ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೆಲವರ ನಂಬಿಕೆ ಏನು

ಕೆಲವರ ನಂಬಿಕೆ ಏನು

ಹಿಂದುಗಳು

ಹಿಂದುಗಳಿಗೆ ಪುನರ್ಜನ್ಮದಲ್ಲಿ ಅಪಾರ ನಂಬಿಕೆ ಇದೆ. ಮನುಷ್ಯರಿಗೆ ಬರೋ ಕಷ್ಟಗಳಿಗೆ ಹೋದ ಜನ್ಮದಲ್ಲಿ ಮಾಡಿರೋ ಪಾಪನೇ ಕಾರಣ ಅಂತ ಹೇಳುತ್ತಾರೆ. ಈ ಜೀವನದ ಆಸೆ ಬಯಕೆಗಳನ್ನೆಲ್ಲಾ ತ್ಯಾಗ ಮಾಡಿದ್ರೆ ಮೋಕ್ಷ ಸಿಗುತ್ತೆ ಅಂದ್ರೆ ಪುನರ್ಜನ್ಮಗಳ ಚಕ್ರದಿಂದ ಮುಕ್ತಿ ಸಿಗುತ್ತೆ ಅಂತಾರೆ.

ಮುಸ್ಲಿಮರು

ಮುಸ್ಲಿಮರು ದೇವರು ಜನರ ನಂಬಿಕೆನಾ ಪರೀಕ್ಷಿಸಲು ಕಷ್ಟಗಳನ್ನು ಕೊಡುತ್ತಾನೆ ಅಂತ ಹೇಳುತ್ತಾರೆ. “ನಾವು ಯಾವಾಗಲೂ ದೇವರು ಕೊಡೋ ಎಲ್ಲಾ ಆಶೀರ್ವಾದಗಳಿಗಾಗಿ ಕೃತಜ್ಞರಾಗಿರಬೇಕು ಮತ್ತು ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡಬೇಕು” ಅನ್ನೋದನ್ನ ಕಷ್ಟಗಳು ನೆನಪಿಸುತ್ತವೆ ಅಂತ ಇಸ್ಲಾಮಿಕ್‌ ಸೊಸೈಟಿ ಆಫ್‌ ನಾರ್ತ್‌ ಅಮೆರಿಕದ ಅಧ್ಯಕ್ಷರಾದ ಡಾ. ಸಯ್ಯದ್‌ ಸಯೀದ್‌ ಹೇಳುತ್ತಾರೆ.

ಯೆಹೂದಿಗಳು

ಯೆಹೂದಿಗಳು ಕಷ್ಟಗಳಿಗೆ ಮನುಷ್ಯರು ಮಾಡೋ ಕೆಟ್ಟ ಕೆಲಸಗಳೇ ಕಾರಣ ಅಂತ ನಂಬುತ್ತಾರೆ. ಕೆಲವು ಯೆಹೂದಿಗಳು ಕಷ್ಟಗಳನ್ನ ಅನುಭವಿಸುತ್ತಿರೋ ಒಳ್ಳೇ ಜನರಿಗೆ ನ್ಯಾಯ ಸಿಗೋದು ಪುನರುತ್ಥಾನ ಆದಾಗ ಅಂದ್ರೆ ಅವ್ರು ಸತ್ತು ಮತ್ತೆ ಎದ್ದು ಬಂದಾಗ ಅಂತ ಹೇಳುತ್ತಾರೆ. ಇನ್ನು ಕೆಲವು ಯೆಹೂದಿಗಳು ಪುನರ್ಜನ್ಮನಾ ನಂಬುತ್ತಾರೆ. ಒಂದು ಜನ್ಮದಲ್ಲಿ ತಮ್ಮ ತಪ್ಪುಗಳನ್ನು ತಿದ್ದುಕೊಳ್ಳಲು ಆಗಿಲ್ಲ ಅಂದ್ರೆ ಇನ್ನೊಂದು ಜನ್ಮದಲ್ಲಿ ಅದನ್ನು ತಿದ್ದುಕೊಳ್ಳೋ ಅವಕಾಶ ಇದೆ ಅಂತ ಕಲಿಸುತ್ತಾರೆ.

ಬೌದ್ಧರು

ಬೌದ್ಧರು ಸಹ ಪುನರ್ಜನ್ಮನಾ ನಂಬುತ್ತಾರೆ. ಒಬ್ಬ ವ್ಯಕ್ತಿ ತನ್ನ ಕೆಟ್ಟ ಕೆಲಸಗಳನ್ನ, ಕೆಟ್ಟ ಯೋಚನೆಗಳನ್ನ ಬಿಡೋ ತನಕ ಕಷ್ಟಗಳು ಬರ್ತಾನೇ ಇರುತ್ತೆ ಪುನರ್ಜನ್ಮದ ಚಕ್ರ ಓಡ್ತಾನೇ ಇರುತ್ತೆ ಅಂತ ಅವರು ಹೇಳುತ್ತಾರೆ. ಅದೇ ವ್ಯಕ್ತಿ ಒಳ್ಳೇಯವನಾದ್ರೆ ಒಳ್ಳೇ ಕೆಲಸಗಳನ್ನ ಯೋಚನೆಗಳನ್ನ ಮಾಡ್ತಾ ಇದ್ದರೆ ಅವನು ನಿರ್ವಾಣ ಸ್ಥಿತಿಗೆ ಬರುತ್ತಾನೆ ಅಂದ್ರೆ ಅವನ ಕಷ್ಟಗಳೆಲ್ಲ ನಿಂತುಹೋಗುತ್ತೆ ಅಂತ ನಂಬುತ್ತಾರೆ.

