ಮಾಹಿತಿ ಇರುವಲ್ಲಿ ಹೋಗಲು

’ನಂಗೆ ಇದನ್ನೆಲ್ಲ ಕೇಳೋಕೆ ಇಷ್ಟ ಇಲ್ಲ’ ಅಂತ ಹೇಳಿರೋ ವ್ಯಕ್ತಿಗಳಿಗೆ ಯೆಹೋವನ ಸಾಕ್ಷಿಗಳು ಮತ್ತೆ ಯಾಕೆ ಸಾರುತ್ತಾರೆ?

’ನಂಗೆ ಇದನ್ನೆಲ್ಲ ಕೇಳೋಕೆ ಇಷ್ಟ ಇಲ್ಲ’ ಅಂತ ಹೇಳಿರೋ ವ್ಯಕ್ತಿಗಳಿಗೆ ಯೆಹೋವನ ಸಾಕ್ಷಿಗಳು ಮತ್ತೆ ಯಾಕೆ ಸಾರುತ್ತಾರೆ?

 ಯೆಹೋವನ ಸಾಕ್ಷಿಗಳು ದೇವರನ್ನ ಮತ್ತು ಜನರನ್ನ ತುಂಬ ಪ್ರೀತಿಸ್ತಾರೆ, ಅದಕ್ಕೆ ‘ನಂಗೆ ಇದನ್ನೆಲ್ಲ ಕೇಳೋಕೆ ಇಷ್ಟ ಇಲ್ಲ‘ ಅಂತ ಹೇಳೋ ಜನರಿಗೂ ಸಿಹಿಸುದ್ದಿ ಸಾರುತ್ತಾರೆ. (ಮತ್ತಾಯ 22:37-39) ನಾವು ದೇವರನ್ನ ಪ್ರೀತಿಸೋದ್ರಿಂದ ಜನರಿಗೆ “ಚೆನ್ನಾಗಿ” ಸಿಹಿಸುದ್ದಿ ಸಾರಿ ಅಂತ ಯೇಸು ಹೇಳಿರೋ ಮಾತನ್ನ ಪಾಲಿಸ್ತೀವಿ. (ಅಪೊಸ್ತಲರ ಕಾರ್ಯ 10:42; 1 ಯೋಹಾನ 5:3) ಅದಕ್ಕೆ ಹಿಂದಿನ ಕಾಲದ ದೇವರ ಪ್ರವಾದಿಗಳು ಮಾಡಿದ ತರ ನಾವು ಜನರ ಹತ್ರ ಪದೇಪದೇ ಹೋಗಿ ಸಿಹಿಸುದ್ದಿ ಸಾರುತ್ತೀವಿ. (ಯೆರೆಮೀಯ 25:4) ನಾವು ಜನರನ್ನ ತುಂಬ ಪ್ರೀತಿಸ್ತೀವಿ, ಅದಕ್ಕೆ ಅವರ ಜೀವವನ್ನ ಕಾಪಾಡೋ ದೇವರ ಆಳ್ವಿಕೆಯ ಸಿಹಿಸುದ್ದಿಯನ್ನ ಎಲ್ರಿಗೂ ಸಾರುತ್ತೀವಿ, ಜೊತೆಗೆ ‘ನಂಗೆ ಇದನ್ನೆಲ್ಲ ಕೇಳೋಕೆ ಇಷ್ಟ ಇಲ್ಲ’ ಅಂತ ಹೇಳಿದವ್ರಿಗೂ ಸಾರುತ್ತೀವಿ.—ಮತ್ತಾಯ 24:14.

 ಈ ಮುಂಚೆ ‘ನಂಗೆ ಆಸಕ್ತಿ ಇಲ್ಲ’ ಅಂತ ಹೇಳಿದವ್ರ ಹತ್ರ ಮತ್ತೆ ಹೋಗಿ ಸಾರಿದಾಗ ಅವರು ಆಸಕ್ತಿ ತೋರಿಸಿದ್ದಾರೆ. ಇದಕ್ಕೆ ಮೂರು ಕಾರಣಗಳನ್ನ ನೋಡೋಣ:

  •   ಮನೆಯವರು ಬದಲಾಗಿರಬಹುದು.

  •   ಮನೆಯಲ್ಲಿರೋ ಬೇರೆಯವರಿಗೆ ಆಸಕ್ತಿ ಇರಬಹುದು.

  •   ಮನೆಯವರ ಸನ್ನಿವೇಶ ಬದಲಾಗಿರಬಹುದು. ಇವತ್ತು ಲೋಕದ ಪರಿಸ್ಥಿತಿ ಮತ್ತು ಜನರ ಪರಿಸ್ಥಿತಿ ತುಂಬ ಬದಲಾಗ್ತಿರೋದ್ರಿಂದ ಜನ್ರಿಗೆ “ದೇವರ ಮಾರ್ಗದರ್ಶನ ಬೇಕಂತ” ಅನಿಸಬಹುದು ಮತ್ತು ಬೈಬಲ್‌ನಲ್ಲಿರೋ ವಿಷ್ಯದ ಕಡೆಗೆ ಆಸಕ್ತಿ ಬರಬಹುದು. (ಮತ್ತಾಯ 5:3) ಅಪೊಸ್ತಲ ಪೌಲನ ತರನೇ ಈ ಮುಂಚೆ ನಮ್ಮನ್ನ ವಿರೋಧಿಸಿದವರು ಬದಲಾಗಬಹುದು.—1 ತಿಮೊತಿ 1:13.

 ಹಾಗಂತ ನಾವು ಹೇಳೋ ಸಿಹಿಸುದ್ದಿಯನ್ನ ಕೇಳಲೇಬೇಕು ಅಂತ ನಾವು ಯಾರನ್ನೂ ಒತ್ತಾಯ ಮಾಡಲ್ಲ. (1 ಪೇತ್ರ 3:15) ಯಾಕಂದ್ರೆ ಪ್ರತಿಯೊಬ್ಬರು ಯಾರನ್ನ ಆರಾಧನೆ ಮಾಡಬೇಕು ಅನ್ನೋದು ಅವರವರಿಗೆ ಬಿಟ್ಟಿದ್ದು ಅನ್ನೋದು ನಮಗೆ ಚೆನ್ನಾಗಿ ಗೊತ್ತು.—ಧರ್ಮೋಪದೇಶಕಾಂಡ 30:19, 20.