ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

4 ಕಷ್ಟಪಡಬೇಕು ಅಂತನೇ ದೇವರು ನಮ್ಮನ್ನ ಸೃಷ್ಟಿಸಿದ್ನಾ?

4 ಕಷ್ಟಪಡಬೇಕು ಅಂತನೇ ದೇವರು ನಮ್ಮನ್ನ ಸೃಷ್ಟಿಸಿದ್ನಾ?

ಈ ಪ್ರಶ್ನೆಗೆ ಉತ್ತರ ತಿಳುಕೊಳ್ಳೋದು ಯಾಕೆ ಮುಖ್ಯ

ಉತ್ತರ ತಿಳುಕೊಂಡ್ರೆ ಬಾಳಿಗೊಂದು ಹೊಸ ನೋಟ, ಹೊಸ ದಾರಿ ಸಿಗುತ್ತೆ.

ನೀವೇ ಯೋಚಿಸಿ . . .

ಭೂಮಿನಾ ಇಷ್ಟು ಸುಂದರವಾಗಿ ಸೃಷ್ಟಿಸಿ ಅದ್ರಲ್ಲಿ ಕಷ್ಟಪಡಿ ಅಂತ ದೇವರು ಬಿಡುತ್ತಾನಾ?

ದೇವರಿಗೆ ನಮ್ಮ ಬಗ್ಗೆ ಕಾಳಜಿನೇ ಇಲ್ಲ ಅದಕ್ಕೆ ಇಷ್ಟೊಂದು ಕಷ್ಟಗಳಿವೆ ಅಂತ ದೇವರಲ್ಲಿ ನಂಬಿಕೆ ಇಲ್ಲದವರು ಹೇಳ್ತಾರೆ. ಅವರ ಪ್ರಕಾರ ಕಷ್ಟಗಳಿರೋದು (1) ದೇವರಿಗೆ ಅದನ್ನು ತಡೆಯೋ ಶಕ್ತಿ ಇಲ್ಲ, (2) ದೇವರಿಗೆ ಕಷ್ಟಗಳನ್ನು ತಡೆಯೋಕೆ ಇಷ್ಟ ಇಲ್ಲ ಅಥವಾ (3) ದೇವರೇ ಇಲ್ಲ ಅನ್ನೋದನ್ನ ತೋರಿಸುತ್ತೆ.

ಜನರು ಕಷ್ಟಪಡೋಕೆ ನಿಜವಾಗಲು ಇವೇ ಕಾರಣಗಳಾ?

ಹೆಚ್ಚಿನ ಮಾಹಿತಿ ಪಡೆಯಿರಿ

jw.orgಯಲ್ಲಿ ಬೈಬಲ್‌ನಲ್ಲಿರುವ ವಿಷಯಗಳು ಸತ್ಯವೆಂದು ನಾವು ಹೇಗೆ ನಂಬಬಹುದು? ಅನ್ನೋ ವಿಡಿಯೋ ನೋಡಿ.

ಬೈಬಲ್‌ ಏನು ಹೇಳುತ್ತೆ

ನಾವು ಕಷ್ಟಪಡಬೇಕು ಅಂತ ದೇವರು ನಮ್ಮನ್ನ ಸೃಷ್ಟಿಸಲಿಲ್ಲ.

ನಾವು ಜೀವನದಲ್ಲಿ ಸಂತೋಷವಾಗಿರಬೇಕು ಅನ್ನೋದೇ ದೇವರ ಇಷ್ಟ.

“ಮನುಷ್ಯರು ತಮ್ಮ ಜೀವಮಾನದಲ್ಲೆಲ್ಲಾ ಉಲ್ಲಾಸವಾಗಿ ಸುಖವನ್ನನುಭವಿಸುವದಕ್ಕಿಂತ ಇನ್ನೇನೂ ಅವರಿಗೆ ಮೇಲಿಲ್ಲ . . . ಇದಲ್ಲದೆ ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ನಾನಾ ಪ್ರಯಾಸಗಳಲ್ಲಿಯೂ ಸುಖವನ್ನನುಭವಿಸುವದು ದೇವರ ಅನುಗ್ರಹವೇ.”ಪ್ರಸಂಗಿ 3:12, 13.

ದೇವರು ಮೊದಲ ಮಾನವ ದಂಪತಿಗೆ ಕಷ್ಟವಿಲ್ಲದ ಜೀವನ ಕೊಟ್ಟನು.

ಅವರು ಅವರ ಮಕ್ಕಳು ಸಂತೋಷವಾಗಿರಬೇಕು ಅನ್ನೋದು ದೇವರ ಇಷ್ಟ ಆಗಿತ್ತು.

“ದೇವರು ಅವರನ್ನು ಆಶೀರ್ವದಿಸಿ—ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ . . . ಅಂದನು.”ಆದಿಕಾಂಡ 1:28.

ಮೊದಲ ಮಾನವ ದಂಪತಿ ದೇವರ ಮಾತನ್ನ ಕೇಳಲಿಲ್ಲ.

ಇದ್ರಿಂದ ಅವರಿಗಷ್ಟೇ ಅಲ್ಲ ಅವರ ಇಡೀ ವಂಶದವರಿಗೂ ಕಷ್ಟಗಳು ಬಂತು.

“ಒಬ್ಬ ಮನುಷ್ಯನಿಂದ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿದಂತೆಯೇ, ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು.”ರೋಮನ್ನರಿಗೆ 5:12. *

ದೇವರ ಸಹಾಯ ಇಲ್ಲದೆ ಜೀವಿಸೋ ಸಾಮರ್ಥ್ಯ ಮಾನವರಿಗೆ ಇಲ್ಲ.

ಮಾನವರಿಗೆ ನೀರಿನೊಳಗೆ ಜೀವಿಸೋ ಸಾಮರ್ಥ್ಯನಾ ದೇವರು ಹೇಗೆ ಕೊಡಲಿಲ್ಲವೋ ಹಾಗೇ ಇನ್ನೊಬ್ಬ ಮನುಷ್ಯನ ಮೇಲೆ ಆಳ್ವಿಕೆ ನಡೆಸೋ ಸಾಮರ್ಥ್ಯನೂ ಕೊಡಲಿಲ್ಲ.

“ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.”ಯೆರೆಮೀಯ 10:23.

ನಾವು ಕಷ್ಟಪಡೋದು ದೇವರಿಗೆ ಇಷ್ಟ ಇಲ್ಲ.

ಅದಕ್ಕೆ ಅಂತನೇ ಕಷ್ಟಗಳಿಂದ ತಪ್ಪಿಸಿಕೊಳ್ಳೋಕೆ ಸಲಹೆಗಳನ್ನು ಕೊಡುತ್ತಾನೆ. ದೇವರು ಹೇಳುವುದು:

‘ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು ದೊಡ್ಡ ನದಿಯಂತೆ . . . ಇರುತ್ತಿತ್ತು.’ಯೆಶಾಯ 48:18.

^ ಪ್ಯಾರ. 17 ಬೈಬಲಿನಲ್ಲಿ “ಪಾಪ” ಅನ್ನೋ ಪದನಾ ಕೆಟ್ಟ ಕೆಲಸಗಳನ್ನು ಸೂಚಿಸಲು ಮಾತ್ರ ಅಲ್ಲ ಎಲ್ಲಾ ಮಾನವರು ಪಾರಂಪರ್ಯವಾಗಿ ಪಡೆದ ಸ್ವಭಾವನಾ ಸೂಚಿಸಲು ಸಹ ಉಪಯೋಗಿಸಲಾಗಿದೆ.