ಮಾಹಿತಿ ಇರುವಲ್ಲಿ ಹೋಗಲು

ನಮ್ಮನ್ನೇ ನಾವು ಪ್ರೀತಿಸೋದು ತಪ್ಪಾ?

ನಮ್ಮನ್ನೇ ನಾವು ಪ್ರೀತಿಸೋದು ತಪ್ಪಾ?

ಬೈಬಲ್‌ ಕೊಡೋ ಉತ್ತರ

 ನಮ್ಮನ್ನ ನಾವು ಪ್ರೀತಿಸೋದು ತಪ್ಪಲ್ಲ, ಆದ್ರೆ ಅದಕ್ಕೂ ಒಂದು ಮಿತಿಯಿರಬೇಕು ಅಂತ ಬೈಬಲ್‌ ಹೇಳುತ್ತೆ. ಈ ತರ ಪ್ರೀತಿ ಇದ್ರೆ ನಮನ್ನ ನಾವು ಚೆನ್ನಾಗಿ ನೋಡ್ಕೋತೀವಿ, ಗೌರವಿಸ್ತೀವಿ, ನಮ್ಮನ್ನೇ ಅಮೂಲ್ಯವಾಗಿ ನೋಡ್ತೀವಿ. (ಮತ್ತಾಯ 10:31) ಸ್ವಾರ್ಥಿಗಳಾಗಿ ಇರೋದು ತಪ್ಪು, ಆದರೆ ನಮ್ಮನ್ನ ಸ್ವಲ್ಪ ಮಟ್ಟಿಗೆ ಪ್ರೀತಿಸೋದು ತಪ್ಪಲ್ಲ ಅಂತ ಬೈಬಲ್‌ ಹೇಳುತ್ತೆ.

ಯಾರನ್ನ ನಾವು ಜಾಸ್ತಿ ಪ್ರೀತಿಸಬೇಕು?

  1.  1. ಎಲ್ಲಕ್ಕಿಂತ ಮೊದ್ಲು ನಾವು ನಮ್ಮ ದೇವರಾದ ಯೆಹೋವನನ್ನ ಪ್ರೀತಿಸಬೇಕು. ‘ನೀನು ನಿನ್ನ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದ ಪ್ರೀತಿಸಬೇಕು’ ಅನ್ನೋದು ಬೈಬಲ್ನಲ್ಲಿರೋ ಮುಖ್ಯವಾದ ಆಜ್ಞೆ.—ಮಾರ್ಕ 12:28-30; ಧರ್ಮೋಪದೇಶಕಾಂಡ 6:5.

  2.  2. ಎರಡನೇ ಆಜ್ಞೆ, “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.”—ಮಾರ್ಕ 12:31; ಯಾಜಕಕಾಂಡ 19:18.

  3.  3. ನಮ್ಮನ್ನೇ ಪ್ರೀತಿಸಿಕೊಳ್ಳಬೇಕು ಅನ್ನೋದರ ಬಗ್ಗೆ ಬೈಬಲ್ನಲ್ಲಿ ಎಲ್ಲೂ ನಿರ್ದಿಷ್ಟವಾಗಿ ಹೇಳಿಲ್ಲ. ಆದರೂ ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಅನ್ನೋ ಆಜ್ಞೆಯಿಂದ ನಮ್ಮನ್ನ ನಾವು ಪ್ರೀತಿಸಿ ಗೌರವಿಸೋದು ಒಳ್ಳೇದು ಅಂತ ಗೊತ್ತಾಗುತ್ತೆ.

ಯೇಸು ಯಾರನ್ನ ಜಾಸ್ತಿ ಪ್ರೀತಿಸಿದನು?

 ದೇವರ ಮೇಲಿನ ಪ್ರೀತಿ, ನೆರೆಯವರ ಮೇಲಿನ ಪ್ರೀತಿ, ನಮ್ಮ ಮೇಲಿನ ಪ್ರೀತಿಯನ್ನ ಹೇಗೆ ಸಮತೋಲನವಾಗಿ ಇಡಬೇಕು ಅಂತ ಯೇಸು ತೋರಿಸಿಕೊಟ್ಟನು ಮತ್ತು ಶಿಷ್ಯರಿಗೆ ತನ್ನ ಮಾದರಿಯನ್ನ ಅನುಕರಿಸೋಕೆ ಹೇಳಿದನು.—ಯೋಹಾನ 13:34, 35.

  1.  1. ಯೇಸು ಯೆಹೋವನನ್ನ ಜಾಸ್ತಿ ಪ್ರೀತಿಸಿ, ಆತನ ಕೆಲಸ ಮಾಡಲು ತನ್ನ ಜೀವನದಲ್ಲಿ ಮೊದಲ ಸ್ಥಾನ ಕೊಟ್ಟನು. ಅದಕ್ಕಾಗಿನೇ “ನಾನು ತಂದೆಯನ್ನು ಪ್ರೀತಿಸುತ್ತೇನೆ ಎಂಬುದನ್ನು ಲೋಕವು ತಿಳಿಯುವಂತೆ, ತಂದೆಯು ನನಗೆ ಮಾಡಲು ಆಜ್ಞಾಪಿಸಿದ್ದನ್ನೇ ನಾನು ಮಾಡುತ್ತೇನೆ” ಅಂತ ಹೇಳಿದನು.—ಯೋಹಾನ 14:31.

