ಜ್ಞಾನೋಕ್ತಿ 20:1-30

  • ದ್ರಾಕ್ಷಾಮದ್ಯ ಅವಮಾನಕ್ಕೆ ನಡಿಸುತ್ತೆ (1)

  • ಚಳಿಗಾಲದಲ್ಲಿ ನೇಗಿಲು ಹಿಡಿಯದ ಸೋಮಾರಿ (4)

  • ಮನುಷ್ಯನ ಮನಸ್ಸಲ್ಲಿರೋ ಯೋಚ್ನೆಗಳು ಬಾವಿ ನೀರಿನ ತರ (5)

  • ಆತುರದಲ್ಲಿ ಹರಕೆ ಹೊರುವುದರ ಬಗ್ಗೆ ಎಚ್ಚರಿಕೆ (25)

  • ಯುವಕರ ಬಲಾನೇ ಅವ್ರ ಗೌರವ (29)

20  ದ್ರಾಕ್ಷಾಮದ್ಯ ಅವಮಾನಕ್ಕೆ ನಡಿಸುತ್ತೆ,+ ಮದ್ಯ ನಿಯಂತ್ರಣ ತಪ್ಪಿಸುತ್ತೆ.+ ಬುದ್ಧಿ ಇಲ್ಲದವನು ಅದ್ರಿಂದ ಅಡ್ಡದಾರಿ ಹಿಡಿತಾನೆ.+   ರಾಜ ಜನ್ರಲ್ಲಿ ಸಿಂಹ ಗರ್ಜನೆ ತರ ಭಯ ಹುಟ್ಟಿಸ್ತಾನೆ.+ ಅವನ ಕೋಪ ಕೆರಳಿಸೋರು ತಮ್ಮ ಜೀವಾನೇ ಪಣಕ್ಕಿಡ್ತಾರೆ.+   ಜಗಳದಿಂದ ದೂರ ಇರೋದು ಒಬ್ಬನಿಗೆ ಗೌರವ ತರುತ್ತೆ,+ಆದ್ರೆ ಮೂರ್ಖ ಅದ್ರಲ್ಲೇ ತಲೆಹಾಕ್ತಾನೆ.+   ಚಳಿಗಾಲದಲ್ಲಿ ನೇಗಿಲು ಹಿಡಿಯದ ಸೋಮಾರಿ,ಕೊಯ್ಲು ಬಂದಾಗ ಭಿಕ್ಷೆ ಬೇಡ್ತಾನೆ.*+   ಮನುಷ್ಯನ ಮನಸ್ಸಲ್ಲಿರೋ ಯೋಚ್ನೆಗಳು* ಬಾವಿ ನೀರಿನ ತರ,ಬುದ್ಧಿವಂತ ಅದನ್ನ ಸೇದ್ತಾನೆ.   ತುಂಬ ಜನ ಅವ್ರಲ್ಲಿ ಪ್ರೀತಿ ಇದೆ ಅಂತ ಹೇಳ್ತಾರೆ,ಆದ್ರೆ ನಂಬಿಗಸ್ತ ಜನ್ರು ಸಿಗೋದು ತುಂಬ ಅಪರೂಪ.   ನೀತಿವಂತ ನಿಯತ್ತಾಗಿ ನಡೀತಾನೆ.+ ಅವನ ಮುಂದಿನ ಪೀಳಿಗೆ* ಖುಷಿಯಾಗಿ ಇರುತ್ತೆ.+   ರಾಜ ನ್ಯಾಯ ತೀರಿಸೋಕೆ ಸಿಂಹಾಸನದ ಮೇಲೆ ಕೂತಾಗ,+ಒಂದೇ ನೋಟದಲ್ಲಿ ಎಲ್ಲ ಕೆಟ್ಟತನವನ್ನ ಜರಡಿ ಹಿಡಿದು ತೆಗೆದುಹಾಕ್ತಾನೆ.+   ಯಾರು ತಾನೇ “ನನ್ನ ಮನಸ್ಸು ಶುದ್ಧವಾಗಿದೆ,+ನನ್ನಲ್ಲಿ ಈಗ ಯಾವ ತಪ್ಪೂ ಇಲ್ಲ” ಅಂತ ಹೇಳಕ್ಕಾಗುತ್ತೆ?+ 10  ಮೋಸದ ತಕ್ಕಡಿ, ತಪ್ಪಾದ ಅಳತೆ*ಎರಡೂ ಯೆಹೋವನಿಗೆ ಅಸಹ್ಯ.+ 11  ಒಬ್ಬ ಚಿಕ್ಕ ಹುಡುಗನ ವರ್ತನೆ ಶುದ್ಧವಾಗಿ, ಸರಿಯಾಗಿ ಇದ್ಯಾ ಇಲ್ವಾ ಅಂತಅವನು ಮಾಡೋ ಕೆಲಸಗಳಿಂದ ಗೊತ್ತಾಗಿಬಿಡುತ್ತೆ.+ 12  ಕೇಳಿಸ್ಕೊಳ್ಳೋ ಕಿವಿ, ನೋಡೋ ಕಣ್ಣುಎರಡನ್ನೂ ಮಾಡಿದ್ದು ಯೆಹೋವನೇ.+ 13  ನಿದ್ದೆಯನ್ನ ಪ್ರೀತಿಸಬೇಡ, ಬಡತನ ಅಟ್ಟಿಸ್ಕೊಂಡು ಬರುತ್ತೆ.+ ನಿನ್ನ ಕಣ್ಣು ತೆರಿ, ಆಗ ತಿಂದು ತೃಪ್ತನಾಗ್ತೀಯ.