ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು | ಮಕ್ಕಳ ಪಾಲನೆ

ಹದಿವಯಸ್ಕರಿಗೆ ಶಿಸ್ತು ನೀಡುವುದು ಹೇಗೆ?

ಹದಿವಯಸ್ಕರಿಗೆ ಶಿಸ್ತು ನೀಡುವುದು ಹೇಗೆ?

ಸಮಸ್ಯೆ

ರಾತ್ರಿ 9 ಗಂಟೆ ಆದ ಮೇಲೆ ಮೊಬೈಲ್‌ ಫೋನ್‌ ಬಳಸಬಾರದು ಅಂತ ನೀವು ಮನೆಯಲ್ಲಿ ನಿಯಮ ಹಾಕಿದ್ದೀರ. ಆದರೂ ನಿಮ್ಮ ಮಗಳು ಮಧ್ಯ ರಾತ್ರಿಯಾದರೂ ಮೆಸೆಜ್‌ ಮಾಡುತ್ತಾ ನಿಮ್ಮ ಕೈಗೆ ಎರಡು ಸಲ ಸಿಕ್ಕಿ ಬೀಳ್ತಾಳೆ. ಮನೆಗೆ 10 ಗಂಟೆಯೊಳಗೆ ಬಂದು ಬಿಡಬೇಕು ಅಂತ ಎಷ್ಟು ಹೇಳಿದ್ದರೂ ನಿಮ್ಮ ಮಗ 11 ಗಂಟೆಗೆ ಬರುತ್ತಾನೆ.

ಹದಿವಯಸ್ಕರು ತಪ್ಪು ಮಾಡುತ್ತಾರೆ ನಿಜ. ಹಾಗಿದ್ದರೂ ನೀವು ಹಾಕಿದ ನಿಯಮಗಳನ್ನು ನಿಮ್ಮ ಮಗ ಅಥವಾ ಮಗಳು ಯಾಕೆ ಮೀರುತ್ತಾರೆ ಅಂತ ನೀವು ತಿಳಿಯಬೇಕು. ಇದರಿಂದ ಸಿಗೋ ಪ್ರಯೋಜನ ಏನಂದರೆ, ಮಕ್ಕಳು ಮಾಡೋ ಯಾವ ತಪ್ಪುಗಳು ‘ಅತಿಯಾಯ್ತು’ ಅಂತ ಅನಿಸುತ್ತಿತ್ತೋ ಅವು ನೀವು ನೆನಸಿದಷ್ಟು ಗಂಭೀರವಾದದ್ದಲ್ಲ ಅಂತ ಅರ್ಥವಾಗುತ್ತೆ.

ಯಾಕೆ ಹೀಗಾಗುತ್ತೆ?

ಪರಿಣಾಮ ಏನಾಗುತ್ತದೆಂದು ಸ್ಪಷ್ಟವಾಗಿ ಹೇಳದಿದ್ದಾಗ. ಅಪ್ಪ ಅಮ್ಮ ಹೇಳಿದ ಹಾಗೆ ಕೇಳಲಿಲ್ಲ ಅಂದರೆ ‘ಏನಾಗುತ್ತೋ ನೋಡೇ ಬಿಡೋಣ’ ಅಂತ ಕೆಲವು ಹದಿವಯಸ್ಕರು ನಿಯಮ ಮೀರುತ್ತಾರೆ. ಉದಾಹರಣೆಗೆ ನೀವು ಮಗನಿಗೆ ‘ರಾತ್ರಿ ಲೇಟಾಗಿ ಬಂದರೆ ಮನೆಗೆ ಸೇರಿಸಲ್ಲ’ ಅಂತ ಎಚ್ಚರಿಸಿರುತ್ತೀರ. ಆದರೆ ನೀವು ಹೇಳಿದ ಹಾಗೇ ಮಾಡುತ್ತೀರಾ ಅಂತ ನೋಡಕ್ಕೆ ನಿಮ್ಮ ಮಗ ಎಲ್ಲೆ ಮೀರಬಹುದು. ಇಂಥ ಮಕ್ಕಳು ದಂಗೆ ಏಳುವ ಸ್ವಭಾವ ಬೆಳೆಸಿಕೊಳ್ಳುತ್ತಿದ್ದಾರೆ ಅಂತನಾ? ಹಾಗೇ ಅಂತೇನಲ್ಲ. ನಿಜ ವಿಷಯ ಏನಂದರೆ ನಿಯಮ ಮೀರಿದಾಗ ಆಗುವ ಪರಿಣಾಮದ ಬಗ್ಗೆ ಹೆತ್ತವರು ಸ್ಪಷ್ಟವಾಗಿ ಹೇಳದಿದ್ದಾಗಲೇ ಮಕ್ಕಳು ಅವರ ಮಾತನ್ನು ತಲೆಗೆ ಹಾಕಿಕೊಳ್ಳೋದಿಲ್ಲ.

