ಯೆಶಾಯ 45:1-25

  • ಬಾಬೆಲನ್ನ ವಶ ಮಾಡ್ಕೊಳ್ಳೋಕೆ ಕೋರೆಷನ ಅಭಿಷೇಕ (1-8)

  • ಜೇಡಿಮಣ್ಣು ಕುಂಬಾರನ ಜೊತೆ ವಾದಿಸಬಾರದು (9-13)

  • ಬೇರೆ ಜನಾಂಗಗಳು ಇಸ್ರಾಯೇಲನ್ನ ಗುರುತಿಸುತ್ತೆ (14-17)

  • ದೇವರನ್ನ ನಂಬಬಹುದು ಅಂತ ಸೃಷ್ಟಿ ಮತ್ತು ಭವಿಷ್ಯವಾಣಿಗಳಿಂದ ಗೊತ್ತಾಗುತ್ತೆ (18-25)

    • ಭೂಮಿಯನ್ನ ಜನ್ರಿಗಾಗಿ ಸೃಷ್ಟಿ ಮಾಡಲಾಯ್ತು (18)

45  ಯೆಹೋವ ತಾನು ಅಭಿಷೇಕಿಸಿದ ಕೋರೆಷನಿಗೆ+ಜನಾಂಗಗಳು ಅಧೀನವಾಗೋ ತರ ಮಾಡೋಕೆ,+ರಾಜರ ಬಲವನ್ನ ಮುರಿಯೋಕೆ,ಅವನ ಬಲಗೈಯನ್ನ ಹಿಡಿದಿದ್ದಾನೆ.+ ಅವನ ಮುಂದೆ ಬಾಗಿಲುಗಳು ಮುಚ್ಚಿಹೋಗದ ಹಾಗೆಪಟ್ಟಣದ ಹೆಬ್ಬಾಗಿಲುಗಳನ್ನ ತೆರೆದಿರೋ ದೇವರು,ಅವನಿಗೆ ಹೀಗೆ ಹೇಳ್ತಿದ್ದಾನೆ   “ನಾನು ನಿನ್ನ ಮುಂದೆ ಹೋಗ್ತೀನಿ,+ಬೆಟ್ಟಗಳನ್ನ ಸಮಮಾಡ್ತೀನಿ. ತಾಮ್ರದ ಬಾಗಿಲುಗಳನ್ನ ತುಂಡುತುಂಡು ಮಾಡ್ತೀನಿ,ಕಬ್ಬಿಣದ ಕಂಬಿಗಳನ್ನ ಮುರಿತೀನಿ.+   ನಾನು ನಿನಗೆ ಕತ್ತಲಲ್ಲಿರೋ ಖಜಾನೆಗಳನ್ನ,ರಹಸ್ಯ ಸ್ಥಳಗಳಲ್ಲಿ ಬಚ್ಚಿಟ್ಟಿರೋ ನಿಕ್ಷೇಪಗಳನ್ನ ಕೊಡ್ತೀನಿ.+ ಆಗ ನಿನ್ನನ್ನ ನಿನ್ನ ಹೆಸ್ರಿಂದ ಕರೆಯುತ್ತಿರೋ ಇಸ್ರಾಯೇಲಿನ ದೇವರಾದ ಯೆಹೋವ ನಾನೇ+ ಅಂತ ನೀನು ತಿಳ್ಕೊಳ್ತೀಯ.   ನನ್ನ ಸೇವಕ ಯಾಕೋಬನಿಗಾಗಿ, ನಾನು ಆರಿಸ್ಕೊಂಡ ಇಸ್ರಾಯೇಲಿಗಾಗಿ,ನಾನು ನಿನ್ನನ್ನ ನಿನ್ನ ಹೆಸ್ರಿಂದ ಕರಿತಿದ್ದೀನಿ. ನಿನಗೆ ನನ್ನ ಬಗ್ಗೆ ಗೊತ್ತಿಲ್ಲದಿದ್ರೂ ನಾನು ನಿನಗೆ ಒಂದು ಗೌರವಯುತ ಹೆಸ್ರನ್ನ ಕೊಡ್ತಿದ್ದೀನಿ.   