ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ಗೊತ್ತಿತ್ತಾ?

ನಿಮಗೆ ಗೊತ್ತಿತ್ತಾ?

ಯಾತನಾ ಕಂಬದ ಮೇಲೆ ಸತ್ತವರ ಶವಗಳನ್ನ ರೋಮನ್ನರು ಸಮಾಧಿ ಮಾಡೋಕೆ ಬಿಡುತ್ತಿದ್ದರಾ?

ಯೇಸುವನ್ನ ಇಬ್ಬರು ಕಳ್ಳರ ಜೊತೆ ಕಂಬಕ್ಕೆ ಹಾಕಿ ಜಡಿಯಲಾಯ್ತು ಅಂತ ನಮಗೆ ಗೊತ್ತು. ಯೇಸು ಸತ್ತ ಮೇಲೆ ಅವನ ಶವವನ್ನ ಸಮಾಧಿ ಮಾಡಲಾಯಿತು ಅಂತ ಬೈಬಲ್‌ ಹೇಳುತ್ತೆ. (ಮತ್ತಾ. 27:35-38) ಆದ್ರೆ ಕೆಲವರು ಇದನ್ನ ಸುಳ್ಳು ಅಂತ ಹೇಳುತ್ತಾರೆ.—ಮಾರ್ಕ 15:42-46.

ಯಾಕಂದ್ರೆ ರೋಮನ್ನರು ಕಂಬದ ಮೇಲೆ ಸತ್ತ ಶವಗಳನ್ನ ಅಲ್ಲೇ ಬಿಟ್ಟುಬಿಡುತ್ತಿದ್ರು. ಅದನ್ನ ಸಮಾಧಿ ಮಾಡೋಕೆ ಬಿಡ್ತಾ ಇರಲಿಲ್ಲ ಅಂತ ಅವರು ಹೇಳುತ್ತಾರೆ. ಅವರು ಯಾಕೆ ಈ ತರ ಹೇಳುತ್ತಾರೆ ಅಂತ ಪತ್ರಕರ್ತ ಏರಿಯಲ್‌ ಸಬರ್‌, ಸ್ಮಿತ್‌ಸೋನಿಯನ್‌ ಅನ್ನೋ ಪತ್ರಿಕೆಯಲ್ಲಿ ತಿಳಿಸಿದ್ದಾರೆ. ಅವರು ಹೇಳಿದ್ದು, “ರೋಮನ್ನರು ಸಮಾಜದಲ್ಲಿ ತುಂಬಾ ದೊಡ್ಡ ತಪ್ಪು ಮಾಡಿರುವವರನ್ನು ಮಾತ್ರ ಕಂಬಕ್ಕೆ ನೇತುಹಾಕಿ ಕೊಲ್ಲುತಿದ್ರು, ಇಂಥ ಜನರ ಶವವನ್ನ ಸಮಾಧಿ ಮಾಡೋಕೆ ಕೊಡ್ತಾರೆ ಅಂತ ಯೋಚನೆ ಮಾಡೋಕೂ ಆಗಲ್ಲ ಅಂತ ಕೆಲವು ವಿಮರ್ಶಕರು ಹೇಳುತ್ತಾರೆ.” ದೊಡ್ಡ ತಪ್ಪು ಮಾಡಿದ ಅಪರಾಧಿಗಳು ಹೀನಾಯವಾಗಿ ಸಾಯಬೇಕು ಅಂತ ರೋಮನ್ನರು ಅಂದುಕೊಂಡಿದ್ದರು. ಅದಕ್ಕೆ ಅವರು ಆ ಶವಗಳನ್ನ ಪ್ರಾಣಿ ಪಕ್ಷಿಗಳು ತಿನ್ನೋಕೆ ಬಿಟ್ಟುಬಿಡುತ್ತಿದ್ದರು, ಉಳಿದ ಮೂಳೆಗಳನ್ನ ತೆಗೆದುಕೊಂಡು ಹೋಗಿ ಸ್ಮಶಾನದಲ್ಲಿ ಬಿಸಾಕುತ್ತಿದ್ದರು.