ಮಿತಿಮೀರಿ ನಿಯಮಗಳನ್ನು ಇಟ್ಟಾಗ. ಕೆಲವು ಹೆತ್ತವರು ಒಂದರ ಮೇಲೊಂದು ನಿಯಮಗಳನ್ನು ಹೇರಿ ಮಕ್ಕಳನ್ನು ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸುತ್ತಾರೆ. ಮಕ್ಕಳು ಎಲ್ಲಾದರೂ ಆ ನಿಯಮಗಳನ್ನು ಮೀರಿದರೆ ಮತ್ತೆ ಇನ್ನೊಂದಿಷ್ಟು ನಿಯಮ ಅದಕ್ಕೆ ಸೇರುತ್ತೆ. ಆಗ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತೆ ಬಿಟ್ಟರೆ ಇದರಿಂದ ಒಳಿತೇನು ಇಲ್ಲ. ಹೆತ್ತವರು ಮತ್ತು ಹದಿವಯಸ್ಸಿನ ಮಕ್ಕಳ ಬಗ್ಗೆ ಒಂದು ಪುಸ್ತಕ ಹೀಗೆ ಹೇಳುತ್ತೆ: “ನೀವು ಮಕ್ಕಳ ಮೇಲೆ ಎಷ್ಟು ಹಿಡಿತ ಸಾಧಿಸಲು ಹೋಗುತ್ತಿರೋ ಅಷ್ಟೇ ಹೆಚ್ಚಾಗಿ ಮಕ್ಕಳು ಅದರಿಂದ ಜಾರಿಕೊಳ್ಳಲು ನೋಡುತ್ತಾರೆ.” ಹೀಗೆ ಹಿಡಿತ ಸಾಧಿಸಲು ಹೋದರೆ ಹಾಳೆಯ ಮೇಲೆ ಬರೆದಿರುವುದನ್ನು ರಬ್ಬರ್‌ನಿಂದ ಜೋರಾಗಿ ಉಜ್ಜಿ ಅಳಿಸಲು ಹೋದಂತೆ ಆಗುತ್ತೆ. ಹಾಳೆ ಹರಿಯುತ್ತೆ ಬಿಟ್ಟರೆ ಅದರಿಂದ ಪ್ರಯೋಜನ ಏನೂ ಇಲ್ಲ.

ಸರಿಯಾದ ಶಿಸ್ತು ಅಗತ್ಯ. ಶಿಸ್ತು ಕೊಡುವುದರ ಉದ್ದೇಶ ಮಕ್ಕಳಿಗೆ ಶಿಕ್ಷೆ ಕೊಟ್ಟು ನೋವು ಮಾಡೋದಲ್ಲ ಬದಲಿಗೆ ವಿಷಯಗಳನ್ನು ಕಲಿಸುವುದು.

ಇದಕ್ಕೇನು ಪರಿಹಾರ?

ಸ್ಪಷ್ಟವಾಗಿ ಹೇಳಿ. ಹದಿವಯಸ್ಸಿನ ಮಕ್ಕಳು ಹೇಗೆ ನಡೆದುಕೊಳ್ಳಬೇಕು ಮತ್ತು ನಿಯಮ ಮೀರಿದರೆ ಪರಿಣಾಮ ಏನಾಗುತ್ತೆ ಅಂತ ಸ್ಪಷ್ಟವಾಗಿ ಹೇಳಿ.—ಬೈಬಲ್‌ ತತ್ವ: ಗಲಾತ್ಯ 6:7.

ಸಲಹೆ: ನೀವು ಇಟ್ಟಿರುವ ನಿಯಮಗಳ ಒಂದು ಪಟ್ಟಿ ಮಾಡಿ. ಹೀಗೆ ಕೇಳಿಕೊಳ್ಳಿ: ‘ತುಂಬ ನಿಯಮಗಳನ್ನು ಇಟ್ಟಿದ್ದೇನಾ? ತೀರ ಕಡಿಮೆಯಾಗಿದೆಯಾ? ಕೆಲವು ನಿಯಮಗಳನ್ನು ತೆಗೆದು ಹಾಕಬೇಕಾ? ನನ್ನ ಮಗ/ಮಗಳು ಜವಾಬ್ದಾರಿಯಿಂದ ವರ್ತಿಸುತ್ತಿರುವುದರಿಂದ ಕೆಲವು ನಿಯಮಗಳನ್ನು ಬದಲಾಯಿಸಬೇಕಾ?’

