ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೊಸ ಸಭೆಗೆ ಹೊಂದ್ಕೊಳ್ಳೋಕೆ ನೀವೇನು ಮಾಡಬೇಕು?

ಹೊಸ ಸಭೆಗೆ ಹೊಂದ್ಕೊಳ್ಳೋಕೆ ನೀವೇನು ಮಾಡಬೇಕು?

ನಿಮ್ಮ ಹಳೆ ಸಭೆ ಬಿಟ್ಟು ಹೊಸ ಸಭೆಗೆ ಹೋಗೋ ಪರಿಸ್ಥಿತಿ ಬಂದಿದ್ಯಾ? ಒಂದುವೇಳೆ ಬಂದಿದ್ರೆ ನೀವೂ ಜೀನ್‌ ಚಾರ್ಲ್ಸ್‌ ಹೇಳಿದ್ದನ್ನ ಒಪ್ಕೊಳ್ತೀರ. “ನಿಮಗೂ ಮತ್ತು ನಿಮ್ಮ ಕುಟುಂಬದವ್ರಿಗೆ ಹೊಸ ಸಭೆಗೆ ಹೊಂದ್ಕೊಳ್ಳೋಕೆ ಮತ್ತು ಯೆಹೋವನ ಜೊತೆಗಿರೋ ಸಂಬಂಧನ ಗಟ್ಟಿಯಾಗಿ ಇಟ್ಕೊಳ್ಳೋಕೆ ಕಷ್ಟ ಆಗಬಹುದು” ಅಂತ ಅವರು ಹೇಳಿದ್ರು. ಅಷ್ಟೇ ಅಲ್ಲ ಕೆಲಸ ಹುಡುಕಬೇಕಾಗುತ್ತೆ, ಮನೆ ಹುಡುಕಬೇಕಾಗುತ್ತೆ, ಮಕ್ಕಳಿಗೆ ಹೊಸ ಶಾಲೆ ಹುಡುಕಬೇಕಾಗುತ್ತೆ. ಅಲ್ಲಿನ ವಾತಾವರಣಕ್ಕೆ ಹೊಂದ್ಕೊಳ್ಳೋದು, ಸಂಸ್ಕೃತಿಗೆ ಹೊಂದ್ಕೊಳ್ಳೋದು, ಅಲ್ಲಿರೋ ಜನ್ರಿಗೆ ಸಿಹಿಸುದ್ದಿ ಸಾರೋದು ಕಷ್ಟ ಆಗುತ್ತೆ.

ನಿಕೊಲಾಸ್‌ ಮತ್ತು ಸೆಲಿನ್‌ಗೆ ಹೊಸ ಸಭೆಗೆ ಹೋದಾಗ ಏನಾಯ್ತು ಅಂತ ನೋಡೋಣ. ಅವ್ರಿಗೆ ಫ್ರಾನ್ಸ್‌ ಬ್ರಾಂಚಿನಲ್ಲಿ ಸೇವೆ ಮಾಡೋಕೆ ಅವಕಾಶ ಸಿಕ್ಕಿದಾಗ ಹಳೆ ಸಭೆ ಬಿಟ್ಟು ಹೊಸ ಸಭೆಗೆ ಹೋಗಬೇಕಾಯ್ತು. “ಮೊದಮೊದ್ಲು ನಮಗೆ ತುಂಬ ಖುಷಿ ಆಯ್ತು. ಆದ್ರೆ ಹೋಗ್ತಾಹೋಗ್ತಾ ನಮ್ಮ ಫ್ರೆಂಡ್ಸ್‌ ನಮಗೆ ತುಂಬ ನೆನಪಾಗ್ತಿದ್ರು. ಅಷ್ಟೇ ಅಲ್ಲ ನಮಗೆ ಹೊಸ ಸಭೆಯಲ್ಲಿ ಇರೋರು ಅಷ್ಟೇನೂ ಪರಿಚಯ ಇರಲಿಲ್ಲ” a ಅಂತ ಅವರು ಹೇಳ್ತಾರೆ. ಈ ತರ ನಮಗೂ ಕಷ್ಟ ಆಗಬಹುದು. ಆದ್ರೆ ಹೊಸ ಸಭೆಗೆ ಹೋಗಿ ಅಲ್ಲಿ ಚೆನ್ನಾಗಿ ಸೇವೆ ಮಾಡ್ತಾ ಖುಷಿಯಾಗಿ ಇರೋದು ಹೇಗೆ? ನಿಮಗೆ ಸಹಾಯ ಮಾಡೋಕೆ ಬೇರೆಯವರು ಏನು ಮಾಡಬಹುದು? ಬೇರೆಯವ್ರಿಂದ ನಾವು ಹೇಗೆ ಪ್ರೋತ್ಸಾಹ ಪಡ್ಕೊಬಹುದು ಮತ್ತು ಬೇರೆಯವ್ರಿಗೆ ಹೇಗೆ ಪ್ರೋತ್ಸಾಹ ಕೊಡಬಹುದು?