+ 14  ಕೊಂಡ್ಕೊಳ್ಳೋನು “ಇದು ಚೆನ್ನಾಗಿಲ್ಲ, ಅದು ಚೆನ್ನಾಗಿಲ್ಲ!” ಅಂತಾನೆ. ಆಮೇಲೆ ಅವನು ಮಾಡಿದ ವ್ಯಾಪಾರದ ಬಗ್ಗೆ ಕೊಚ್ಕೊಳ್ತಾನೆ.+ 15  ಬಂಗಾರ, ಹವಳ* ತುಂಬ ಅಮೂಲ್ಯ,ಜ್ಞಾನ ತುಂಬಿರೋ ತುಟಿಗಳು ಅದಕ್ಕಿಂತ ಅಮೂಲ್ಯ.+ 16  ಅಪರಿಚಿತನಿಗೆ ಜಾಮೀನು ಕೊಡುವವನ ಬಟ್ಟೆ ಕಿತ್ಕೊ.+ ಅವನು ನಡತೆಗೆಟ್ಟ* ಹೆಂಗಸಿಗಾಗಿ ವಸ್ತುಗಳನ್ನ ಒತ್ತೆ ಇಟ್ರೆ ವಾಪಸ್‌ ಕೊಡಬೇಡ.+ 17  ಮೋಸದಿಂದ ಗಳಿಸಿದ ರೊಟ್ಟಿ ಮನುಷ್ಯನಿಗೆ ರುಚಿ ಅನಿಸುತ್ತೆ,ಆದ್ರೆ ಆಮೇಲೆ ಅವನ ಬಾಯಿ ತುಂಬ ಮರಳು ತುಂಬ್ಕೊಳ್ಳುತ್ತೆ.+ 18  ಸಲಹೆ ಪಡೆದ್ರೆ ಯೋಜನೆಗಳು ಯಶಸ್ವಿ ಆಗುತ್ತೆ,+ನಿಪುಣರ ನಿರ್ದೇಶನದ* ಪ್ರಕಾರ ಯುದ್ಧ ಮಾಡು.+ 19  ಚಾಡಿ ಹೇಳಿ ಹೆಸ್ರು ಹಾಳು ಮಾಡೋನು ಗುಟ್ಟು ರಟ್ಟು ಮಾಡ್ತಾನೆ,+ಹರಟೆಯನ್ನ ಪ್ರೀತಿಸುವವನ* ಜೊತೆ ಸೇರಬೇಡ. 20  ಮಗ ಅಪ್ಪಅಮ್ಮನ ಮೇಲೆ ಶಾಪ ಹಾಕಿದ್ರೆಕತ್ತಲೆ ಆಗುವಾಗ ದೀಪ ಆರಿಹೋಗುತ್ತೆ.+ 21  ದುರಾಸೆಯಿಂದ ಗಳಿಸಿದ ಆಸ್ತಿಕೊನೆಗೆ ಆಶೀರ್ವಾದ ತರಲ್ಲ.+ 22  “ಸೇಡಿಗೆ ಸೇಡು ತೀರಿಸ್ತೀನಿ!” ಅಂತ ಹೇಳಬೇಡ.+ ಯೆಹೋವನ ಮೇಲೆ ನಿರೀಕ್ಷೆ ಇಡು,+ ಆತನೇ ನಿನ್ನನ್ನ ಕಾಪಾಡ್ತಾನೆ.+ 23  ತಪ್ಪಾದ ತೂಕದ ಕಲ್ಲು* ಯೆಹೋವನಿಗೆ ಅಸಹ್ಯ,ಮೋಸದ ಅಳತೆ ಸರಿಯಲ್ಲ. 24  ಮನುಷ್ಯ ಎಲ್ಲಿ ಹೆಜ್ಜೆ ಇಡಬೇಕಂತ ಯೆಹೋವ ದಾರಿ ತೋರಿಸ್ತಾನೆ.+ ಇಲ್ಲದಿದ್ರೆ ಎಲ್ಲಿಗೆ ಹೋಗೋದು ಅಂತ ಅವನಿಗೆ ಹೇಗೆ ಗೊತ್ತಾಗುತ್ತೆ? 25  ಆತುರಪಟ್ಟು ಹರಕೆ ಮಾಡಿ+ಆಮೇಲೆ ಅದ್ರ ಬಗ್ಗೆ ಯೋಚಿಸಿದ್ರೆ ಉರ್ಲಾಗಿರುತ್ತೆ.+ 26  ಹೊಟ್ಟನ್ನ ಧಾನ್ಯದಿಂದ ಬೇರೆ ಮಾಡೋ ಹಾಗೆ+ವಿವೇಕಿಯಾಗಿರೋ ರಾಜ ಕೆಟ್ಟವರನ್ನ ಜರಡಿ ಹಿಡಿದು ಬೇರೆ ಮಾಡ್ತಾನೆ.+ 27  ಮನುಷ್ಯನ ಉಸಿರು ಯೆಹೋವನ ದೀಪ,ಅದು ಅಂತರಾಳವನ್ನ ಶೋಧಿಸುತ್ತೆ. 28  ಶಾಶ್ವತ ಪ್ರೀತಿ, ನಂಬಿಗಸ್ತಿಕೆ ರಾಜನನ್ನ ಕಾದು ಕಾಪಾಡುತ್ತೆ,+ಶಾಶ್ವತ ಪ್ರೀತಿಯಿಂದ ತನ್ನ ಸಿಂಹಾಸನವನ್ನ ಉಳಿಸ್ಕೊಳ್ತಾನೆ.+ 29  ಯುವಕರ ಬಲಾನೇ ಅವ್ರ ಗೌರವ,+ವೃದ್ಧರ ಬಿಳಿ ಕೂದಲೇ ಅವ್ರಿಗೆ ಅಲಂಕಾರ.+ 30  ಏಟು, ಗಾಯ ಕೆಟ್ಟದನ್ನ ತೆಗಿಯುತ್ತೆ,*+ಹೊಡೆತ ಒಬ್ಬನ ಅಂತರಾಳವನ್ನ ಶುದ್ಧಮಾಡುತ್ತೆ.

