ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?

ಯೆಹೋವನ ಸಾಕ್ಷಿಗಳು ಲೋಕದ ಎಲ್ಲ ಕಡೆಗಳಲ್ಲಿ ಇದ್ದಾರೆ ಮತ್ತು ಅವರು ವಿಭಿನ್ನ ಜಾತಿ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳಿಂದ ಬಂದಿದ್ದಾರೆ. ಇಷ್ಟೊಂದು ವೈವಿಧ್ಯತೆ ಇದ್ದರೂ ಐಕ್ಯವಾಗಿರಲು ಕಾರಣವೇನು?

ದೇವರ ಇಷ್ಟ ಏನು ಗೊತ್ತೆ?

ತಾನೇನು ಇಷ್ಟಪಡುತ್ತೇನೆಂದು ಭೂಮಿಯಲ್ಲಿರುವ ಎಲ್ಲ ಜನರಿಗೆ ತಿಳಿಯಬೇಕೆಂದು ದೇವರು ಬಯಸುತ್ತಾನೆ. ದೇವರ ಇಷ್ಟವೇನು? ಆ ವಿಷಯವನ್ನು ಯಾರು ಬೇರೆಯವರಿಗೆ ತಿಳಿಸುತ್ತಿದ್ದಾರೆ?

ಪಾಠ 1

ಯೆಹೋವನ ಸಾಕ್ಷಿಗಳ ಪರಿಚಯ ನಿಮಗಿದೆಯೇ?

ನಿಮಗೆ ಎಷ್ಟು ಜನ ಯೆಹೋವನ ಸಾಕ್ಷಿಗಳ ಪರಿಚಯವಿದೆ? ಅವರ ಬಗ್ಗೆ ನಿಮಗೇನು ಗೊತ್ತಿದೆ?

ಪಾಠ 2

“ಯೆಹೋವನ ಸಾಕ್ಷಿಗಳು” ಎಂಬ ಹೆಸರೇಕೆ?

ಈ ಹೆಸರು ನಮಗಿರಲು ಇರುವ ಮೂರು ಕಾರಣಗಳನ್ನು ಗಮನಿಸಿ.

ಪಾಠ 3

ಬೈಬಲ್‌ ಸತ್ಯ ಪುನಃ ಹೇಗೆ ಬೆಳಕಿಗೆ ಬಂತು?

ಬೈಬಲಿನಲ್ಲಿ ಹೇಳಿರುವ ವಿಷಯಗಳ ಸರಿಯಾದ ಅರ್ಥ ಇದೇ ಎಂದು ಹೇಗೆ ಖಚಿತ ಮಾಡಿಕೊಳ್ಳಬಹುದು?

ಪಾಠ 4

ನೂತನ ಲೋಕ ಭಾಷಾಂತರ ಬೈಬಲನ್ನು ಹೊರತರಲು ಕಾರಣ?

ಬೈಬಲಿನ ಈ ಭಾಷಾಂತರ ವಿಶೇಷವಾದದ್ದು ಏಕೆ?

ಪಾಠ 5

ನಮ್ಮ ಸಭಾ ಕೂಟಗಳ ಪ್ರಯೋಜನವೇನು?

ಬೈಬಲನ್ನು ಅಧ್ಯಯನ ಮಾಡಲು ಮತ್ತು ಒಬ್ಬರಿಗೊಬ್ಬರು ಉತ್ತೇಜನದ ವಿನಿಮಿಯ ಮಾಡಲು ನಾವು ಸಭೆ ಸೇರುತ್ತೇವೆ. ನಿಮಗೂ ಹಾರ್ದಿಕ ಸ್ವಾಗತ!

ಪಾಠ 6

ಯೆಹೋವನ ಸಾಕ್ಷಿಗಳೇಕೆ ಪರಸ್ಪರ ಸಾಹಚರ್ಯಕ್ಕೆ ಮಹತ್ವ ಕೊಡುತ್ತಾರೆ?

