ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

2 ನಮ್ಮ ಕಷ್ಟಗಳಿಗೆ ನಾವೇ ಕಾರಣನಾ?

2 ನಮ್ಮ ಕಷ್ಟಗಳಿಗೆ ನಾವೇ ಕಾರಣನಾ?

ಈ ಪ್ರಶ್ನೆಗೆ ಉತ್ತರ ತಿಳುಕೊಳ್ಳೋದು ಯಾಕೆ ಮುಖ್ಯ

ಒಂದು ವೇಳೆ ಕಷ್ಟಗಳಿಗೆ ನಾವೇ ಕಾರಣರಾದ್ರೆ ಅದನ್ನ ಕಮ್ಮಿ ಮಾಡೋಕೂ ನಮ್ಮ ಕೈಲಿ ಆಗಬಹುದು.

ನೀವೇ ಯೋಚಿಸಿ . . .

ಕೆಳಗಿನ ಕಷ್ಟ ಸಮಸ್ಯೆಗಳಲ್ಲಿ ಮನುಷ್ಯರ ಕೈವಾಡ ಎಷ್ಟರ ಮಟ್ಟಿಗೆ ಇದೆ?

  • ದೌರ್ಜನ್ಯ.

    25% ಜನ ತಮ್ಮ ಬಾಲ್ಯದ ಯಾವುದಾದ್ರು ಒಂದು ಹಂತದಲ್ಲಿ ಶಾರೀರಿಕ ದೌರ್ಜನ್ಯಕ್ಕೆ ಒಳಗಾಗಿರುತ್ತಾರೆ ಮತ್ತು 33.33% ಸ್ತ್ರೀಯರು ತಮ್ಮ ಜೀವನದ ಯಾವುದಾದ್ರು ಒಂದು ಹಂತದಲ್ಲಿ ಶಾರೀರಿಕ ಅಥವಾ ಲೈಂಗಿಕ ದೌರ್ಜನ್ಯನಾ (ಕೆಲವೊಮ್ಮೆ ಎರಡನ್ನೂ) ಅನುಭವಿಸಿರುತ್ತಾರೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಅಂದಾಜು ಮಾಡಿದೆ.

  • ಸಾವಿನ ನೋವು.

    ವಿಶ್ವ ಆರೋಗ್ಯ ಸಂಸ್ಥೆಯ ಒಂದು ವರದಿಯ ಪ್ರಕಾರ “ಇಸವಿ 2016 ರಲ್ಲೇ ಇಡೀ ಲೋಕದಲ್ಲಿ ಸುಮಾರು 4,77,000ದಷ್ಟು ಕೊಲೆಗಳು ನಡೆದಿವೆ.” ಇದರ ಜೊತೆ ಅದೇ ವರ್ಷದಲ್ಲಿ 1,80,000ದಷ್ಟು ಜನ ಯುದ್ಧ, ಜಗಳದಿಂದ ಸಾವಿಗೆ ತುತ್ತಾಗಿದ್ದಾರೆ.

  • ಆರೋಗ್ಯ ಸಮಸ್ಯೆ.

    ನೂರು ಕೋಟಿಗಿಂತ ಹೆಚ್ಚು ಜನರು ಬೀಡಿ, ಸಿಗರೇಟ್‌ ಸೇದುತ್ತಾರೆ. ಇದ್ರಿಂದ ಲಂಗ್‌ ಕ್ಯಾನ್ಸರ್‌, ಹೃದಯ ರೋಗ, ಲಕ್ವಗಳಂಥ ಗಂಭೀರ ಕಾಯಿಲೆಗಳಿಗೆ ಅವರು ತುತ್ತಾಗಿದ್ದಾರೆ ಅಂತ ನ್ಯಾಷನಲ್‌ ಜಿಯಾಗ್ರಫಿಕ್‌ ಪತ್ರಿಕೆಯಲ್ಲಿ ಬಂದ ಒಂದು ಲೇಖನದಲ್ಲಿ ಫ್ರಾನ್‌ ಸ್ಮಿತ್‌ ಬರೆದಿದ್ದಾರೆ.