ನಾನು ಯೆಹೋವ, ನನ್ನನ್ನ ಬಿಟ್ಟು ಬೇರೆ ಯಾರೂ ಇಲ್ಲ. ನನ್ನನ್ನ ಬಿಟ್ಟು ಬೇರೆ ದೇವರಿಲ್ಲ.+ ನಿನಗೆ ನನ್ನ ಬಗ್ಗೆ ಗೊತ್ತಿಲ್ಲದಿದ್ರೂ ನಾನು ನಿನ್ನನ್ನ ಬಲಪಡಿಸ್ತೀನಿ.*   ಪೂರ್ವದಿಂದ ಪಶ್ಚಿಮದ ತನಕ ಇರೋ ಎಲ್ಲ ಜನ,ನನ್ನನ್ನ ಬಿಟ್ಟು ಬೇರೆ ಯಾವ ದೇವರೂ ಇಲ್ಲ+ ಅಂತತಿಳ್ಕೊಳ್ಳೋಕೆ ಹೀಗೆ ಮಾಡ್ತೀನಿ. ನಾನು ಯೆಹೋವ, ನನ್ನನ್ನ ಬಿಟ್ಟು ಬೇರೆ ಯಾರೂ ಇಲ್ಲ.+   ಬೆಳಕನ್ನೂ ಕತ್ತಲನ್ನೂ ಸೃಷ್ಟಿಸಿದವನು ನಾನೇ,+ಶಾಂತಿಯನ್ನ ಕೊಡುವವನು,+ ಕಷ್ಟವನ್ನ ತರುವವನು ನಾನೇ,+ಇದನ್ನೆಲ್ಲ ಮಾಡ್ತಿರುವವನು ಯೆಹೋವನಾದ ನಾನೇ.   ಆಕಾಶವೇ, ಮೇಲಿಂದ ಮಳೆ ಸುರಿಸು.+ ನೀತಿ ಅನ್ನೋ ಮಳೆಯ ಹನಿಗಳನ್ನ ಭೂಮಿಯಲ್ಲೆಲ್ಲ ಹನಿಸು. ಭೂಮಿ ಎಚ್ಚರಗೊಳ್ಳಲಿ! ರಕ್ಷಣೆಯ ಮತ್ತು ನೀತಿಯ ಬೀಜಗಳು ಮೊಳಕೆಯೊಡೆಯಲಿ!+ ಅವೆರಡೂ ಭೂಮಿಯಲೆಲ್ಲ ಹರಡಲಿ. ಯೆಹೋವನಾದ ನಾನು ಇದನ್ನೆಲ್ಲ ಆಗೋ ತರ ಮಾಡಿದ್ದೀನಿ.”   ತನ್ನನ್ನ ಸೃಷ್ಟಿಸಿದವನ ಜೊತೆ* ವಾದಿಸುವವನ* ಗತಿಯನ್ನ ಏನು ಹೇಳಲಿ! ಯಾಕಂದ್ರೆ ಅವನು ಕೇವಲ ಮಣ್ಣಿನ ಮಡಿಕೆಯ ಚೂರು,ಬೇರೆ ತುಂಡುಗಳ ಜೊತೆ ನೆಲದ ಮೇಲೆ ಬಿದ್ಕೊಂಡಿರೋ ಒಂದು ತುಂಡು! ಜೇಡಿಮಣ್ಣು ತನ್ನ ಕುಂಬಾರನಿಗೆ* “ನೀನು ಏನು ಮಾಡ್ತಿದ್ದೀಯ?” ಅಂತ ಕೇಳಬಹುದಾ?+ ಅಥವಾ ನಿನ್ನ ಕೈಯಿಂದನೇ ಆದ ವಸ್ತು “ನಿನಗೆ ಕೈ ಇಲ್ಲ” ಅಂತ ಹೇಳೋದು ಸರಿನಾ?* 10  ತನ್ನ ತಂದೆ ಹತ್ರ “ನೀನು ಯಾಕೆ ನನಗೆ ತಂದೆಯಾದೆ?” ಅಂತ ಕೇಳುವವನ,ತನ್ನ ತಾಯಿಗೆ “ನೀನು ನನ್ನನ್ನ ಯಾಕೆ ಹೆತ್ತೆ?” ಅಂತ ಕೇಳುವವನ ಗತಿ ಏನು ಹೇಳಲಿ! 