ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳೆಂದರೆ ಒಂದು ಪಂಥನಾ?

ಯೆಹೋವನ ಸಾಕ್ಷಿಗಳೆಂದರೆ ಒಂದು ಪಂಥನಾ?

 ಅಲ್ಲ. ಯೆಹೋವನ ಸಾಕ್ಷಿಗಳೆಂದರೆ ಒಂದು ಪಂಥವಲ್ಲ. ನಾವು ಕ್ರೈಸ್ತರು. ಯೇಸು ಕ್ರಿಸ್ತನಿಟ್ಟ ಮಾದರಿಯನ್ನು ಅನುಸರಿಸಲು ಮತ್ತು ಆತನ ಬೋಧನೆಗಳಿಗನುಸಾರ ಜೀವಿಸಲು ಸಾಧ್ಯವಾದಷ್ಟರ ಮಟ್ಟಿಗೆ ಪ್ರಯಾಸಪಡುವವರು.

ಪಂಥ ಅಂದರೇನು?

 “ಪಂಥ” ಎಂಬ ಪದದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯವನ್ನಿಟ್ಟುಕೊಂಡಿದ್ದಾರೆ. ಅಂಥವುಗಳಲ್ಲಿ ಸಾಮಾನ್ಯವಾಗಿರುವ ಎರಡು ಅಭಿಪ್ರಾಯಗಳನ್ನು ಪರಿಗಣಿಸೋಣ ಮತ್ತು ಅವು ನಮಗೇಕೆ ಅನ್ವಯಿಸುವುದಿಲ್ಲವೆಂದು ನೋಡೋಣ.

  •   ಕೆಲವರಿಗೆ ಪಂಥವೆಂದರೆ ಒಂದು ಹೊಸ ಅಥವಾ ಅಶಾಸ್ತ್ರೀಯ ಧರ್ಮ ಎಂಬ ಭಾವನೆ. ಯೆಹೋವನ ಸಾಕ್ಷಿಗಳು ಒಂದು ಹೊಸ ಧರ್ಮವನ್ನು ಹುಟ್ಟುಹಾಕಿಲ್ಲ. ಬದಲಿಗೆ, ನಮ್ಮ ಆರಾಧನೆ ಬೈಬಲ್‌ನಲ್ಲಿ ದಾಖಲಾಗಿರುವ ಪ್ರಥಮ ಶತಮಾನದ ಕ್ರೈಸ್ತರ ಮಾದರಿ ಮತ್ತು ಬೋಧನೆಗಳಿಗೆ ಹೊಂದಿಕೆಯಲ್ಲಿದೆ. (2 ತಿಮೊಥೆಯ 3:​16, 17) ಆರಾಧನೆಯ ವಿಷಯದಲ್ಲಿ ಯಾವುದು ಸರಿ ಎಂದು ತಿಳಿಸುವ ಶಕ್ತಿಯಿರುವುದು ಪವಿತ್ರಶಾಸ್ತ್ರ ಗ್ರಂಥಕ್ಕೆ ಮಾತ್ರ ಎಂದು ನಾವು ನಂಬುತ್ತೇವೆ.

  •   ಕೆಲವರಿಗೆ ಪಂಥವೆಂದರೆ ಮಾನವ ನಾಯಕರ ಒಂದು ಅಪಾಯಕಾರಿ ಧಾರ್ಮಿಕ ಗುಂಪು ಎಂಬ ಭಾವನೆ. ಯೆಹೋವನ ಸಾಕ್ಷಿಗಳು ಯಾವ ಮಾನವನನ್ನೂ ತಮ್ಮ ನಾಯಕನೆಂದು ವೀಕ್ಷಿಸುವುದಿಲ್ಲ. ಬದಲಿಗೆ, “ಕ್ರಿಸ್ತನೊಬ್ಬನೇ ನಿಮಗೆ ಗುರು” ಎಂದು ಯೇಸು ತನ್ನ ಹಿಂಬಾಲಕರಿಗಿಟ್ಟ ಮಟ್ಟವನ್ನು ನಾವು ಪಾಲಿಸುತ್ತೇವೆ.​—ಮತ್ತಾಯ 23:10.

 ಯೆಹೋವನ ಸಾಕ್ಷಿಗಳು ಅನುಸರಿಸುವ ಧರ್ಮ ತಮ್ಮ ಸದಸ್ಯರಿಗೆ ಮತ್ತು ಸಮಾಜದ ಇತರರಿಗೆ ಪ್ರಯೋಜನ ತರುವಂಥದ್ದಾಗಿದೆಯೇ ಹೊರತು ಅಪಾಯಕಾರಿ ಪಂಥವಲ್ಲ. ಉದಾಹರಣೆಗೆ, ನಮ್ಮ ಶುಶ್ರೂಷೆಯು ಅನೇಕರಿಗೆ ಅಮಲೌಷಧ ಸೇವನೆ ಮತ್ತು ಮಧ್ಯಪಾನ ಮುಂತಾದ ಹಾನಿಕರ ಚಟಗಳಿಂದ ಹೊರಬರಲು ನೆರವಾಗಿದೆ. ಜೊತೆಗೆ, ನಾವು ಲೋಕವ್ಯಾಪಕವಾಗಿ ಸಾಕ್ಷರತಾ ತರಗತಿಗಳನ್ನು ನಡೆಸಿ ಸಾವಿರಾರು ಮಂದಿಗೆ ಓದುಬರಹ ಕಲಿಯಲು ಸಹಾಯ ಮಾಡುತ್ತೇವೆ, ವಿಪತ್ತು ಪರಿಹಾರ ಕೆಲಸದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇವೆ. ಯೇಸು ತನ್ನ ಹಿಂಬಾಲಕರಿಗೆ ಆಜ್ಞಾಪಿಸಿದಂತೆ ನಾವು ಇತರರ ಮೇಲೆ ಒಳ್ಳೆಯ ಪ್ರಭಾವ ಬೀರಲು ಶ್ರಮಿಸುತ್ತೇವೆ.​—ಮತ್ತಾಯ 5:​13-​16.