ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 02

ಸುಂದರ ಭವಿಷ್ಯದ ಬಗ್ಗೆ ಪವಿತ್ರ ಗ್ರಂಥ ಕೊಡೋ ಮಾತು

ಸುಂದರ ಭವಿಷ್ಯದ ಬಗ್ಗೆ ಪವಿತ್ರ ಗ್ರಂಥ ಕೊಡೋ ಮಾತು

ಎಲ್ಲರಿಗೂ ಕಷ್ಟ ಸಮಸ್ಯೆಗಳಿವೆ. ಚಿಂತೆ ನೋವು ನಮ್ಮನ್ನು ಕಾಡ್ತಾ ಇರುತ್ತೆ. ನೀವು ಯಾವುದಾದರು ಕಾಯಿಲೆಯಿಂದ ನರಳುತ್ತಿರಬಹುದು ಅಥವಾ ನಿಮ್ಮ ಕುಟುಂಬದವರು, ಸ್ನೇಹಿತರು ಯಾರಾದರೂ ಸತ್ತು ಹೋಗಿರಬಹುದು. ಹಾಗಿದ್ದರೆ, ‘ಈ ರೀತಿ ಯಾಕೆ ಆಗ್ತಿದೆ? ಇದೆಲ್ಲಾ ಯಾವಾಗ ಸರಿಯಾಗುತ್ತೆ? ನಮಗೆ ಒಳ್ಳೇ ಜೀವನ ಸಿಗಲ್ವಾ?’ ಅಂತ ನೀವು ಯೋಚಿಸಿರಬಹುದು. ಈ ಪ್ರಶ್ನೆಗಳಿಗೆಲ್ಲಾ ಪವಿತ್ರ ಗ್ರಂಥದಲ್ಲಿ ಸಾಂತ್ವನ ಕೊಡೋ ಉತ್ತರ ಇದೆ.

1. ನಮ್ಮ ಕಷ್ಟಗಳ ಬಗ್ಗೆ ಪವಿತ್ರ ಗ್ರಂಥ ಏನು ಹೇಳುತ್ತೆ?

ಈ ಲೋಕದಲ್ಲಿ ಯಾಕಿಷ್ಟು ಕಷ್ಟ ಇದೆ ಅಂತ ಪವಿತ್ರ ಗ್ರಂಥ ವಿವರಿಸುತ್ತೆ. ಅಷ್ಟೇ ಅಲ್ಲ ನಮ್ಮ ಕಷ್ಟಗಳು ಸ್ವಲ್ಪ ಸಮಯದವರೆಗೆ ಮಾತ್ರ ಇರುತ್ತೆ, ಇದೆಲ್ಲಾ ಬೇಗ ಬದಲಾಗುತ್ತೆ ಅಂತನೂ ಹೇಳುತ್ತೆ. ಹೌದು ‘ನಮ್ಮ ಭವಿಷ್ಯ ಚೆನ್ನಾಗಿರುತ್ತೆ, ನಾವು ಒಳ್ಳೇದನ್ನ ಎದುರು ನೋಡಬಹುದು’ ಅಂತ ದೇವರು ಮಾತುಕೊಟ್ಟಿದ್ದಾನೆ. (ಯೆರೆಮೀಯ 29:11, 12 ಓದಿ.) ಈ ಮಾತು ಕಷ್ಟಗಳನ್ನ ಎದುರಿಸೋಕೆ ನಮಗೆ ಶಕ್ತಿ ಕೊಡುತ್ತೆ. ಒಳ್ಳೇ ರೀತಿ ಯೋಚಿಸೋಕೆ ಮತ್ತು ಸಂತೋಷವಾಗಿರೋಕೆ ನಮಗೆ ಸಹಾಯ ಮಾಡುತ್ತೆ.

2. ಮುಂದೆ ಜೀವನ ಹೇಗಿರುತ್ತೆ ಅಂತ ಪವಿತ್ರ ಗ್ರಂಥ ಹೇಳುತ್ತೆ?