11  ಇಸ್ರಾಯೇಲ್ಯರನ್ನ ರಚಿಸಿದವನೂ ಅವ್ರ ಪವಿತ್ರ ದೇವರೂ+ ಆಗಿರೋ ಯೆಹೋವ ಹೀಗೆ ಹೇಳ್ತಿದ್ದಾನೆ“ನಡೆಯಲಿರೋ ವಿಷ್ಯಗಳ ಬಗ್ಗೆ ನೀನು ನನಗೆ ಪ್ರಶ್ನೆ ಕೇಳ್ತೀಯಾ? ನನ್ನ ಗಂಡು ಮಕ್ಕಳ+ ಬಗ್ಗೆ ಮತ್ತು ನಾನು ನನ್ನ ಕೈಯಿಂದ ಮಾಡಿರೋ ವಿಷ್ಯಗಳ ಬಗ್ಗೆ ನನಗೇ ಹೇಳ್ತೀಯಾ? 12  ನಾನು ಭೂಮಿಯನ್ನ ಮಾಡಿ+ ಅದ್ರ ಮೇಲೆ ಮಾನವನನ್ನ ಸೃಷ್ಟಿಸಿದೆ.+ ನಾನೇ ನನ್ನ ಸ್ವಂತ ಕೈಗಳಿಂದ ಆಕಾಶವನ್ನ ಹರಡಿದೆ,+ಅದ್ರ ಸೈನ್ಯಕ್ಕೆ ನಾನೇ ಆಜ್ಞೆಗಳನ್ನ ಕೊಟ್ಟೆ.”+ 13  “ನಾನು ನೀತಿವಂತ ಆಗಿರೋದ್ರಿಂದ ಒಬ್ಬನನ್ನ ಎಬ್ಬಿಸಿದೆ,+ನಾನು ಅವನ ಮಾರ್ಗಗಳನ್ನೆಲ್ಲ ಸರಾಗಮಾಡ್ತೀನಿ. ನನ್ನ ಪಟ್ಟಣವನ್ನ ಕಟ್ಟುವವನು ಅವನೇ,+ಹಣ ತಗೊಳ್ಳದೆ, ಲಂಚ ಕೇಳದೆ+ ಸೆರೆಯಲ್ಲಿರೋ ನನ್ನ ಜನ್ರನ್ನ ಬಿಡಿಸುವವನು+ ಅವನೇ” ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ. 14  ಯೆಹೋವ ಹೀಗೆ ಹೇಳ್ತಿದ್ದಾನೆ“ಈಜಿಪ್ಟಿನ ಲಾಭ,* ಇಥಿಯೋಪ್ಯದ ವ್ಯಾಪಾರ ಸರಕುಗಳು* ನಿನ್ನದಾಗುತ್ತೆ. ಶೆಬದಲ್ಲಿರೋ ಎತ್ರವಾದ ಜನ ನಿನ್ನ ಹತ್ರ ಬರ್ತಾರೆ ಮತ್ತು ನಿನ್ನವರಾಗ್ತಾರೆ. ಅವರು ಬೇಡಿಗಳನ್ನ ಹಾಕೊಂಡು ನಿನ್ನ ಹಿಂದೆಹಿಂದೆ ಬರ್ತಾರೆ. ಭಯಭಕ್ತಿಯಿಂದ ಅವರು ನಿನಗೆ+ ‘ಖಂಡಿತ ದೇವರು ನಿನ್ನ ಜೊತೆ ಇದ್ದಾನೆ.+ ಆತನನ್ನ ಬಿಟ್ಟು ಬೇರೆ ದೇವರಿಲ್ಲ, ಬೇರೆ ಯಾರೂ ಇಲ್ಲ’ ಅಂತ ಹೇಳ್ತಾರೆ.” 15  ಇಸ್ರಾಯೇಲ್ಯರ ದೇವರೇ, ರಕ್ಷಕನೇ,+ನಿಜಕ್ಕೂ ನೀನು, ನಿನ್ನನ್ನೇ ಮರೆಮಾಡ್ಕೊಳ್ಳೋ ದೇವರಾಗಿದ್ದೀಯ. 16  ಮೂರ್ತಿಗಳನ್ನ ಮಾಡುವವ್ರೆಲ್ಲ ನಾಚಿಕೆಗೀಡಾಗ್ತಾರೆ. ಅವರು ಅವಮಾನಕ್ಕೆ ಗುರಿಯಾಗ್ತಾರೆ, ಅಪಮಾನ ಅನುಭವಿಸ್ತಾರೆ.