ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆರೋಗ್ಯ

ಆರೋಗ್ಯ

ಬೈಬಲ್‌ ಒಂದು ವೈದ್ಯಕೀಯ ಪುಸ್ತಕ ಅಲ್ಲ. ಆದರೆ ಅದರಲ್ಲಿ ಇರೋ ಸಲಹೆಗಳು ಆರೋಗ್ಯಕರ ಜೀವನ ನಡೆಸಲು ಸಹಾಯ ಮಾಡುತ್ತವೆ. ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸಲು ಸಹಾಯ ಮಾಡುವ ಕೆಲವು ಬೈಬಲ್‌ ಸಲಹೆಗಳನ್ನು ನೋಡಿ.

ನಿಮ್ಮ ದೇಹವನ್ನು ಚೆನ್ನಾಗಿ ನೋಡಿಕೊಳ್ಳಿ

ಬೈಬಲ್‌ ಸಲಹೆ: “ಯಾವನೂ ಎಂದೂ ಸ್ವಶರೀರವನ್ನು ದ್ವೇಷಿಸಿದ್ದಿಲ್ಲ, ಅವನು ಅದನ್ನು ಪೋಷಿಸಿ ಸಂರಕ್ಷಿಸುತ್ತಾನೆ.”—ಎಫೆಸ 5:29.

ಇದರ ಅರ್ಥ: ಈ ಬೈಬಲ್‌ ಸಲಹೆ ನಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂತ ಹೇಳುತ್ತೆ. ಹೆಚ್ಚಿನ ಕಾಯಿಲೆಗಳಿಗೆ ಕಾರಣ ನಮ್ಮ ಜೀವನ ಶೈಲಿಯೇ ಆಗಿದೆ ಅಂತ ಒಂದು ವರದಿ ತಿಳಿಸುತ್ತೆ. ಹಾಗಾಗಿ ಒಳ್ಳೇ ಆರೋಗ್ಯ ಬೇಕಾದರೆ ಒಳ್ಳೇ ಜೀವನ ಶೈಲಿ ತುಂಬ ಪ್ರಾಮುಖ್ಯ.

ನೀವೇನು ಮಾಡಬಹುದು:

  • ಪೋಷಣೆ ನೀಡಿ. ಆರೋಗ್ಯಕರ ಆಹಾರವನ್ನು ಸೇವಿಸುವ ಮೂಲಕ ಮತ್ತು ಸಾಕಷ್ಟು ನೀರು ಕುಡಿಯುವ ಮೂಲಕ ನಿಮ್ಮ ದೇಹಕ್ಕೆ ಬೇಕಾದ ಪೋಷಣೆ ನೀಡಿ.

  • ವ್ಯಾಯಾಮ ಮಾಡಿ. ನಿಮಗೆ ಎಷ್ಟೇ ವಯಸ್ಸು ಇರಲಿ, ಯಾವುದೇ ಕಾಯಿಲೆ ಇರಲಿ, ವ್ಯಾಯಾಮ ಆರೋಗ್ಯಕ್ಕೆ ಒಳ್ಳೇದು. ನಿಮ್ಮ ಕುಟುಂಬದವರು, ಸ್ನೇಹಿತರು ಮತ್ತು ಡಾಕ್ಟರ್‌ಗಳು ವ್ಯಾಯಾಮ ಮಾಡೋಕೆ ಹೇಳಬಹುದು ಮತ್ತು ಅದಕ್ಕಾಗಿ ಬೇರೆ-ಬೇರೆ ಸಲಹೆಗಳನ್ನು ಕೊಡಬಹುದು. ಅದಕ್ಕೆ ಮೊದಲು ನೀವು ಮನಸ್ಸು ಮಾಡಬೇಕು.

  • ಸಾಕಷ್ಟು ನಿದ್ದೆ ಮಾಡಿ. ಪ್ರತಿ ದಿನ ಕಡಿಮೆ ನಿದ್ದೆ ಮಾಡುತ್ತಾ ಇದ್ದರೆ ಅದು ಗಂಭೀರ ಕಾಯಿಲೆಗಳಿಗೆ ನಡೆಸಬಹುದು. ಹೆಚ್ಚಿನ ಜನರು ಮಲಗುವ ಸಮಯದಲ್ಲಿ ಬೇರೆ-ಬೇರೆ ವಿಷಯಗಳನ್ನು ಮಾಡುತ್ತಾರೆ. ಹಾಗಾಗಿ ಅವರು ಕಡಿಮೆ ನಿದ್ದೆ ಮಾಡುತ್ತಾರೆ. ಆದರೆ ಒಳ್ಳೆಯ ಆರೋಗ್ಯ ಬೇಕೆಂದರೆ ಸಾಕಷ್ಟು ನಿದ್ದೆ ಮಾಡುವುದು ತುಂಬ ಪ್ರಾಮುಖ್ಯ.