ಪಾದಟಿಪ್ಪಣಿ

ಬಹುಶಃ, “ಕೊಯ್ಲಿನ ಸಮಯದಲ್ಲಿ ಹುಡುಕ್ತಾನೆ, ಆದ್ರೆ ಏನೂ ಸಿಗಲ್ಲ.”
ಅಥವಾ “ಉದ್ದೇಶಗಳು.” ಅಕ್ಷ. “ಸಲಹೆ.”
ಅಕ್ಷ. “ಗಂಡು ಮಕ್ಕಳು.”
ಅಥವಾ “ಎರಡು ರೀತಿಯ ತೂಕದ ಕಲ್ಲು, ಎರಡು ರೀತಿಯ ಅಳತೆ ಪಾತ್ರೆಗಳು.”
ಅಥವಾ “ವಿದೇಶಿ.”
ಅಥವಾ “ವಿವೇಕದಿಂದ ಕೂಡಿರೋ ಮಾರ್ಗದರ್ಶನದ.”
ಅಥವಾ “ತುಟಿಗಳಿಂದ ಮೋಡಿ ಮಾಡುವವನ.”
ಅಥವಾ “ಎರಡು ರೀತಿಯ ತೂಕದ ಕಲ್ಲು.”
ಅಥವಾ “ತಿಕ್ಕಿ ಬೆಳಗಿಸುತ್ತೆ.”