+ 17  ಆದ್ರೆ ಇಸ್ರಾಯೇಲೇ, ಯೆಹೋವ ನಿನ್ನನ್ನ ಸದಾಕಾಲಕ್ಕೂ ಸಂರಕ್ಷಿಸ್ತಾನೆ.+ ಮುಂದೆ ಯಾವತ್ತೂ ನೀನು ಅವಮಾನಕ್ಕೆ ಗುರಿಯಾಗಲ್ಲ, ಅಪಮಾನವನ್ನ ಅನುಭವಿಸಲ್ಲ.+ 18  ಸತ್ಯ ದೇವರಾದ ಯೆಹೋವ ಆಕಾಶ ಸೃಷ್ಟಿಸಿದನು. ಆತನು ಭೂಮಿಯನ್ನ ನಿರ್ಮಿಸಿ,+ ರಚಿಸಿ, ಅದನ್ನ ದೃಢವಾಗಿ ಸ್ಥಾಪಿಸಿದನು,+ಆತನು ಅದನ್ನ ಹಾಗೇ ಸುಮ್ಮನೆ* ಸೃಷ್ಟಿಸಲಿಲ್ಲ, ಜನ ವಾಸಿಸಬೇಕಂತನೇ ರೂಪಿಸಿದನು.+ ಆತನು ಹೀಗೆ ಹೇಳ್ತಿದ್ದಾನೆ“ನಾನು ಯೆಹೋವ, ನನ್ನನ್ನ ಬಿಟ್ಟು ಬೇರೆ ಯಾರೂ ಇಲ್ಲ. 19  ನಾನು ರಹಸ್ಯವಾದ ಒಂದು ಸ್ಥಳದಲ್ಲಿ, ಅಂಧಕಾರದ ಒಂದು ದೇಶದಲ್ಲಿ ಮಾತಾಡಲಿಲ್ಲ.+ ನಾನು ಯಾಕೋಬನ ಸಂತತಿಗೆ,‘ನನ್ನನ್ನ ಹುಡುಕಿ. ಆದ್ರೆ ನಿಮ್ಮ ಪ್ರಯತ್ನ ವ್ಯರ್ಥವಾಗುತ್ತೆ’* ಅಂತ ಹೇಳಲಿಲ್ಲ. ನಾನು ಯೆಹೋವ. ನಾನು ನೀತಿಯ ಮಾತುಗಳನ್ನಾಡ್ತೀನಿ, ನ್ಯಾಯವಾದ ವಿಷ್ಯಗಳನ್ನ ಹೇಳ್ತೀನಿ.+ 20  ಇಸ್ರಾಯೇಲ್ಯರೇ, ನೀವೆಲ್ಲ ಒಂದಾಗಿ ಬನ್ನಿ. ಜನಾಂಗಗಳ ಕೈಯಿಂದ ತಪ್ಪಿಸ್ಕೊಂಡು ಹೋದವ್ರೇ, ಎಲ್ರೂ ಒಟ್ಟಾಗಿ ಬನ್ನಿ.+ ಕೆತ್ತಿದ ಮೂರ್ತಿಗಳನ್ನ ಹೊತ್ಕೊಂಡು ಹೋಗುವವ್ರಿಗೆ ಏನೂ ಗೊತ್ತಿಲ್ಲ,ಅವರು ತಮ್ಮನ್ನು ರಕ್ಷಿಸದ ದೇವರುಗಳಿಗೆ ಪ್ರಾರ್ಥಿಸ್ತಾರೆ.+ 21  ನಿಮ್ಮ ಮೊಕದ್ದಮೆಯನ್ನ ಪ್ರಸ್ತುತಪಡಿಸಿ, ನಿಮ್ಮ ವಾದವಿವಾದಗಳನ್ನ ಮಂಡಿಸಿ. ಹೌದು, ನೀವೆಲ್ಲ ಒಟ್ಟುಗೂಡಿ ಬಂದು ಮಾತಾಡ್ಕೊಳ್ಳಿ. ಇದ್ರ ಬಗ್ಗೆ ಪುರಾತನ ಕಾಲದಲ್ಲೇ ಯಾರು ಹೇಳಿದ್ರು? ಇದ್ರ ಬಗ್ಗೆ ತುಂಬ ಹಿಂದೆನೇ ಯಾರು ತಿಳಿಸಿದ್ರು? ಯೆಹೋವನಾದ ನಾನೇ ಅಲ್ವಾ? ನಾನಲ್ಲದೆ ಬೇರೆ ಯಾವ ದೇವರೂ ಇಲ್ಲ. ನಾನು ನೀತಿವಂತ ದೇವರೂ ರಕ್ಷಕನೂ ಆಗಿದ್ದೀನಿ.