ಹೊಂದ್ಕೊಳ್ಳೋಕೆ ಸಹಾಯ ಮಾಡೋ ನಾಲ್ಕು ತತ್ವಗಳು

ಯೆಹೋವನ ಮೇಲೆ ಆತ್ಕೊಳ್ಳಿ

1. ಯೆಹೋವನ ಮೇಲೆ ಆತ್ಕೊಳ್ಳಿ. (ಕೀರ್ತ. 37:5) ಜಪಾನಿನಲ್ಲಿರೋ ಕಜ಼ೋಮಿ ಅನ್ನೋ ಸಹೋದರಿ ಸುಮಾರು 20 ವರ್ಷದಿಂದ ಒಂದೇ ಸಭೆಯಲ್ಲಿದ್ರು. ಆದ್ರೆ ಅವ್ರ ಗಂಡನಿಗೆ ಬೇರೆ ಕಡೆ ಕೆಲಸ ಸಿಕ್ಕಾಗ ಅವ್ರ ಸಭೆ ಬಿಟ್ಟು ಹೋಗಬೇಕಾಯ್ತು. ಆಗ ಅವರು ಹೇಗೆ ‘ಜೀವನದ ಚಿಂತೆಗಳನ್ನೆಲ್ಲ ಯೆಹೋವನಿಗೆ ಒಪ್ಪಿಸಿದ್ರು?’ “ನನಗೆ ಆಗ್ತಾ ಇದ್ದ ಭಯದ ಬಗ್ಗೆ, ಚಿಂತೆ ಬಗ್ಗೆ, ಒಂಟಿತನದ ಬಗ್ಗೆ ಯೆಹೋವನ ಹತ್ರ ಹೇಳ್ಕೊತಿದ್ದೆ. ಪ್ರತಿ ಸಲ ನಾನು ಯೆಹೋವನ ಹತ್ರ ಹೀಗೆ ಪ್ರಾರ್ಥನೆ ಮಾಡಿದಾಗ ಆತನು ನನಗೆ ಬಲ ಕೊಟ್ಟ” ಅಂತ ಅವರು ಹೇಳ್ತಾರೆ.

ಯಾವಾಗ್ಲೂ ಯೆಹೋವನ ಮೇಲೆ ಆತ್ಕೊಳ್ಳೋಕೆ ನಾವೇನು ಮಾಡಬೇಕು? ಒಂದು ಗಿಡ ಬೆಳಿಯೋಕೆ ನೀರು ಮತ್ತು ಮಣ್ಣಲ್ಲಿರೋ ಪೋಷಕಾಂಶ ಹೇಗೆ ಸಹಾಯ ಮಾಡುತ್ತೋ ಅದೇ ತರ ನಮ್ಮ ನಂಬಿಕೆಯನ್ನ ಜಾಸ್ತಿ ಮಾಡ್ಕೊಬೇಕಂದ್ರೆ ಅದನ್ನ ಪೋಷಿಸಬೇಕು. ಈಗಾಗ್ಲೇ ನಾವು ನೋಡಿದ ನಿಕೊಲಾಸ್‌ ಅನ್ನೋ ಸಹೋದರನೂ ಹೀಗೆ ಮಾಡಿದ್ರು. ದೇವರ ಸೇವೆ ಮಾಡೋಕೆ ತ್ಯಾಗಗಳನ್ನ ಮಾಡಿದ ಅಬ್ರಹಾಮ, ಯೇಸು ಮತ್ತು ಪೌಲನ ಬಗ್ಗೆ ಯೋಚ್ನೆ ಮಾಡಿದ್ರು. ಇದ್ರಿಂದ ಯೆಹೋವ ತನಗೂ ಸಹಾಯ ಮಾಡೇ ಮಾಡ್ತಾನೆ ಅನ್ನೋ ನಂಬಿಕೆ ಜಾಸ್ತಿ ಆಯ್ತು. ಈ ತರ ಯಾವಾಗ್ಲೂ ಬೈಬಲನ್ನ ಓದಿ ಅಧ್ಯಯನ ಮಾಡೋದ್ರಿಂದ ನಿಮ್ಮ ಜೀವನದಲ್ಲಿ ಯಾವುದೇ ಬದಲಾವಣೆಗಳು ಬಂದ್ರೂ ಅದಕ್ಕೆ ಹೊಂದ್ಕೊಳ್ಳೋಕೆ ಆಗುತ್ತೆ. ಅಷ್ಟೇ ಅಲ್ಲ ನಿಮಗೆ ತುಂಬ ವಿಷ್ಯಗಳನ್ನ ಕಲಿಯೋಕೂ ಆಗುತ್ತೆ. ಆಗ ಬೇರೆ ಸಭೆಗೆ ಹೋದಾಗ ಅಲ್ಲಿರೋ ಸಹೋದರ ಸಹೋದರಿಯರನ್ನ ಪ್ರೋತ್ಸಾಹಿಸೋಕೂ ಆಗುತ್ತೆ.

