ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ | ಧುತ್ತೆಂದು ದುರಂತಗಳು ಸಂಭವಿಸಿದಾಗ . . .

ನಿಮ್ಮ ಪ್ರಿಯರು ತೀರಿಹೋದಾಗ. . .

ನಿಮ್ಮ ಪ್ರಿಯರು ತೀರಿಹೋದಾಗ. . .

ಬ್ರೆಸಿಲ್‍ನ ರೊನಾಲ್ಡುರವರು, ಕಾರು ಅಪಘಾತದಲ್ಲಿ ತಮ್ಮ ತಂದೆ, ತಾಯಿ ಸಹಿತ ಕುಟುಂಬದ ಐದು ಜನರನ್ನು ಕಳೆದುಕೊಂಡರು. ಆದರೆ ಅವರು ಮಾತ್ರ ಕೂದಲೆಳೆಯ ಅಂತರದಲ್ಲಿ ಪಾರಾದರು. ಕುಟುಂಬದವರ ಸಾವು ಅವರನ್ನು ಎಷ್ಟು ಘಾಸಿಗೊಳಿಸಿತೆಂದು ಅವರ ಮಾತಿನಲ್ಲೇ ಕೇಳಿ, “ಅವರೆಲ್ಲರೂ ಸತ್ತು ಹೋಗಿದ್ದಾರೆ ಅಂತ ನಂಗೆ ಗೊತ್ತಾಗಿದ್ದೇ ಎರಡು ತಿಂಗಳಾದ ಮೇಲೆ. ಆಗ ನಾನಿನ್ನೂ ಆಸ್ಪತ್ರೆಯಲ್ಲೇ ಇದ್ದೆ.”

ಎಲ್ಲರೂ ಸತ್ತು ಹೋಗಿದ್ದಾರೆ ಅಂತ ಗೊತ್ತಾದಾಗ ನಂಗೆ ನಂಬಲಿಕ್ಕೇ ಆಗಲಿಲ್ಲ. ಆದರೆ ಅದು ನಿಜ ಎಂದು ಅರಿವಾದಾಗ ನಂಗೆ ಸಿಡಿಲು ಬಡಿದ ಹಾಗಾಯಿತು. ಅಷ್ಟು ದುಃಖ ನಂಗೆ ಯಾವತ್ತೂ ಆಗಿರಲಿಲ್ಲ. ದಿನಗಳು ಕಳೆದರೂ ಅವರ ಸಾವನ್ನು ಮರೆಯಕ್ಕೇ ಆಗಲಿಲ್ಲ. ‘ಅವರೇ ಇಲ್ಲದ ಮೇಲೆ ನಾನ್ಯಾಕೆ ಬದುಕಿರಬೇಕು’ ಅಂತ ಯೋಚಿಸುತ್ತಿದ್ದೆ. ಸುಮಾರು ತಿಂಗಳು ಪ್ರತಿದಿನ ಅದನ್ನೇ ನೆನೆಸಿಕೊಂಡು ಅಳುತ್ತಿದ್ದೆ! ‘ಆ ದಿನ ನಾನಾದ್ರೂ ಕಾರು ಓಡಿಸಿಬಾರದಿತ್ತಾ? ನಾನು ಕಾರು ಓಡಿಸಿದ್ದಿದ್ದರೆ ಅವರು ಸಾಯ್ತಿರಲಿಲ್ಲವೇನೋ. ಅವರು ಸಾಯೋಕೆ ನಾನೇ ಕಾರಣ’ ಅಂತ ಕೊರಗುತ್ತಿದ್ದೆ.”

“ಅದಾಗಿ 16 ವರ್ಷಗಳಾಗಿವೆ, ಜೀವನ ನಡೀತಾ ಇದೆ. ಆದರೆ ಇಲ್ಲಿಯವರೆಗೆ ಅವರ ಸ್ಥಾನವನ್ನು ಯಾರಿಂದಲೂ ತುಂಬಿಸಲಿಕ್ಕೆ ಆಗಿಲ್ಲ.”

ಏನು ಮಾಡಬಹುದು?

ನೀವು ತುಂಬ ಪ್ರೀತಿಸುವ ಯಾರಾದರೊಬ್ಬರು ತೀರಿಹೋದರೆ ಮನಸ್ಸು ಹಗುರ ಆಗುವವರೆಗೂ ಅತ್ತುಬಿಡಿ. ‘ಅಳುವುದಕ್ಕೂ ತಕ್ಕ ಸಮಯವುಂಟು’ ಎಂದು ಬೈಬಲ್‌ ಹೇಳುತ್ತದೆ. (ಪ್ರಸಂಗಿ 3:1, 4) ರೊನಾಲ್ಡು ಸಹ ಇದನ್ನೇ ಮಾಡಿದರು. “ನಂಗೆ ನೆನಪಾದಾಗೆಲ್ಲ ಅಳಬೇಕು ಅಂತನಿಸುತ್ತಿತ್ತು, ಮನಸ್ಸು ಪೂರ್ತಿ ಅತ್ತುಬಿಡುತ್ತಿದ್ದೆ. ಅಳದೇ ಇರಲು ಎಷ್ಟೇ ಪ್ರಯತ್ನಿಸಿದರೂ ನನ್ನ ಕೈಲಿ ಆಗುತ್ತಿರಲಿಲ್ಲ. ಅತ್ತ ನಂತರ ಸ್ವಲ್ಪ ಸಮಾಧಾನವಾಗುತ್ತಿತ್ತು.” ಒಬ್ಬೊಬ್ಬರು ಒಂದೊಂದು ಥರ ದುಃಖವನ್ನು ವ್ಯಕ್ತಪಡಿಸುತ್ತಾರೆ. ಕಣ್ಣೀರು ಹಾಕದೆ ಇದ್ದರೆ ದುಃಖ ಇಲ್ಲ ಅಂತಲ್ಲ. ದುಃಖ ಇದ್ದರೂ ಕೆಲವರು ಅಳದೇ ಇರಬಹುದು. ಆದ್ದರಿಂದ ಅಳು ಬಾರದೇ ಇದ್ದರೆ ಬಲವಂತವಾಗಿ ಅಳಲು ಪ್ರಯತ್ನಿಸಬಾರದು.

