ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳಲ್ಲಿ ಸ್ತ್ರೀಯರು ಸಹ ಸಾರುತ್ತಾರೋ?

ಯೆಹೋವನ ಸಾಕ್ಷಿಗಳಲ್ಲಿ ಸ್ತ್ರೀಯರು ಸಹ ಸಾರುತ್ತಾರೋ?

 ಹೌದು. ಲಕ್ಷಾಂತರ ಸ್ತ್ರೀಯರು ಸೇರಿ, ಎಲ್ಲಾ ಯೆಹೋವನ ಸಾಕ್ಷಿಗಳು ಸೌವಾರ್ತಿಕರಾಗಿದ್ದಾರೆ ಅಥವಾ ಶುಶ್ರೂಷಕರಾಗಿದ್ದಾರೆ. ಬೈಬಲ್‌ ಮುಂತಿಳಿಸಿರುವುದು, “ಶುಭವಾರ್ತೆಯನ್ನು ಪ್ರಸಿದ್ಧಪಡಿಸುವ ಸ್ತ್ರೀಸಮೂಹವು ಎಷ್ಟೋ ದೊಡ್ಡದು”​—ಕೀರ್ತನೆ 68:11.

 ಯೆಹೋವನ ಸಾಕ್ಷಿಗಳಲ್ಲಿ ಸ್ತ್ರೀಯರು ಬೈಬಲ್‌ ಕಾಲದ ಸ್ತ್ರೀಯರ ಮಾದರಿಯನ್ನು ಅನುಸರಿಸುತ್ತಾರೆ. (ಜ್ಞಾನೋಕ್ತಿ 31:​10-​31) ಸಭೆಗಳಲ್ಲಿ ಅವರು ಮುಖ್ಯಸ್ಥಾನವನ್ನು ವಹಿಸದಿದ್ದರೂ, ಸಾರ್ವಜನಿಕ ಶುಶ್ರೂಷೆಯಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳುತ್ತಾರೆ. ಜೊತೆಗೆ ತಮ್ಮ ಮಕ್ಕಳಿಗೂ ಬೈಬಲ್‌ ಮೂಲತತ್ತ್ವಗಳನ್ನು ಕಲಿಸುತ್ತಾರೆ. (ಜ್ಞಾನೋಕ್ತಿ 1:8) ಸಾಕ್ಷಿಗಳಾದ ಈ ಸ್ತ್ರೀಯರು ತಮ್ಮ ನಡೆ ಮತ್ತು ನುಡಿಯಿಂದ ಒಳ್ಳೆಯ ಪ್ರಭಾವವನ್ನು ಬೀರಲು ಪ್ರಯಾಸ ಪಡುತ್ತಾರೆ.​—ತೀತ 2:​3-5.