ಹೋಲಿಸಬೇಡಿ

2. ಹೋಲಿಸಬೇಡಿ. (ಪ್ರಸಂ. 7:10) ಜ಼ುಯೆಲ್‌ ಅನ್ನೋ ಸಹೋದರ ಬೆನಿನ್‌ನಿಂದ ಅಮೆರಿಕ ಹೋದಾಗ ಅಲ್ಲಿನ ಸಂಸ್ಕೃತಿಗೆ ಹೊಂದ್ಕೊಳ್ಳೋಕೆ ಕಷ್ಟ ಆಯ್ತು. ಅವರು ಹೀಗೆ ಹೇಳ್ತಾರೆ: “ನಾನು ಭೇಟಿ ಆದ ಪ್ರತಿಯೊಬ್ರ ಹತ್ರ ನನ್ನ ಬಗ್ಗೆ ಎಲ್ಲಾ ಹೇಳಬೇಕು ಅಂತ ಅನಿಸ್ತು.” ಅವ್ರಿಗೆ ಈ ಸಂಸ್ಕೃತಿಗೆ ಹೊಂದ್ಕೊಳ್ಳೋಕೆ ಕಷ್ಟ ಆಯ್ತು. ಅದಕ್ಕೆ ಅಲ್ಲಿದ್ದ ಸಹೋದರ ಸಹೋದರಿಯರ ಜೊತೆ ಜಾಸ್ತಿ ಬೆರೆಯೋಕೆ ಹೋಗ್ಲಿಲ್ಲ. ಆದ್ರೆ ಆಮೇಲೆ ಅವರು ಸಹೋದರ ಸಹೋದರಿಯರ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋಕೆ ತಮ್ಮ ಯೋಚ್ನೆಯನ್ನ ಬದಲಾಯಿಸಿದ್ರು. ಆಮೇಲೆ ಅವರು ಹೀಗೆ ಹೇಳ್ತಾರೆ: “ನಾವು ಭೂಮಿಯ ಯಾವ ಮೂಲೆಯಲ್ಲಿದ್ರೂ ಮನುಷ್ಯರೆಲ್ರೂ ಒಂದೇ. ಪ್ರತಿಯೊಬ್ರು ಮಾತಾಡೋ ಮತ್ತು ನಡ್ಕೊಳ್ಳೋ ರೀತಿ ಬೇರೆಬೇರೆ ತರ ಇರುತ್ತೆ. ಆದ್ರೆ ಅವರು ಹೇಗಿದ್ದಾರೋ ಹಾಗೇ ನಾವು ಒಪ್ಕೊಳ್ಳೋದು ತುಂಬ ಪ್ರಾಮುಖ್ಯ.” ಹಾಗಾಗಿ ಹಿಂದೆ ಇದ್ದ ಸಭೆಯವ್ರ ಜೊತೆ ಈಗ ಇರೋ ಸಭೆಯವ್ರನ್ನ ಹೋಲಿಸಬೇಡಿ. ಇದ್ರ ಬಗ್ಗೆ ಪಯನೀಯರ್‌ ಆಗಿರೋ ಆ್ಯನ್ಲೆಸ್‌ ಅನ್ನೋ ಸಹೋದರಿ “ನಾನು ಹೋಗಿದ್ದು ಬಿಟ್ಟುಬಂದಿರೋ ವಿಷ್ಯನ ಹುಡುಕೋಕಲ್ಲ, ಹೊಸ ವಿಷ್ಯನ ಕಂಡ್ಕೊಳ್ಳೋಕೆ” ಅಂತ ಹೇಳ್ತಾರೆ.