ಹೇಳಿದ ಹಾಗೆ ನಡೆದುಕೊಳ್ಳಿ. ಹೋದ ವಾರ ನಿಮ್ಮ ಮಗ ಲೇಟಾಗಿ ಮನೆಗೆ ಬಂದಾಗ ಏನೂ ಹೇಳದೆ ಈ ವಾರ ಮತ್ತದೇ ತಪ್ಪು ಮಾಡಿದಾಗ ಅದಕ್ಕಾಗಿ ಚೆನ್ನಾಗಿ ಶಿಸ್ತು ನೀಡಿದರೆ ನೀವು ನಿಯಮ ಹಾಕಿದ್ದಕ್ಕೆ ಏನು ಅರ್ಥವಿರೋದಿಲ್ಲ. ಜತೆಗೆ ಮಕ್ಕಳಿಗೂ ಸರಿಯಾಗಿ ಅರ್ಥ ಆಗಲ್ಲ. ಆದ್ದರಿಂದ ಹೇಳಿದ ಹಾಗೆ ನಡೆದುಕೊಳ್ಳಿ.—ಬೈಬಲ್‌ ತತ್ವ: ಮತ್ತಾಯ 5:37.

ಸಲಹೆ: ತಪ್ಪಿಗೆ ತಕ್ಕ ಶಿಕ್ಷೆ ಕೊಡಿ. ಉದಾಹರಣೆಗೆ ಮನೆಗೆ 10 ಗಂಟೆಗೆ ಮಗ ಬರದೆ ಲೇಟಾಗಿ ಬಂದರೆ ಆ ತಪ್ಪಿಗೆ ತಕ್ಕ ಶಿಕ್ಷೆ ನೀಡಿ. ಅಂದರೆ ಬಹುಶಃ 10 ಗಂಟೆಗಿಂತ ಮುಂಚೆನೇ ಮನೆಗೆ ಬರಬೇಕಂತ ನೀವು ನಿಯಮ ಹಾಕಬಹುದು.

ತುಂಬ ಕಟ್ಟುನಿಟ್ಟು ಬೇಡ. ಮಕ್ಕಳು ನಿಮ್ಮ ಮಾತನ್ನು ಕೇಳುತ್ತಿದ್ದಾರೆ ಅಂತ ಅನಿಸಿದರೆ ನಿಯಮಗಳನ್ನು ಸಡಿಲು ಮಾಡುವುದರಲ್ಲಿ ತಪ್ಪೇನಿಲ್ಲ.—ಬೈಬಲ್‌ ತತ್ವ: ಫಿಲಿಪ್ಪಿ4:5.

ಸಲಹೆ: ನೀವಿಟ್ಟಿರುವ ನಿಯಮದ ಬಗ್ಗೆ ಮಕ್ಕಳ ಜತೆ ಕೂತು ಚರ್ಚಿಸಿ. ಒಂದುವೇಳೆ ನಿಯಮ ಮೀರಿದರೆ ಏನು ಮಾಡಬೇಕು ಅಂತ ಮಕ್ಕಳನ್ನೇ ಕೇಳಿ. ಅದನ್ನು ತಾವಾಗೇ ಹೇಳಿದಾಗ ನಿಯಮ ಮೀರದಂತೆ ಮಕ್ಕಳು ಎಚ್ಚರವಹಿಸುತ್ತಾರೆ.

ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಾಯ ಮಾಡಿ. ಮಕ್ಕಳು ಯಾವಾಗಲೂ ವಿಧೇಯತೆ ತೋರಿಸಬೇಕು ಅಂತ ನೀವು ಬಯಸುವುದಾದರೂ ಒಂದೊಳ್ಳೆ ಮನಸಾಕ್ಷಿಯನ್ನು ಬೆಳೆಸಿಕೊಳ್ಳಲು ಅವರಿಗೆ ಸಹಾಯ ಮಾಡುವುದೇ ನಿಮ್ಮ ಮುಖ್ಯ ಗುರಿಯಾಗಿರಬೇಕು. ಸರಿ ಯಾವುದು ತಪ್ಪು ಯಾವುದು ಎಂದು ನಿರ್ಧರಿಸುವ ಸಾಮರ್ಥ್ಯವನ್ನು ಅವರಲ್ಲಿ ಬೆಳೆಸಿ. (“ಸಕಾರಾತ್ಮಕ ಗುಣಗಳನ್ನು ಬೆಳೆಸಿ” ಚೌಕ ನೋಡಿ.)—ಬೈಬಲ್‌ ತತ್ವ: 1 ಪೇತ್ರ 3:16.

ಸಲಹೆ: ಸಹಾಯಕ್ಕಾಗಿ ನಿಮಗೆ ಬೈಬಲ್‌ ಇದೆ. ಅದು ‘ವಿವೇಕಮಾರ್ಗದಲ್ಲಿ ಅಂದರೆ ನೀತಿನ್ಯಾಯಧರ್ಮಗಳಲ್ಲಿ ಶಿಕ್ಷಿತರಾಗುವಂತೆ’ ಸಹಾಯಮಾಡುತ್ತೆ ಮತ್ತು “ಮೂಢರಿಗೆ ಜಾಣತನವನ್ನೂ ಯೌವನಸ್ಥರಿಗೆ ತಿಳುವಳಿಕೆಯನ್ನೂ ಬುದ್ಧಿಯನ್ನೂ ಉಂಟುಮಾಡುವವು.”—ಜ್ಞಾನೋಕ್ತಿ 1:1-4. ◼ (g13-E 05)