“ಇನ್ಮುಂದೆ ಸಾವೇ ಇರಲ್ಲ. ದುಃಖ, ನೋವು, ಕಷ್ಟ ಇರಲ್ಲ” ಅಂತ ಪವಿತ್ರ ಗ್ರಂಥ ಹೇಳುತ್ತೆ. (ಪ್ರಕಟನೆ 21:4 ಓದಿ.) ಬಡತನ, ಅನ್ಯಾಯ, ಕಾಯಿಲೆ, ಮರಣ ಇದನ್ನೆಲ್ಲಾ ನೋಡಿ ಜನರಿಗೆ ಜೀವನಾನೇ ಸಾಕಾಗಿಬಿಟ್ಟಿದೆ. ‘ನಮ್ಮ ಜೀವನ ಇಷ್ಟೇ, ಇಲ್ಲಿಗೆ ಎಲ್ಲಾ ಮುಗಿದೋಯ್ತು’ ಅಂತ ಅಂದುಕೊಳ್ಳುತ್ತಾರೆ. ಆದರೆ ಇಂಥ ಪರಿಸ್ಥಿತಿ ಮುಂದೆ ಇರಲ್ಲ ಅಂತ ಪವಿತ್ರ ಗ್ರಂಥ ಹೇಳುತ್ತೆ. ಭವಿಷ್ಯದಲ್ಲಿ ಭೂಮಿ ಸುಂದರ ತೋಟ (ಪರದೈಸ್‌) ಆದಾಗ ಮನುಷ್ಯರು ಅಲ್ಲಿ ಖುಷಿ ಖುಷಿಯಾಗಿ ಜೀವಿಸ್ತಾರೆ ಅಂತನೂ ಮಾತು ಕೊಡುತ್ತೆ.

3. ಪವಿತ್ರ ಗ್ರಂಥದಲ್ಲಿ ಭವಿಷ್ಯದ ಬಗ್ಗೆ ಹೇಳಿರೋ ವಿಷಯಗಳು ಖಂಡಿತ ನಡೆಯುತ್ತೆ ಅಂತ ಹೇಗೆ ನಂಬಬಹುದು?

ತುಂಬ ಜನರು ಮುಂದೆ ಒಳ್ಳೇದಾಗುತ್ತೆ ಅಂತ ಹೇಳ್ತಾರೆ. ಆದ್ರೆ ಹಾಗೆ ಆಗುತ್ತೆ ಅನ್ನೋದಕ್ಕೆ ಅವ್ರಿಗೆ ಯಾವುದೇ ಗ್ಯಾರಂಟಿ ಇಲ್ಲ. ಆದ್ರೆ ಪವಿತ್ರ ಗ್ರಂಥದಲ್ಲಿರೋ ಮಾತುಗಳು ಹಾಗಲ್ಲ. ಅದರಲ್ಲಿರೋ ‘ವಚನಗಳನ್ನ ಚೆನ್ನಾಗಿ ಪರೀಕ್ಷಿಸಿ’ ನೋಡಿದಾಗ ಭವಿಷ್ಯದ ಬಗ್ಗೆ ಹೇಳಿದ ಮಾತುಗಳು ಖಂಡಿತ ನಡೆಯುತ್ತೆ ಅನ್ನೋ ಭರವಸೆ ಹೆಚ್ಚಾಗುತ್ತೆ. (ಅಪೊಸ್ತಲರ ಕಾರ್ಯ 17:11) ಭವಿಷ್ಯದ ಬಗ್ಗೆ ಪವಿತ್ರ ಗ್ರಂಥ ಹೇಳಿರೋ ಮಾತುಗಳನ್ನ ನೀವು ಕಲಿಯುವಾಗ ಅದು ನಿಜ ಆಗುತ್ತಾ ಇಲ್ವಾ ಅಂತ ನೀವೇ ಕಂಡುಹಿಡಿಯಬಹುದು.

ಹೆಚ್ಚನ್ನ ತಿಳಿಯೋಣ

ಪವಿತ್ರ ಗ್ರಂಥದಲ್ಲಿ ಹೇಳಿರುವ ಮಾತುಗಳು ಹೇಗೆ ಭವಿಷ್ಯದಲ್ಲಿ ನೆರವೇರುತ್ತೆ ಅಂತ ತಿಳಿದುಕೊಳ್ಳಿ. ಆ ಮಾತುಗಳಿಂದ ಜನರಿಗೆ ಈಗಲೂ ಹೇಗೆ ಪ್ರಯೋಜನ ಆಗ್ತಿದೆ ಅಂತ ನೋಡಿ.

4. ಸಾವು ನೋವಿಲ್ಲದ ಶಾಶ್ವತ ಜೀವನ

ದೇವರ ವಾಕ್ಯದಲ್ಲಿರೋ ಕೆಲವು ಮಾತುಗಳನ್ನ ಕೆಳಗೆ ಕೊಡಲಾಗಿದೆ. ಇದರಲ್ಲಿ ನಿಮಗೆ ಯಾವುದು ಇಷ್ಟ? ಯಾಕೆ?

