ಮಾಹಿತಿ ಇರುವಲ್ಲಿ ಹೋಗಲು

ಕೋಪದ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಕೋಪದ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಬೈಬಲ್‌ ಕೊಡೋ ಉತ್ತರ

 ‘ಕೋಪನ ಕಂಟ್ರೋಲ್‌ ಮಾಡೋಕಾಗಲ್ಲ’ ಅಂತ ಜನ ಸಾಮಾನ್ಯವಾಗಿ ಹೇಳ್ತಾರೆ, ಆದ್ರೆ ಕೋಪನ ಕಂಟ್ರೋಲ್‌ ಮಾಡದೇ ಇರೋದು ತಪ್ಪು ಅಂತ ಬೈಬಲ್‌ ಹೇಳುತ್ತೆ. ಈ ರೀತಿ ಕೋಪ ಮಾಡ್ಕೊಳ್ಳೋದ್ರಿಂದ ಅವ್ರಿಗೂ ಸುತ್ತ ಮುತ್ತ ಇರೋರಿಗೂ ತೊಂದ್ರೆ ಆಗುತ್ತೆ. (ಜ್ಞಾನೋಕ್ತಿ 29:22) ಆ ಸಮ್ಯಕ್ಕೆ ಕೋಪ ಮಾಡ್ಕೊಳ್ಳೋದು ಸರಿ ಅಂತ ಅನ್ಸುತ್ತೆ. ಆದ್ರೆ ಯಾರು ‘ಕೋಪದಿಂದ ಕೆರಳುತ್ತಾ’ ಅದನ್ನು ಮುಂದುವರೆಸಿಕೊಂಡು ಹೋಗ್ತಾರೋ ಅಂಥವ್ರಿಗೆ ರಕ್ಷಣೆ ಸಿಗಲ್ಲ ಅಂತ ಬೈಬಲ್‌ ಹೇಳುತ್ತೆ. (ಗಲಾತ್ಯ 5:19-21) ಕೋಪನ ಕಂಟ್ರೋಲ್‌ ಮಾಡ್ಕೊಳ್ಳೋಕೆ ನಮ್ಗೆ ಸಹಾಯ ಮಾಡುವಂಥ ತುಂಬ ಸಲಹೆಗಳು ಬೈಬಲಿನಲ್ಲಿವೆ.

 ಕೋಪ ಮಾಡಿಕೊಳ್ಳೋದು ಯಾವಾಗ್ಲೂ ತಪ್ಪಾ?

 ಇಲ್ಲ, ತಪ್ಪಲ್ಲ. ಕೆಲ್ವು ಸಂದರ್ಭಗಳಲ್ಲಿ ಕೋಪ ಮಾಡಿಕೊಳ್ಳೋದು ನ್ಯಾಯವಾಗಿರುತ್ತೆ. ಉದಾಹರಣೆಗೆ, ದೇವ್ರ ನಂಬಿಗಸ್ತ ಸೇವಕ ನೆಹೆಮೀಯನಿಗೆ ಕೂಡ ಕೋಪ ಬಂತು. ಯಾಕಂದ್ರೆ ತನ್ನ ಜೊತೆ ಆರಾಧಕರಿಗೆ ಬೇರೆಯವ್ರು ತೊಂದ್ರೆ ಕೊಡ್ತಿದ್ದಾರೆ ಅಂತ ಗೊತ್ತಾದಾಗ ಅವನಿಗೆ ‘ತುಂಬ ಸಿಟ್ಟು ಬಂತು.’—ನೆಹೆಮೀಯ 5:6.

