ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳು ಅಮೆರಿಕದಲ್ಲಿ ಆರಂಭವಾದ ಒಂದು ಧಾರ್ಮಿಕ ಪಂಥನಾ?

ಯೆಹೋವನ ಸಾಕ್ಷಿಗಳು ಅಮೆರಿಕದಲ್ಲಿ ಆರಂಭವಾದ ಒಂದು ಧಾರ್ಮಿಕ ಪಂಥನಾ?

 ನಮ್ಮ ಮುಖ್ಯ ಕಾರ್ಯಾಲಯ ಯುನೈಟೆಡ್‌ ಸ್ಟೇಟ್ಸ್‌ನ ಅಮೆರಿಕದಲ್ಲಿ ಇದೆ. ಆದರೂ ನಾವು ಅಮೆರಿಕದ ಒಂದು ಪಂಥವಲ್ಲ. ಈ ಕೆಳಗಿನ ಕಾರಣಗಳು ಅದನ್ನು ರುಜುಪಡಿಸುತ್ತದೆ:

  •   ಒಂದು ಪಂಥವೆಂದರೆ ಸ್ಥಾಪಿತ ಧರ್ಮದಿಂದ ಬೇರ್ಪಟ್ಟ ಪಂಗಡವೆಂದು ಕೆಲವರು ವಿವರಿಸುತ್ತಾರೆ. ಯೆಹೋವನ ಸಾಕ್ಷಿಗಳು ಯಾವ ಧರ್ಮದ ಗುಂಪಿನಿಂದಲೂ ಹೊರಬಂದವರಲ್ಲ. ಅದಕ್ಕೆ ಬದಲಾಗಿ, ಮೊದಲ ಶತಮಾನದಲ್ಲಿ ಕ್ರೈಸ್ತ ಧರ್ಮ ಹೇಗಿತ್ತೊ ಅದೇ ರೀತಿಯಲ್ಲಿ ಅದನ್ನು ಪುನಃಸ್ಥಾಪಿಸಬೇಕು ಎನ್ನುವುದೇ ನಮ್ಮ ಉದ್ದೇಶ.

  •   ಯೆಹೋವನ ಸಾಕ್ಷಿಗಳಾದ ನಾವು 230ಕ್ಕಿಂತಲೂ ಹೆಚ್ಚಿನ ದೇಶದ್ವೀಪಗಳಲ್ಲಿ ಸಕ್ರಿಯವಾಗಿ ಸಾರುವ ಕೆಲಸದಲ್ಲಿ ನಿರತರಾಗಿದ್ದೇವೆ. ನಾವೆಲ್ಲೇ ಇರಲಿ ನಮ್ಮ ಬೆಂಬಲ ಹಾಗೂ ನಿಷ್ಠೆ ಯೆಹೋವ ದೇವರಿಗೂ ಯೇಸು ಕ್ರಿಸ್ತನಿಗೂ ಹೊರತು ಅಮೆರಿಕ ಸರಕಾರಕ್ಕಾಗಲಿ ಯಾವುದೇ ಮಾನವ ಸರಕಾರಗಳಿಗಾಗಲಿ ಅಲ್ಲ.—ಯೋಹಾನ 15:19; 17:15, 16.

  •   ನಮ್ಮ ಎಲ್ಲಾ ಬೋಧನೆಗಳು ಬೈಬಲ್‌ ಆಧಾರಿತವಾಗಿದೆ. ಅಮೆರಿಕದಲ್ಲಿರುವ ಕೆಲವು ಧಾರ್ಮಿಕ ನಾಯಕರ ಬರಹಗಳ ಮೇಲಲ್ಲ.​—1 ಥೆಸಲೊನೀಕ 2:13.

  •   ನಾವು ಯೇಸು ಕ್ರಿಸ್ತನನ್ನು ಹಿಂಬಾಲಿಸುತ್ತೇವೆ. ಯಾವುದೇ ಮಾನವ ನಾಯಕನನ್ನಲ್ಲ.​—ಮತ್ತಾಯ 23:8-10