ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ತಿಳಿದಿತ್ತೋ?

ನಿಮಗೆ ತಿಳಿದಿತ್ತೋ?

ಪುರಾತನ ಕಾಲದಲ್ಲಿ ನಿಜವಾಗಿಯೂ ಒಬ್ಬ ವ್ಯಕ್ತಿ ಇನ್ನೊಬ್ಬನ ಹೊಲಕ್ಕೆ ಹೋಗಿ ಕಳೆಗಳನ್ನು ಬಿತ್ತುತ್ತಿದ್ದನಾ?

ಪುರಾತನ ಕಾಲದ ಕಾನೂನಿಗೆ ಸಂಬಂಧಪಟ್ಟ ವಿವಾದಾಂಶಗಳ ಬಗ್ಗೆ ಅನೇಕ ದಾಖಲೆಗಳಿವೆ. ಅದರಲ್ಲಿ ರೋಮನ್‌ ಅಧಿಕಾರಿ ಜಸ್ಟಿನಿಯನ್‌ರವರ 1468⁠ನೇ ಬಾರಿ ನಕಲುಗೊಂಡ ಪುಸ್ತಕ ಸಂಗ್ರಹ ಕೂಡ ಒಂದಾಗಿದೆ

ಮತ್ತಾಯ 13:24-26⁠ರಲ್ಲಿ ಯೇಸು ಹೀಗಂದನು: “ಸ್ವರ್ಗದ ರಾಜ್ಯವು ತನ್ನ ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ. ಜನರು ನಿದ್ರೆಮಾಡುತ್ತಿದ್ದಾಗ ಅವನ ವೈರಿಯು ಬಂದು ಗೋದಿಯ ಮಧ್ಯೆ ಕಳೆಯನ್ನು ಬಿತ್ತಿ ಹೋದನು. ಅದರ ದಳವು ಮೊಳೆತು ಫಲ ಬಿಟ್ಟಾಗ ಕಳೆಗಳು ಸಹ ಕಾಣಿಸಿಕೊಂಡವು.” ಕೆಲವು ಬರಹಗಾರರು ‘ಈ ಘಟನೆ ನಿಜವಾಗಿಯೂ ನಡೆಯಿತೋ ಇಲ್ಲವೋ ಎಂದು ಸಂಶಯ ವ್ಯಕ್ತಪಡಿಸುತ್ತಾರೆ. ಆದರೆ ಪ್ರಾಚೀನ ಕಾಲದಲ್ಲಿ ಬರೆಯಲಾಗಿರುವ ರೋಮನ್‌ ನಿಯಮಗಳಿಗನುಸಾರ ಈ ಘಟನೆ ನಡೆದಿರುವ ಸಾಧ್ಯತೆ ಇದೆ.

ಸೇಡು ತೀರಿಸಿಕೊಳ್ಳಲು ಇನ್ನೊಬ್ಬನ ಹೊಲದಲ್ಲಿ ಕಳೆಗಳನ್ನು ಬಿತ್ತುವುದು ರೋಮನ್‌ ನಿಯಮಕ್ಕನುಸಾರ ಅಪರಾಧವಾಗಿತ್ತು ಎಂದು ಬೈಬಲ್‌ ನಿಘಂಟಿನಲ್ಲಿ ಹೇಳಲಾಗಿದೆ. ಈ ರೀತಿಯ ಒಂದು ನಿಯಮವಿದೆ ಅಂದಮೇಲೆ ಈ ಘಟನೆ ನಿಜವಾಗಿಯೂ ನಡೆದಿದೆ ಎಂದರ್ಥ. ರೋಮನ್‌ ಅಧಿಕಾರಿ ಜಸ್ಟಿನಿಯನ್‌ರವರ ಪುಸ್ತಕ ಸಂಗ್ರಹದಲ್ಲಿರುವ ವಿಷಯವನ್ನು ಕಾನೂನು ವಿದ್ವಾಂಸರಾಗಿದ್ದ ಅಲಾಸ್ಟಾರ್‌ ಕೆರ್‌ ಕ್ರಿ.ಶ. 533⁠ರಲ್ಲಿ ವಿವರಿಸಿದರು. ಅದರಲ್ಲಿ ರೋಮನ್‌ ನಿಯಮಗಳ ಸಾರಾಂಶವಿದೆ. ಜೊತೆಗೆ ಕ್ರಿ.ಶ. 100-250⁠ರ ವರೆಗೆ ಕಾನೂನಿನ ಬಗ್ಗೆ ಪರಿಣಿತರು ಹೇಳಿರುವ ಹೇಳಿಕೆಗಳಿವೆ. ಆ ಪರಿಣಿತರಲ್ಲಿ ಒಬ್ಬ ಉಲ್‌ಪಿಯನ್‌. ಇವನು ಎರಡನೇ ಶತಮಾನದಲ್ಲಿ ನಡೆದ ಒಂದು ಘಟನೆ ಬಗ್ಗೆ ತಿಳಿಸಿದ್ದಾನೆ. ಒಬ್ಬ ವ್ಯಕ್ತಿ ಇನ್ನೊಬ್ಬನ ಹೊಲದಲ್ಲಿ ಕಳೆಗಳನ್ನು ಬಿತ್ತಿದ್ದರಿಂದ ಬೆಳೆ ನಾಶವಾಯಿತು. ಆಗ ನಷ್ಟವನ್ನು ಅನುಭವಿಸಿದ ರೈತನಿಗೆ ಆರೋಪಿ ಪರಿಹಾರವನ್ನು ಕೊಡಬೇಕಾಯಿತು. ಪರಿಹಾರವನ್ನು ಪಡೆಯಲಿಕ್ಕಾಗಿ ಇರುವಂಥ ಕಾನೂನುಬದ್ಧ ನಿಯಮಗಳ ಬಗ್ಗೆ ಮತ್ತು ಬೆಳೆ ನಾಶಮಾಡಿದ್ದಕ್ಕಾಗಿ ಹಣವನ್ನು ಕೊಡುವುದರ ಬಗ್ಗೆ ಆ ಪುಸ್ತಕ ಸಂಗ್ರಹದಲ್ಲಿ ಚರ್ಚಿಸಲಾಗಿದೆ.

