ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

John Moore/Getty Images

ಆರೋಗ್ಯದ ರಕ್ಷಣೆ—ದೇವರ ಸರ್ಕಾರ ಏನು ಮಾಡುತ್ತೆ?

ಆರೋಗ್ಯದ ರಕ್ಷಣೆ—ದೇವರ ಸರ್ಕಾರ ಏನು ಮಾಡುತ್ತೆ?

 ಲೋಕದ ಎಲ್ಲಾ ಕಡೆ ಕೋವಿಡ್‌-19ನಿಂದ ತುರ್ತುಪರಿಸ್ಥಿತಿ ಇಲ್ಲವಾದರೂ ಈಗಲೂ ಅದರಿಂದ ಜನರಿಗೆ ಅಪಾಯ ತಪ್ಪಿಲ್ಲ. ಮುಂದೆ ಇದಕ್ಕಿಂತ ದೊಡ್ಡ ಮಹಾಮಾರಿ ಬಂದೇ ಬರುತ್ತೆ. ಅದನ್ನ ಎದುರಿಸೋಕೆ ನಾವೆಲ್ಲರೂ ತಯಾರಾಗಿರಬೇಕು ಅಂತ ಮೇ 22, 2023ರಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕರಾದ ಡಾ. ಟೆಡ್ರೊಸ್‌ ಅಡನಮ್‌ ಘೆಬ್ರೆಯೆಸುಸ್‌ ಹೇಳಿದ್ದಾರೆ.

 ಕೋವಿಡ್‌-19 ಮಹಾಮಾರಿಯ ಪರಿಣಾಮದಿಂದ ಈಗಲೂ ಅನೇಕ ಜನರು ಮಾನಸಿಕ ಮತ್ತು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸರ್ಕಾರ ಮತ್ತು ಆರೋಗ್ಯ ಸಂಸ್ಥೆಗಳು ಮುಂದೆ ಬರಲಿರೋ ಮಹಾಮಾರಿಗೆ ತಯಾರಾಗಿದ್ದಾರಾ? ಅವರು ಈಗ ನಾವು ಎದುರಿಸುವ ಆರೋಗ್ಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡ್ತಾರಾ?

 ಮನುಷ್ಯರಿಗೆ ಒಳ್ಳೆ ಆರೋಗ್ಯ ಕೊಡೋ ಮತ್ತು ಅವರನ್ನ ಚೆನ್ನಾಗಿ ಆರೈಕೆ ಮಾಡೋ ಒಂದು ಸರ್ಕಾರ ಬರುತ್ತೆ ಅಂತ ಬೈಬಲ್‌ ಹೇಳುತ್ತೆ. “ಸ್ವರ್ಗದ ದೇವರು ಒಂದು ಆಡಳಿತ ತರ್ತಾನೆ” ಅಂತ ಬೈಬಲಿನಲ್ಲಿದೆ. (ದಾನಿಯೇಲ 2:44) ಈ ಸರ್ಕಾರ ಆಳ್ವಿಕೆ ಮಾಡುವಾಗ “ದೇಶದಲ್ಲಿ ಒಬ್ಬನೂ ‘ನನಗೆ ಹುಷಾರಿಲ್ಲ’ ಅಂತ ಹೇಳಲ್ಲ.” (ಯೆಶಾಯ 33:24) ಆ ಸಮಯದಲ್ಲಿ ಎಲ್ಲರಿಗೂ ಯುವಕರಾಗಿದ್ದಾಗ ಇದ್ದ ಒಳ್ಳೆ ಆರೋಗ್ಯ, ಶಕ್ತಿ ಇರುತ್ತೆ.—ಯೋಬ 33:25.