ಹಿರಿಯರು ಕೂಡ ಹಿಂದೆ ಇದ್ದ ಸಭೆಯ ಜೊತೆ ಈಗಿರೋ ಸಭೆಯನ್ನ ಹೋಲಿಸಬಾರದು. ನೀವು ಈಗಿರೋ ಸಭೆಯಲ್ಲಿ ಸಹೋದರರು ಕೆಲವೊಂದು ವಿಷ್ಯಗಳನ್ನ ಬೇರೆ ರೀತಿಯಲ್ಲಿ ಮಾಡಬಹುದು. ಹಾಗಂತ ಅದು ತಪ್ಪು ಅಂತಲ್ಲ. ನೀವು ಯಾವುದಾದ್ರೂ ಸಲಹೆ ಕೊಡೋಕೆ ಮುಂಚೆ ಅಲ್ಲಿನ ಸ್ಥಳೀಯ ಸನ್ನಿವೇಶದ ಬಗ್ಗೆ ಚೆನ್ನಾಗಿ ತಿಳ್ಕೊಳ್ಳಿ. (ಪ್ರಸಂ. 3:1, 7ಬಿ) ಎಲ್ಲಾ ಸಹೋದರರು ನಿಮ್ಮ ತರನೇ ಯೋಚ್ನೆ ಮಾಡಬೇಕು ಅಂತ ಒತ್ತಾಯ ಮಾಡೋಕೆ ಹೋಗಬೇಡಿ, ನಿಮ್ಮ ಒಳ್ಳೇ ನಡತೆಯಿಂದ ಅವ್ರಿಗೆ ಮಾದರಿಯಾಗಿರಿ.—2 ಕೊರಿಂ. 1:24.

ಕೆಲಸದಲ್ಲಿ ಕೈ ಜೋಡಿಸಿ

3. ಹೊಸ ಸಭೆಯಲ್ಲಿ ಬಿಜ಼ಿಯಾಗಿರಿ. (ಫಿಲಿ. 1:27) ಒಂದು ಜಾಗ ಬಿಟ್ಟು ಇನ್ನೊಂದು ಜಾಗಕ್ಕೆ ಹೋಗಬೇಕಂದ್ರೆ ತುಂಬ ಸಮಯ ಮತ್ತು ಶಕ್ತಿ ಬೇಕಾಗುತ್ತೆ ನಿಜ. ಆದ್ರೆ ಸಾಧ್ಯವಾದಷ್ಟು ಬೇಗ ಮೊದಲನೇ ಮೀಟಿಂಗಿಂದಾನೇ ಸಭೆಗೆ ಹೋಗೋಕೆ ಪ್ರಯತ್ನ ಮಾಡಿ. ನೀವು ಹೀಗೆ ಸಭೆಗೆ ಹೋದ್ರೇನೇ ಹೊಸ ಸಭೆಯಲ್ಲಿರೋ ಸಹೋದರರಿಗೆ ನಿಮಗೆ ಸಹಾಯ ಮತ್ತು ಬೆಂಬಲ ಕೊಡೋಕೆ ಆಗೋದು. ಲೂಸಿಂಡ ಮತ್ತು ಅವ್ರ ಇಬ್ರು ಹೆಣ್ಮಕ್ಕಳು ದಕ್ಷಿಣ ಆಫ್ರಿಕದ ಒಂದು ದೊಡ್ಡ ಪಟ್ಟಣಕ್ಕೆ ಹೋದ್ರು. ಅಲ್ಲಿಗೆ ಹೋದ್ಮೇಲೆ ಅವರು ಏನು ಹೇಳ್ತಾರೆ ನೋಡಿ. “ಹೊಸ ಸಭೆಯವ್ರ ಜೊತೆ ಫ್ರೆಂಡ್‌ಶಿಪ್‌ ಬೆಳೆಸ್ಕೊಬೇಕಂದ್ರೆ ಕೂಟಗಳಿಗೆ ಹೋಗಬೇಕು, ಅವ್ರ ಜೊತೆ ಸೇವೆ ಮಾಡಬೇಕು ಮತ್ತು ಕೂಟದಲ್ಲಿ ಭಾಗವಹಿಸಬೇಕು ಅಂತ ನನ್ನ ಸ್ನೇಹಿತರು ನನಗೆ ಸಲಹೆ ಕೊಟ್ಟಿದ್ರು. ಅಷ್ಟೇ ಅಲ್ಲ, ನಮ್ಮ ಮನೆಲಿ ಕ್ಷೇತ್ರ ಸೇವಾ ಕೂಟ ನಡಿಸೋಕೆ ನಾವು ಅವಕಾಶ ಮಾಡಿಕೊಟ್ವಿ.”

