ಕೀರ್ತನೆ 83:1-18

  • ವಿರೋಧಿಗಳನ್ನ ಎದುರಿಸುವಾಗ ಪ್ರಾರ್ಥನೆ

    • “ದೇವರೇ, ಸುಮ್ಮನಿರಬೇಡ” (1)

    • ಗಿರಗಿರನೇ ತಿರುಗೋ ಮುಳ್ಳಿನ ಪೊದೆ ತರ ಇರೋ ಶತ್ರುಗಳು (13)

    • ದೇವರ ಹೆಸರು ಯೆಹೋವ (18)

ಆಸಾಫನ+ ಮಧುರ ಗೀತೆ. 83  ದೇವರೇ, ಸುಮ್ಮನಿರಬೇಡ,+ಬಲಿಷ್ಠ ದೇವರೇ, ಮೌನವಾಗಿರದೆ* ಹೆಜ್ಜೆ ತಗೊ.   ಯಾಕಂದ್ರೆ ನೋಡು! ನಿನ್ನ ಶತ್ರುಗಳು ಗರ್ಜಿಸ್ತಿದ್ದಾರೆ,+ನಿನ್ನನ್ನ ದ್ವೇಷಿಸೋರು ಜಂಬದಿಂದ ನಡ್ಕೊಳ್ತಿದ್ದಾರೆ.*   ಕಪಟದಿಂದ ನಿನ್ನ ಜನ್ರ ವಿರುದ್ಧ ರಹಸ್ಯವಾಗಿ ಸಂಚು ಮಾಡ್ತಾರೆ,ನಿನ್ನ ಅಮೂಲ್ಯ* ಜನ್ರ ವಿರುದ್ಧ ಪಿತೂರಿ ನಡಿಸ್ತಾರೆ.   “ಬನ್ನಿ, ಇಸ್ರಾಯೇಲ್‌ ಜನಾಂಗದ ಹೆಸ್ರನ್ನ ಯಾರೂ ನೆನಪಿಸ್ಕೊಳ್ಳದ ಹಾಗೆ,ಆ ಇಡೀ ಜನಾಂಗನ ಸರ್ವನಾಶ ಮಾಡೋಣ”+ ಅಂತ ಹೇಳ್ತಿದ್ದಾರೆ.   ಅವ್ರೆಲ್ಲ ಒಂದಾಗಿ ಬಂದು ಸೈನ್ಯ ಕಟ್ತಿದ್ದಾರೆ,ನಿನ್ನ ವಿರುದ್ಧ ಯುದ್ಧಮಾಡೋಕೆ ಅವರು ತಮ್ಮತಮ್ಮಲ್ಲೇ ಒಪ್ಪಂದ* ಮಾಡ್ಕೊಂಡಿದ್ದಾರೆ.+   ಡೇರೆಯಲ್ಲಿ ವಾಸಿಸೋ ಎದೋಮ್ಯರು, ಇಷ್ಮಾಯೇಲ್ಯರು, ಮೋವಾಬ್ಯರು,+ ಹಗ್ರೀಯರು,+   ಗೆಬಲ್ಯರು, ಅಮ್ಮೋನಿಯರು,+ ಅಮಾಲೇಕ್ಯರು,ಫಿಲಿಷ್ಟಿಯರು+ ಮತ್ತು ತೂರಿನ+ ನಿವಾಸಿಗಳು.   ಇವ್ರ ಜೊತೆ ಅಶ್ಶೂರ್ಯರೂ+ ಸೇರಿಕೊಂಡಿದ್ದಾರೆ,ಅವರು ಲೋಟನ ಮಕ್ಕಳಿಗೆ+ ಸಹಕಾರ ಕೊಡ್ತಿದ್ದಾರೆ.* (ಸೆಲಾ)   ನೀನು ಮಿದ್ಯಾನ್ಯರಿಗೆ ಮಾಡಿದ ಹಾಗೆ,+ಕೀಷೋನ್‌ ತೊರೆ ಹತ್ರ ಇರೋ ಸೀಸೆರನಿಗೆ ಮತ್ತು ಯಾಬೀನನಿಗೆ ಮಾಡಿದ ಹಾಗೆ ಇವ್ರಿಗೂ ಮಾಡು.