ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂದರ್ಶನ | ಫನ್‌ಲಿನ್‌ ಯಾನ್‌

ಸೂಕ್ಷ್ಮಜೀವಶಾಸ್ತ್ರಜ್ಞೆ ತನ್ನ ನಂಬಿಕೆಯ ಬಗ್ಗೆ ಮಾತಾಡುತ್ತಾರೆ

ಸೂಕ್ಷ್ಮಜೀವಶಾಸ್ತ್ರಜ್ಞೆ ತನ್ನ ನಂಬಿಕೆಯ ಬಗ್ಗೆ ಮಾತಾಡುತ್ತಾರೆ

ಫನ್‌-ಲಿನ್‌ ಯಾನ್‌, ಟೈವಾನ್‍ನ ತೈಪೀಯಲ್ಲಿ ಕೇಂದ್ರೀಯ ಸಂಶೋಧನಾ ಅಕಾಡೆಮಿಯ ಒಬ್ಬ ಹಿರಿಯ ಸಂಶೋಧನಾ ಸಹಾಯಕಿ. ಆಕೆಯ ಸಾಧನೆಗಳು ವೈಜ್ಞಾನಿಕ ನಿಯತಕಾಲಿಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಆಕೆಗೆ ವಿಕಾಸವಾದದಲ್ಲಿ ನಂಬಿಕೆಯಿತ್ತು. ಆದರೆ, ತದನಂತರ ಆ ನಂಬಿಕೆಯನ್ನು ಬದಲಾಯಿಸಿಕೊಂಡಳು. ವಿಜ್ಞಾನ ಹಾಗೂ ಆಕೆಯ ನಂಬಿಕೆಗಳ ಬಗ್ಗೆ ಎಚ್ಚರ! ಪತ್ರಿಕೆ ಕೇಳಿದಾಗ ಆಕೆ ಹೇಳಿದ್ದು. . .

ನಿಮ್ಮ ಬಗ್ಗೆ ಸ್ವಲ್ಪ ಹೇಳ್ತೀರಾ.

ನನ್ನ ಹೆತ್ತವರು ಕಡುಬಡವರಾಗಿದ್ದರು. ನನ್ನ ತಾಯಿ ಶಾಲೆಯ ಮುಖವನ್ನೇ ನೋಡಿದವರಲ್ಲ. ನಾವು ಹಂದಿ ಸಾಕಣೆ ಮಾಡತ್ತಿದ್ದೆವು ಮತ್ತು ತೈಪೀ ಪಟ್ಟಣದ ಹತ್ತಿರದಲ್ಲಿದ್ದ ನೆರೆಹಾವಳಿ ಪ್ರದೇಶದಲ್ಲಿ ತರಕಾರಿ ಬೆಳೆಸುತ್ತಿದ್ದೆವು. ಕಷ್ಟಪಟ್ಟು ಕೆಲಸಮಾಡುವುದರ ಪ್ರಾಮುಖ್ಯತೆಯನ್ನು, ಇತರರಿಗೆ ನೆರವಾಗುವುದನ್ನು ನನ್ನ ಹೆತ್ತವರು ನನಗೆ ಕಲಿಸಿದರು.

ನಿಮ್ಮದು ಧಾರ್ಮಿಕ ಕುಟುಂಬವೋ?

ನನ್ನ ಕುಟುಂಬ ಟಾವೊಮತವನ್ನು ಅನುಸರಿಸುತ್ತಿತ್ತು. “ಸ್ವರ್ಗದ ದೇವರಿಗೆ” ಯಜ್ಞವನ್ನು ಅರ್ಪಿಸುತ್ತಿದ್ದೆವು. ಆದರೆ ನಮಗೆ ಆ ದೇವರ ಬಗ್ಗೆ ಹೆಚ್ಚೇನು ತಿಳಿದಿರಲಿಲ್ಲ. ‘ಜನರು ಏಕೆ ಕಷ್ಟ ಅನುಭವಿಸುತ್ತಿದ್ದಾರೆ? ಏಕೆ ಸ್ವಾರ್ಥಿಗಳಾಗಿದ್ದಾರೆ?’ ಎಂಬ ಪ್ರಶ್ನೆಗಳು ನನ್ನನ್ನು ಯಾವಾಗಲೂ ಕಾಡುತ್ತಿದ್ದವು. ಟಾವೊಮತ ಹಾಗೂ ಬೌದ್ಧಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಮಾತ್ರವಲ್ಲದೆ ಪ್ರಾಚ್ಯ ಮತ್ತು ಪಾಶ್ಚಾತ್ಯ ಇತಿಹಾಸದ ಕುರಿತ ಪುಸ್ತಕಗಳನ್ನು ಓದಿದೆ. ಜೊತೆಗೆ, ಒಂದೆರಡು ಚರ್ಚುಗಳಿಗೂ ಹೋದೆ. ಆದರೂ ನನ್ನ ಪ್ರಶ್ನೆಗಳಿಗೆ ಉತ್ತರ ಸಿಗಲೇ ಇಲ್ಲ.