 ಕೆಲ್ವು ಸಲ ದೇವ್ರು ಕೂಡ ಕೋಪ ಮಾಡ್ಕೊಂಡಿದ್ದಾರೆ. ಉದಾಹರಣೆಗೆ, ಇಸ್ರಾಯೇಲ್ಯರು ಯೆಹೋವನನ್ನ ಮಾತ್ರ ಆರಾಧಿಸ್ತೀವಿ ಅಂತ ಆತನಿಗೆ ಮಾತು ಕೊಟ್ಟಿದ್ರು. ಆದ್ರೆ ಸ್ವಲ್ಪ ಸಮಯ ಆದ್ಮೇಲೆ ಅವ್ರು ಸುಳ್ಳು ದೇವರುಗಳನ್ನ ಆರಾಧಿಸೋಕೆ ಶುರು ಮಾಡಿದ್ರು. ಆಗ “ಯೆಹೋವನ ಕೋಪವು ಅವರ ಮೇಲೆ ಉರಿಯಹತ್ತಿತು.” (ನ್ಯಾಯಸ್ಥಾಪಕರು 2:13, 14) ಯೆಹೋವನು ಕೋಪ ಮಾಡ್ಕೊಂಡನು. ಆದ್ರೆ ಕೋಪ ಯೆಹೋವ ದೇವರ ಮುಖ್ಯ ಗುಣ ಅಲ್ಲ. ಆತನು ತನ್ನ ಕೋಪನಾ ಯಾವಾಗ್ಲೂ ಕಂಟ್ರೋಲ್‌ನಲ್ಲಿ ಇಟ್ಕೊತಾನೆ ಮತ್ತು ಆತನ ಕೋಪ ಯಾವಾಗ್ಲೂ ನ್ಯಾಯವಾಗೇ ಇರುತ್ತೆ.—ವಿಮೋಚನಕಾಂಡ 34:6; ಯೆಶಾಯ 48:9.

 ಕೋಪ ಮಾಡಿಕೊಳ್ಳೋದು ಯಾವಾಗ ತಪ್ಪು?

 ಕಾರಣ ಇಲ್ಲದೇ ಕೋಪ ಮಾಡ್ಕೊಳ್ಳೋದು ಅಥ್ವಾ ಕೋಪನಾ ಕಂಟ್ರೋಲ್‌ ಮಾಡ್ದೆ ಇದ್ರೆ ಅದು ತಪ್ಪು. ನಾವು ಅಪರಿಪೂರ್ಣರಾಗಿ ಇರೋದ್ರಿಂದ ಈ ರೀತಿ ಮಾಡಿಬಿಡ್ತೀವಿ. ಉದಾಹರಣೆಗೆ,

  •   ದೇವ್ರು ಕಾಯಿನನ ಕಾಣಿಕೆಯನ್ನು ತಿರಸ್ಕರಿಸಿದಾಗ ಅವನು, “ಬಹು ಕೋಪಗೊಂಡನು.” ಆ ಕೋಪನಾ ಅವನು ಮನಸ್ಸಿನಲ್ಲೇ ಇಟ್ಕೊಂಡಿದ್ರಿಂದ ಸ್ವಂತ ತಮ್ಮನನ್ನೇ ಸಾಯಿಸಿಬಿಟ್ಟ.—ಆದಿಕಾಂಡ 4:3-8.

  •   ನಿನವೆಯ ಜನ್ರಿಗೆ ದೇವರು ಕರುಣೆ ತೋರಿಸಿದಾಗ ಪ್ರವಾದಿ ಯೋನನಿಗೂ ಸಿಟ್ಟು ಬಂತು, ಕರಕರೆ ಆಯ್ತು. ಆದ್ರೆ ಆ ರೀತಿ ‘ಸಿಟ್ಟು ಮಾಡಿಕೊಳ್ಳೋದು’ ತಪ್ಪು ಅಂತ ಯೆಹೋವ ದೇವರು ಯೋನನಿಗೆ ಬುದ್ಧಿ ಹೇಳಿದ್ರು. ಪಶ್ಚಾತ್ತಾಪಪಟ್ಟ ಜನ್ರಿಗೆ ಕರುಣೆ ತೋರಿಸಬೇಕು ಅಂತ ಸಲಹೆ ಕೊಟ್ರು.—ಯೋನ 3:10–4:1, 4, 11. a

 ಈ ಎರಡು ಉದಾಹರಣೆಗಳಿಂದ ನಮಗೆ ಏನು ಗೊತ್ತಾಗುತ್ತೆ ಅಂದ್ರೆ ಕಾರಣ ಇಲ್ದೇ ಕೋಪ ಮಾಡಿಕೊಳ್ಳೋದು ಅಥ್ವಾ ಕೋಪನ ಕಂಟ್ರೋಲ್‌ ಮಾಡ್ದೆ ಇರೋದು “ದೇವರ ನೀತಿಯನ್ನು ಸಾಧಿಸುವುದಿಲ್ಲ.”—ಯಾಕೋಬ 1:20.