ಕೆಳಗೆ ಕೊಡಲಾಗಿರೋ ವಚನಗಳನ್ನ ಓದಿ, ನಂತರ ಈ ಪ್ರಶ್ನೆಗಳನ್ನ ಉತ್ತರಿಸಿ:

  • ಈ ವಚನಗಳು ನಿಮಗೆ ಇಷ್ಟ ಆಯ್ತಾ? ಯಾಕೆ? ನಿಮ್ಮ ಸ್ನೇಹಿತರು, ಮನೆಯವರು ಈ ವಚನಗಳ ಬಗ್ಗೆ ತಿಳಿದುಕೊಂಡಾಗ ಅವರಿಗೆ ಖುಷಿಯಾಗುತ್ತೆ ಅಂತ ನಿಮಗೆ ಅನಿಸುತ್ತಾ?

ಪರದೈಸಿನಲ್ಲಿ ನಿಮ್ಮ ಜೀವನ

ಹೀಗಿರಲ್ಲ . . .

ಹೀಗಿರುತ್ತೆ . . .

  • ಸಾವು ನೋವು ಇರಲ್ಲ, ಯಾರೂ ಮುದುಕರಾಗಲ್ಲ.—ಯೆಶಾಯ 25:8.

  • ಸತ್ತವರು ಇದೇ ಭೂಮಿಯಲ್ಲಿ ಮತ್ತೆ ಜೀವಂತವಾಗಿ ಎದ್ದು ಬರುತ್ತಾರೆ.—ಯೋಹಾನ 5:28, 29.

  • ಒಳ್ಳೇ ಆರೋಗ್ಯ ಮತ್ತು ಯೌವನ ಇರುತ್ತೆ.—ಯೋಬ 33:25.

  • ಯುದ್ಧ ಅಥವಾ ಅದರ ಕೆಟ್ಟ ಪರಿಣಾಮಗಳು ಇರಲ್ಲ.—ಕೀರ್ತನೆ 46:9.

  • ನಮ್ಮನ್ನ ಕಾಡುವ ಕೆಟ್ಟ ಯೋಚನೆ, ಕಹಿ ನೆನಪುಗಳು ಇರಲ್ಲ.—ಯೆಶಾಯ 65:17.

5. ಸುಂದರ ಭವಿಷ್ಯದ ಬಗ್ಗೆ ತಿಳಿದುಕೊಂಡಾಗ ನಮಗೆ ಖುಷಿಯಾಗುತ್ತೆ

ನಮ್ಮ ಸುತ್ತಮುತ್ತ ನಡೀತಿರೋ ಕೆಟ್ಟ ವಿಷಯಗಳನ್ನ ನೋಡುವಾಗ ತುಂಬ ಜನರಿಗೆ ಬೇಜಾರಾಗುತ್ತೆ. ಕೆಲವರಿಗೆ ಕೋಪನೂ ಬರುತ್ತೆ. ಹಾಗಾಗಿ ಇದನ್ನೆಲ್ಲಾ ಸರಿಮಾಡಬೇಕು ಅಂತ ಎಷ್ಟೋ ಜನ ಹೋರಾಡ್ತಾರೆ. ಆದ್ರೆ ಪವಿತ್ರ ಗ್ರಂಥದಲ್ಲಿರೋ ಭರವಸೆ ಕೊಡೋ ಮಾತುಗಳನ್ನ ಓದಿ ತುಂಬ ಜನ ಹೇಗೆ ಜೀವನದಲ್ಲಿ ಖುಷಿಯಾಗಿದ್ದಾರೆ ಅಂತ ನೋಡಿ. ವಿಡಿಯೋ ನೋಡಿ, ನಂತರ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ.

  • ವಿಡಿಯೋದಲ್ಲಿ ನೋಡಿದ ಹಾಗೆ ರಫಿಕಾಗೆ ಯಾಕೆ ಬೇಜಾರಾಯ್ತು?

  • ಅವಳನ್ನ ಕಾಡುತ್ತಿದ್ದ ಸಮಸ್ಯೆಗಳು ಬಗೆಹರಿಯದಿದ್ದರೂ ಬೈಬಲ್‌ ಹೇಗೆ ಸಹಾಯ ಮಾಡ್ತು?

ಪವಿತ್ರ ಗ್ರಂಥ ನಮಗೆ ನಿರೀಕ್ಷೆ ಕೊಡುತ್ತೆ. ಇದರಿಂದ ನಿರಾಶೆ ವಿರುದ್ಧ ಹೋರಾಡಬಹುದು ಮತ್ತು ಸಮಸ್ಯೆಗಳನ್ನ ಎದುರಿಸಬಹುದು. ಜ್ಞಾನೋಕ್ತಿ 17:22 ಮತ್ತು ರೋಮನ್ನರಿಗೆ 12:12 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಈ ವಿಷಯಗಳನ್ನ ಕಲಿತ ಮೇಲೆ ನಿಮಗೆ ಹೇಗನಿಸುತ್ತಿದೆ? ಯಾಕೆ?

