ಮಾಹಿತಿ ಇರುವಲ್ಲಿ ಹೋಗಲು

ನಮ್ಮ ಕಷ್ಟಗಳಿಗೆ ಕೊನೆ ಇದೆಯಾ?

ನಮ್ಮ ಕಷ್ಟಗಳಿಗೆ ಕೊನೆ ಇದೆಯಾ?

ನೀವೇನು ನೆನಸುತ್ತೀರಿ . . .

  • ಇದೆ?

  • ಇಲ್ಲ?

  • ಇರಬಹುದೇನೊ?

ಪವಿತ್ರ ಗ್ರಂಥ ಏನು ಹೇಳುತ್ತದೆ?

“ದೇವರು . . . ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವುದಿಲ್ಲ.”—ಪ್ರಕಟನೆ 21:3, 4, ಸತ್ಯವೇದವು.

ಈ ಮಾತುಗಳಿಂದ ಸಿಗುವ ಆಶ್ವಾಸನೆಗಳು . . .

ದೇವರು ನಮಗೆ ಕಷ್ಟ ಕೊಡುತ್ತಿಲ್ಲ.—ಯಾಕೋಬ 1:13.

ನಾವೆಷ್ಟು ಕಷ್ಟಪಡುತ್ತಿದ್ದೇವೆ ಅನ್ನೋದು ದೇವರಿಗೆ ಅರ್ಥವಾಗುತ್ತದೆ.—ಜೆಕರ್ಯ 2:8.

ಎಲ್ಲ ಕಷ್ಟದಿಂದ ನಮಗೆ ಮುಕ್ತಿ ಸಿಗುತ್ತದೆ.—ಕೀರ್ತನೆ 37:9-11.

ಪವಿತ್ರ ಗ್ರಂಥ ಹೇಳುವುದನ್ನು ನಂಬಬಹುದಾ?

ಕಣ್ಣುಮುಚ್ಚಿ ನಂಬಬಹುದು. ಯಾಕೆ ಅಂತ ಎರಡು ಕಾರಣ ನೋಡೋಣ.

  • ಅನ್ಯಾಯ, ಕಷ್ಟ ನೋಡುವಾಗ ದೇವರಿಗೆ ಕಡುಕೋಪ ಬರುತ್ತದೆ. ಹಿಂದಿನ ಕಾಲದಲ್ಲಿ ತನ್ನ ಜನರಿಗೆ ಆಗುತ್ತಿದ್ದ ಅನ್ಯಾಯವನ್ನು ನೋಡಿದಾಗ ದೇವರಿಗೆ ತುಂಬ ನೋವಾಯಿತು. “ವೈರಿಗಳ ಹಿಂಸೆಯನ್ನು” ತಾಳಲಾರದೆ ಗೋಳಾಡುತ್ತಿದ್ದ ಜನರನ್ನು ನೋಡಿ ದೇವರಿಗೆ ಅತೀವ ದುಃಖವಾಯಿತು ಎನ್ನುತ್ತದೆ ಬೈಬಲ್‌.—ನ್ಯಾಯಸ್ಥಾಪಕರು 2:18.

    ಇನ್ನೊಬ್ಬರಿಗೆ ಹಾನಿ ಮಾಡುವ ಮನುಷ್ಯರನ್ನು ದೇವರು ಇಷ್ಟಪಡುವುದಿಲ್ಲ. “ನಿರ್ದೋಷರಕ್ತವನ್ನು ಸುರಿಸುವ ಕೈ” ದೇವರಿಗೆ ಅಸಹ್ಯ ಅಂತ ಬೈಬಲ್‌ ಹೇಳುತ್ತದೆ.—ಜ್ಞಾನೋಕ್ತಿ 6:16, 17.

  • ದೇವರಿಗೆ ಒಬ್ಬೊಬ್ಬರ ಮೇಲೂ ಕಾಳಜಿಯಿದೆ. ನಾವು ಅನುಭವಿಸುತ್ತಿರುವ ನೋವು, ದುಃಖ ದೇವರಿಗೆ ಅರ್ಥವಾಗುತ್ತದೆ.—2 ಪೂರ್ವಕಾಲವೃತ್ತಾಂತ 6:29, 30.

    ತನ್ನ ರಾಜ್ಯ ಅಥವಾ ಸರ್ಕಾರದ ಮೂಲಕ ಲೋಕದಲ್ಲಿರುವ ಎಲ್ಲ ಕಷ್ಟಗಳಿಗೆ ಕೊನೆ ತರಬೇಕೆನ್ನುವುದು ಯೆಹೋವ ದೇವರ ಉದ್ದೇಶ. (ಮತ್ತಾಯ 6:9, 10) ಅಲ್ಲಿಯ ವರೆಗೆ ಕಷ್ಟಗಳನ್ನು ನಿಭಾಯಿಸಿಕೊಂಡು ಹೋಗಲು ದೇವರ ಸಹಾಯ ಬೇಡುವವರಿಗೆ ಸಹಾಯ ಖಂಡಿತ ಲಭಿಸುತ್ತದೆ.—ಅಪೊಸ್ತಲರ ಕಾರ್ಯಗಳು 17:27; 2 ಕೊರಿಂಥ 1:3, 4.

ಯೋಚಿಸಿ

ದೇವರು ಕಷ್ಟವನ್ನು ಅನುಮತಿಸಿರುವುದು ಯಾಕೆ?

ಉತ್ತರ ಪವಿತ್ರ ಗ್ರಂಥದ ಈ ಭಾಗದಲ್ಲಿದೆ: ರೋಮನ್ನರಿಗೆ 5:12; 2 ಪೇತ್ರ 3:9.