ವಿಜ್ಞಾನವನ್ನು ಅಧ್ಯಯನ ಮಾಡಲು ಕಾರಣವೇನು?

ಗಣಿತಶಾಸ್ತ್ರ ನನಗೆ ಅಚ್ಚುಮೆಚ್ಚಿನ ವಿಷಯವಾಗಿತ್ತು. ಭೌತ ಮತ್ತು ರಾಸಾಯನಿಕ ನಿಯಮಗಳು ವಸ್ತುಗಳ ಆಕಾರವನ್ನು ನಿರ್ಧರಿಸುತ್ತವೆಂಬ ವಿಷಯ ನನ್ನನ್ನು ಆಕರ್ಷಿಸಿತ್ತು. ವಿಶಾಲ ವಿಶ್ವದಿಂದ ಹಿಡಿದು ಸೂಕ್ಷ್ಮಾಣುಜೀವಿಯವರೆಗೆ ಪ್ರತಿಯೊಂದಕ್ಕೂ ಒಂದು ಆಕಾರವಿದೆ. ಮತ್ತು ಆ ಆಕಾರಗಳೆಲ್ಲಾ ಕೆಲವು ನಿಯಮಗಳ ಮೇಲೆ ಹೊಂದಿಕೊಂಡಿರುತ್ತವೆ. ನನಗೆ ಆ ನಿಯಮಗಳನ್ನು ಅರ್ಥಮಾಡಿಕೊಳ್ಳಬೇಕೆಂಬ ಬಯಕೆಯಿತ್ತು.

ನೀವು ವಿಕಾಸವಾದವನ್ನು ನಿಜವೆಂದು ನಂಬಲು ಕಾರಣವೇನು?

ವಿಕಾಸವಾದವನ್ನು ಬಿಟ್ಟರೆ ಅದಕ್ಕೆ ವ್ಯತಿರಿಕ್ತವಾದ ಬೇರೆ ಯಾವ ವಿಷಯವನ್ನೂ ನಾನು ಕಲಿತಿರಲಿಲ್ಲ. ಶಾಲೆಯ ಮೆಟ್ಟಿಲನ್ನು ಹತ್ತಿದಂದಿನಿಂದ ಹಿಡಿದು ವಿಶ್ವವಿದ್ಯಾನಿಲಯಗಳಲ್ಲಿನ ವಿದ್ಯಾಭ್ಯಾಸವನ್ನು ಮುಗಿಸುವವರೆಗೂ ನನ್ನ ಕಿವಿಗೆ ಬಿದ್ದಂಥ ವಿಷಯ ಒಂದೇ, ವಿಕಾಸವಾದ. ಅದಲ್ಲದೆ ನಾನು ಜೀವ ವಿಜ್ಞಾನದ ಸಂಶೋಧಕಿಯಾಗಿದ್ದರಿಂದ ವಿಕಾಸವಾದವನ್ನು ಒಪ್ಪಲೇಬೇಕಾಗಿ ಬಂತು.

ನಾನು ಜೀವ ವಿಜ್ಞಾನದ ಸಂಶೋಧಕಿಯಾಗಿದ್ದರಿಂದ ವಿಕಾಸವಾದವನ್ನು ಒಪ್ಪಲೇಬೇಕಾಗಿ ಬಂತು

ನೀವು ಬೈಬಲ್‌ ಓದಲಾರಂಭಿಸಲು ಕಾರಣವೇನು?