ಕೆಲವರು ಹೀಗಂತಾರೆ: “ಸುಂದರ ಭವಿಷ್ಯದ ಬಗ್ಗೆ ದೇವರು ಕೊಟ್ಟಿರೋ ಮಾತುಗಳನ್ನೆಲ್ಲಾ ಕೇಳೋಕಷ್ಟೇ ಚೆನ್ನಾಗಿದೆ, ಆದ್ರೆ ಹಾಗೆ ನಡಿಯುತ್ತೆ ಅಂತ ನಂಗೆ ಅನಿಸಲ್ಲ.”

  • ಈ ಮಾತುಗಳು ನಡಿಯುತ್ತಾ ಇಲ್ವಾ ಅಂತ ನೀವು ಯಾಕೆ ತಿಳಿದುಕೊಳ್ಳಬೇಕು?

ನಾವೇನು ಕಲಿತ್ವಿ

ಮುಂದೆ ನಮ್ಮ ಜೀವನ ಚೆನ್ನಾಗಿರುತ್ತೆ ಅಂತ ಪವಿತ್ರ ಗ್ರಂಥ ಹೇಳುತ್ತೆ. ಈ ನಿರೀಕ್ಷೆ ನಮಗೆ ಈಗ್ಲೂ ಖುಷಿ ಖುಷಿಯಾಗಿ ಜೀವನ ನಡೆಸೋಕೆ ಸಹಾಯ ಮಾಡುತ್ತೆ.

ನೆನಪಿದೆಯಾ

  • ದೇವರು ಕೊಟ್ಟ ಮಾತಿನ ಬಗ್ಗೆ ಜನರು ಯಾಕೆ ತಿಳಿದುಕೊಳ್ಳಬೇಕು?

  • ಭವಿಷ್ಯದ ಬಗ್ಗೆ ಪವಿತ್ರ ಗ್ರಂಥ ಏನು ಹೇಳುತ್ತೆ?

  • ಭವಿಷ್ಯದ ಬಗ್ಗೆ ತಿಳಿಯೋದರಿಂದ ನಿಮಗೆ ಈಗ ಯಾವ ಪ್ರಯೋಜನ ಇದೆ?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ನಮಗಿರೋ ಕಷ್ಟ ಸಮಸ್ಯೆಗಳನ್ನ ಪರಿಹರಿಸೋಕೆ ನಿರೀಕ್ಷೆ ಹೇಗೆ ಸಹಾಯ ಮಾಡುತ್ತೆ?

“ನಿರೀಕ್ಷೆ ಎಲ್ಲಿ ಸಿಗುತ್ತೆ?” (ಎಚ್ಚರ! ಲೇಖನ)

ಗಂಭೀರ ಕಾಯಿಲೆ ಇರುವವರಿಗೆ ಭವಿಷ್ಯದ ನಿರೀಕ್ಷೆ ಹೇಗೆ ಸಹಾಯ ಮಾಡುತ್ತೆ ಅಂತ ತಿಳಿದುಕೊಳ್ಳಿ.

“ಬಿಡದೆ ಇರೋ ಕಾಯಿಲೆಯೊಂದಿಗೆ ಜೀವನ ಮಾಡೋಕೆ ಬೈಬಲ್‌ ಸಹಾಯ ಮಾಡುತ್ತಾ?” (jw.org ಲೇಖನ)

ಈ ವಿಡಿಯೋ ನೋಡಿ, ಪರದೈಸಿನಲ್ಲಿ ನೀವು ಮತ್ತು ನಿಮ್ಮ ಕುಟುಂಬ ಆನಂದಿಸೋದನ್ನ ಚಿತ್ರಿಸಿಕೊಳ್ಳಿ.

ಹರ್ಷ ಗೀತೆ ನೀ ಹಾಡು (3:37)

ಒಬ್ಬ ಸಾಮಾಜಿಕ ಹೋರಾಟಗಾರ ಭವಿಷ್ಯದ ಬಗ್ಗೆ ಬೈಬಲ್‌ ಕೊಡುವ ನಿರೀಕ್ಷೆ ಬಗ್ಗೆ ತಿಳಿದುಕೊಂಡ. ಆಗ ಅವನ ಜೀವನ ಹೇಗೆ ಬದಲಾಯಿತು ಅಂತ ನೋಡಿ.

“ಈ ಜಗತ್ತನ್ನು ನಾನು ಬದಲಾಯಿಸಬೇಕಾಗಿಲ್ಲ” (ಕಾವಲಿನಬುರುಜು ಲೇಖನ)