 ಕೋಪನ ಹೇಗೆ ಕಂಟ್ರೋಲ್‌ ಮಾಡೋದು?

  •   ಕೋಪವನ್ನ ಕಂಟ್ರೋಲ್‌ ಮಾಡದೆ ಇದ್ರೆ ಏನೆಲ್ಲಾ ಅಪಾಯ ಆಗುತ್ತೆ ಅಂತ ತಿಳ್ಕೊಳ್ಳಿ. ಕೋಪ ಮಾಡಿಕೊಂಡ್ರೆ “ನಾವು ತುಂಬಾ ಸ್ಟ್ರಾಂಗ್‌” ಅಂತ ಜನ ನೆನಸ್ತಾರೆ. ಆದ್ರೆ ಆ ರೀತಿ ಕೋಪ ಮಾಡ್ಕೊಳ್ಳೋರು ಬಲಹೀನರು. “ಆತ್ಮವನ್ನು ಸ್ವಾಧೀನಮಾಡಿಕೊಳ್ಳದವನು ಗೋಡೆ ಬಿದ್ದ ಹಾಳೂರಿಗೆ ಸಮಾನ” ಅನ್ನುತ್ತೆ ಬೈಬಲ್‌. (ಜ್ಞಾನೋಕ್ತಿ 25:28; 29:11) ನಾವು ಕೋಪನ ಕಂಟ್ರೊಲ್‌ ಮಾಡೋಕೆ ಕಲಿತ್ರೆ ಮಾತ್ರ ಬುದ್ಧಿವಂತರು ಮತ್ತು ಬಲಶಾಲಿಗಳು ಆಗ್ತೀವಿ. (ಜ್ಞಾನೋಕ್ತಿ 14:29) ಅದಕ್ಕೆ ಬೈಬಲ್‌, “ದೀರ್ಘಶಾಂತನು ಶೂರನಿಗಿಂತಲೂ ಶ್ರೇಷ್ಠ” ಅಂತ ಹೇಳುತ್ತೆ.—ಜ್ಞಾನೋಕ್ತಿ 16:32.

  •   ಕೋಪದಲ್ಲಿ ತಪ್ಪು ಮಾಡಿ ಪಶ್ಚಾತ್ತಾಪ ಪಡೋ ಮುಂಚೆನೇ ಕೋಪ ಕಂಟ್ರೋಲ್‌ ಮಾಡಿ. “ಕೋಪವನ್ನು ಅಣಗಿಸಿಕೋ; ರೋಷವನ್ನು ಬಿಡು. ಉರಿಗೊಳ್ಳಬೇಡ, ಕೆಡುಕಿಗೆ ಕಾರಣವಾದೀತು” ಅಂತ ಕೀರ್ತನೆ 37:8 ಹೇಳುತ್ತೆ. ಇದ್ರಿಂದ ನಮ್ಗೆ ಏನು ಗೊತ್ತಾಗುತ್ತೆ ಅಂದ್ರೆ ಕೋಪ ‘ಕೆಡುಕಿಗೆ ಕಾರಣ’ ಆಗೋದಕ್ಕಿಂತ ಮುಂಚೆನೇ ಆ ಕೋಪನ ಬಿಟ್ಟುಬಿಡಬೇಕು. ಅದಕ್ಕಾಗಿ ಎಫೆಸ 4:26 “ನೀವು ಕೋಪಗೊಂಡರೂ ಪಾಪಮಾಡಬೇಡಿರಿ” ಅಂತ ಹೇಳುತ್ತೆ.

  •   ಕೋಪ ಜಾಸ್ತಿ ಆಗುತ್ತೆ ಅಂತ ಗೊತ್ತಾದ ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿ. “ವ್ಯಾಜ್ಯದ ಆರಂಭವು ಏರಿಗೆ ಬಿಲಬಿದ್ದಂತೆ; ಸಿಟ್ಟೇರುವದಕ್ಕೆ ಮುಂಚೆ ಜಗಳವನ್ನು ಬಿಟ್ಟುಬಿಡು” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 17:14) ಭಿನ್ನಾಭಿಪ್ರಾಯ ಬಂದಾಗ ತಕ್ಷಣ ಸಮಾಧಾನ ಮಾಡ್ಕೊಬೇಕು. ಈ ರೀತಿ ಸಮಾಧಾನ ಆಗಬೇಕು ಅಂದ್ರೆ ಮೊದ್ಲು ಇಬ್ರು ತಣ್ಣಗಾಗಬೇಕು ಆಮೇಲೆ ಮಾತಾಡಬೇಕು.