1996ರಲ್ಲಿ ಸ್ನಾತಕೋತ್ತರ ಪದವಿಯ ಅಧ್ಯಯನಕ್ಕಾಗಿ ನಾನು ಜರ್ಮನಿಗೆ ಸ್ಥಳಾಂತರಿಸಿದೆ. ಮುಂದಿನ ವರ್ಷ ನನಗೆ ಸೀಮೋನ್‌ ಎಂಬಾಕೆಯ ಭೇಟಿಯಾಯಿತು. ಆಕೆ ಒಬ್ಬ ಯೆಹೋವನ ಸಾಕ್ಷಿಯಾಗಿದ್ದಳು. ನನ್ನ ಪ್ರಶ್ನೆಗಳಿಗೆ ಬೈಬಲ್‍ನಿಂದ ಉತ್ತರಗಳನ್ನು ತೋರಿಸುತ್ತೇನೆ ಎಂದಳು. ಜೀವಿತದ ಉದ್ದೇಶವನ್ನು ಬೈಬಲ್‌ ತಿಳಿಸುತ್ತದೆಂದು ಆಕೆ ಹೇಳಿದಾಗ, ನನ್ನಲ್ಲಿ ಕುತೂಹಲ ಹುಟ್ಟಿತು. ಹಾಗಾಗಿ, ನಾನು ಪ್ರತಿದಿನ ಬೆಳಿಗ್ಗೆ ನಾಲ್ಕುವರೆಗೆ ಎದ್ದು ಒಂದು ತಾಸು ಬೈಬಲ್‌ ಓದುತ್ತಿದ್ದೆ. ತದನಂತರ ಅದರ ಕುರಿತು ಮನನ ಮಾಡಲಿಕ್ಕಾಗಿ ವಾಯುವಿಹಾರಕ್ಕೆ ಹೋಗುತ್ತಿದ್ದೆ. ಮುಂದಿನ ಒಂದು ವರ್ಷದೊಳಗೆ ಇಡೀ ಬೈಬಲನ್ನು ಓದಿ ಮುಗಿಸಿದ್ದೆ. ಬೈಬಲ್‌ ಪ್ರವಾದನೆಗಳ ನಿಷ್ಕೃಷ್ಟತೆ ನನ್ನ ಮನಸ್ಪರ್ಶಿಸಿತು. ಕ್ರಮೇಣ ಬೈಬಲ್‌ ದೇವರಿಂದ ಬಂದ ಗ್ರಂಥವೆಂದು ನನಗೆ ಮನದಟ್ಟಾಯಿತು.

ಜೀವದ ಉಗಮದ ಬಗ್ಗೆ ನಿಮಗ್ಯಾವ ಅಭಿಪ್ರಾಯವಿತ್ತು?

