಶುದ್ಧಮಾಡಿರೋ ಬಂಗಾರವನ್ನ ನನ್ನ ಹತ್ರ ಕೊಂಡ್ಕೊ. ಆಗ ನೀನು ಶ್ರೀಮಂತ ಆಗ್ತೀಯ. ನನ್ನ ಹತ್ರ ಬಿಳಿ ಬಟ್ಟೆಯನ್ನ ಕೊಂಡ್ಕೊ. ಆಗ ನೀನು ಬೆತ್ತಲೆಯಾಗಿ ಇರಲ್ಲ.+ ಬೇರೆಯವ್ರ ಮುಂದೆ ನೀನು ನಾಚಿಕೆಪಡೋ ಅಗತ್ಯ ಇರಲ್ಲ. ಅದೇ ತರ ನಿನ್ನ ಕಣ್ಣಿಗೆ ಹಚ್ಕೊಳ್ಳೋಕೆ ನನ್ನ ಹತ್ರ ಕಾಡಿಗೆ ಕೊಂಡ್ಕೊ.+ ಆಗ ನಿನಗೆ ಕಣ್ಣು ಕಾಣುತ್ತೆ.+ 19  ನಾನು ಯಾರನ್ನ ಪ್ರೀತಿಸ್ತೀನೋ ಅವ್ರನ್ನೇ ತಿದ್ದುತ್ತೀನಿ. ಅವ್ರಿಗೇ ಶಿಸ್ತು ಕೊಡ್ತೀನಿ.+ ಹಾಗಾಗಿ ದೇವರ ಸೇವೇಲಿ ನಿನಗೆ ಹುರುಪು ಇದೆ ಅಂತ ತೋರಿಸು. ನಿನ್ನ ತಪ್ಪು ತಿದ್ಕೊ.+ 20  ನೋಡು, ನಾನು ಬಾಗಿಲ ಹತ್ರ ನಿಂತ್ಕೊಂಡು ತಟ್ತಾ ಇದ್ದೀನಿ. ಯಾರಾದ್ರೂ ನನ್ನ ಧ್ವನಿ ಕೇಳಿಸ್ಕೊಂಡು ಬಾಗಿಲು ತೆಗೆದ್ರೆ, ಒಳಗೆ ಬಂದು ಅವನ ಜೊತೆ ಊಟ ಮಾಡ್ತೀನಿ. ಅವನು ನನ್ನ ಜೊತೆ ಊಟ ಮಾಡ್ತಾನೆ. 21  ನಾನು ಗೆದ್ದು ನನ್ನ ಅಪ್ಪನ ಜೊತೆ ಆತನ ಸಿಂಹಾಸನದ ಮೇಲೆ ಕೂತ ಹಾಗೆ+ ಗೆಲ್ಲೋ+ ವ್ಯಕ್ತಿಗೆ ನನ್ನ ಜೊತೆ ನನ್ನ ಸಿಂಹಾಸನದಲ್ಲಿ+ ಕೂತ್ಕೊಳೋ ಅವಕಾಶ ಕೊಡ್ತೀನಿ. 22  ಪವಿತ್ರಶಕ್ತಿ ಸಭೆಗಳಿಗೆ ಹೇಳೋದನ್ನ ಚೆನ್ನಾಗಿ ಕೇಳಿಸ್ಕೊಂಡು ಅರ್ಥಮಾಡ್ಕೊಳ್ಳಿ.’”

ಪಾದಟಿಪ್ಪಣಿ

ಬಹುಶಃ, “ನನ್ನ ತರಾನೇ ತಾಳ್ಮೆ ತೋರಿಸಿದ್ದೀಯ.”