ಕೆಟ್ಟ ಚಟಗಳಿಂದ ದೂರವಿರಿ

ಬೈಬಲ್‌ ಸಲಹೆ: ‘ನಾವು ಶರೀರ ಮತ್ತು ಮನಸ್ಸಿನ ಪ್ರತಿಯೊಂದು ಕಲ್ಮಶದಿಂದ ನಮ್ಮನ್ನು ಶುಚಿಮಾಡಿಕೊಳ್ಳೋಣ.’—2 ಕೊರಿಂಥ 7:1.

ಇದರ ಅರ್ಥ: ತಂಬಾಕಿನಂತಹ ಹಾನಿಕರ ವಸ್ತುಗಳ ಸೇವನೆ ನಮ್ಮ ಶರೀರವನ್ನು ಮಲಿನಗೊಳಿಸುತ್ತೆ. ಇದು ಅನೇಕ ಕಾಯಿಲೆಗಳಿಗೆ ಮತ್ತು ಮರಣಕ್ಕೆ ನಡೆಸುತ್ತೆ. ಹಾಗಾಗಿ, ಇಂಥ ಚಟಗಳಿಂದ ದೂರವಿದ್ದರೆ ಆರೋಗ್ಯ ಚೆನ್ನಾಗಿರುತ್ತೆ.

ನೀವೇನು ಮಾಡಬಹುದು: ನಿಮಗೆ ಯಾವುದಾದರೊಂದು ಕೆಟ್ಟ ಚಟ ಇದೆ ಅಂತ ನೆನಸಿ. ಉದಾಹರಣೆಗೆ, ಸಿಗರೇಟ್‌ ಸೇದುವ ಚಟ. ಅದನ್ನು ಬಿಡಲು ಒಂದು ನಿರ್ದಿಷ್ಟ ದಿನ ಆರಿಸಿಕೊಳ್ಳಿ. ಅದರ ಹಿಂದಿನ ದಿನ, ಸಿಗರೇಟ್‌, ಲೈಟರ್‌ ಮತ್ತು ಈ ಚಟಕ್ಕೆ ಸಂಬಂಧಿಸಿದ ಇತರ ವಸ್ತುಗಳನ್ನು ಬಿಸಾಡಿ. ಅಂಥ ಚಟಗಳಿರುವ ಜನರು ಸೇರುವ ಸ್ಥಳಗಳಿಗೆ ಹೋಗಬೇಡಿ. ನೀವು ಆ ಚಟವನ್ನು ಬಿಡುವ ನಿರ್ಧಾರ ಮಾಡಿದ್ದೀರಿ ಅಂತ ನಿಮ್ಮ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ತಿಳಿಸಿ. ಆಗ ಅದನ್ನು ಬಿಡಲು ಅವರೂ ನಿಮಗೆ ಸಹಾಯ ಮಾಡಬಹುದು.

ಬೈಬಲಿನ ಇನ್ನಿತರ ಸಲಹೆಗಳು

ನೀವು ಬಯಸುವುದಾದರೆ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬರನ್ನು ಸಂಪರ್ಕಿಸಿ ಬೈಬಲಿನ ಒಂದು ಪ್ರತಿಯನ್ನು ಪಡೆಯಬಹುದು

ಸುರಕ್ಷತೆಗಾಗಿ ಹೆಜ್ಜೆ ತೆಗೆದುಕೊಳ್ಳಿ.

‘ಹೊಸ ಮನೆಯನ್ನು ಕಟ್ಟುವಾಗ ಯಾವನಾದರೂ ಅದರ ಮಾಳಿಗೆಯಿಂದ ಬಿದ್ದು, ನಿಮಗೆ ಜೀವಹತ್ಯ ದೋಷವುಂಟಾಗದಂತೆ ಮಾಳಿಗೆಯ ಮೇಲೆ ಸುತ್ತಲೂ ಸಣ್ಣ ಗೋಡೆಯನ್ನು ಕಟ್ಟಿಸಬೇಕು.’​—ಧರ್ಮೋಪದೇಶಕಾಂಡ 22:8.

ನಿಮ್ಮ ಕೋಪವನ್ನು ಹತೋಟಿಯಲ್ಲಿಡಿ.

“ದೀರ್ಘಶಾಂತನು . . . ಬುದ್ಧಿವಂತನು; ಮುಂಗೋಪಿಯು ಮೂರ್ಖತನವನ್ನು ಧ್ವಜವಾಗಿ ಎತ್ತುವನು.”​—ಜ್ಞಾನೋಕ್ತಿ 14:29.

ಅತಿಯಾಗಿ ತಿನ್ನಬೇಡಿ.

“ಹೊಟ್ಟೆಬಾಕರ ಸ್ನೇಹಿತನಾಗಿರಬೇಡ.”​—ಜ್ಞಾನೋಕ್ತಿ 23:20, ಪರಿಶುದ್ಧ ಬೈಬಲ್‌ *.

^ ಪ್ಯಾರ. 20 Taken from the HOLY BIBLE: Kannada EASY-TO-READ VERSION ©1997 by World Bible Translation Center, Inc. and used by permission.