ಕ್ರೈಸ್ತರು ಪರಸ್ಪರ ಸಾಹಚರ್ಯ ಮಾಡುವಂತೆ ಬೈಬಲ್‌ ಪ್ರೋತ್ಸಾಹಿಸುತ್ತದೆ. ಇಂಥ ಸಹವಾಸದಿಂದ ನಿಮಗೆ ಯಾವ ಪ್ರಯೋಜನ ಸಿಗುತ್ತದೆಂದು ತಿಳಿದುಕೊಳ್ಳಿ.

ಪಾಠ 7

ನಮ್ಮ ಸಭಾ ಕೂಟಗಳಲ್ಲಿ ಯಾವ್ಯಾವ ಕಾರ್ಯಕ್ರಮ ನಡೆಯುತ್ತೆ?

ನಮ್ಮ ಕೂಟಗಳು ಹೇಗಿರಬಹುದು ಎಂದು ಯಾವತ್ತಾದರೂ ನೀವು ಯೋಚನೆ ಮಾಡಿದ್ದುಂಟಾ? ಅಲ್ಲಿ ನಿಮಗೆ ಸಿಗುವ ಬೈಬಲ್‌ ಶಿಕ್ಷಣದ ಗುಣಮಟ್ಟವನ್ನು ನೋಡಿ ನೀವು ನಿಜವಾಗಿಯೂ ಸಂತೋಷಪಡುವಿರಿ ಎನ್ನುವುದರರಲ್ಲಿ ಎರಡು ಮಾತಿಲ್ಲ.

ಪಾಠ 8

ಸಭೆಗೆ ಹೋಗುವಾಗ ಸಭ್ಯ ಉಡುಗೆ ಧರಿಸಬೇಕು ಏಕೆ?

ನಾವು ಎಂಥ ಉಡುಪು ಧರಿಸುತ್ತೇವೆಂಬ ವಿಷಯಕ್ಕೆ ದೇವರು ಗಮನಕೊಡ್ತಾನಾ? ನಾವು ಯಾವ ಬೈಬಲ್‌ ತತ್ವಗಳನ್ನು ಮನಸ್ಸಲ್ಲಿಟ್ಟು ನಮ್ಮ ಉಡುಪು, ಕೇಶಾಲಂಕಾರವನ್ನು ಮಾಡುತ್ತೇವೆ ಎಂದು ತಿಳಿದುಕೊಳ್ಳಿ.

ಪಾಠ 9

ಸಭಾ ಕೂಟಗಳ ಕಾರ್ಯಕ್ರಮಕ್ಕೆ ತಯಾರಿ ಮಾಡುವುದು ಹೇಗೆ?

ಮುಂಚಿತವಾಗಿಯೇ ತಯಾರಿ ಮಾಡಿಕೊಂಡು ಬಂದರೆ ಸಭಾ ಕೂಟಗಳ ಸಂಪೂರ್ಣ ಪ್ರಯೋಜನ ನಿಮ್ಮದಾಗುತ್ತೆ.

ಪಾಠ 10

ಕುಟುಂಬ ಆರಾಧನೆ ಅಂದರೇನು?

ಈ ಏರ್ಪಾಡಿನಿಂದಾಗಿ ನೀವು ಹೇಗೆ ದೇವರಿಗೆ ಹೆಚ್ಚು ಆಪ್ತರಾಗುವಿರಿ ಮತ್ತು ನಿಮ್ಮ ಕುಟುಂಬದಲ್ಲಿ ಹೇಗೆ ಪ್ರೀತಿ ಹೆಚ್ಚಾಗುವುದು ಎಂದು ತಿಳಿದುಕೊಳ್ಳಿ.

ಪಾಠ 11

ನಾವು ಸಮ್ಮೇಳನಗಳನ್ನು ಆಯೋಜಿಸುವ ಉದ್ದೇಶವೇನು?

ನಾವು ಪ್ರತಿವರ್ಷ ವಿಶೇಷ ಸಂದರ್ಭಗಳಿಗಾಗಿ ಮೂರು ಬಾರಿ ಒಟ್ಟುಗೂಡುತ್ತೇವೆ. ಇಂಥ ಸಮ್ಮೇಳನಗಳಿಂದ ನೀವು ಹೇಗೆ ಹೇಗೆ ಪ್ರಯೋಜನ ಪಡೆಯಬಹುದು?