+ ನನ್ನ ಬಿಟ್ಟು ಬೇರೆ ಯಾರೂ ಇಲ್ಲ.+ 22  ಭೂಮಿಯ ಮೂಲೆಮೂಲೆಯಲ್ಲಿ ವಾಸಿಸ್ತಿರೋ ಜನ್ರೇ, ನನ್ನ ಕಡೆ ತಿರುಗಿ ರಕ್ಷಣೆ ಪಡ್ಕೊಳ್ಳಿ.+ ಯಾಕಂದ್ರೆ ನಾನೇ ದೇವರು, ನಾನಲ್ಲದೆ ಬೇರೆ ಯಾವ ದೇವರೂ ಇಲ್ಲ.+ 23  ನಾನು ನನ್ನ ಮೇಲೆ ಆಣೆ ಮಾಡಿ ಹೇಳ್ತೀನಿ,ನನ್ನ ಬಾಯಿಂದ ಹೊರಟ ಮಾತು ಸುಳ್ಳಾಗಲ್ಲ,+ಪ್ರತಿಯೊಬ್ಬರು ನನ್ನ ಮುಂದೆ ಮಂಡಿ ಹಾಕ್ತಾರೆ,ಪ್ರತಿಯೊಬ್ಬರು ನನಗೆ ನಿಷ್ಠಾವಂತರಾಗಿ ಇರ್ತಿವಿ ಅಂತ ಮಾತುಕೊಡ್ತಾ,+ 24  ಹೀಗೆ ಹೇಳ್ತಾರೆ ‘ಯೆಹೋವ ಯಾವಾಗ್ಲೂ ಸರಿಯಾದದ್ದನ್ನೇ ಮಾಡ್ತಾನೆ ಮತ್ತು ಆತನು ಬಲಶಾಲಿಯಾಗಿದ್ದಾನೆ. ಆತನ ಮೇಲೆ ಕೋಪ ಮಾಡ್ಕೊಳ್ಳುವವ್ರೆಲ್ಲ ಅವಮಾನಕ್ಕೆ ಗುರಿಯಾಗಿ ಆತನ ಮುಂದೆ ಬರ್ತಾರೆ. 25  ತಾವು ಯೆಹೋವನ ಸೇವೆ ಮಾಡಿ ಸರಿಯಾದದ್ದನ್ನೇ ಮಾಡಿದ್ವಿ ಅಂತ ಇಸ್ರಾಯೇಲಿನ ಇಡೀ ಸಂತತಿಯವರು ತಿಳ್ಕೊಳ್ತಾರೆ.+ ಆತನ ಕುರಿತು ಅವರು ಹೆಮ್ಮೆಯಿಂದ ಮಾತಾಡ್ತಾರೆ.’”

ಪಾದಟಿಪ್ಪಣಿ

ಅಕ್ಷ. “ನಿನ್ನ ಸೊಂಟವನ್ನ ಬಿಗಿಯಾಗಿ ಕಟ್ತೀನಿ.”
ಅಥವಾ “ರಚಿಸಿದವನ ಜೊತೆ.”
ಅಥವಾ “ತರ್ಕಿಸುವವನ.”
ಅಥವಾ “ತನ್ನನ್ನ ರೂಪಿಸುವವನಿಗೆ.”
ಬಹುಶಃ, “‘ನೀನು ಮಾಡಿದ ವಸ್ತುವಿಗೆ ಕೈ ಇಲ್ಲ’ ಅಂತ ಹೇಳಬಹುದಾ?”
ಬಹುಶಃ, “ದಿನಕೂಲಿಗಾರರು.”
ಬಹುಶಃ, “ವ್ಯಾಪಾರಿಗಳು.”
ಬಹುಶಃ, “ಶೂನ್ಯ ಸ್ಥಳವಾಗಿರಬೇಕಂತ.”
ಅಥವಾ “ನಿಮ್ಮ ಪ್ರಯಾಸಕ್ಕೆ ಯಾವುದೇ ಬೆಲೆ ಸಿಗಲ್ಲ.”