ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 5

ನಮ್ಮ ಸಭಾ ಕೂಟಗಳ ಪ್ರಯೋಜನವೇನು?

ನಮ್ಮ ಸಭಾ ಕೂಟಗಳ ಪ್ರಯೋಜನವೇನು?

ಅರ್ಜೆಂಟೀನ

ಸಿಯೆರಾ ಲಿಯೋನ್‌

ಬೆಲ್ಜಿಯಮ್‌

ಮಲೇಷಿಯ

ಅನೇಕ ಜನರು ಕ್ರೈಸ್ತ ಕೂಟಗಳಿಗೆ ಹೋಗುವುದಿಲ್ಲ. ಕಾರಣ ಅವರಿಗೆ ಬೇಕಾದ ಆಧ್ಯಾತ್ಮ ಮಾರ್ಗದರ್ಶನ ಹಾಗೂ ಸಾಂತ್ವನ ಅಲ್ಲಿ ದೊರೆಯುತ್ತಿಲ್ಲ. ಹಾಗಾದರೆ ಯೆಹೋವನ ಸಾಕ್ಷಿಗಳ ಸಭೆಗೆ ಹೋಗುವುದರಿಂದ ನಿಮಗೆ ಪ್ರಯೋಜನವಿದೆಯೇ? ಅಲ್ಲಿ ನೀವೇನು ಪಡೆಯುವಿರಿ?

ಪ್ರೀತಿ ಮುತುವರ್ಜಿ ಇರುವ ಜನರ ಸ್ನೇಹ ಹಾಗೂ ಸಂತೋಷ ಪಡೆಯುವಿರಿ. ಒಂದನೇ ಶತಮಾನದಲ್ಲಿ ಕ್ರೈಸ್ತರು ಸಭೆ ಸೇರಿ ದೇವರನ್ನು ಆರಾಧಿಸುತ್ತಿದ್ದರು. ಬೈಬಲನ್ನು ಓದಿ ಅಧ್ಯಯನ ಮಾಡುತ್ತಿದ್ದರು. ಅಣ್ಣತಮ್ಮ ಅಕ್ಕತಂಗಿಯರಂತೆ ಬೆಂಬಲ ಪ್ರೋತ್ಸಾಹ ನೀಡುತ್ತಿದ್ದರು. (ಇಬ್ರಿಯ 10:24, 25) ಅಲ್ಲಿ ಪ್ರೀತಿ ವಾತ್ಸಲ್ಯ ತುಂಬಿತುಳುಕುತ್ತಿತ್ತು. ಅವರ ನಡುವೆ ನಿಜವಾದ ಸ್ನೇಹಬಾಂಧವ್ಯ ಇತ್ತು. (2 ಥೆಸಲೊನೀಕ 1:3; 3 ಯೋಹಾನ 14) ಆ ಕ್ರೈಸ್ತರ ನಮೂನೆಯನ್ನೇ ಯೆಹೋವನ ಸಾಕ್ಷಿಗಳು ಪಾಲಿಸುತ್ತಿದ್ದಾರೆ. ಅವರ ಸಭೆಗಳಲ್ಲಿ ಸ್ನೇಹ ಸಂಭ್ರಮದ ವಾತಾವರಣವಿದೆ.

ಬೈಬಲ್‌ನಲ್ಲಿರುವ ತತ್ವಗಳನ್ನು ಕಾರ್ಯರೂಪಕ್ಕೆ ಹಾಕಲು ಕಲಿತು ಪ್ರಯೋಜನ ಪಡೆಯುವಿರಿ. ಬೈಬಲ್‌ನಲ್ಲಿ ತಿಳಿಸಿರುವಂತೆ ಇಂದು ಸಹ ಸ್ತ್ರೀಪುರುಷರು ಹಾಗೂ ಮಕ್ಕಳು ಸಭೆ ಸೇರುತ್ತಾರೆ. ಅರ್ಹ ಉಪನ್ಯಾಸಕರು ಬೈಬಲ್‌ನಲ್ಲಿರುವ ತತ್ವಗಳನ್ನು ಕಾರ್ಯರೂಪಕ್ಕೆ ಹಾಕುವುದು ಹೇಗೆಂದು ನಮಗೆ ಕಲಿಸುತ್ತಾರೆ. (ಧರ್ಮೋಪದೇಶಕಾಂಡ 31:12; ನೆಹೆಮೀಯ 8:8) ಕಾರ್ಯಕ್ರಮದಲ್ಲಿ ಸಭಿಕರೆಲ್ಲರೂ ಭಾಗವಹಿಸುವ ಹಾಗೂ ಜೊತೆಗೂಡಿ ಸ್ತುತಿಗೀತೆಗಳನ್ನು ಹಾಡುವ ಅವಕಾಶವಿದೆ. ಇದು ದೇವರ ಮೇಲೆ ನಾವಿಟ್ಟಿರುವ ನಂಬಿಕೆ, ನಮಗಿರುವ ಭವ್ಯ ನಿರೀಕ್ಷೆ ಇವನ್ನೆಲ್ಲ ಹಂಚಿಕೊಳ್ಳಲು ಸಂದರ್ಭ ಒದಗಿಸುತ್ತದೆ.—ಇಬ್ರಿಯ 10:23.