ಸಭೆಯಲ್ಲಿ ಸಹೋದರ ಸಹೋದರಿಯರ ಜೊತೆ “ಹೆಗಲಿಗೆ ಹೆಗಲು ಕೊಟ್ಟು” ಕೆಲಸ ಮಾಡಿದ್ರೆ ನಿಮಗೂ ಬಲ ಸಿಗುತ್ತೆ ಮತ್ತು ಬೇರೆಯವ್ರನ್ನೂ ಬಲಪಡಿಸೋಕೆ ಆಗುತ್ತೆ. ಈಗಾಗ್ಲೇ ನೋಡಿದ ಆ್ಯನ್ಲೆಸ್‌ ಅನ್ನೋ ಸಹೋದರಿಗೆ ಸಭೆಯಲ್ಲಿರೋ ಎಲ್ರ ಜೊತೆ ಸಿಹಿಸುದ್ದಿ ಸಾರೋಕೆ ಪ್ರೋತ್ಸಾಹ ಕೊಟ್ರು. ಇದ್ರಿಂದ ಏನು ಪ್ರಯೋಜನ ಆಯ್ತು? “ನಾನೂ ಈ ಸಭೆಯವಳೇ ಅಂತ ನನಗನಿಸ್ತು” ಅಂತ ಆ ಸಹೋದರಿ ಹೇಳ್ತಾರೆ. ನೀವು ಸಭೆಯಲ್ಲಿರೋ ಕ್ಲೀನಿಂಗ್‌ ಮತ್ತು ಮೆಂಟೆನೆನ್ಸ್‌ ಕೆಲಸದಲ್ಲಿ ಕೈ ಜೋಡಿಸಿದ್ರೆ ನೀವೂ ಆ ಸಭೆಯ ಭಾಗವಾಗಿದ್ದೀರ ಅಂತ ತೋರಿಸಿಕೊಡ್ತೀರ. ಈ ತರ ಸಭೆಯಲ್ಲಿರೋ ಕೆಲಸಗಳನ್ನ ಆಗಾಗ ಮಾಡ್ತಾ ಇದ್ರೆ ಅಲ್ಲಿರೋ ಸಹೋದರ ಸಹೋದರಿಯರ ಜೊತೆ ಬೆರೆಯೋಕೆ ನಿಮಗೆ ಸುಲಭ ಆಗುತ್ತೆ ಮತ್ತು ಅವರು ನಿಮ್ಮ ಕುಟುಂಬದವರು ಅಂತ ನಿಮಗೆ ಅನಿಸುತ್ತೆ.

ಹೊಸ ಸ್ನೇಹಿತರನ್ನ ಮಾಡ್ಕೊಳ್ಳಿ

4. ಹೊಸ ಫ್ರೆಂಡ್‌ಶಿಪ್‌ ಬೆಳೆಸ್ಕೊಳ್ಳಿ. (2 ಕೊರಿಂ. 6:11-13) ನೀವು ಅವ್ರ ಜೊತೆ ಫ್ರೆಂಡ್‌ಶಿಪ್‌ ಬೆಳೆಸ್ಕೊಳ್ಳೋಕೆ ಆಸಕ್ತಿ ತೋರಿಸಬೇಕು. ಅದಕ್ಕೇ ಕೂಟಕ್ಕೆ ಮುಂಚೆ ಮತ್ತು ಕೂಟ ಆದ್ಮೇಲೆ ಅವ್ರ ಜೊತೆ ಮಾತಾಡೋಕೆ ಸಮಯ ಮಾಡ್ಕೊಳ್ಳಿ. ಅಷ್ಟೇ ಅಲ್ಲ, ಅವ್ರ ಹೆಸ್ರನ್ನ ಕಲಿಯೋಕೆ ಪ್ರಯತ್ನ ಮಾಡಿ. ನೀವು ಅವ್ರ ಹೆಸ್ರನ್ನ ನೆನಪಲ್ಲಿ ಇಟ್ರೆ, ಅವ್ರ ಜೊತೆ ಚೆನ್ನಾಗಿ ಬೆರೆತ್ರೆ ಅವ್ರಿಗೂ ನಿಮ್ಮ ಬಗ್ಗೆ ತಿಳ್ಕೊಬೇಕು ಅಂತ ಅನಿಸುತ್ತೆ. ಆಗ ನಿಮಗೆ ಹೊಸ ಫ್ರೆಂಡ್ಸ್‌ ಸಿಗ್ತಾರೆ.