  2.  2. ಯೇಸು, ಬೇರೆಯವರ ಅವಶ್ಯಕತೆಗಳನ್ನ ಪೂರೈಸಿ, ತನ್ನ ಪ್ರಾಣನೇ ಕೊಟ್ಟು ತನ್ನ ನೆರೆಯವರ ಮೇಲೆ ಎಷ್ಟು ಪ್ರೀತಿ ಇದೆ ಅನ್ನೋದನ್ನ ತೋರಿಸಿದನು.—ಮತ್ತಾಯ 20:28.

  3.  3. ವಿಶ್ರಾಂತಿ ತಗೊಂಡು, ಊಟ ಮಾಡಿ, ತನ್ನ ಹಿಂಬಾಲಕರು ಮತ್ತು ಶಿಷ್ಯರ ಜೊತೆ ಕಾಲ ಕಳೆಯೋದರ ಮೂಲಕ ತನ್ನ ಮೇಲೆ ತನಗೆ ಪ್ರೀತಿ ಇದೆ ಅನ್ನೋದನ್ನ ಯೇಸು ತೋರಿಸಿದನು.—ಮಾರ್ಕ 6:31, 32; ಲೂಕ 5:29; ಯೋಹಾನ 2:1, 2; 12:2.

ಬೇರೆಯವರನ್ನ ಜಾಸ್ತಿ ಪ್ರೀತಿಸೋದರಿಂದ ನಮ್ಮ ಸಂತೋಷ ಮತ್ತು ಗೌರವ ಕಮ್ಮಿಯಾಗುತ್ತಾ?

 ಕಮ್ಮಿಯಾಗಲ್ಲ, ಯಾಕಂದ್ರೆ ದೇವರು ತನ್ನಲ್ಲಿರೋ ಗುಣಗಳನ್ನಿಟ್ಟು ನಮ್ಮನ್ನ ಸೃಷ್ಟಿ ಮಾಡಿದ್ದಾನೆ. ಅದರಲ್ಲಿ ಪ್ರಾಮುಖ್ಯವಾದ ಗುಣ ನಿಸ್ವಾರ್ಥ ಪ್ರೀತಿ. (ಆದಿಕಾಂಡ 1:27; 1 ಯೋಹಾನ 4:8) ನಮ್ಮನ್ನ ಸೃಷ್ಟಿಸಿರೋದೇ ನಾವು ಒಬ್ಬರನ್ನೊಬ್ಬರು ಪ್ರೀತಿಸ ಬೇಕು ಅಂತ ಇದರಿಂದ ಗೊತ್ತಾಗುತ್ತೆ. ನಮ್ಮನ್ನ ನಾವು ಪ್ರೀತಿಸೋದು ಒಳ್ಳೇದೆ, ಆದರೆ ಎಲ್ಲರಿಗಿಂತ ಜಾಸ್ತಿ ದೇವರನ್ನ ಪ್ರೀತಿಸುವಾಗ ಮತ್ತು ಬೇರೆಯವರಿಗೆ ಸಹಾಯ ಮಾಡುವಾಗ ನಮಗೆ ತುಂಬ ಖುಷಿಯಾಗುತ್ತೆ. ಅದಕ್ಕೆ “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ” ಅಂತ ಬೈಬಲ್‌ ಹೇಳುತ್ತೆ.—ಅಪೊಸ್ತಲರ ಕಾರ್ಯ 20:35.

 ಇವತ್ತು ಜನ ಸಾಮಾನ್ಯವಾಗಿ ‘ನಮ್ಮನ್ನ ನಾವು ಮೊದ್ಲು ಪ್ರೀತಿಸಿದ್ರೆನೇ ನಿಜ ಸಂತೋಷ ಸಿಗೋದು‘ ಅಂತ ಹೇಳ್ತಾರೆ. ಅಂಥವ್ರು, ‘ಇತರರನ್ನ ಪ್ರೀತಿಸಿ’ ಅನ್ನೋದಕ್ಕಿಂತ ‘ತಮ್ಮನ್ನೇ ಪ್ರೀತಿಸಿಕೊಳ್ಳೋದಕ್ಕೆ’ ಪ್ರಾಮುಖ್ಯತೆ ಕೊಡ್ತಾರೆ. ಆದ್ರೆ “ಪ್ರತಿಯೊಬ್ಬನು ತನ್ನ ಸ್ವಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸುತ್ತಿರಲಿ” ಅನ್ನೋ ಬೈಬಲ್‌ ಆಜ್ಞೆನ ಯಾರು ಪಾಲಿಸ್ತಾರೋ ಅವ್ರಿಗೆ ನಿಜ ಸಂತೋಷ ಮತ್ತು ಒಳ್ಳೇ ಆರೋಗ್ಯ ಇರುತ್ತೆ. ಇದನ್ನ ನಾವು ನಮ್ಮ ಕಣ್ಣಾರೆ ನೋಡಬಹುದು.—1 ಕೊರಿಂಥ 10:24.