  •   ಪೂರ್ತಿ ವಿಷ್ಯ ತಿಳ್ಕೊಳ್ಳಿ. “ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ” ಅಂತ ಜ್ಞಾನೋಕ್ತಿ 19:11 ಹೇಳುತ್ತೆ. ಒಂದು ತೀರ್ಮಾನಕ್ಕೆ ಬರೋಕಿಂತ ಮುಂಚೆ ಎಲ್ಲಾ ವಿಷ್ಯಗಳನ್ನ ತಿಳ್ಕೊಬೇಕು. ಎಲ್ಲಾ ವಿಷ್ಯ ತಿಳ್ಕೊಂಡರೆ ನಾವು ಸುಮ್‌ ಸುಮ್ನೆ ಕೋಪ ಮಾಡ್ಕೊಳ್ಳಲ್ಲ.—ಯಾಕೋಬ 1:19.

  •   ಕೋಪ ಬಂದಾಗ ತಕ್ಷಣ ಪ್ರಾರ್ಥಿಸಿ. “ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿ” ಪಡ್ಕೊಳ್ಳೋಕೆ ಪ್ರಾರ್ಥನೆ ಸಹಾಯ ಮಾಡುತ್ತೆ. (ಫಿಲಿಪ್ಪಿ 4:7) ಪ್ರಾರ್ಥನೆ ಮಾಡಿದ್ರೆ ದೇವರು ನಮಗೆ ಪವಿತ್ರಾತ್ಮ ಕೊಡ್ತಾನೆ. ಇದ್ರಿಂದ ಶಾಂತಿ, ತಾಳ್ಮೆ, ಸ್ವನಿಯಂತ್ರಣದಂಥ ಗುಣಗಳನ್ನು ಬೆಳೆಸಿಕೊಳ್ಳಬಹುದು.—ಲೂಕ 11:13; ಗಲಾತ್ಯ 5:22, 23.

  •   ಒಳ್ಳೇ ಸ್ನೇಹಿತರನ್ನ ಮಾಡ್ಕೊಳ್ಳಿ. ನಾವು ಯಾರ ಜೊತೆ ಸೇರ್ತಿವೋ ಅವ್ರ ತರನೇ ಆಗ್ತೀವಿ. (ಜ್ಞಾನೋಕ್ತಿ 13:20; 1 ಕೊರಿಂಥ 15:33) ಅದಕ್ಕೆ ಬೈಬಲ್‌ “ಕೋಪಿಷ್ಠನ ಸಂಗಡ ಸ್ನೇಹ ಬೆಳಸಬೇಡ; ಸಿಟ್ಟುಗಾರನ ಸಹವಾಸ ಮಾಡಬೇಡ” ಅಂತ ಸಲಹೆ ಕೊಡುತ್ತೆ. ಯಾಕಂದ್ರೆ ಅಂಥವರ ಸಹವಾಸ “ಮಾಡಿದರೆ ಅವನ ದುರ್ನಡತೆಯನ್ನನುಸರಿಸಿ ನಿನ್ನ ಆತ್ಮವನ್ನು ಉರುಲಿಗೆ ಸಿಕ್ಕಿಸಿಕೊಳ್ಳುವಿ ನೋಡಿಕೋ” ಅಂತ ಎಚ್ಚರಿಸುತ್ತೆ.—ಜ್ಞಾನೋಕ್ತಿ 22:24, 25.

a ದೇವರ ಬುದ್ಧಿವಾದಕ್ಕೆ ಯೋನ ಕಿವಿಗೊಟ್ಟು ತನ್ನ ಕೋಪ ಬಿಟ್ಟುಬಿಟ್ಟ. ಇದಕ್ಕಾಗಿ ದೇವ್ರು ಅವನ ಹೆಸ್ರಿನಲ್ಲೇ ಬೈಬಲಿನಲ್ಲಿರೋ ಒಂದು ಪುಸ್ತಕವನ್ನು ಬರೆಯೋಕೆ ಅನುಮತಿ ಕೊಟ್ಟನು.