1990ರ ಅಂತ್ಯದಷ್ಟಕ್ಕೆ ಜೀವದ ಉಗಮದ ಬಗ್ಗೆ ನಾನು ಗಂಭೀರವಾಗಿ ಆಲೋಚಿಸಲು ಶುರುಮಾಡಿದ್ದೆ. ಅದೇ ಸಮಯದಲ್ಲಿ, ಜೀವದ ರಾಸಾಯನಿಕ ಪ್ರಕ್ರಿಯೆ ಈ ಮುಂಚೆ ಭಾವಿಸಿದ್ದಕ್ಕಿಂತ ಎಷ್ಟೋ ಹೆಚ್ಚು ಜಟಿಲವಾದದ್ದೆಂದು ಅಣುಜೀವಶಾಸ್ತ್ರಜ್ಞರಿಗೆ ತಿಳಿದುಬಂದಿತ್ತು. ಜೀವಕೋಶಗಳಲ್ಲಿರುವ ಪ್ರೋಟೀನ್‌ಗಳು ಇರುವುದರಲ್ಲೇ ಹೆಚ್ಚು ರಾಸಾಯನಿಕ ಸಂಕೀರ್ಣತೆಯಿಂದ ಕೂಡಿರುವ ಅಣುಗಳೆಂದು ವಿಜ್ಞಾನಿಗಳಿಗೆ ಈಗಾಗಲೇ ತಿಳಿದಿತ್ತು. ಆದರೆ ಈಗ, ಚಲಿಸುವ ಭಾಗಗಳಿರುವ ನಾಜೂಕಾದ ಯಂತ್ರದಂತೆ ರಚನೆಯಾಗಲು ಈ ಇಡೀ ಪ್ರೋಟೀನ್‌ಗಳ ಸಮೂಹಗಳು ಹೇಗೆ ಸಂಘಟಿಸಲ್ಪಟ್ಟಿವೆ ಎಂದು ಕಂಡುಹಿಡಿಯಲಾರಂಭಿಸಿದ್ದರು. ಒಂದು ಅಣು ಯಂತ್ರದಲ್ಲಿ 50ಕ್ಕೂ ಹೆಚ್ಚು ಪ್ರೋಟೀನ್‌ಗಳು ಇರಬಹುದು. ಒಂದು ಸರಳವಾದ ಜೀವಕೋಶಕ್ಕೂ ಬೇರೆ ಬೇರೆ ವಿಧದ ಅನೇಕ ಯಂತ್ರಗಳ ಅವಶ್ಯಕತೆಯಿದೆ. ಉದಾಹರಣೆಗೆ, ಶಕ್ತಿ ಉತ್ಪಾದಿಸಲು, ಮಾಹಿತಿಯನ್ನು ನಕಲುಮಾಡಲು, ಜೀವಕೋಶದ ಪೊರೆಯಾದ್ಯಂತ ನಡೆಯುವ ಪ್ರವೇಶದ ಪ್ರಕ್ರಿಯೆಯನ್ನು ನಿಯಂತ್ರಿಸಲು ಬೇರೆ ಬೇರೆ ಯಂತ್ರಗಳ ಅವಶ್ಯಕತೆ ಇದೆ.

ನೀವೇನು ತೀರ್ಮಾನ ಮಾಡಿದ್ರಿ?

‘ಈ ಪ್ರೋಟೀನ್‌ ಯಂತ್ರಗಳು ಇಷ್ಟೊಂದು ಉತ್ತಮವಾಗಿ ರಚಿಸಲ್ಪಡಲು ಹೇಗೆ ಸಾಧ್ಯ?’ ಎಂದು ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದೆ. ಇದೇ ಪ್ರಶ್ನೆಯನ್ನು ಅನೇಕ ವಿಜ್ಞಾನಿಗಳು ಸಹ ಕೇಳಿದ್ದರು. ಕಾರಣ, ಜೀವಕೋಶದಲ್ಲಿ ಇಷ್ಟೊಂದು ಜಟಿಲ ರಾಸಾಯನಿಕ ಪ್ರಕ್ರಿಯೆ ನಡೆಯುತ್ತದೆಂದು ಯಾರೂ ಯೋಚಿಸಿರಲಿಲ್ಲ. ಅಮೆರಿಕಾದ ಜೀವರಸಾಯನಶಾಸ್ತ್ರದ ಪ್ರೊಫೆಸರರೊಬ್ಬರು ಒಂದು ಪುಸ್ತಕವನ್ನು ಪ್ರಕಟಿಸಿದ್ದರು. ಅದರಲ್ಲಿ ಅವರು ಜೀವಕೋಶದಲ್ಲಿರುವ ಅಣು ಯಂತ್ರಗಳು ಎಷ್ಟೊಂದು ಜಟಿಲವಾಗಿವೆಯೆಂದರೆ ಅವು ಆಕಸ್ಮಿಕವಾಗಿ ಬರಸಾಧ್ಯವಿಲ್ಲ ಎಂಬ ವಾದವನ್ನು ಮಂಡಿಸಿದ್ದರು. ನಾನೂ ಅದನ್ನು ಒಪ್ಪಿಕೊಂಡೆ. ಜೀವವು ಖಂಡಿತವಾಗಿ ಸೃಷ್ಟಿಯಾಗಿರಬೇಕು ಎಂದೆನಿಸಿತು.

‘ಈ ಪ್ರೋಟೀನ್‌ ಯಂತ್ರಗಳು ಇಷ್ಟೊಂದು ಉತ್ತಮವಾಗಿ ರಚಿಸಲ್ಪಡಲು ಹೇಗೆ ಸಾಧ್ಯ?’ ಎಂದು ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದೆ.

