ಮಾಹಿತಿ ಇರುವಲ್ಲಿ ಹೋಗಲು

ಜನರಿಗೆ ತಮ್ಮದೇ ಧರ್ಮ ಇರುವಾಗ ಯೆಹೋವನ ಸಾಕ್ಷಿಗಳು ಸಾರುವುದೇಕೆ?

ಜನರಿಗೆ ತಮ್ಮದೇ ಧರ್ಮ ಇರುವಾಗ ಯೆಹೋವನ ಸಾಕ್ಷಿಗಳು ಸಾರುವುದೇಕೆ?

 ಜನರಿಗೆ ತಮ್ಮದೇ ಧರ್ಮ ಇದ್ದರೂ ಬೈಬಲಿನಲ್ಲಿರುವ ವಿಷಯಗಳ ಬಗ್ಗೆ ಚರ್ಚಿಸಲು ಅವರು ಆನಂದಿಸುತ್ತಾರೆ. ತಮಗೆ ಬೇಕಾದ ಧರ್ಮವನ್ನು ಆರಿಸಿಕೊಳ್ಳಲು ಜನರಿಗಿರುವ ಹಕ್ಕನ್ನು ನಾವು ಗೌರವಿಸುತ್ತೇವೆ. ‘ಇದೇ ಸತ್ಯ ಇದನ್ನೇ ನಂಬಿ’ ಎಂದು ನಾವೆಂದೂ ಜನರನ್ನು ಒತ್ತಾಯಪಡಿಸುವುದಿಲ್ಲ.

 ಧರ್ಮದ ವಿಷಯ ಚರ್ಚಿಸುವಾಗ ನಾವು “ಸೌಮ್ಯಭಾವದಿಂದಲೂ ಆಳವಾದ ಗೌರವದಿಂದಲೂ” ಮಾತಾಡುತ್ತೇವೆ. ಏಕೆಂದರೆ ಹಾಗೆ ಮಾಡುವಂತೆ ಬೈಬಲ್‌ ನಮಗೆ ಸಲಹೆ ನೀಡುತ್ತದೆ. (1 ಪೇತ್ರ 3:15) ನಾವು ತಿಳಿಸುವ ಸಂದೇಶವನ್ನು ಎಲ್ಲರೂ ಕೇಳಲಿಕ್ಕಿಲ್ಲ ಎಂದು ನಮಗೆ ತಿಳಿದಿದೆ. (ಮತ್ತಾಯ 10:14) ಜನರೊಂದಿಗೆ ಮಾತಾಡುವ ವರೆಗೆ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಅನ್ನುವುದು ನಮಗೆ ತಿಳಿಯುವುದಿಲ್ಲ. ಅಷ್ಟೇ ಅಲ್ಲ, ಜನರ ಪರಿಸ್ಥಿತಿಗಳು ಬದಲಾಗುತ್ತಾ ಇರುತ್ತವೆ ಎನ್ನುವುದೂ ನಮಗೆ ಗೊತ್ತು.

 ಉದಾಹರಣೆಗೆ, ಮೊದಲ ಸಲ ಭೇಟಿ ಮಾಡಿದಾಗ ವ್ಯಕ್ತಿಯೊಬ್ಬನು ಬಹಳ ಬಿಝಿ ಇದ್ದಿರಬಹುದು. ಆದರೆ ಅದೇ ವ್ಯಕ್ತಿ ಬೇರೊಂದು ಸಮಯದಲ್ಲಿ ನಮ್ಮನ್ನು ಆದರದಿಂದ ಬರಮಾಡಿ ಸಂತೋಷದಿಂದ ಮಾತಾಡಬಹುದು. ಜನರ ಪರಿಸ್ಥಿತಿ ಬದಲಾಗುತ್ತಾ ಇರುತ್ತದೆ. ಅವರು ಹೊಸ ಹೊಸ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಅವರು ಬೈಬಲಿನ ಸಂದೇಶದ ಕಡೆಗೆ ಆಸಕ್ತಿ ತೋರಿಸಬಹುದು. ಈ ಕಾರಣದಿಂದ ನಾವು ಆಗಾಗ್ಗೆ ಜನರನ್ನು ಭೇಟಿ ಮಾಡುತ್ತಿರುತ್ತೇವೆ.