+ 10  ಅವರು ಎಂದೋರಲ್ಲಿ ನಾಶ ಆದ್ರು,+ಅವರು ಹೊಲಕ್ಕೆ ಗೊಬ್ಬರ ಆದ್ರು. 11  ಓರೇಬನಿಗೆ ಮತ್ತು ಜೇಬನಿಗೆ ಬಂದ ಗತಿನೇ ಅವ್ರ ಪ್ರಧಾನರಿಗೂ ಬರಲಿ.+ ಜೆಬಹನಿಗೆ ಮತ್ತು ಚಲ್ಮುನ್ನನಿಗೆ ಆದ ಗತಿನೇ ಅವ್ರ ಅಧಿಕಾರಿಗಳಿಗೂ* ಆಗಲಿ.+ 12  ಯಾಕಂದ್ರೆ ಅವರು “ಬನ್ನಿ, ದೇವರು ವಾಸಿಸೋ ದೇಶನ ಆಸ್ತಿಯಾಗಿ ಪಡ್ಕೊಳ್ಳೋಣ” ಅಂತ ಹೇಳ್ತಿದ್ರು. 13  ನನ್ನ ದೇವರೇ, ಅವ್ರನ್ನ ಗಿರಗಿರನೇ ತಿರುಗೋ ಮುಳ್ಳಿನ ಪೊದೆ ತರ ಮಾಡು,+ಗಾಳಿಗೆ ತೂರಿಹೋಗೋ ಹೊಟ್ಟಿನ ತರ ಮಾಡು. 14  ಹೇಗೆ ಬೆಂಕಿ ಕಾಡನ್ನ ಸುಟ್ಟು ಹಾಕುತ್ತೋ,ಹೇಗೆ ಜ್ವಾಲೆ ಪರ್ವತಗಳನ್ನ ದಹಿಸಿಬಿಡುತ್ತೋ,+ 15  ಹಾಗೇ ನೀನು, ನಿನ್ನ ಚಂಡಮಾರುತದಿಂದ ಅವ್ರನ್ನ ಅಟ್ಟಿಸ್ಕೊಂಡು ಹೋಗು+ ನಿನ್ನ ಸುಂಟರಗಾಳಿಯಿಂದ ಅವ್ರನ್ನ ಹೆದರಿಸು.+ 16  ಯೆಹೋವನೇ, ಅವರು ನಿನ್ನ ಹೆಸ್ರನ್ನ ಹುಡುಕೋ ತರ,ಅವ್ರ ಮುಖಗಳನ್ನ ಅವಮಾನದಿಂದ ಮುಚ್ಚು.* 17  ಅವರು ಶಾಶ್ವತವಾಗಿ ನಾಚಿಕೆಪಡಲಿ, ಯಾವಾಗ್ಲೂ ಭಯಪಡಲಿ,ಅವ್ರಿಗೆ ಅವಮಾನ ಆಗಲಿ, ನಾಶವಾಗಿ ಹೋಗಲಿ. 18  ಯೆಹೋವ ಅನ್ನೋ ಹೆಸ್ರಿರೋ ನೀನೊಬ್ಬನೇ+ಇಡೀ ಭೂಮಿಯಲ್ಲಿ ಸರ್ವೋನ್ನತ ದೇವರು ಅಂತ ಎಲ್ರಿಗೂ ಗೊತ್ತಾಗಲಿ.+

ಪಾದಟಿಪ್ಪಣಿ

ಅಥವಾ “ಮೂಕನಾಗಿರದೆ.”
ಅಥವಾ “ತಮ್ಮ ತಲೆಯನ್ನ ಎತ್ತಿದ್ದಾರೆ.”
ಅಕ್ಷ. “ನೀನು ಬಚ್ಚಿಟ್ಟಿರೋ.”
ಅಥವಾ “ಮೈತ್ರಿ.”
ಅಕ್ಷ. “ಭುಜವಾಗಿದ್ದಾರೆ.”
ಅಥವಾ “ನಾಯಕರಿಗೂ.”
ಅಕ್ಷ. “ತುಂಬಿಸು.”