ಪುರಾತನ ರೋಮನ್‌ ಸಾಮ್ರಾಜ್ಯದಲ್ಲಿ ಈ ರೀತಿಯ ಘಟನೆಗಳಾಗಿವೆ. ಹಾಗಾಗಿ ಯೇಸು ಹೇಳಿದ ದೃಷ್ಟಾಂತ ನಿಜವಾಗಿಯೂ ನಡೆದಿತ್ತು ಎಂದು ಗೊತ್ತಾಗುತ್ತದೆ.

ರೋಮ್‌ ಸಾಮ್ರಾಜ್ಯವು ಒಂದನೇ ಶತಮಾನದಲ್ಲಿ ಯೂದಾಯದಲ್ಲಿದ್ದ ಯೆಹೂದಿ ಅಧಿಕಾರಿಗಳಿಗೆ ಎಷ್ಟರ ಮಟ್ಟಿಗಿನ ಸ್ವಾತಂತ್ರ್ಯವನ್ನು ಕೊಟ್ಟಿತ್ತು?

ಆ ಸಮಯದಲ್ಲಿ ಯೂದಾಯವನ್ನು ರೋಮನ್‌ ರಾಜ್ಯಪಾಲ ಆಳುತ್ತಿದ್ದನು. ಅವನ ಕೈಕೆಳಗೆ ಸೈನಿಕರ ಒಂದು ದಳ ಸಹ ಇತ್ತು. ರೋಮ್‌ ಸಾಮ್ರಾಜ್ಯಕ್ಕಾಗಿ ತೆರಿಗೆಯನ್ನು ವಸೂಲಿ ಮಾಡುವುದು ಮತ್ತು ಅದನ್ನು ಶಾಂತಿ ಹಾಗೂ ಸುವ್ಯವಸ್ಥೆಯಿಂದ ನಡೆಸಿಕೊಂಡು ಹೋಗುವುದೇ ಅವನ ಮುಖ್ಯ ಗುರಿಯಾಗಿತ್ತು. ರೋಮನ್‌ ಅಧಿಕಾರಿಗಳು ಕಾನೂನು ಬಾಹಿರ ಕೆಲಸಗಳನ್ನು ಮಟ್ಟಹಾಕುವುದರ ಕಡೆಗೆ ಮತ್ತು ಸಮಾಜಘಾತುಕರನ್ನು ಶಿಕ್ಷಿಸುವುದರ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದರು. ಇದನ್ನು ಬಿಟ್ಟು ಬೇರೆ ದಿನನಿತ್ಯದ ವ್ಯವಹಾರಗಳನ್ನು ಅಲ್ಲಿನ ಸ್ಥಳೀಯ ಮುಖ್ಯಸ್ಥರಿಗೆ ವಹಿಸಿಬಿಟ್ಟಿದ್ದರು.