ಪಾಠ 12

ಸುವಾರ್ತೆ ಸಾರುವ ಕೆಲಸವನ್ನು ಹೇಗೆ ಮಾಡುತ್ತೇವೆ?

ಯೇಸು ಭೂಮಿಯಲ್ಲಿದ್ದಾಗ ಇಟ್ಟ ಮಾದರಿಯನ್ನೇ ನಾವಿಂದು ಪಾಲಿಸುತ್ತೇವೆ. ಆತನು ಸುವಾರ್ತೆ ಸಾರಿದ ಕೆಲವು ವಿಧಾನಗಳು ಯಾವುವು?

ಪಾಠ 13

ಪಯನೀಯರ್‌ ಸೇವೆ ಅಂದರೇನು?

ಕೆಲವು ಯೆಹೋವನ ಸಾಕ್ಷಿಗಳು ತಿಂಗಳಿನಲ್ಲಿ 30, 50 ಅಥವಾ ಹೆಚ್ಚು ತಾಸುಗಳನ್ನು ಸೇವೆಗಾಗಿ ಬದಿಗಿರಿಸುತ್ತಾರೆ. ಹಾಗೆ ಮಾಡಲು ಅವರಿಗೆ ಪ್ರಚೋದನೆ ನೀಡುವುದು ಯಾವುದು?

ಪಾಠ 14

ಪಯನೀಯರರಿಗಾಗಿ ಯಾವೆಲ್ಲ ಶಾಲೆಗಳಿವೆ?

ಸುವಾರ್ತೆ ಸಾರುವ ಕೆಲಸದಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಳ್ಳುವವರಿಗೆ ಯಾವ ವಿಶೇಷ ತರಬೇತಿ ಕೊಡಲಾಗುತ್ತದೆ?

ಪಾಠ 15

ಸಭೆಯಲ್ಲಿ ಹಿರಿಯರ ಜವಾಬ್ದಾರಿ ಏನು?

ಹಿರಿಯರು ಆಧ್ಯಾತ್ಮಿಕವಾಗಿ ಪ್ರೌಢರಾಗಿರುತ್ತಾರೆ. ಅವರು ಸಭೆಯಲ್ಲಿ ಮುಂದಾಳತ್ವ ವಹಿಸುತ್ತಾರೆ. ಅವರು ಯಾವ ನೆರವನ್ನು ಒದಗಿಸುತ್ತಾರೆ?

ಪಾಠ 16

ಸಹಾಯಕ ಸೇವಕರ ಜವಾಬ್ದಾರಿ ಏನು?

ಸಹಾಯಕ ಸೇವಕರು ಸಭೆಯ ಚಟುವಟಿಕೆಗಳು ಸರಾಗವಾಗಿ ಜರುಗಲು ನೆರವಾಗುತ್ತಾರೆ. ಅವರ ಕೆಲಸಗಳು ಎಲ್ಲರಿಗೆ ಹೇಗೆ ಪ್ರಯೋಜನ ತರುತ್ತೆ ಅಂತ ಓದಿ ತಿಳಿಯಿರಿ

ಪಾಠ 17

ಸಂಚರಣ ಮೇಲ್ವಿಚಾರಕರು ನಮಗೆ ಹೇಗೆ ನೆರವು ನೀಡುತ್ತಾರೆ?

ಸಂಚರಣ ಮೇಲ್ವಿಚಾರಕರು ಸಭೆಗಳಿಗೆ ಭೇಟಿಮಾಡುವುದರ ಉದ್ದೇಶವೇನು? ಆ ಭೇಟಿಯಿಂದ ನಿಮಗೇನು ಪ್ರಯೋಜನ?

ಪಾಠ 18

ವಿಪತ್ತಿನ ಸಮಯದಲ್ಲಿ ನಾವು ಹೇಗೆ ಸ್ಪಂದಿಸುತ್ತೇವೆ?