ಒಬ್ಬರೇ ಇರಬೇಡಿ. ಇತರರ ಜೊತೆ ಬೆರೆಯಿರಿ. (ಜ್ಞಾನೋಕ್ತಿ 18:1) “ಒಬ್ಬನೇ ಇರಬೇಕು ಅಂತ ಅನಿಸಿದರೂ ಹಾಗೆ ಮಾಡ್ತಾ ಇರಲಿಲ್ಲ. ನನ್ನನ್ನು ಮಾತಾಡಿಸಿ ಸಮಾಧಾನ ಮಾಡೋಕೆ ಬರುತ್ತಿದ್ದ ಎಲ್ಲರ ಜೊತೆ ಮಾತಾಡುತ್ತಿದ್ದೆ. ನನಗಾದ ದುಃಖವನ್ನು ನನ್ನ ಹೆಂಡತಿ ಹತ್ತಿರ, ಆಪ್ತ ಸ್ನೇಹಿತರ ಹತ್ತಿರ ಮನಸ್ಸು ಬಿಚ್ಚಿ ಹೇಳುತ್ತಿದ್ದೆ” ಎಂದು ರೊನಾಲ್ಡು ಹೇಳುತ್ತಾರೆ.

ಯಾರಾದರೂ ತುಂಬ ನೋವಾಗುವ ಹಾಗೆ ಮಾತಾಡಿದರೆ ಅವರ ಮೇಲೆ ರೇಗಬೇಡಿ. “ಆಗೋದೆಲ್ಲಾ ಒಳ್ಳೇದಕ್ಕೆ” ಅಂತ ಅವರು ಹೇಳಬಹುದು. ಅಂಥ ಸಮಯದಲ್ಲೂ ಸಮಾಧಾನದಿಂದಿರಿ. “ಸ್ವಲ್ಪ ಜನ ಸಮಾಧಾನ ಮಾಡೋಕೆ ಅಂತ ಬರೋರು, ಆದ್ರೆ ಅವರ ಮಾತು ಗಾಯದ ಮೇಲೆ ಬರೆ ಎಳೆದ ಹಾಗೆ ಇರುತ್ತಿತ್ತು” ಅಂತ ರೊನಾಲ್ಡು ನೆನಪಿಸಿಕೊಳ್ಳುತ್ತಾರೆ. ಬೇರೆಯವರು ಹೇಳಿದ್ದಕ್ಕೆಲ್ಲಾ ಕೊರಗುತ್ತಾ ಕೂರದೆ, “ಆಡುವ ಮಾತುಗಳನ್ನೆಲ್ಲಾ ಲಕ್ಷ್ಯಕ್ಕೆ ತಾರದಿರು” ಎಂಬ ಬೈಬಲ್‌ ಸಲಹೆಯನ್ನು ಪಾಲಿಸಿ.—ಪ್ರಸಂಗಿ 7:21.

ಸತ್ತವರ ಸ್ಥಿತಿಯ ಕುರಿತು ತಿಳಿದುಕೊಳ್ಳಿ. “ಸತ್ತವರು ನರಳುತ್ತಿಲ್ಲ ಎಂದು ಬೈಬಲಿನ ಪ್ರಸಂಗಿ 9:5 ತಿಳಿಸುತ್ತದೆ. ಈ ವಿಷಯದಿಂದ ನನ್ನ ಮನಸ್ಸಿಗೆ ನೆಮ್ಮದಿಯಾಯಿತು. ಸತ್ತವರು ಪುನರುತ್ಥಾನ ಆಗಿ ಮತ್ತೆ ಜೀವ ಪಡೆಯುತ್ತಾರೆ ಎಂದು ಸಹ ಬೈಬಲ್‌ ತಿಳಿಸುತ್ತದೆ. ಆದ್ದರಿಂದ ನಾನು ಯಾರನ್ನೆಲ್ಲ ಕಳೆದುಕೊಂಡಿದ್ದೇನೋ ‘ಅವರು ತೀರಿಹೋಗಿದ್ದಾರೆ’ ಅಂತ ನೆನೆಸುವುದಿಲ್ಲ, ‘ಅವರು ಪ್ರವಾಸಕ್ಕೆ ಹೋಗಿದ್ದಾರೆ, ಇನ್ನೇನು ಬಂದು ಬಿಡ್ತಾರೆ’ ಅಂತ ನೆನೆಸ್ತೀನಿ” ಅಂತ ರೊನಾಲ್ಡು ಹೇಳುತ್ತಾರೆ.—ಅಪೊಸ್ತಲರ ಕಾರ್ಯಗಳು 24:15.

ನಿಮಗಿದು ಗೊತ್ತಿತ್ತಾ? ಮುಂದೊಂದು ದಿನ ದೇವರು “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು” * ಎಂದು ಬೈಬಲ್‌ ತಿಳಿಸುತ್ತದೆ.—ಯೆಶಾಯ 25:8. ▪ (g14-E 07)

^ ಪ್ಯಾರ. 11 ಇದರ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಾಗಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 7ನೇ ಅಧ್ಯಾಯ ನೋಡಿ. ಇದು www.pr418.com/knನಲ್ಲೂ ಲಭ್ಯ.