ಆದ್ರೆ ಕೆಲವು ಯೆಹೂದ್ಯರ ಶವಗಳನ್ನ ಸಮಾಧಿ ಮಾಡೋಕೆ ಬಿಟ್ಟಿದ್ದರು ಅಂತ ಅಗೆತ ಶಾಸ್ತ್ರದಿಂದ ಗೊತ್ತಾಗಿದೆ. ಒಂದನೇ ಶತಮಾನದಲ್ಲಿ ಈ ರೀತಿ ಶಿಕ್ಷೆ ಅನುಭವಿಸಿ ಸತ್ತ ಒಬ್ಬ ವ್ಯಕ್ತಿಯ ಮೂಳೆ 1968ರಲ್ಲಿ ಸಿಕ್ತು. ಅವು ಯೆರೂಸಲೇಮಿನ ಹತ್ರ ಒಂದು ಯೆಹೂದಿ ಕುಟುಂಬದ ಶವಗಳನ್ನ ಸಮಾಧಿ ಮಾಡಿದ್ದ ಗವಿಯಲ್ಲಿ ಸಿಕ್ತು. ಆ ಮೂಳೆಗಳನ್ನ ಶವದ ಕೋಣೆ ಅಥವಾ ಪೆಟ್ಟಿಗೆಯಲ್ಲಿ ಇಡಲಾಗಿತ್ತು. ಅದರಲ್ಲಿ ಒಂದು ಹಿಮ್ಮಡಿಯ ಮೂಳೆ ಇತ್ತು, ಆ ಎಲುಬಿಗೆ 11.5 ಸೆಂ.ಮೀ ಉದ್ದದ ಮೊಳೆ ಹೊಡೆದಿದ್ರು. “ಅದು ಯೆಹೋಕನೆನ್‌ ಅನ್ನೋ ವ್ಯಕ್ತಿಯ ಎಲುಬು. ಹಾಗಾದ್ರೆ ಸುವಾರ್ತಾ ಪುಸ್ತಕಗಳಲ್ಲಿ ಹೇಳಿರೋ ಹಾಗೆ ಯೇಸುವಿನ ಶವವನ್ನ ಸಮಾಧಿಯಲ್ಲಿ ಇಡಲಾಗಿತ್ತು ಅನ್ನೋಕೆ ಇದು ಆಧಾರ ಕೊಡುತ್ತೆ. ಇದ್ರಿಂದ ಯೇಸುವಿನ ಕಾಲದಲ್ಲಿ ಕಂಬದ ಮೇಲೆ ಸತ್ತ ಕೆಲವು ವ್ಯಕ್ತಿಗಳನ್ನ ಯೆಹೂದಿ ಸಂಪ್ರದಾಯದ ಪ್ರಕಾರ ಸಮಾಧಿ ಮಾಡೋಕೆ ಬಿಡುತ್ತಿದ್ದರು ಅಂತ ಗೊತ್ತಾಗುತ್ತೆ” ಅಂತ ಸಬರ್‌ ಹೇಳ್ತಾರೆ.

ಯೆಹೋಕನೆನ್‌ನ ಹಿಮ್ಮಡಿ ಮೂಳೆಯ ಆಧಾರದ ಮೇಲೆ ಯೇಸುವನ್ನ ಕಂಬದಲ್ಲಿ ಹೇಗೆ ತೂಗು ಹಾಕಿದ್ರು ಅನ್ನೋದರ ಬಗ್ಗೆ ಕೆಲವರು ಪ್ರಶ್ನೆಗಳನ್ನ ಎಬ್ಬಿಸಿದ್ದಾರೆ. ಅದಕ್ಕೆ ಒಬ್ಬೊಬ್ಬರು ಒಂದೊಂದು ತರ ಉತ್ತರ ಕೊಟ್ಟಿದ್ದಾರೆ. ಅದೇನೇ ಆಗಿರಲಿ ಒಂದಂತೂ ನಿಜ ರೋಮನ್ನರು ಎಲ್ಲಾ ಅಪರಾಧಿಗಳ ಶವವನ್ನ ಬಿಸಾಕುತ್ತಿರಲಿಲ್ಲ, ಕೆಲವರನ್ನ ಸಮಾಧಿ ಮಾಡೋಕೆ ಬಿಡುತ್ತಿದ್ದರು. ಅದಕ್ಕೆ ಯೆಹೋಕನೆನ್‌ನ ಮೂಳೆಗಳೇ ಆಧಾರ. ಹಾಗಾಗಿ, ಯೇಸುವನ್ನ ಸಮಾಧಿ ಮಾಡಿರೋದರ ಬಗ್ಗೆ ಬೈಬಲ್‌ ಹೇಳಿರೋದನ್ನ ನಾವು ನಂಬಬಹುದು.

ಎಲ್ಲಕ್ಕಿಂತ ಹೆಚ್ಚಾಗಿ, ಯೇಸುವನ್ನ ಶ್ರೀಮಂತರ ಜೊತೆ ಸಮಾಧಿ ಮಾಡಲಾಗುತ್ತೆ ಅಂತ ಯೆಹೋವ ದೇವರು ಮುಂಚೆನೇ ಹೇಳಿದ್ದನು. ಯೆಹೋವ ಹೇಳಿದ ಮೇಲೆ ಅದು ಹಾಗೇ ಆಗಿರುತ್ತೆ ಅನ್ನೋದರಲ್ಲಿ ಸಂಶಯನೇ ಇಲ್ಲ.—ಯೆಶಾ. 53:9; 55:11.