ಎಲ್ಲಾದರೂ ವಿಪತ್ತು ಸಂಭವಿಸಿದರೆ ತಕ್ಷಣ ನಾವು ಸಂತ್ರಸ್ತರಿಗೆ ಬೇಕಾದ ಸಹಾಯ ಮತ್ತು ಸಾಂತ್ವನ ನೀಡುತ್ತೇವೆ. ಹೇಗೆಂದು ತಿಳಿಯಬೇಕೇ?

ಪಾಠ 19

ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳು ಯಾರು?

ಸಮಯಕ್ಕೆ ಸರಿಯಾಗಿ ಆಧ್ಯಾತ್ಮಿಕ ಆಹಾರವನ್ನು ಒದಗಿಸಲಿಕ್ಕಾಗಿ ಒಂದು ಆಳನ್ನು ನೇಮಿಸುವೆನೆಂದು ಯೇಸು ಮಾತುಕೊಟ್ಟಿದ್ದನು. ಈ ಮಾತನ್ನು ಯೇಸು ಹೇಗೆ ಪೂರೈಸಿದ್ದಾನೆ?

ಪಾಠ 20

ಆಡಳಿತ ಮಂಡಲಿಯ ಕಾರ್ಯವೇನು?

ಒಂದನೇ ಶತಮಾನದಲ್ಲಿ, ಹಿರೀಪುರುಷರ ಮತ್ತು ಅಪೊಸ್ತಲರ ಒಂದು ಚಿಕ್ಕ ಗುಂಪು ಕ್ರೈಸ್ತ ಸಭೆಯ ಆಡಳಿತ ಮಂಡಲಿಯಾಗಿ ಕಾರ್ಯನಿರ್ವಹಿಸಿತು. ಇಂದು ಯಾರು ಕಾರ್ಯನಿರ್ವಹಿಸುತ್ತಿದ್ದಾರೆ?

ಪಾಠ 21

“ಬೆತೆಲ್‌” ಅಂದರೇನು?

ಒಂದು ಮುಖ್ಯ ಉದ್ದೇಶದೊಂದಿಗೆ ಕಾರ್ಯನಡಿಸುವ ಅನನ್ಯ ಸ್ಥಳ ಬೆತೆಲ್‌. ಅಲ್ಲಿ ಕೆಲಸಮಾಡುವವರ ಬಗ್ಗೆ ಹೆಚ್ಚು ಕಲಿಯಿರಿ.

ಪಾಠ 22

ಬ್ರಾಂಚ್‌ ಆಫೀಸ್‌ನಲ್ಲಿ ಏನೆಲ್ಲ ಕೆಲಸಕಾರ್ಯ ನಡೆಯುತ್ತದೆ?

ಬ್ರಾಂಚ್‌ ಆಫೀಸನ್ನು ನೋಡಲು ಸರ್ವರಿಗೂ ಸ್ವಾಗತವಿದೆ. ಅಲ್ಲಿ ನಡೆಯುವ ಕೆಲಸಕಾರ್ಯಗಳನ್ನು ಸಂದರ್ಶಕರಿಗೆ ತೋರಿಸುವ ಏರ್ಪಾಡಿದೆ. ನೀವೊಮ್ಮೆ ಭೇಟಿ ನೀಡುವಂತೆ ಆಮಂತ್ರಿಸುತ್ತೇವೆ.

ಪಾಠ 23

ನಮ್ಮ ಸಾಹಿತ್ಯದ ರಚನೆ ಹಾಗೂ ಅನುವಾದವನ್ನು ಹೇಗೆ ಮಾಡಲಾಗುತ್ತದೆ?

ನಾವು ಸುಮಾರು 750 ಭಾಷೆಗಳಲ್ಲಿ ಸಾಹಿತ್ಯ ಪ್ರಕಟಿಸುತ್ತೇವೆ. ನಾವೇಕೆ ಇದಕ್ಕಾಗಿ ಪ್ರಯತ್ನ ಶ್ರಮ ಹಾಕುತ್ತೇವೆ?