ನೀವು ಯೆಹೋವನ ಸಾಕ್ಷಿಯಾಗಲು ಕಾರಣವೇನು?

ಸೀಮೋನ್‌ಳಿಗೆ ಆರೋಗ್ಯ ಸಮಸ್ಯೆಗೆಳಿದ್ದರೂ, ಪ್ರತಿ ವಾರ ನನಗೆ ಬೈಬಲ್‌ ಬೋಧಿಸಲು ಸುಮಾರು 35 ಮೈಲು (56 ಕಿ.ಮೀ.) ಪ್ರಯಾಣಿಸುತ್ತಿದ್ದಳು. ಇದು ನನ್ನನ್ನು ಬಹಳ ಪ್ರಭಾವಿಸಿತು. ಜರ್ಮನಿಯ ನಾಸೀ ಆಳ್ವಿಕೆಯ ಸಮಯದಲ್ಲಿ ಕೆಲವು ಸಾಕ್ಷಿಗಳು ರಾಜಕೀಯವಾಗಿ ತಟಸ್ಥರಾಗಿದ್ದರಿಂದ ಸೆರೆಶಿಬಿರಗಳಲ್ಲಿ ಬಂಧಿತರಾಗಿದ್ದರೆಂದು ತಿಳಿಯಿತು. ಅವರ ಧೈರ್ಯ ನನ್ನನ್ನು ಆಳವಾಗಿ ಪ್ರಭಾವಿಸಿತು. ಸಾಕ್ಷಿಗಳಿಗೆ ದೇವರ ಕಡೆಗಿದ್ದ ಪ್ರೀತಿಯನ್ನು ನೋಡಿ ನಾನು ಸಹ ಅವರಂತಾಗಬೇಕೆಂಬ ಬಯಕೆ ನನ್ನಲ್ಲಿ ಮೂಡಿತು.

ದೇವರಲ್ಲಿ ನಂಬಿಕೆ ಇಟ್ಟಿದ್ದರಿಂದ ನಿಮಗೇನಾದರೂ ಪ್ರಯೋಜನವಾಯಿತಾ?

ನಾನು ಮುಂಚೆಗಿಂತ ಈಗ ಹೆಚ್ಚು ಸಂತೋಷದಿಂದಿದ್ದೇನೆಂದು ನನ್ನ ಸಹಕರ್ಮಿಗಳು ಹೇಳುತ್ತಾರೆ. ನಾನು ಬಡ ಕುಟುಂಬದವಳೆಂಬ ಕೀಳರಿಮೆ ನನ್ನಲ್ಲಿತ್ತು. ಆದ್ದರಿಂದ ನಾನು ಬೆಳೆದು ಬಂದ ಸ್ಥಳದ ಕುರಿತಾಗಲಿ, ನನ್ನ ಹೆತ್ತವರ ಕುರಿತಾಗಲಿ ಯಾರಿಗೂ ಏನೂ ಹೇಳುತ್ತಿರಲಿಲ್ಲ. ಆದರೆ ದೇವರು ಸಾಮಾಜಿಕ ಸ್ಥಾನಮಾನಕ್ಕೆ ಯಾವುದೇ ಪ್ರಾಮುಖ್ಯತೆ ಕೊಡುವುದಿಲ್ಲ ಎಂದು ಈಗ ನಾನು ಬೈಬಲ್‍ನಿಂದ ಕಲಿತಿದ್ದೇನೆ. ಯೇಸು ಕೂಡ ನನ್ನ ಕುಟುಂಬದಷ್ಟೇ ಬಡತನದಲ್ಲಿದ್ದ ಕುಟುಂಬದಲ್ಲಿ ಬೆಳೆದು ಬಂದಿರಬಹುದು. ಈಗ ನಾನು ನನ್ನ ಹೆತ್ತವರನ್ನು ನೋಡಿಕೊಳ್ಳುತ್ತಿದ್ದೇನೆ. ಮಾತ್ರವಲ್ಲದೆ, ಅವರನ್ನು ನನ್ನ ಸ್ನೇಹಿತರಿಗೆ ಪರಿಚಯಿಸಲು ಸಂತೋಷಿಸುತ್ತೇನೆ. (g14-E 01)