ಸಹೋದರ ಸಹೋದರಿಯರಿಗೆ ನಿಮ್ಮ ಜೊತೆ ಬೆರೆಯೋಕೆ ಕಷ್ಟ ಆಗೋ ತರ ನೀವು ನಡ್ಕೊಬೇಡಿ. ನಿಮ್ಮ ಬಗ್ಗೆ ತಿಳ್ಕೊಳ್ಳೋಕೆ ಅವ್ರಿಗೆ ಅವಕಾಶ ಮಾಡ್ಕೊಡಿ. ಲೂಸಿಂಡ ಅನ್ನೋ ಸಹೋದರಿ ಹೀಗೆ ಹೇಳ್ತಾರೆ. “ನಾವು ಸಹೋದರ ಸಹೋದರಿಯರನ್ನ ಮನೆಗೆ ಕರೆದಾಗ ನಮಗೆ ಒಳ್ಳೇ ಫ್ರೆಂಡ್ಸ್‌ ಸಿಕ್ಕಿದ್ರು.”

“ಒಬ್ರು ಇನ್ನೊಬ್ರನ್ನ ಸೇರಿಸ್ಕೊಳ್ಳಿ”

ಬೇರೊಂದು ಸಭೆಗೆ ಹೋದಾಗ ಹೊಸ ಮುಖಗಳನ್ನ ನೋಡಿದಾಗ ಕೆಲವರಿಗೆ ಭಯ ಆಗುತ್ತೆ. ಹಾಗಿದ್ರೆ ಅವರಿಗೆ ಸಹಾಯ ಮಾಡೋಕೆ ಏನು ಮಾಡಬಹುದು? “ಕ್ರಿಸ್ತ ನಿಮ್ಮನ್ನ ಸೇರಿಸ್ಕೊಂಡ ಹಾಗೆ ನೀವೂ ಒಬ್ರು ಇನ್ನೊಬ್ರನ್ನ ಸೇರಿಸ್ಕೊಳ್ಳಿ” ಅಂತ ಪೌಲ ಹೇಳಿದ. (ರೋಮ. 15:7) ಯೇಸು ಕ್ರಿಸ್ತನ ತರನೇ ಹಿರಿಯರೂ ಹೊಸಬರು ಬರುವಾಗ ಅವ್ರನ್ನ ಸ್ವಾಗತಿಸಬೇಕು. (“ ಹೊಸ ಸಭೆಗೆ ಹೋಗುವಾಗ ಏನು ಮಾಡಬೇಕು?” ಅನ್ನೋ ಚೌಕ ನೋಡಿ.) ಸಭೆಯಲ್ಲಿರೋ ಪ್ರತಿಯೊಬ್ರೂ ಅದ್ರಲ್ಲಿ ಮಕ್ಕಳು ಕೂಡ ಹೊಸಬರನ್ನ ಫ್ರೆಂಡ್ಸ್‌ ಮಾಡ್ಕೊಳ್ಳೋಕೆ ಎಲ್ಲಾ ಪ್ರಯತ್ನ ಮಾಡಬೇಕು.

ಬೇರೆಯವ್ರನ್ನ ಸ್ವಾಗತಿಸೋದು ಅಂದ್ರೆ ಬರೀ ಅತಿಥಿಸತ್ಕಾರ ಮಾಡೋದಷ್ಟೇ ಅಲ್ಲ ಅವ್ರಿಗೆ ಬೇಕಾದ ಸಹಾಯನೂ ಮಾಡಬೇಕು. ಒಬ್ಬ ಸಹೋದರಿ ಬೇರೊಬ್ಬ ಸಹೋದರಿಗೆ ಇದನ್ನೇ ಮಾಡಿದ್ರು. ಒಬ್ಬ ಸಹೋದರಿ ಹೊಸದಾಗಿ ಬೇರೊಂದು ಊರಿಗೆ ಹೋದಾಗ ಅಲ್ಲಿದ್ದ ಇನ್ನೊಬ್ಬ ಸಹೋದರಿ ಅವ್ರಿಗೆ ಸಿಟಿನೆಲ್ಲ ತೋರಿಸಿದ್ರು ಮತ್ತು ಯಾವ ಬಸ್‌ ಹತ್ತಬೇಕು, ಎಲ್ಲಿ ಇಳಿಬೇಕು ಅಂತೆಲ್ಲ ಹೇಳಿಕೊಟ್ರು. ಇದ್ರಿಂದ ಆ ಹೊಸ ಊರಿಗೆ ಬಂದ ಸಹೋದರಿಗೆ ತುಂಬ ಖುಷಿ ಆಯ್ತು ಮತ್ತು ಹೊಸ ಸನ್ನಿವೇಶಕ್ಕೂ ಹೊಂದ್ಕೊಳ್ಳೋಕೆ ಸುಲಭ ಆಯ್ತು.