ಪಾಠ 24

ನಮ್ಮ ಲೋಕವ್ಯಾಪಕ ಕೆಲಸಕ್ಕೆ ಹಣಕಾಸು ಎಲ್ಲಿಂದ?

ಹಣಕಾಸಿನ ವಿಷಯದಲ್ಲಿ ಬೇರೆ ಧಾರ್ಮಿಕ ಸಂಸ್ಥೆಗಳಿಗಿಂತ ನಮ್ಮ ಸಂಘಟನೆ ಹೇಗೆ ಭಿನ್ನವಾಗಿದೆ?

ಪಾಠ 25

ರಾಜ್ಯ ಸಭಾಗೃಹಗಳನ್ನು ಏಕೆ ಮತ್ತು ಹೇಗೆ ನಿರ್ಮಿಸಲಾಗುತ್ತದೆ?

ನಮ್ಮ ಆರಾಧನೆಯ ಸ್ಥಳಕ್ಕೆ ರಾಜ್ಯ ಸಭಾಗೃಹ ಎಂದು ಹೆಸರಿರುವುದೇಕೆ? ಈ ಸರಳ ಕಟ್ಟಡಗಳು ನಮ್ಮ ಸಭೆಗಳಿಗೆ ಹೇಗೆ ಸಹಾಯಕಾರಿ ಎಂದು ತಿಳಿಯಿರಿ.

ಪಾಠ 26

ರಾಜ್ಯ ಸಭಾಗೃಹವನ್ನು ಸುಸ್ಥಿತಿಯಲ್ಲಿಡಲು ಹೇಗೆ ನೆರವಾಗುವಿರಿ?

ರಾಜ್ಯ ಸಭಾಗೃಹವನ್ನು ಸ್ವಚ್ಛವಾಗಿ ಸುಸ್ಥಿತಿಯಲ್ಲಿಡುವುದು ದೇವರಿಗೆ ಮಹಿಮೆ ತರುತ್ತದೆ. ನಿಮ್ಮ ಊರಿನಲ್ಲಿರುವ ರಾಜ್ಯ ಸಭಾಗೃಹವನ್ನು ಸುಸ್ಥಿತಿಯಲ್ಲಿಡಲು ಏನೆಲ್ಲ ಕ್ರಮ ತೆಗೆದುಕೊಳ್ಳಲಾಗುತ್ತದೆ?

ಪಾಠ 27

ರಾಜ್ಯ ಸಭಾಗೃಹ ಗ್ರಂಥಾಲಯದ ಅನುಕೂಲಗಳೇನು?

ಬೈಬಲ್‌ನಲ್ಲಿರುವ ವಿಷಯಗಳ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳಲು ಆಸೆಯೇ? ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದ ಗ್ರಂಥಾಲಯಕ್ಕೆ ಭೇಟಿ ನೀಡಿ!

ಪಾಠ 28

ನಮ್ಮ ವೆಬ್‌ಸೈಟ್‌ನಲ್ಲಿ ಏನೇನಿದೆ?

ನಮ್ಮ ಕುರಿತು ಮತ್ತು ನಮ್ಮ ನಂಬಿಕೆಗಳ ಕುರಿತು ಹೆಚ್ಚನ್ನು ನೀವು ಇಲ್ಲಿ ತಿಳಿಯಬಹುದು. ಅಷ್ಟೆ ಅಲ್ಲದೆ ಬೈಬಲ್‌ ಕುರಿತಾದ ನಿಮ್ಮ ಪ್ರಶ್ನೆಗಳಿಗೂ ಇಲ್ಲಿ ಉತ್ತರಗಳಿವೆ.

ಯೆಹೋವ ದೇವರ ಇಷ್ಟವನ್ನು ಮಾಡುವಿರಾ?

ಯೆಹೋವ ದೇವರು ನಿಮ್ಮನ್ನು ತುಂಬ ಪ್ರೀತಿಸುತ್ತಾನೆ. ನೀವು ಆತನ ಇಷ್ಟದಂತೆ ನಡೆಯಲು ಬಯಸುತ್ತೀರೆಂದು ಹೇಗೆ ತೋರಿಸಬಲ್ಲಿರಿ?