  • ಜನರ ಮಧ್ಯೆ ಅಸಮಾನತೆ.

    ಇಂದು ಜನರಲ್ಲಿ ಆತಂಕ, ಮಾನಸಿಕ ಒತ್ತಡ ಜಾಸ್ತಿ ಆಗೋದಕ್ಕೆ ಬಡತನ, ಜಾತಿ-ಕುಲ ಗಂಡು-ಹೆಣ್ಣು ಅನ್ನೋ ಬೇಧಭಾವ, ಧಿಡೀರ್‌ ಅಂತ ತಮ್ಮ ಊರು ಬಿಟ್ಟು ಬೇರೆ ಕಡೆ ಹೋಗೋ ಪರಿಸ್ಥಿತಿ, ಜನರಲ್ಲಿರೋ ಪೈಪೋಟಿ ಮನೋಭಾವಗಳೇ ಕಾರಣ ಅಂತ ಜೇ ವಾಟ್ಸ್‌ ಅನ್ನೋ ಸೈಕಾಲಜಿಷ್ಟ್‌ ಹೇಳುತ್ತಾರೆ.

    ಹೆಚ್ಚಿನ ಮಾಹಿತಿ ಪಡೆಯಿರಿ

    jw.orgಯಲ್ಲಿ ದೇವರು ಭೂಮಿಯನ್ನು ಯಾಕೆ ಸೃಷ್ಟಿಸಿದನು? ಅನ್ನೋ ವಿಡಿಯೋ ನೋಡಿ.

ಬೈಬಲ್‌ ಏನು ಹೇಳುತ್ತೆ

ಲೋಕದಲ್ಲಿ ಇರೋ ಅನೇಕ ಕಷ್ಟಗಳಿಗೆ ಮನುಷ್ಯರೇ ಕಾರಣ.

ಹೆಚ್ಚಿನ ಕಷ್ಟಗಳಿಗೆ ಮಾನವ ಸರ್ಕಾರಗಳೇ ಕಾರಣ. ಅವರು ಆಳ್ವಿಕೆ ನಡೆಸೋ ರೀತಿಯಿಂದ ಪ್ರಜೆಗಳು ಕಷ್ಟಗಳನ್ನ ಅನುಭವಿಸುತ್ತಿದ್ದಾರೆ.

‘ಮಾನವನು ಮತ್ತೊಬ್ಬ ಮಾನವನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನು ಉಂಟುಮಾಡುತ್ತಿದ್ದಾನೆ.’ಪ್ರಸಂಗಿ 8:9.

ಕಷ್ಟಗಳನ್ನು ಕಮ್ಮಿ ಮಾಡಬಹುದು.

ಬೈಬಲ್‌ ಸಲಹೆಗಳನ್ನ ಪಾಲಿಸಿದ್ರೆ ಒಳ್ಳೇ ಆರೋಗ್ಯ ಇರುತ್ತೆ ಮತ್ತು ಜನರೊಂದಿಗೆ ಸ್ನೇಹ ಸಂಬಂಧನೂ ಚೆನ್ನಾಗಿರುತ್ತೆ.

‘ಶಾಂತಿಗುಣ ದೇಹಕ್ಕೆ ಜೀವಾಧಾರ; ಕ್ರೋಧ ಎಲುಬಿಗೆ ಕ್ಷಯ.’ಜ್ಞಾನೋಕ್ತಿ 14:30.

“ಎಲ್ಲ ದ್ವೇಷಭರಿತ ವೈಷಮ್ಯ, ಕೋಪ, ಕ್ರೋಧ, ಕಿರಿಚಾಟ ಮತ್ತು ನಿಂದಾತ್ಮಕ ಮಾತುಗಳನ್ನು ಸಕಲ ವಿಧವಾದ ಕೆಟ್ಟತನದೊಂದಿಗೆ ನಿಮ್ಮಿಂದ ತೆಗೆದುಹಾಕಿರಿ.”ಎಫೆಸ 4:31.