ಬೆಳಿಯೋಕೆ ಅವಕಾಶ ಸಿಗುತ್ತೆ

ಮಿಡತೆಗಳು ದೊಡ್ಡದಾಗ್ತಾ ಹೋದ ಹಾಗೆ ತುಂಬ ಸಲ ಅವು ತಮ್ಮ ಚರ್ಮವನ್ನ ಉದುರಿಸುತ್ತೆ. ಯಾಕಂದ್ರೆ ಅವುಗಳಿಗೆ ಹಾರೋ ಸಾಮರ್ಥ್ಯ ಬರಬೇಕಂದ್ರೆ ಅವುಗಳು ಈ ತರ ಮಾಡಬೇಕು. ಅದೇ ತರ ಯೆಹೋವನ ಸೇವೆಯಲ್ಲಿ ನಾವು ಬೆಳಿತಾ ಇರಬೇಕಂದ್ರೆ ಭಯ, ಚಿಂತೆನೆಲ್ಲ ಬಿಟ್ಟು ನಾವು ಮುಂದೆ ಹೋಗ್ತಾ ಇರಬೇಕು. ನಿಕೊಲಾಸ್‌ ಮತ್ತು ಸೆಲಿನ್‌ ಹೀಗೆ ಹೇಳ್ತಾರೆ: “ಬೇರೆ ಸಭೆಗೆ ಹೋಗೋದ್ರಿಂದ ನಮಗೆ ಒಳ್ಳೆ ತರಬೇತಿ ಸಿಗುತ್ತೆ. ನಾವು ಹೊಸ ಜನ್ರ ಜೊತೆ ಇದ್ದಿದ್ರಿಂದ, ಹೊಸ ಸನ್ನಿವೇಶದಲ್ಲಿ ಇದ್ದಿದ್ರಿಂದ ನಮಗೆ ಒಳ್ಳೆ ಗುಣಗಳನ್ನ ಬೆಳೆಸ್ಕೊಳ್ಳೋಕೆ ಸಹಾಯ ಆಯ್ತು.” ಜೀನ್‌ ಚಾರ್ಲ್ಸ್‌ ಅನ್ನೋರು ತಮ್ಮ ಕುಟುಂಬಕ್ಕೆ ಹೇಗೆ ಸಹಾಯ ಆಯ್ತು ಅಂತ ಹೇಳಿದ್ರು. “ನಮ್ಮ ಮಕ್ಕಳು ಇನ್ನೂ ಪ್ರೌಢರಾದ್ರು ಮತ್ತು ಯೆಹೋವನ ಜೊತೆ ಒಳ್ಳೆ ಫ್ರೆಂಡ್‌ಶಿಪ್‌ ಬೆಳೆಸ್ಕೊಂಡ್ರು. ಕೆಲವೇ ತಿಂಗಳಲ್ಲಿ ನಮ್ಮ ಮಗಳು ಮಧ್ಯವಾರ ಕೂಟದಲ್ಲಿ ನೇಮಕಗಳನ್ನ ಮಾಡಿದಳು ಮತ್ತು ನಮ್ಮ ಮಗ ದೀಕ್ಷಾಸ್ನಾನ ಪಡೆಯದ ಪ್ರಚಾರಕನಾದ.”