ಕನ್ಫ್ಯೂಷಿಯನಿಸ್ಟ್‌ಗಳು

ಕನ್ಫ್ಯೂಷಿಯನಿಸ್ಟ್‌ಗಳು “ಮನುಷ್ಯರ ಅಸಾಮರ್ಥ್ಯ ಮತ್ತು ತಪ್ಪುಗಳೇ” ಕಷ್ಟಗಳಿಗೆ ಕಾರಣ ಅನ್ನೋದನ್ನ ನಂಬುತ್ತಾರೆ ಅಂತ ಅ ಡಿಕ್ಷನರಿ ಆಫ್‌ ಕಂಪೇರಿಟೀವ್‌ ರಿಲೀಜಿಯನ್‌ ಅನ್ನೋ ಪುಸ್ತಕ ಹೇಳುತ್ತೆ. ಕಷ್ಟಗಳು ಕಡಿಮೆ ಆಗಬೇಕಂದ್ರೆ ಒಳ್ಳೇದನ್ನು ಮಾಡ್ತಾ ಇರಬೇಕು ಅಂತ ಹೇಳುತ್ತಾರೆ. ಆದ್ರೆ ಕೆಲವೊಮ್ಮೆ ಕಷ್ಟಗಳು “ಬಲಶಾಲಿಯಾದ ಆತ್ಮ ಜೀವಿಗಳಿಂದ ಬರೋದ್ರಿಂದ ಅದನ್ನ ತಡೆಯೋ ಶಕ್ತಿ ಮನುಷ್ಯರಿಗೆ ಇಲ್ಲ. ಹಾಗಾಗಿ ಕಷ್ಟಗಳನ್ನು ಸಹಿಸಿಕೊಂಡೇ ಜೀವನ ನಡೆಸಬೇಕು” ಅನ್ನೋದು ಅವರ ಬೋಧನೆಗಳಲ್ಲಿ ಒಂದು.

ಕೆಲವು ಬುಡಕಟ್ಟಿನ ಜನರು

ಕೆಲವು ಬುಡಕಟ್ಟಿನ ಜನರು ಮಾಟ ಮಂತ್ರದಿಂದ ಮನುಷ್ಯರಿಗೆ ಕಷ್ಟಗಳು ಬರುತ್ತೆ ಅಂತ ನಂಬುತ್ತಾರೆ. ಇವರ ಪ್ರಕಾರ ಮಂತ್ರವಾದಿಗಳಿಂದ ಜೀವನದಲ್ಲಿ ಅದೃಷ್ಟನೂ ಬರಬಹುದು ದುರಾದೃಷ್ಟನೂ ಬರಬಹುದು. ಹಾಗಾಗಿ ಅದ್ರಿಂದ ಬರೋ ಕಷ್ಟಗಳನ್ನ ಕಾಯಿಲೆಗಳನ್ನ ತಡೆಯೋಕೆ ಜನ ಬೇರೆ ಮಂತ್ರವಾದಿಗಳ ಹತ್ರ ಹೋಗ್ತಾರೆ. ಅವರು ಇವುಗಳನ್ನ ಬಗೆಹರಿಸೋಕೆ ಕೆಲವು ಔಷಧಿಗಳನ್ನ ವಿಧಿ ವಿಧಾನಗಳನ್ನ ಹೇಳಿಕೊಡ್ತಾರೆ.

ಕ್ರೈಸ್ತರು

ಕ್ರೈಸ್ತರು ಬೈಬಲಿನ ಆದಿಕಾಂಡ ಪುಸ್ತಕ ಹೇಳೋ ಹಾಗೆ ಮೊದಲ ಮಾನವರು ಮಾಡಿದ ಪಾಪದಿಂದಲೇ ನಮಗೆ ಕಷ್ಟಗಳು ಬಂತು ಅಂತ ನಂಬುತ್ತಾರೆ. ಆದರೆ ಕೆಲವು ಪಂಗಡಗಳು ಇದಕ್ಕೆ ತಮ್ಮದೇ ಆದ ಸಿದ್ಧಾಂತಗಳನ್ನು ಸೇರಿಸಿವೆ. ಉದಾಹರಣೆಗೆ, ಕ್ಯಾಥೊಲಿಕ್‌ ಪಂಗಡದವರ ಪ್ರಕಾರ ಮನುಷ್ಯರು ತಮಗೆ ಬಂದ ಕಷ್ಟನಾ ದೇವರಿಗೆ ಕಾಣಿಕೆಯಾಗಿ ಅರ್ಪಿಸಬಹುದು. ಹೀಗೆ ಅರ್ಪಿಸಿದ್ರೆ ಚರ್ಚಿಗೆ ಮತ್ತು ಬೇರೆಯವರಿಗೆ ಒಳ್ಳೇದಾಗುತ್ತೆ ಅಂತ ನಂಬುತ್ತಾರೆ.

ಹೆಚ್ಚಿನ ಮಾಹಿತಿ ಪಡೆಯಿರಿ

jw.orgಯಲ್ಲಿ ದೇವರು ಎಲ್ಲಾ ರೀತಿಯ ಆರಾಧನೆಯನ್ನು ಸ್ವೀಕರಿಸುತ್ತಾನಾ? ಅನ್ನೋ ವಿಡಿಯೋ ನೋಡಿ.