ವಿಚಾರಣೆಯನ್ನು ನಡೆಸುತ್ತಿರುವ ಯೆಹೂದಿ ಹಿರೀ ಸಭೆ

ಯೆಹೂದಿಗಳ ಹಿರೀ ಸಭೆ ಅತ್ಯುಚ್ಚ ನ್ಯಾಯಾಲಯವಾಗಿತ್ತು. ಅಲ್ಲಿದ್ದ ಆಡಳಿತ ಸಮಿತಿ ಯೆಹೂದಿ ನಿಯಮಗಳ ಪ್ರಕಾರ ವಿಷಯಗಳನ್ನು ನಿರ್ವಹಿಸಿಕೊಂಡು ಹೋಗುತ್ತಿತ್ತು. ಯೂದಾಯದ ಉದ್ದಗಲಕ್ಕೂ ಕೆಳದರ್ಜೆಯ ನ್ಯಾಯಾಲಯಗಳು ಸಹ ಇದ್ದವು. ಹೆಚ್ಚಿನ ನಾಗರೀಕ ಮೊಕದ್ದಮೆಗಳನ್ನು ಮತ್ತು ಅಪರಾಧ ಪ್ರಕರಣಗಳನ್ನು ಈ ನ್ಯಾಯಾಲಯಗಳಲ್ಲೇ ಬಗೆಹರಿಸಲಾಗುತ್ತಿತ್ತು. ಅದರಲ್ಲಿ ರೋಮನ್‌ ಅಧಿಕಾರಿಗಳು ತಲೆಹಾಕುತ್ತಿರಲಿಲ್ಲ. ಆದರೆ, ಅಪರಾಧಿಗೆ ಮರಣ ದಂಡನೆ ವಿಧಿಸುವ ಹಕ್ಕನ್ನು ರೋಮ್‌ ಸಾಮ್ರಾಜ್ಯ ಯೆಹೂದಿ ನ್ಯಾಯಾಲಯಕ್ಕೆ ಕೊಟ್ಟಿರಲಿಲ್ಲ. ಹಾಗಿದ್ದರೂ, ಈ ನಿಯಮಕ್ಕೆ ವಿರುದ್ಧವಾಗಿ ಹಿರೀ ಸಭೆಯವರು ಸ್ತೆಫನನನ್ನು ಕಲ್ಲೆಸೆದು ಕೊಲ್ಲುವಂತೆ ಅನುಮತಿಸಿದರು.—ಅ. ಕಾ. 6:8-15; 7:54-60.

ಮರಣ ದಂಡನೆ ವಿಧಿಸುವ ಹಕ್ಕನ್ನು ಕೊಡದೆ ಇದ್ದದ್ದು ಹಿರೀ ಸಭೆಯ ಮೇಲೆ ಹಾಕಿದ ಒಂದು “ಅತೀ ಪ್ರಬಲವಾದ ನಿರ್ಬಂಧವಾಗಿತ್ತಾದರೂ” ಬೇರೆಲ್ಲಾ ವಿಷಯಗಳನ್ನು ಅದೇ ನೋಡಿಕೊಳ್ಳುತ್ತಿತ್ತು ಎಂದು ವಿದ್ವಾಂಸರಾದ ಏಮೀಲ್‌ ಶ್ಯೂರರ್‌ ಹೇಳುತ್ತಾರೆ. ಅವರು ಮುಂದುವರಿಸುವುದು, “ರಾಜಕೀಯಕ್ಕೆ ಸಂಬಂಧಪಟ್ಟ ವಿಷಯಗಳ ಉಲ್ಲಂಘನೆಯಾಗುತ್ತಿದೆ ಎಂಬ ಸಂಶಯ ಬಂದರೆ ಸಾಕು ರೋಮನ್ನರು ತಮ್ಮ ಅಧಿಕಾರವನ್ನು ಯಾವುದೇ ಘಳಿಗೆಯಲ್ಲಾದರು ಚಲಾಯಿಸುತ್ತಿದ್ದರು. ಅದಕ್ಕಾಗಿ ಯಾರ ಅನುಮತಿಯನ್ನು ಸಹ ಪಡೆಯುತ್ತಿರಲಿಲ್ಲ.” ಇದಕ್ಕೊಂದು ಉತ್ತಮ ಉದಾಹರಣೆ ರೋಮನ್‌ ಪ್ರಜೆಯಾಗಿದ್ದ ಅಪೊಸ್ತಲ ಪೌಲನನ್ನು ಸಹಸ್ರಾಧಿಪತಿ ಕ್ಲೌದ್ಯ ಲೂಸ್ಯನ ಉಸ್ತುವಾರಿಯಲ್ಲಿ ವಿಚಾರಣೆಗೆ ಒಳಪಡಿಸಿದ್ದು.—ಅ. ಕಾ. 23:26-30.