ಮಾಹಿತಿ ಇರುವಲ್ಲಿ ಹೋಗಲು

“ಯೇಸುವಿನಲ್ಲಿ ನಂಬಿಕೆ”—ರಕ್ಷಣೆ ಪಡೆಯಲು ಯೇಸುವಿನಲ್ಲಿ ನಂಬಿಕೆ ಇಟ್ರೆ ಸಾಕಾ?

“ಯೇಸುವಿನಲ್ಲಿ ನಂಬಿಕೆ”—ರಕ್ಷಣೆ ಪಡೆಯಲು ಯೇಸುವಿನಲ್ಲಿ ನಂಬಿಕೆ ಇಟ್ರೆ ಸಾಕಾ?

ಬೈಬಲ್‌ ಕೊಡೋ ಉತ್ತರ

 ಮನುಷ್ಯರ ಪಾಪಗಳಿಗಾಗಿ ಯೇಸು ಸತ್ತ ಅಂತ ಕ್ರೈಸ್ತರು ನಂಬ್ತಾರೆ. (1 ಪೇತ್ರ 3:18) ರಕ್ಷಣೆ ಪಡೆಯೋಕೆ ಯೇಸುನ ರಕ್ಷಕ ಅಂತ ನಂಬಿದ್ರೆ ಸಾಕಾಗಲ್ಲ. ಯಾಕಂದ್ರೆ ದೆವ್ವಗಳಿಗೆ ಕೂಡ ಯೇಸು ‘ದೇವರ ಮಗ’ ಅಂತ ಗೊತ್ತಿತ್ತು. ಆದ್ರೆ ಅವುಗಳಿಗೆ ರಕ್ಷಣೆ ಸಿಗಲ್ಲ, ನಾಶ ಆಗುತ್ತೆ.—ಲೂಕ 4:41; ಯೂದ 6.

 ರಕ್ಷಣೆ ಸಿಗಬೇಕಂದ್ರೆ ಏನು ಮಾಡಬೇಕು?

  •   ನಮ್ಮೆಲ್ಲರ ಪಾಪಗಳಿಗಾಗಿ ಯೇಸು ತನ್ನ ಜೀವ ಕೊಟ್ಟ ಅನ್ನೋದನ್ನ ನಾವು ನಂಬಬೇಕು. (ಅಪೊಸ್ತಲರ ಕಾರ್ಯ 16:30, 31; 1 ಯೋಹಾನ 2:2) ಈ ರೀತಿ ನಂಬಿಕೆ ಇದ್ರೆ ಯೇಸು ನಿಜವಾದ ವ್ಯಕ್ತಿ ಮತ್ತು ಬೈಬಲ್‌ನಲ್ಲಿ ಆತನ ಬಗ್ಗೆ ಹೇಳಿರೋ ಎಲ್ಲಾ ವಿಷ್ಯಗಳು ಸರಿಯಾಗಿದೆ ಅಂತ ನಂಬ್ತೀವಿ.

  •   ಬೈಬಲ್‌ನಲ್ಲಿರೋ ಸತ್ಯನ ಚೆನ್ನಾಗಿ ಕಲಿತುಕೊಳ್ಳಬೇಕು. (2 ತಿಮೊತಿ 3:15) ಅಪೊಸ್ತಲ ಪೌಲ ಮತ್ತು ಸೀಲ ಜೈಲಿನ ಅಧಿಕಾರಿಗೆ “ಕರ್ತನಾದ ಯೇಸುವಿನಲ್ಲಿ ನಂಬಿಕೆಯಿಡು; ನೀನೂ ನಿನ್ನ ಮನೆಯವರೂ ರಕ್ಷಣೆಹೊಂದುವಿರಿ” ಅಂದ್ರು ಅಂತ ಬೈಬಲ್‌ ಹೇಳುತ್ತೆ. ಆಮೇಲೆ ಆ ಜೈಲಿನ ಅಧಿಕಾರಿಗೆ ಅವ್ರು “ಯೆಹೋವನ ವಾಕ್ಯವನ್ನು” a ತಿಳಿಸಿದ್ರು. (ಅಪೊಸ್ತಲರ ಕಾರ್ಯ 16:31, 32) ಆ ಅಧಿಕಾರಿ ದೇವರ ವಾಕ್ಯದ ಬಗ್ಗೆ ಚೆನ್ನಾಗಿ ತಿಳ್ಕೊಂಡ ಮೇಲೆನೆ ಯೇಸುವಿನಲ್ಲಿ ನಂಬಿಕೆ ಇಡೋಕೆ ಆಯ್ತು. ಆದ್ರಿಂದ ಅವ್ನು ದೇವರ ವಾಕ್ಯದ ಬಗ್ಗೆ ಸರಿಯಾದ ಜ್ಞಾನ ಪಡ್ಕೊಬೇಕಿತ್ತು.—1 ತಿಮೊತಿ 2:3, 4.