ದೇವರ ಮೇಲೆ ನಿಮ್ಮ ನಂಬಿಕೆ ಹೆಚ್ಚಿ ಆಶೀರ್ವಾದ ಪಡೆಯುವಿರಿ. ಯೇಸುವಿನ ಅನುಯಾಯಿಗಳಲ್ಲಿ ಒಬ್ಬನಾಗಿದ್ದ ಪೌಲ ಎಂಬವನೊಮ್ಮೆ ಒಂದು ಸಭೆಗೆ ಪತ್ರ ಬರೆದು “ನಾನು ನಿಮ್ಮನ್ನು ನೋಡಲು ಹಂಬಲಿಸುತ್ತಿದ್ದೇನೆ, . . . ಉತ್ತೇಜನವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಅಂದರೆ ನಿಮ್ಮ ನಂಬಿಕೆಯಿಂದ ನಾನು ಮತ್ತು ನನ್ನ ನಂಬಿಕೆಯಿಂದ ನೀವು ಉತ್ತೇಜಿಸಲ್ಪಡಲು ಸಾಧ್ಯವಾಗಬಹುದು” ಎಂದು ತಿಳಿಸಿದನು. (ರೋಮನ್ನರಿಗೆ 1:11, 12) ಹೌದು ನಾವು ಪ್ರತಿವಾರವೂ ಸಭೆಗೆ ಹಾಜರಾಗಿ ದೇವಭಕ್ತ ಜನರೊಂದಿಗೆ ಬೆರೆಯುವಾಗ ದೇವರ ಮೇಲೆ ನಮ್ಮ ನಂಬಿಕೆ ಹೆಚ್ಚುತ್ತೆ. ಅಲ್ಲದೆ ಬೈಬಲ್‌ನಲ್ಲಿರುವ ತತ್ವಗಳನ್ನು ಕಾರ್ಯರೂಪಕ್ಕೆ ಹಾಕಲು ಸ್ಫೂರ್ತಿ ಸಿಗುತ್ತೆ.

ನೀವೇಕೆ ನಮ್ಮ ಈ ವಾರದ ಕ್ರೈಸ್ತ ಕೂಟಕ್ಕೆ ಹಾಜರಾಗಿ ಮೇಲೆ ತಿಳಿಸಿದ್ದನ್ನೆಲ್ಲ ಖುದ್ದಾಗಿ ಆಸ್ವಾದಿಸಬಾರದು? ನಿಮ್ಮನ್ನು ಸ್ನೇಹಪೂರ್ವಕವಾಗಿ ಬರಮಾಡಿಕೊಳ್ಳಲಾಗುವುದು. ಕಾರ್ಯಕ್ರಮ ಉಚಿತವಾಗಿದೆ.

  • ನಮ್ಮ ಸಭೆಯ ಕಾರ್ಯಕಲಾಪ ಯಾವ ನಮೂನೆಯನ್ನು ಆಧರಿಸಿದೆ?

  • ಯೆಹೋವನ ಸಾಕ್ಷಿಗಳ ಸಭೆಗೆ ಹಾಜರಾಗುವುದರಿಂದ ಯಾವೆಲ್ಲ ಪ್ರಯೋಜನ ಸಿಗುತ್ತದೆ?