ಅಗತ್ಯ ಇರೋ ಕಡೆ ಹೋಗಿ ಸೇವೆ ಮಾಡೋಕೆ ಆಗ್ತಾ ಇಲ್ಲಾಂದ್ರೆ ನೀವೇನು ಮಾಡಬಹುದು? ಈ ಲೇಖನದಲ್ಲಿ ಕೊಟ್ಟಿರೋ ಸಲಹೆಗಳನ್ನ ಪಾಲಿಸಿದ್ರೆ ನೀವು ಈಗಾಗ್ಲೇ ಹಳೆ ಸಭೆಯಲ್ಲಿದ್ರೂ ಹೊಸ ಸಭೆಯಲ್ಲಿ ಇದ್ದೀರ ಅಂತ ನಿಮಗೆ ಅನಿಸುತ್ತೆ. ನೀವು ಯೆಹೋವನ ಸಹಾಯ ಪಡ್ಕೊಂಡ್ರೆ ಸಭೆಯಲ್ಲಿರೋ ಬೇರೆಬೇರೆ ಕೆಲಸಗಳನ್ನ ಮಾಡೋಕೆ ಆಗುತ್ತೆ. ನೀವು ಬೇರೆಬೇರೆ ಸಹೋದರ ಸಹೋದರಿಯರ ಜೊತೆ ಸೇವೆ ಮಾಡಬಹುದು, ಹೊಸಬರನ್ನ ಫ್ರೆಂಡ್ಸ್‌ ಮಾಡ್ಕೋಬಹುದು, ಈಗಾಗ್ಲೇ ಇರೋ ಫ್ರೆಂಡ್ಸ್‌ಗೆ ನೀವಿನ್ನೂ ಹತ್ರ ಆಗಬಹುದು. ಅಷ್ಟೇ ಅಲ್ಲ ಹೊಸಬರಿಗೆ ಅಥವಾ ಅಗತ್ಯ ಇರೋರಿಗೆ ಏನಾದ್ರೂ ಸಹಾಯ ಮಾಡೋಕಾಗುತ್ತಾ ಅಂತ ಯೋಚಿಸಿ. ಕ್ರೈಸ್ತರಾಗಿರೋ ನಾವು ಬೇರೆಯವ್ರಿಗೆ ಈ ತರ ಸಹಾಯ ಮಾಡ್ತಾ ಪ್ರೀತಿ ತೋರಿಸಿದ್ರೆ ಯೆಹೋವನಿಗೆ ಇನ್ನೂ ಹತ್ರ ಆಗ್ತೀವಿ. (ಯೋಹಾ. 13:35) ಆಗ “ಇಂಥ ಬಲಿಗಳಿಂದ ದೇವರಿಗೆ ತುಂಬ ಖುಷಿ ಆಗುತ್ತೆ” ಅಂತ ನಾವು ನಂಬಬಹುದು.—ಇಬ್ರಿ. 13:16.

ಹೊಂದ್ಕೊಳ್ಳೋಕೆ ಕಷ್ಟ ಆದ್ರೂ ಎಷ್ಟೋ ಸಹೋದರ ಸಹೋದರಿಯರು ಹೊಸ ಸಭೆಗೆ ಹೋಗಿ ಖುಷಿಖುಷಿಯಿಂದ ಯೆಹೋವನ ಸೇವೆ ಮಾಡ್ತಿದ್ದಾರೆ. ಅವ್ರ ತರ ನಿಮಗೂ ಮಾಡೋಕಾಗುತ್ತೆ. “ಬೇರೆ ಸಭೆಗೆ ಹೋಗಿದ್ರಿಂದ ಹೃದಯದ ಬಾಗಿಲನ್ನ ವಿಶಾಲವಾಗಿ ತೆರಿಯೋಕೆ ಸಹಾಯ ಆಯ್ತು” ಅಂತ ಆ್ಯನ್ಲೆಸ್‌ ಅನ್ನೋ ಸಹೋದರಿ ಹೇಳ್ತಾರೆ. ಬೇರೆ ಸಭೆಗೆ ಹೋದಾಗ ಸಹೋದರಿ ಕಜ಼ೋಮಿಗೆ ಹೇಗೆ ಅನಿಸ್ತು? “ಯಾವತ್ತೂ ಅನುಭವಿಸದೆ ಇರೋ ರೀತಿಯಲ್ಲಿ ಯೆಹೋವ ಸಹಾಯ ಮಾಡೋದನ್ನ ನಮಗೆ ನೋಡೋಕೆ ಆಗುತ್ತೆ” ಅಂತ ಹೇಳ್ತಾರೆ. ಜ಼ುಯೆಲ್‌ ಏನು ಹೇಳ್ತಾರೆ ಅಂದ್ರೆ “ನಾನು ಇಲ್ಲಿರೋರ ಜೊತೆ ಫ್ರೆಂಡ್‌ಶಿಪ್‌ ಬೆಳೆಸ್ಕೊಂಡಿದ್ರಿಂದ ಇದು ನನ್ನ ಮನೆ ಅಂತ ನನಗೆ ಅನಿಸ್ತು. ಹಾಗಾಗಿ ಅವ್ರನ್ನ ಬಿಟ್ಟು ಹೋಗೋಕೆ ನನಗೆ ತುಂಬಾ ಕಷ್ಟ ಆಗುತ್ತೆ.”

a ಹೆಚ್ಚನ್ನ ತಿಳ್ಕೊಳ್ಳೋಕೆ 1994, ಮೇ 15ರ ಕಾವಲಿನಬುರುಜುನಲ್ಲಿರೋ “ದೇವರ ಸೇವೆಯಲ್ಲಿ ಮನೆಗೀಳನ್ನು ನಿಭಾಯಿಸುವುದು” ಅನ್ನೋ ಲೇಖನ ನೋಡಿ.