  •   ಪಶ್ಚಾತ್ತಾಪ ಪಡಬೇಕು. (ಅಪೊಸ್ತಲರ ಕಾರ್ಯ 3:19) ಹಿಂದೆ ಮಾಡಿರೋ ತಪ್ಪಿಗಾಗಿ ಮತ್ತು ನಡ್ಕೊಂಡ ರೀತಿಗಾಗಿ ನಾವು ಪಶ್ಚಾತ್ತಾಪ ಪಡಬೇಕು, ದುಃಖ ಪಡಬೇಕು. ದೇವ್ರಿಗೆ ಇಷ್ಟ ಇಲ್ಲದೇ ಇರೋದನ್ನ ಬಿಟ್ಟುಬಿಡುವಾಗ ಮತ್ತು “ಪಶ್ಚಾತ್ತಾಪಕ್ಕೆ ಯೋಗ್ಯವಾದ ಕಾರ್ಯಗಳನ್ನು” ಮಾಡುವಾಗ ನಾವು ನಿಜವಾಗಲೂ ಪಶ್ಚಾತ್ತಾಪ ಪಟ್ಟಿದ್ದೀವಿ ಅಂತ ಬೇರೆಯವ್ರಿಗೆ ಗೊತ್ತಾಗುತ್ತೆ.—ಅಪೊಸ್ತಲರ ಕಾರ್ಯ 26:20.

  •   ದೀಕ್ಷಾಸ್ನಾನ ತಗೊಬೇಕು. (ಮತ್ತಾಯ 28:19) ತನ್ನ ಶಿಷ್ಯರಾಗೋರು ದೀಕ್ಷಾಸ್ನಾನ ತಗೊತಾರೆ ಅಂತ ಯೇಸು ಹೇಳಿದನು. ಮೇಲೆ ಹೇಳಿದ ಜೈಲಿನ ಅಧಿಕಾರಿ ಕೂಡ ದೀಕ್ಷಾಸ್ನಾನ ತಗೊಂಡನು. (ಅಪೊಸ್ತಲರ ಕಾರ್ಯ 16:33) ಅಪೊಸ್ತಲ ಪೇತ್ರ ಕೂಡ ಒಂದು ದೊಡ್ಡ ಗುಂಪಿಗೆ ಯೇಸುವಿನ ಬಗ್ಗೆ ಸಾರಿದ ಮೇಲೆ “ಅವನ ಮಾತನ್ನು ಹೃದಯದಾಳದಿಂದ ಸ್ವೀಕರಿಸಿದವರು ದೀಕ್ಷಾಸ್ನಾನ ಪಡೆದರು.”—ಅಪೊಸ್ತಲರ ಕಾರ್ಯ 2:40, 41.

  •   ಯೇಸುವಿನ ಮಾತು ಕೇಳಬೇಕು. (ಇಬ್ರಿಯ 5:9) ಯೇಸು ಹೇಳಿದ “ಎಲ್ಲಾ ವಿಷಯಗಳನ್ನು” ಯಾರು ಪಾಲಿಸ್ತಾರೋ ಅವ್ರು ತಾವು ನಡ್ಕೊಳ್ಳೋ ರೀತಿಯಿಂದ ಯೇಸುವಿನ ಶಿಷ್ಯರು ಅಂತ ತೋರಿಸಿಕೊಡ್ತಾರೆ. (ಮತ್ತಾಯ 28:20) ಅಂಥವ್ರು ‘ವಾಕ್ಯವನ್ನು ಕೇಳಿಸಿಕೊಳ್ಳುವವರು ಮಾತ್ರವೇ ಆಗಿರದೇ ವಾಕ್ಯದ ಪ್ರಕಾರ ಮಾಡುವವರಾಗಿರುತ್ತಾರೆ.’—ಯಾಕೋಬ 1:22.

  •   ಕೊನೆವರೆಗೂ ತಾಳ್ಮೆ ತೋರಿಸಬೇಕು. (ಮಾರ್ಕ 13:13) ಯೇಸುವಿನ ಶಿಷ್ಯರಿಗೆ ರಕ್ಷಣೆ ಸಿಗಬೇಕಂದ್ರೆ ‘ತಾಳ್ಮೆಯಿಂದ ಇರಬೇಕು.’ (ಇಬ್ರಿಯ 10:36) ಉದಾಹರಣೆಗೆ, ಅಪೊಸ್ತಲ ಪೌಲ ಯೇಸು ಹೇಳಿದ ಎಲ್ಲಾ ವಿಷ್ಯಗಳನ್ನ ಚಾಚುತಪ್ಪದೆ ಪಾಲಿಸಿದನು ಮತ್ತು ದೇವರಿಗೆ ಕೊನೇ ತನಕ ನಿಯತ್ತಿಂದ ಇದ್ದನು. ತಾನು ಕ್ರೈಸ್ತನಾದ ದಿನದಿಂದ ಹಿಡಿದು ಕೊನೇ ಉಸಿರಿರೋ ತನಕ ಈ ನಿಯತ್ತನ್ನ ಕಾಪಾಡಿಕೊಂಡನು.—1 ಕೊರಿಂಥ 9:27.

 “ಪಾಪಿಗಳ ಪ್ರಾರ್ಥನೆ” ರೂಢಿ ಸರಿನಾ?

 ಕೆಲವು ಧರ್ಮಗಳಲ್ಲಿ ಜನ “ಪಾಪಿಗಳ ಪ್ರಾರ್ಥನೆ,” “ರಕ್ಷಣೆಯ ಪ್ರಾರ್ಥನೆ” ಅಂತ ಮಾಡ್ತಾರೆ. ಈ ರೀತಿ ಪ್ರಾರ್ಥನೆ ಮಾಡೋವ್ರು ತಾವು ಪಾಪಿಗಳು ಮತ್ತು ಯೇಸು ತಮ್ಮ ಪಾಪಗಳಿಗೋಸ್ಕರ ಸತ್ತನು ಅಂತ ನಂಬ್ತಾರೆ. ಅಷ್ಟೇ ಅಲ್ಲ ತಮ್ಮ ಜೀವನ ಮತ್ತು ಹೃದಯಕ್ಕೆ ಯೇಸು ಹತ್ರ ಆಗಲಿ ಅಂತ ಪ್ರಾರ್ಥಿಸ್ತಾರೆ. ಆದರೆ ಬೈಬಲ್‌ “ಪಾಪಿಗಳ ಪ್ರಾರ್ಥನೆ” ಹೀಗೇ ಇರಬೇಕು ಅಂತ ಯಾವುದೇ ನಿಯಮವನ್ನ ಇಟ್ಟಿಲ್ಲ.

 ಕೆಲವರು ಬರೀ “ಪಾಪಿಗಳ ಪ್ರಾರ್ಥನೆ” ಮಾಡಿದ್ರೆ ಸಾಕು ತಮಗೆ ರಕ್ಷಣೆ ಸಿಗುತ್ತೆ ಅಂತ ಅನ್ಕೊತ್ತಾರೆ. ಆದರೆ ಪ್ರಾರ್ಥನೆ ಮಾಡೋದ್ರಿಂದ ಯಾರಿಗೂ ರಕ್ಷಣೆ ಸಿಗಲ್ಲ. ನಾವೆಲ್ಲ ಅಪರಿಪೂರ್ಣರಾಗಿರೋದ್ರಿಂದ ತಪ್ಪುಗಳನ್ನ ಮಾಡ್ತಾನೇ ಇರ್ತಿವಿ. (1 ಯೋಹಾನ 1:8) ಅದಕ್ಕಾಗಿ ಯೇಸು ತನ್ನ ಹಿಂಬಾಲಕರಿಗೆ ಪ್ರಾರ್ಥನೆಯಲ್ಲಿ ಯಾವಾಗಲೂ ತಮ್ಮ ತಪ್ಪಿಗಾಗಿ ಕ್ಷಮೆ ಕೇಳಿ ಅಂತ ಹೇಳಿದನು. (ಲೂಕ 11:2, 4) ರಕ್ಷಣೆ ಪಡಿಯೊ ಅವಕಾಶ ಇದ್ದ ಕೆಲವು ಕ್ರೈಸ್ತರು ಅದನ್ನ ಕಳಕೊಂಡುಬಿಟ್ರು. ಯಾಕಂದ್ರೆ ಅವ್ರು ನಂಬಿಕೆಯಿಂದ ಬಿದ್ದು ಹೋಗಿ ದೇವರಿಂದ ದೂರವಾದ್ರು. ಹಾಗಾಗಿ ಬರೀ ಪ್ರಾರ್ಥನೆ ಮಾಡೋದ್ರಿಂದ ರಕ್ಷಣೆ ಸಿಗಲ್ಲ.—ಇಬ್ರಿಯ 6:4-6; 2 ಪೇತ್ರ 2:20, 21.

 “ಪಾಪಿಗಳ ಪ್ರಾರ್ಥನೆ” ರೂಢಿ ಯಾವಾಗಿಂದ ಶುರು ಆಯ್ತು?

 “ಪಾಪಿಗಳ ಪ್ರಾರ್ಥನೆ” ಹೇಗೆ ಶುರು ಆಯ್ತು ಅನ್ನೋದರ ಬಗ್ಗೆ ಇತಿಹಾಸಗಾರರು ಒಬ್ಬೊಬ್ಬರು ಒಂದೊಂದು ತರ ಹೇಳ್ತಾರೆ. ಕೆಲವರ ಪ್ರಕಾರ ಪ್ರೊಟೆಸ್ಟೆಂಟ್‌ ಮತ ಸುಧಾರಣೆಯ ಸಮಯದಲ್ಲಿ ಈ ರೂಢಿ ಶುರುವಾಗಿರಬಹುದು ಅಂತಾರೆ. ಇನ್ನೂ ಕೆಲವರು 18 ಮತ್ತು 19 ನೇ ಶತಮಾನದ ಧಾರ್ಮಿಕ ಚಳುವಳಿಯ ಸಮಯದಲ್ಲಿ “ಪಾಪಿಗಳ ಪ್ರಾರ್ಥನೆ” ಮಾಡೋದಿಕ್ಕೆ ಜನ ಶುರುಮಾಡಿದ್ರು ಅಂತಾರೆ. ಆದರೆ ಬೈಬಲ್‌ ಎಲ್ಲೂ ಈ ರೀತಿಯ ರೂಢಿಯ ಬಗ್ಗೆ ಹೇಳಿಲ್ಲ. ಅಷ್ಟೇ ಅಲ್ಲದೆ ಇದು ಬೈಬಲ್‌ ಬೋಧನೆಗೆ ವಿರುದ್ಧವಾಗಿದೆ.

a ಯೆಹೋವ ಅನ್ನೋದು ಬೈಬಲ್‌ನಲ್ಲಿರೋ ದೇವರ ಹೆಸರು.